ಪ್ರಗತಿಯ ಮೂಲಕ ಪ್ರಧಾನಿ ಸಂವಾದ

Published By : Admin | September 26, 2018 | 17:50 IST
29th Pragati meeting: PM reviews progress in resolution of grievances related to the telecommunications sector
Pragati: PM Modi reviews progress of eight important infrastructure projects in the railway, urban development, road, power, and coal sectors
Pragati meet: PM Modi reviews progress made in the working of the Pradhan Mantri Khanij Kshetra Kalyan Yojana
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ಆಡಳಿತ ಪರವಾದ ಮತ್ತು ಸಕಾಲದ  ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ಇಪ್ಪತ್ತೊಂಬತ್ತನೇ  ಸಂವಾದದ ಅಧ್ಯಕ್ಷತೆ ವಹಿಸಿದ್ದರು.
 
ದೂರಸಂಪರ್ಕ ಕ್ಷೇತ್ರಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಪರಿಹಾರದ ಪ್ರಗತಿಯನ್ನು ಪ್ರಧಾನಮಂತ್ರಿಯವರು ಪರಾಮರ್ಶಿಸಿದರು. ತಂತ್ರಜ್ಞಾನದ ಮೂಲಕ ಇತ್ತೀಚೆಗೆ ಮಾಡಲಾದ ಮಧ್ಯಪ್ರವೇಶ ಸೇರಿದಂತೆ ಈ ನಿಟ್ಟಿನಲ್ಲಿ ಆಗಿರುವ ಪ್ರಗತಿಯ ಬಗ್ಗೆ ಅವರಿಗೆ ವಿವರಿಸಲಾಯಿತು.
 
ದೂರಸಂಪರ್ಕ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ತೀಚಿನ ತಂತ್ರಜ್ಞಾನದ ಆಧಾರದ ಮೇಲೆ ಪರಿಹರಿಸಬೇಕು ಎಂದು ಪ್ರಧಾನಿ ತಿಳಿಸಿದರು. ಸೇವೆ ಒದಗಿಸುವವರು ಉತ್ಕೃಷ್ಟಮಟ್ಟದಲ್ಲಿ ಗ್ರಾಹಕ ಸಂತೃಪ್ತಿ ನೀಡಬೇಕು ಎಂದು ಪ್ರತಿಪಾದಿಸಿದರು.
ಈವರೆಗೆ ಪ್ರಗತಿಯ ಇಪ್ಪತ್ತೆಂಟು ಸಭೆಗಳಲ್ಲಿ, ಒಟ್ಟು 11.75 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಯೋಜನೆಗಳ ಸಮಗ್ರ ಪರಾಮರ್ಶೆ ಮಾಡಲಾಗಿದೆ. ವಿವಿಧ ವಲಯಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಪರಾಮರ್ಶಿಸಿ ಪರಿಹರಿಸಲಾಗಿದೆ.
 
ಇಂದು 29ನೇ ಸಭೆಯಲ್ಲಿ, ಪ್ರಧಾನಮಂತ್ರಿಯವರು ರೈಲ್ವೆ, ನಗರಾಭಿವೃದ್ಧಿ, ರಸ್ತೆ, ಇಂಧನ ಮತ್ತು ಕಲ್ಲಿದ್ದಲು ಕ್ಷೇತ್ರದ ಎಂಟು ಮಹತ್ವದ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲಿಸಿದರು. ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳಿಗೆ ಸಂಬಂಧಿಸಿದ ಯೋಜನೆಗಳು ಇವಾಗಿವೆ.
 
ಪ್ರಧಾನಮಂತ್ರಿಯವರ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ಅದರಲ್ಲೂ ಖನಿಜ ಪ್ರತಿಷ್ಠಾನದ ಜಲಿಲೆಗಳ ಕಾರ್ಯವೈಖರಿಯ ಪ್ರಗತಿ ಕುರಿತಂತೆ ಪ್ರಧಾನಮಂತ್ರಿಯವರು ಪರಾಮರ್ಶೆ ನಡೆಸಿದರು. ಹಲವಾರು ಖನಿಜಯುಕ್ತ ಜಿಲ್ಲೆಗಳಿಗೆ ಇದೀಗ ಗಣನೀಯವಾದ ಸಂಪನ್ಮೂಲಗಳು ದೊರೆಯುತ್ತಿವೆ ಎಂಬುದನ್ನು ಪರಿಗಣಿಸಿದ ಅವರು, ಈ ಜಿಲ್ಲೆಗಳಲ್ಲಿನ ಜನರ ಜೀವನ ಮಟ್ಟದ ಗುಣಾತ್ಮಕ ಸುಧಾರಣೆ ಮತ್ತು ಸುಗಮ ಜೀವನಕ್ಕೆ ಈ ನಿಧಿ ಬಳಕೆಯಾಗುತ್ತಿರುವುದನ್ನು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ತಮ್ಮ ದೀರ್ಘಕಾಲದ ಅಭಿವೃದ್ಧಿ ಕೊರತೆಯ ಹೊರತಾಗಿಯೂ ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಈ ಜಿಲ್ಲೆಗಳಲ್ಲಿ ತರಲು ಇದು ಒಂದು ಸದಾವಕಾಶ ಎಂದು ಪ್ರತಿಪಾದಿಸಿದರು.
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Semicon India 2024: Top semiconductor CEOs laud India and PM Modi's leadership

Media Coverage

Semicon India 2024: Top semiconductor CEOs laud India and PM Modi's leadership
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಸೆಪ್ಟೆಂಬರ್ 2024
September 12, 2024

Appreciation for the Modi Government’s Multi-Sectoral Reforms