ಶೇರ್
 
Comments

ಪ್ರತಿಕಾ ಹೇಳಿಕೆ

 

ಘನತೆವೆತ್ತ ಅಧ್ಯಕ್ಷರಾದ ರಮಾಫೋಸಾ ಅವರೇ, ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ಗೌರವಾನ್ವಿತ ಅತಿಥಿಗಳೇ, ಸ್ನೇಹಿತರೇ,

 

ಭಾರತದ ಅವಿಭಾಜ್ಯ ಸ್ನೇಹಿತರಾದ ಅಧ್ಯಕ್ಷ ರಮಾಫೋಸಾ ಅವರು ಇಂದು ನಮ್ಮೊಂದಿಗಿರುವುದು ಸಂತಸದ ವಿಷಯವಾಗಿದೆ. ಭಾರತ ಅವರಿಗೆ ಹೊಸದಲ್ಲ, ಆದರೆ ಅಧ್ಯಕ್ಷರಾಗಿ ಇದು ಅವರ ಮೊದಲ ಭಾರತ ಭೇಟಿ. ನಮ್ಮ ಸಂಬಂಧಗಳ ವಿಶೇಷ ಸಂದರ್ಭದಲ್ಲಿ ಅವರ ಭಾರತ ಭೇಟಿ ನಡೆದಿದೆ. ಇದು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿ. ಕಳೆದ ವರ್ಷ ನೆಲ್ಸನ್ ಮಂಡೇಲಾ ಅವರ ಜನ್ಮ ಶತಮಾನೋತ್ಸವ. ಹಾಗೆಯೇ ಕಳೆದ ವರ್ಷ ನಮ್ಮ ರಾಜತಾಂತ್ರಿಕ ಸಂಬಂಧಗಳ ಅಮೃತ ಮಹೋತ್ಸವ ವರ್ಷ. ಅಧ್ಯಕ್ಷ ರಮಾಫೋಸಾ ಅವರು ಇಂತಹ ವಿಶೇಷ ಸಂದರ್ಭದಲ್ಲಿ ಭಾರತಕ್ಕೆ ಬಂದಿರುವುದು ನನಗೆ ಸಂತೋಷವಾಗಿದೆ. ನಾಳೆ ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದರಿಂದ ಅವರ ಭಾರತ ಭೇಟಿ ನಮಗೆ ವಿಶೇಷ ಮಹತ್ವದ್ದಾಗಿದೆ. ಅವರು ನಮಗೆ ನೀಡಿರುವ ಈ ಎಲ್ಲ ಗೌರವಾದರಗಳಿಗೆ ಭಾರತ ಕೃತಜ್ಞವಾಗಿದೆ. ಈ ಗೌರವವನ್ನು ನೀಡಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಇಡೀ ಭಾರತವು ಅವರಿಗೆ ಕೃತಜ್ಞವಾಗಿದೆ.

 

ಸ್ನೇಹಿತರೇ,

 

2016ರಲ್ಲಿ ನಾನು ದಕ್ಷಿಣ ಆಫ್ರಿಕಾಗೆ ಹೋಗಿದ್ದಾಗ ಮೊದಲ ಬಾರಿ ಅಧ್ಯಕ್ಷ ರಮಾಫೋಸಾ ಅವರನ್ನು ಭೇಟಿಯಾಗಿದ್ದೆ. ಆ ಸಮಯದಲ್ಲಿ ಅವರು ಉಪಾಧ್ಯಕ್ಷರಾಗಿದ್ದರು. ಅವರಿಗೆ ಭಾರತದ ಬಗೆಗಿರುವ ಉತ್ಸಾಹ ಹಾಗೂ ಪ್ರೀತಿ  ನಮ್ಮ ಮೊದಲ ಭೇಟಿಯಲ್ಲೇ ನನ್ನ ಅನುಭವಕ್ಕೆ ಬಂದಿದೆ.  ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗದ ಸಮಯದಲ್ಲಿ ಅವರು ನೀಡಿದ ಅದ್ಭುತವಾದ ಆತಿಥ್ಯವನ್ನು ನಾನು ಅನುಭವಿಸಿದೆ. ದೆಹಲಿಯಲ್ಲಿ ಈಗ ಚಳಿಗಾಲವಿದ್ದರೂ ಅಧ್ಯಕ್ಷ ರಮಾಫೋಸಾ ಅವರು ಈ ಪ್ರವಾಸದಲ್ಲಿ ಭಾರತದ ಬೆಚ್ಚನೆಯ ಸ್ವಾಗತವನ್ನು ಅನುಭವಿಸುತ್ತಾರೆ ಎಂದು ನಾನು ನಂಬಿದ್ದೇನೆ. ಅಧ್ಯಕ್ಷರು ಮತ್ತು ಅವರ ತಂಡವನ್ನು ನಾನು ಆತ್ಮೀಯವಾಗಿ ಸ್ವಾಗತಿಸುತ್ತೇನೆ.

