ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 12ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ನ ಎರಡು ನವೀನ ಗ್ರಾಹಕ-ಸ್ನೇಹಿ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಆ ಉಪಕ್ರಮಗಳೆಂದರೆ ಆರ್ ಬಿಐನ ಚಿಲ್ಲರೆ ನೇರ ಯೋಜನೆ ಮತ್ತು ರಿಸರ್ವ್ ಬ್ಯಾಂಕ್ –ಸಮಗ್ರ ಒಂಬುಡ್ಸ್ ಮನ್ ಯೋಜನೆ.

ಆರ್ ಬಿಐ ಚಿಲ್ಲರೆ ನೇರ ಯೋಜನೆಯು ಚಿಲ್ಲರೆ ಹೂಡಿಕೆದಾರರಿಗೆ ಸರ್ಕಾರಿ ಷೇರುಗಳ ಮಾರುಕಟ್ಟೆ ಪ್ರವೇಶ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಹೊಸ ಅವಕಾಶಗಳನ್ನು ಒದಗಿಸುತ್ತದೆ. ಹೂಡಿಕೆದಾರರು ಉಚಿತವಾಗಿ  ತಮ್ಮ ಸರ್ಕಾರಿ ಷೇರು ಖಾತೆಗಳನ್ನು ಆನ್ ಲೈನ್ ನಲ್ಲಿ ಆರ್ ಬಿ ಐ ನಲ್ಲಿ ತೆರೆಯಲು ಮತ್ತು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.

ರಿಸರ್ವ್ ಬ್ಯಾಂಕ್ ನ- ಸಮಗ್ರ ಒಂಬುಡ್ಸ್ ಮನ್ ಯೋಜನೆ ಆರ್ ಬಿ ಐನಿಂದ ನಿಯಂತ್ರಿಸಲ್ಪಡುವ ಘಟಕಗಳ ವಿರುದ್ಧ ಗ್ರಾಹಕರ ದೂರುಗಳನ್ನು ಪರಿಹರಿಸಲು ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಇನ್ನಷ್ಟು ಸುಧಾರಿಸುವ ಗುರಿ ಹೊಂದಿದೆ. ಯೋಜನೆಯ ಮುಖ್ಯ ಧೇಯ, ಗ್ರಾಹಕರಿಗೆ ತಮ್ಮ ದೂರು ಸಲ್ಲಿಸಲು ಒಂದು ಪೋರ್ಟಲ್, ಒಂದು ಇಮೇಲ್ ಮತ್ತು ಒಂದು ವಿಳಾಸದೊಂದಿಗೆ ‘ಒಂದು ರಾಷ್ಟ್ರ- ಒಂದು ಒಂಬುಡ್ಸ್ ಮನ್’ ಅನ್ನು ಆಧರಿಸಿದೆ.  ಗ್ರಾಹಕರು ತಮ್ಮ ದೂರುಗಳನ್ನು ಸಲ್ಲಿಸಲು, ದಾಖಲೆಗಳನ್ನು ಸಲ್ಲಿಸಲು, ಸ್ಥಿತಿಗತಿ ಬಗ್ಗೆ ನಿಗಾವಹಿಸಲು ಮತ್ತು ಪ್ರತಿಕ್ರಿಯೆಯನ್ನು ಪಡೆಯಲು ಒಂದೇ ಸಂಪರ್ಕ ಕೇಂದ್ರವಿರುತ್ತದೆ, ಬಹುಭಾಷಾ ಟೋಲ್ ಫ್ರೀ ಸಂಖ್ಯೆಯು ಕುಂದುಕೊರತೆ ಪರಿಹಾರ ಮತ್ತು ದೂರುಗಳನ್ನು ಸಲ್ಲಿಸಲು ಸಹಾಯ ಮಾಡುವ ಎಲ್ಲ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ.

ಕೇಂದ್ರ ಹಣಕಾಸು ಸಚಿವರು ಮತ್ತು ಆರ್ ಬಿಐ ಗೌರ್ನರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PLI schemes attract ₹2 lakh crore investment till September, lift output and jobs across sectors

Media Coverage

PLI schemes attract ₹2 lakh crore investment till September, lift output and jobs across sectors
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಡಿಸೆಂಬರ್ 2025
December 13, 2025

PM Modi Citizens Celebrate India Rising: PM Modi's Leadership in Attracting Investments and Ensuring Security