ಸಮಾಜ ಮತ್ತು ಜನರು ‘ಸೂಕ್ಷ್ಮ ನಿಯಂತ್ರಕ ವಲಯಗಳನ್ನು’ ರಚಿಸಲು ಮುಂದಾಗಬೇಕು: ಪ್ರಧಾನಿ
ಲಸಿಕೆಯ ಪೋಲಾಗುವಿಕೆ ಶೂನ್ಯವಾಗಿರುವಂತೆ ನಾವು ಎಚ್ಚರ ವಹಿಸಬೇಕು: ಪ್ರಧಾನಿ
‘ಲಸಿಕಾ ಉತ್ಸವ’ ಕ್ಕಾಗಿ ವೈಯಕ್ತಿಕ, ಸಾಮಾಜಿಕ ಮತ್ತು ಆಡಳಿತ ಮಟ್ಟದಲ್ಲಿ ಗುರಿಗಳನ್ನು ನಿಗದಿಪಡಿಸಿ ಮತ್ತು ಅವುಗಳನ್ನು ಸಾಧಿಸಲು ಪ್ರಯತ್ನಿಸಿ: ಪ್ರಧಾನಿ ಕರೆ

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ನಾವು “ಟಿಕಾ ಉತ್ಸವವನ್ನು” ಏಪ್ರಿಲ್ 11 ರಿಂದ ಆರಂಭಿಸುತ್ತಿದ್ದೇವೆ. ಇದು ಜ್ಯೊತಿಭಾ ಫುಲೆ ಅವರ ಜನ್ಮ ವರ್ಷಾಚರಣೆ. ಟಿಕಾ ಉತ್ಸವವು ಏಪ್ರಿಲ್ 14 ರವರೆಗೆ, ಅಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ವರ್ಷಾಚರಣೆವರೆಗೆ ಮುಂದುವರೆಯುತ್ತದೆ.

ಈ ಉತ್ಸವವು, ಒಂದು ರೀತಿಯಲ್ಲಿ ಕೊರೊನಾ ವಿರುದ್ಧ ಇನ್ನೊಂದು ಪ್ರಮುಖ ಹೋರಾಟದ ಆರಂಭ. ನಾವು ಸಾಮಾಜಿಕ ಸ್ವಚ್ಛತೆ ಜೊತೆಗೆ ವೈಯಕ್ತಿಕ ಸ್ವಚ್ಛತೆಯ ಬಗೆಗೂ ವಿಶೇಷ ಒತ್ತನ್ನು ನೀಡಬೇಕಾಗಿದೆ.

ನಾವು ಈ ನಾಲ್ಕು ಸಂಗತಿಗಳನ್ನು ನೆನಪಿನಲ್ಲಿಡಬೇಕು.

ಪ್ರತಿಯೊಬ್ಬರೂ –ಒಬ್ಬರಿಗೆ ಲಸಿಕೆ ಹಾಕಿಸಬೇಕು, ಅಂದರೆ ತಾವಾಗಿಯೇ ಲಸಿಕೆ ಹಾಕಿಸಿಕೊಳ್ಳಲು ಹೋಗದ ಹೆಚ್ಚು ಸುಶಿಕ್ಷಿತರಲ್ಲದದವರಿಗೆ ಮತ್ತು ಹಿರಿಯರಿಗೆ ಸಹಾಯ ಮಾಡಬೇಕು.

ಪ್ರತಿಯೊಬ್ಬರೂ–ಓರ್ವರಿಗೆ ಚಿಕಿತ್ಸೆ ಕೊಡಬೇಕು, ಅಂದರೆ ಲಸಿಕೆ ಪಡೆಯಲು ಲಭ್ಯ ಇರುವ ಸೌಲಭ್ಯಗಳ ಬಗ್ಗೆ ಗೊತ್ತಿಲ್ಲದವರಿಗೆ ಮತ್ತು ಅವುಗಳನ್ನು ಪಡೆಯುವ ದಾರಿ ಗೊತ್ತಿಲ್ಲದವರಿಗೆ ಸಹಾಯ ಮಾಡಬೇಕು.

ಪ್ರತಿಯೊಬ್ಬರೂ–ಇನ್ನೊಬ್ಬರನ್ನು ರಕ್ಷಿಸಬೇಕು, ಅಂದರೆ, ನಾನು ಮುಖಗವಸು ಧರಿಸಬೇಕು ಮತ್ತು ಈ ರೀತಿಯಲ್ಲಿ ನಾನು ನನ್ನನ್ನು ರಕ್ಷಿಸಿಕೊಳ್ಳಬೇಕು ಮತ್ತು ಇತರರ ಜೀವವನ್ನು  ಉಳಿಸುವುದಕ್ಕೆ ಆದ್ಯತೆ ನೀಡಬೇಕು.

ಮತ್ತು ನಾಲ್ಕನೇಯ ಮಹತ್ವದ ಸಂಗತಿ ಎಂದರೆ ಯಾರಾದರೊಬ್ಬರಿಗೆ ಕೊರೊನಾ ತಗಲಿದರೆ, ಸಮಾಜದ ಜನರು “ಕಿರು ಕಂಟೈನ್ಮೆಂಟ್ ವಲಯ”ಗಳನ್ನು ರೂಪಿಸುವಲ್ಲಿ ಮುಂದಾಗಬೇಕು. ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾದಲ್ಲಿ ಸಮಾಜದ ಜನರು ಮತ್ತು ಕುಟುಂಬದ ಸದಸ್ಯರು “ಕಿರು ಕಂಟೈನ್ಮೆಂಟ್ ವಲಯ”ಗಳನ್ನು ರೂಪಿಸಬೇಕು.