ಸ್ನೇಹಿತರೇ,

 

ಅಧ್ಯಕ್ಷರೊಂದಿಗೆ ಇಂದು ನಾವು ನಡೆಸಿದ ಮಾತುಕತೆಯಲ್ಲಿ ನಮ್ಮ ಸಂಬಂಧಗಳ ಎಲ್ಲ ಆಯಾಮಗಳನ್ನೂ ಪರಿಶೀಲಿಸಿದ್ದೇವೆ. ನಮ್ಮ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಮತ್ತಷ್ಟು ತೀವ್ರವಾಗುತ್ತಿವೆ.    ನಮ್ಮ  ದ್ವಿಪಕ್ಷೀಯ ವ್ಯಾಪಾರ 10 ಬಿಲಿಯನ್ ಡಾಲರ್ ಗಳಿಗೂ ಅಧಿಕವಾಗಿದೆ. ಈ ವರ್ಷ ನಡೆದ ‘ವೈಬ್ರಂಟ್ ಗುಜರಾತ್’ ಶೃಂಗದಲ್ಲಿ ದಕ್ಷಿಣ ಆಫ್ರಿಕಾವು ಪಾಲುದಾರ ರಾಷ್ಟ್ರವಾಗಿ ಭಾಗವಹಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ಹೂಡಿಕೆಯ ಹೆಚ್ಚಳಕ್ಕಾಗಿ ಅಧ್ಯಕ್ಷ ರಮಾಫೋಸಾ ಮಾಡಿದ ಪ್ರಯತ್ನಗಳಿಂದಾಗಿ ಭಾರತೀಯ ಕಂಪನಿಗಳು ಹೆಚ್ಚು ಕ್ರಿಯಾಶೀಲವಾಗಿ ಭಾಗವಹಿಸುತ್ತಿವೆ. ದಕ್ಷಿಣ ಆಫ್ರಿಕಾದ ಕೌಶಲ್ಯಾಭಿವೃದ್ಧಿ ಪ್ರಯತ್ನಗಳಲ್ಲಿ ನಾವೂ ಸಹ ಪಾಲುದಾರರು. ಪ್ರಿಟೋರಿಯಾದಲ್ಲಿ ಸದ್ಯದಲ್ಲೇ ಗಾಂಧಿ-ಮಂಡೇಲಾ ಕೌಶಲ್ಯ ಸಂಸ್ಥೆ ಆರಂಭವಾಗಲಿದೆ. ಈ ಸಂಬಂಧಗಳನ್ನು ಮತ್ತೊಂದು ಹೊಸ ಹಂತಕ್ಕೆ ಕೊಂಡೊಯ್ಯಲು ನಾವಿಬ್ಬರೂ ಬದ್ಧರಾಗಿದ್ದೇವೆ. ಅದಕ್ಕಾಗಿ ಎರಡೂ ದೇಶಗಳ ಪ್ರಮುಖ ಉದ್ಯಮಿಗಳನ್ನು ನಾವು ಸದ್ಯದಲ್ಲೇ ಭೇಟಿ ಮಾಡುತ್ತೇವೆ.

ಸ್ನೇಹಿತರೇ,

 

