ಶೇರ್
 
Comments

ಸಿಂಗಾಪುರಕ್ಕೆ ಭೇಟಿ ನೀಡಲು ತೆರಳುವ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಯ ಪಠ್ಯ ಹೀಗಿದೆ.

“ಭಾರತ-ಅಸಿಯಾನ್ (ಎ.ಎಸ್.ಇ.ಎ.ಎನ್) ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಭಾಗವಹಿಸಲು ನಾನು ನವೆಂಬರ್ 14-15ರಂದು ಸಿಂಗಾಪುರಕ್ಕೆ ಭೇಟಿ ನೀಡಲಿದ್ದೇನೆ. ಇದರ ಜೊತೆಗೆ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ನಾಯಕರ ಸಭೆ (Regional Comprehensive Economic Partnership Leaders’ Meeting) ಯಲ್ಲೂ ಭಾಗವಹಿಸಲಿದ್ದೇನೆ.

ಅಸಿಯಾನ್ (ಎ.ಎಸ್.ಇ.ಎ.ಎನ್) ಸದಸ್ಯ ದೇಶಗಳ ಜೊತೆ ಮತ್ತು ಇನ್ನೂ ವಿಶಾಲವಾಗಿ ಭಾರತ-ಫೆಸಿಫಿಕ್ ವಲಯದಲ್ಲಿ, ನಮ್ಮ ನಿಗದಿತ ಕಾರ್ಯಕ್ರಮಗಳನ್ನು ಬಲಿಷ್ಠಗೊಳ್ಳುವ ನಿಟ್ಟಿನಲ್ಲಿ ನಮ್ಮ ಬದ್ಧತೆಗಳ ಮುಂದುವರಿಯುವಿಕೆಯ ಸಂಕೇತವಾಗಿ ನಾನು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇತರ ಅಸಿಯಾನ್ (ಎ.ಎಸ್.ಇ.ಎ.ಎನ್) ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳ ನಾಯಕರೊಂದಿಗೆ ಮಾತುಕತೆ ಯನ್ನು ನಾನು ಎದುರು ನೋಡುತ್ತಿದ್ದೇನೆ.

ನಾನು ನವೆಂಬರ್ 14ರಂದು ಸಿಂಗಾಪುರ ಫಿನ್ಟೆಕ್ ಫೆಸ್ಟಿವಲ್ ನಲ್ಲಿ ಪ್ರಧಾನ ಭಾಷಣ ಮಾಡಲಿದ್ದೇನೆ. ಪ್ರಪ್ರಥಮ ಬಾರಿಗೆ ಸರಕಾರದ ಮುಖ್ಯಸ್ಥನೊಬ್ಬನಿಗೆ ಈ ಅವಕಾಶ ದೊರಕಿದ ಗೌರವ ನನಗೆ ಲಭಿಸಿದೆ. ಈ ಉತ್ಸವ ಆರ್ಥಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿಶ್ವದ ಅತಿದೊಡ್ಡ ಸಮಾರಂಭವಾಗಿದೆ . ತ್ವರಿತ-ಪ್ರಗತಿಯ ಕ್ಷೇತ್ರಗಳಲ್ಲಿ ಭಾರತದ ಸದೃಢತೆಯನ್ನು ಪ್ರದರ್ಶಿಸುವ ಸೂಕ್ತ ವೇದಿಕೆ ಇದಾಗಿದೆ. ಮಾತ್ರವಲ್ಲದೆ, ಆವಿಷ್ಕಾರ ಮತ್ತು ಅಭಿವೃದ್ಧಿಗಳ ಪ್ರೋತ್ಸಾಹಕ್ಕಾಗಿ ಜಾಗತಿಕ ಪಾಲುದಾರಿಕೆಗಳನ್ನು ಇದು ಬೆಸೆಯುತ್ತದೆ .

ಭೇಟಿಯ ಅವಧಿಯಲ್ಲಿ, ಜಂಟಿ ಭಾರತ-ಸಿಂಗಾಪುರ ಹಾಕಥೋನ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮತ್ತು ವಿಜೇತರೊಂದಿಗೆ ಸಂವಾದ ನಡೆಸುವ ಅವಕಾಶವೂ ನನಗೆ ದೊರೆಯಲಿದೆ. ನಮ್ಮ ಯುವಜನತೆಗೆ ಸರಿಯಾದ ಪ್ರೋತ್ಸಾಹ ಮತ್ತು ಪೋಷಣೆ ನೀಡುವ ವಾತಾವರಣವನ್ನು ಕಲ್ಪಿಸಿದರೆ ಮುಂದೆ ಮಾನವೀಯತೆಯ ಸವಾಲುಗಳಿಗೆ ಪರಿಹಾರ ದೊರಕಿಸುವ ಜಾಗತಿಕ ನಾಯಕತ್ವದ ಅರ್ಹತೆಗಳೂ ಅವರಲ್ಲಿ ಮೂಡಲಿವೆ ಎಂಬ ನಂಬಿಕೆ ನನ್ನದಾಗಿದೆ.

ನನ್ನ ಸಿಂಗಾಪುರದ ಭೇಟಿಯಿಂದ ಅಸಿಯಾನ್ (ಎ.ಎಸ್.ಇ.ಎ.ಎನ್) ಮತ್ತು ಪೂರ್ವ ಏಷ್ಯಾ ಶೃಂಗಸಭೆಯ ದೇಶಗಳಲ್ಲಿ ಭಾರತದ ಪಾಲುದಾರಿಕೆಗೆ ಹೊಸ ಚೈತನ್ಯ ಮೂಡಲಿದೆ ಎಂಬ ವಿಶ್ವಾಸ ನನಗಿದೆ.

ನಾನು ಸಿಂಗಾಪುರಕ್ಕೆ ತೆರಳುವ ಮುನ್ನ, ಈ ವರ್ಷದ ಅಸಿಯಾನ್ (ಎ.ಎಸ್.ಇ.ಎ.ಎನ್) ಅಧ್ಯಕ್ಷತೆ ವಹಿಸಿದ ಸಿಂಗಾಪುರಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ . ಅಸಿಯಾನ್ (ಎ.ಎಸ್.ಇ.ಎ.ಎನ್) ಮತ್ತು ಸಂಬಂಧಿತ ಶೃಂಗಸಭೆಗಳ ಯಶಸ್ವೀ ಆತಿಥ್ಯಕ್ಕಾಗಿ ನನ್ನ ಅಭಿನಂದನೆಗಳು”.

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Why Narendra Modi is a radical departure in Indian thinking about the world

Media Coverage

Why Narendra Modi is a radical departure in Indian thinking about the world
...

Nm on the go

Always be the first to hear from the PM. Get the App Now!
...
PM congratulates H. E. Jonas Gahr Store on assuming office of Prime Minister of Norway
October 16, 2021
ಶೇರ್
 
Comments

The Prime Minister, Shri Narendra Modi has congratulated H. E. Jonas Gahr Store on assuming the office of Prime Minister of Norway.

In a tweet, the Prime Minister said;

"Congratulations @jonasgahrstore on assuming the office of Prime Minister of Norway. I look forward to working closely with you in further strengthening India-Norway relations."