ಜನದಟ್ಟಣೆ ಹೆಚ್ಚು ಇರುವ ಭಾರತದಂತಹ ದೇಶದಲ್ಲಿ, “ಕಿರು ಕಂಟೈನ್ಮೆಂಟ್ ವಲಯ” ನಿರ್ಮಾಣ ಕೂಡಾ ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖವಾದ ಕ್ರಮ.

ಏಕ ಪಾಸಿಟಿವ್ ಪ್ರಕರಣ ಕಂಡು ಬಂದರೂ, ನಾವೆಲ್ಲರೂ ಜಾಗೃತರಾಗಿರ ಬೇಕಾಗಿರುವುದು ಬಹಳ ಮುಖ್ಯ ಮತ್ತು ಉಳಿದ ಜನರನ್ನು ಪರೀಕ್ಷೆಗೆ ಒಳಪಡಿಸುವುದೂ ಮುಖ್ಯ.

ಇದೇ ವೇಳೆ, ಅರ್ಹರಿಗೆ ಲಸಿಕೆ ಹಾಕಿಸುವಲ್ಲಿ ಸಮಾಜ ಮತ್ತು ಆಡಳಿತಗಳು ಎಲ್ಲಾ ಪ್ರಯತ್ನಗಳನ್ನು ನಡೆಸಬೇಕು.

ನಾವು ಒಂದು ಲಸಿಕೆ ಕೂಡಾ ನಷ್ಟವಾಗದಂತೆ ಖಾತ್ರಿ ಮಾಡಬೇಕು. ನಾವು ಶೂನ್ಯ ಲಸಿಕೆ ನಷ್ಟದತ್ತ ಸಾಗಬೇಕು.

ಇದೇ ವೇಳೆ, ದೇಶದ ಲಸಿಕಾ ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ದಿಕ್ಕಿನಲ್ಲಿ ನಾವು ಸಾಗಬೇಕು. ಇದು ಕೂಡಾ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ದಾರಿಯಾಗಿದೆ.

ನಮ್ಮ ಯಶಸ್ಸು “ಕಿರು ಕಂಟೈನ್ಮೆಂಟ್ ವಲಯ” ಗಳ ಬಗ್ಗೆ ನಮ್ಮ ಜಾಗೃತಿಯನ್ನು ಅವಲಂಬಿಸಿರುತ್ತದೆ.

ಅವಶ್ಯಕತೆ ಇರದ ಮನೆಯನ್ನು ಅದರಷ್ಟಕ್ಕೆ ಬಿಡದೇ ಇರುವುದರಲ್ಲಿ ನಮ್ಮ ಯಶಸ್ಸು ಅಡಗಿದೆ.

ನಮ್ಮ ಯಶಸ್ಸು ಲಸಿಕಾ ಕಾರ್ಯಕ್ರಮಕ್ಕೆ ಅರ್ಹರಾದವರಿಗೆ ಲಸಿಕೆ ಹಾಕಿಸುವುದರಿಂದ ನಿರ್ಧರಿತವಾಗಲಿದೆ.

ನಮ್ಮ ಯಶಸ್ಸು ನಾವು ಮುಖಗವಸು ಧರಿಸುತ್ತೇವೆಯೋ ಮತ್ತು ಇತರ ನಿಯಮಗಳನ್ನು ಅನುಸರಿಸುತ್ತೇವೆಯೋ ಎಂಬುದನ್ನು ಅವಲಂಬಿಸಿದೆ.

ಸ್ನೇಹಿತರೇ,

ಈ ನಾಲ್ಕು ರೀತಿಗಳಲ್ಲಿ, ನಾವು ಆಡಳಿತಾತ್ಮಕ ಮಟ್ಟದಲ್ಲಿ, ಸಮಾಜದ ಮಟ್ಟದಲ್ಲಿ, ಮತ್ತು ವೈಯಕ್ತಿಕ ಮಟ್ಟದಲ್ಲಿ  ನಮ್ಮ ಗುರಿಯನ್ನು ಸಾಧಿಸಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು.

ನಾವು ಮತ್ತೊಮ್ಮೆ ಕೊರೊನಾವನ್ನು ಜನರ ಸಹಭಾಗಿತ್ವದೊಂದಿಗೆ ನಿಯಂತ್ರಿಸಲು ಸಫಲರಾಗುತ್ತೇವೆ ಮತ್ತು ಜಾಗೃತರಾಗಿದ್ದುಕೊಂಡು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತೇವೆ ಎಂಬುದರ ಬಗ್ಗೆ ನನಗೆ ವಿಶ್ವಾಸವಿದೆ.

ನೆನಪಿನಲ್ಲಿಡಿ–ಔಷಧಿಯ ಜೊತೆ ಶಿಷ್ಟಾಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿರಿ

ನಿಮಗೆ ಧನ್ಯವಾದಗಳು!

 

ನಿಮ್ಮ,

ನರೇಂದ್ರ ಮೋದಿ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why industry loves the India–EU free trade deal

Media Coverage

Why industry loves the India–EU free trade deal
NM on the go

Nm on the go

Always be the first to hear from the PM. Get the App Now!
...
Shri HD Deve Gowda Ji meets the Prime Minister
January 29, 2026

Shri HD Deve Gowda Ji met with the Prime Minister, Shri Narendra Modi, today. Shri Modi stated that Shri HD Deve Gowda Ji’s insights on key issues are noteworthy and his passion for India’s development is equally admirable.

The Prime Minister posted on X;

“Had an excellent meeting with Shri HD Deve Gowda Ji. His insights on key issues are noteworthy. Equally admirable is his passion for India’s development.” 

@H_D_Devegowda