ನಾವು ಪ್ರಪಂಚದ ಭೂಪಟವನ್ನು ನೋಡಿದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ಹಿಂದೂ ಮಹಾಸಾಗರದ ಪ್ರಮುಖ ಸ್ಥಳಗಳಲ್ಲಿವೆ ಎಂಬುದು ಸ್ಪಷ್ಟವಾಗುತ್ತದೆ. ನಾವಿಬ್ಬರೂ ವೈವಿಧ್ಯತೆಯಿಂದ ಕೂಡಿರುವ ಪ್ರಜಾಪ್ರಭುತ್ವ ದೇಶಗಳು. ನಾವು ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಪರಂಪರೆಯ ಉತ್ತರಾಧಿಕಾರಿಗಳು. ಹಾಗಾಗಿಯೇ ಎರಡೂ ದೇಶಗಳ ಜಾಗತಿಕ ದೃಷ್ಟಿಕೋನ ಒಂದೇ ಆಗಿದೆ. ಬ್ರಿಕ್ಸ್, ಜಿ-20, ಇಂಡಿಯನ್ ಓಷಿಯನ್ ರಿಮ್ ಅಸೋಸಿಯೇಷನ್, ಐ ಬಿ ಎಸ್ ಎ ಯಂತಹ ಹಲವಾರು ವೇದಿಕೆಗಳಲ್ಲಿ ನಮ್ಮ ಪರಸ್ಪರ ಸಹಕಾರ ಮತ್ತು ಸಹಯೋಗ ಸದೃಢವಾಗಿದೆ. ಹಾಗೆಯೇ ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯಲ್ಲೂ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅಧ್ಯಕ್ಷರ ಭಾರತ ಭೇಟಿಯ ವಿಶೇಷ ಕಾರ್ಯಕ್ರಮವಾಗಿ ಮೊದಲ ‘ಗಾಂಧಿ-ಮಂಡೇಲಾ ಸ್ವಾತಂತ್ರ್ಯ ಉಪನ್ಯಾಸ’ವನ್ನು ಇಂದು ಆಯೋಜಿಸಲಾಗಿದೆ. ನಾನಷ್ಟೇ ಅಲ್ಲ, ಸಮಸ್ತ ಭಾರತ ಮತ್ತು ಸಮಸ್ತ ದಕ್ಷಿಣ ಆಫ್ರಿಕಾ ಗೌರವಾನ್ವಿತ ಅಧ್ಯಕ್ಷರ ಆಲೋಚನೆಗಳನ್ನು ಕೇಳಲು ಕಾತುರವಾಗಿವೆ.

ಸ್ನೇಹಿತರೇ,

 

ಗಣರಾಜ್ಯೋತ್ಸವ ದಿನದಂದು ಅಧ್ಯಕ್ಷ ರಮಾಫೋಸಾ ಅವರ ಉಪಸ್ಥಿತಿ ಮತ್ತು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದು ನಮ್ಮ ಸಂಬಂಧಗಳನ್ನು ಸದೃಢಗೊಳಿಸುವ ನಮ್ಮ ಬದ್ಧತೆಯ ಸಂಕೇತವಾಗಿದೆ. ಮತ್ತೊಮ್ಮೆ ಅಧ್ಯಕ್ಷರಿಗೆ ಆತ್ಮೀಯವಾದ ಸ್ವಾಗತ

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Mann KI Baat Quiz
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
52.5 lakh houses delivered, over 83 lakh grounded for construction under PMAY-U: Govt

Media Coverage

52.5 lakh houses delivered, over 83 lakh grounded for construction under PMAY-U: Govt
...

Nm on the go

Always be the first to hear from the PM. Get the App Now!
...
ಡಿಸೆಂಬರ್ 3ರಂದು ಇನ್ಫಿನಿಟಿ ಫೋರಂ ಉದ್ಘಾಟಿಸಲಿರುವ ಪ್ರಧಾನಮಂತ್ರಿ
November 30, 2021
ಶೇರ್
 
Comments
'ಫಿನ್ ಟೆಕ್ ಬಿಯಾಂಡ್ ನೆಕ್ಸ್ಟ್', ಫಿನ್ ಟೆಕ್ ಬಿಯಾಂಡ್ ಫೈನಾನ್ಸ್ ಮತ್ತು ಫಿನೆ ಟೆಕ್ ಬಿಯಾಂಡ್ ಬೌಂಡರೀಸ್ ಸೇರಿದಂತೆ ಉಪ ಘೋಷಣೆಯನ್ನು ಒಳಗೊಂಡ ' ಬಿಯಾಂಡ್ ಮುಖ್ಯ ಘೋಷಣೆ ಕುರಿತು ಒತ್ತು ನೀಡಲಿರುವ ವೇದಿಕೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  2021ರ ಡಿಸೆಂಬರ್ 3ರಂದು  ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಣಕಾಸು ತಂತ್ರಜ್ಞಾನ - ಫಿನ್ ಟೆಕ್ ಕುರಿತ ಚಿಂತನಾ ನಾಯಕತ್ವ ವೇದಿಕೆ - ಫಿನ್ ಟೆಕ್ ಫೋರಂ ಅನ್ನು ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ  ಕೇಂದ್ರ ಪ್ರಾಧಿಕಾರ (ಐಎಫ್ ಎಸ್ ಸಿಎ) ಭಾರತ ಸರ್ಕಾರದ  ಸಹಭಾಗಿತ್ವದಲ್ಲಿ  ಗಿಫ್ಟ್ ಸಿಟಿ ಮತ್ತು  ಬ್ಲೂಮ್ ಬರ್ಗ್ ಸಹಯೋಗದಲ್ಲಿ  2021ರ  ಡಿಸೆಂಬರ್ 3 ಮತ್ತು 4ರಂದು ಆಯೋಜಿಸಿದೆ.

ವೇದಿಕೆಯ ಮೊದಲನೇ ಆವೃತ್ತಿಯಲ್ಲಿ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು  ಯುಕೆ ಪಾಲುದಾರ ರಾಷ್ಟಗಳಾಗಿವೆ.

ಫಿನ್ ಟೆಕ್ ವೇದಿಕೆ  ನೀತಿ, ವ್ಯಾಪಾರ ಮತ್ತು  ತಂತ್ರಜ್ಞಾನಕ್ಕೆ ಸಂಬಂಧಿಸಿದ ಜಗತ್ತಿನ  ನೈಪುಣ್ಯತೆ ಹೊಂದಿರುವವರನ್ನು ಒಗ್ಗೂಡಿಸಲಿದೆ ಮತ್ತು ಅವರು  ಚರ್ಚೆ ನಡೆಸುವರು.

ಎಲ್ಲರನ್ನು ಒಳಗೊಂಡ ಪ್ರಗತಿಗಾಗಿ ಹಣಕಾಸು , ತಂತ್ರಜ್ಞಾನ ಉದ್ಯಮ ಮತ್ತು ಮುಖ್ಯವಾಗಿ ಮನುಕುಲಕ್ಕೆ ಸೇವೆ ಸಲ್ಲಿಸಲು ಹೇಗೆ  ತಂತ್ರಜ್ಞಾನ ಮತ್ತು ಆವಿಷ್ಕಾರಗಳ  ಒಳನೋಟವನ್ನು ಬಳಸಿಕೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಸಿ, ರೂಪುರೇಷೆಗಳನ್ನು ಸಿದ್ಧಪಡಿಸುವರು.

ಈ ವೇದಿಕೆಯ  ಕಾರ್ಯಸೂಚಿ ' ಬಿಯಾಂಡ್ ' ಎಂದರೆ  ಅದನ್ನು ಮೀರಿದ  ಎಂಬ  ಘೋಷಣೆ  ಮುಖ್ಯವಾಗಿದೆ.  ಜೊತೆಗೆ  ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು  ಜಾಗತಿಕ ಮಟ್ಟದಲ್ಲಿ ಆಗುತ್ತಿರುವ  ಬೆಳವಣಿಗೆಗಳು  ಭೌಗೋಳಿಕ ಗಡಿಯಾಚೆ ಸರ್ಕಾರ ಮತ್ತು  ವಾಣಿಜ್ಯೋದ್ಯಮಿಗಳು ಒತ್ತು ನೀಡುತ್ತಿರುವುದು  ಬಾಹ್ಯಾಕಾಶ ತಂತ್ರಜ್ಞಾನ, ಹಸಿರು ತಂತ್ರಜ್ಞಾನ, ಕೃಷಿ ತಂತ್ರಜ್ಞಾನದಿಂದ  ಸುಸ್ಥಿರ ಅಭಿವೃದ್ಧಿಯತ್ತ ಸಾಗುವುದು ಸೇರಿದಂತೆ  ಉದಯೋನ್ಮುಖ ವಲಯಗಳಲ್ಲಿ  ಹಣಕಾಸು  ಹೊರತುಪಡಿಸಿದ  ಫಿನ್ ಟೆಕ್ ಉದ್ಯಮ ಮತ್ತು  ಫಿನ್ ಟೆಕ್ ಬಿಯಾಂಡ್ ನೆಕ್ಸ್ಟ್ ನಲ್ಲಿ  ಕ್ವಾಂಟಮ್ , ಕಂಪ್ಯೂಟಿಂಗ್ ಕ್ಲೌಡ್ ಹೇಗೆ ಭವಿಷ್ಯದ ಫಿನ್ ಟೆಕ್ ಉದ್ಯಮದ  ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆ ಮತ್ತು  ಹೊಸ ಅವಕಾಶಗಳನ್ನು ಉತ್ತೇಜಿಸುತ್ತದೆ ಎಂಬ ಕುರಿತು  ಚರ್ಚೆ ನಡೆಸಲಾಗುವುದು.

ವೇದಿಕೆಯಲ್ಲಿ  ಸುಮಾರು 70ಕ್ಕೂ ಅಧಿಕ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳುವರು  ಫೋರಂನ  ಪ್ರಧಾನ ಭಾಷಣಕಾರರಾಗಿ  ಮಲೇಷ್ಯಾದ  ಹಣಕಾಸು ಸಚಿವರಾದ ಶ್ರೀ  ಝಾಫರುಲ್ಲಾ ಅಜೀಝ್ ,  ಇಂಡೋನೇಷ್ಯಾದ ಹಣಕಾಸು ಸಚಿವ ಶ್ರೀಮತಿ  ಮುಲ್ಯಾನಿ  ಇಂದ್ರಾವತಿ ,  ಇಂಡೋನೇಷ್ಯಾದ ಸೃಜನಾತ್ಮಕ ಆರ್ಥಿಕ ಸಚಿವ ಶ್ರೀ ಸ್ಯಾಂಡಿಯಾಗ ಎಸ್ ಯುನೊ, ರಿಲಯೆನ್ಸ್ ಉದ್ಯಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಮುಖೇಶ್ ಅಂಬಾನಿ, ಸಾಫ್ಟ್ ಬ್ಯಾಂಕ್ ಗ್ರೂಪ್ ನ ಅಧ್ಯಕ್ಷ ಮತ್ತು ಸಿಇಓ ಶ್ರೀ  ಮಸಾಯೋಶಿ  ಸೋನ್ ,  ಐಬಿಎಂ ನ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅರವಿಂದ ಕೃಷ್ಣ, ಕೊಟಕ್ ಮಹೇಂದ್ರ ಬ್ಯಾಂಕ್ ಲಿಮಿಟೆಡ್ ನ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಉದಯ್ ಕೊಟಕ್ ಮತ್ತಿತರರು ಭಾಗವಹಿಸಲಿದ್ದಾರೆ.

ನೀತಿ ಆಯೋಗ, ಇನ್ವೆಸ್ಟ್ ಇಂಡಿಯಾ, ಫಿಕಿ ಮತ್ತು ನ್ಯಾಸ್ ಕಾಂ ಮತ್ತಿತರರು  ಈ ವರ್ಷದ ಪೋರಂನ ಪ್ರಮುಖ ಪಾಲುದಾರರಾಗಿದ್ದಾರೆ.

ಐಎಫ್ ಎಸ್ ಸಿಎ ಕುರಿತು

ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರ - IFSCA

ಗುಜರಾತ್ ನ ಗಾಂಧಿನಗರದ  ಗಿಫ್ಟ್ ಸಿಟಿಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಇದು  2019ರ  ಅಂತಾರಾಷ್ಟ್ರೀಯ ಹಣಕಾಸು  ಸೇವೆಗಳ  ಕೇಂದ್ರ ಪ್ರಾಧಿಕಾರ ಕಾಯ್ದೆಯಡಿ  ಸ್ಥಾಪಿಸಲ್ಪಟ್ಟಿದೆ. ಇದು   ಭಾರತದಲ್ಲಿ ಹಣಕಾಸು  ಉತ್ಪನ್ನಗಳು, ಸೇವೆಗಳು ಮತ್ತು ಹಣಕಾಸು ಸಂಸ್ಥೆಗಳು ಅಂತಾರಾಷ್ಟ್ರೀಯ ಹಣಕಾಸು  ಕೇಂದ್ರದಡಿ  ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ ಒಗ್ಗೂಡಿ ಕೆಲಸ ಮಾಡಲಿವೆ.

ಪ್ರಸ್ತುತ  ಗಿಫ್ಟ್ ಐಎಫ್ ಎಸ್ ಸಿಎ  ಭಾರತದಲ್ಲಿ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ  ಕೇಂದ್ರವಾಗಿದೆ.