Shri Narendra Modi campaigns in Srinagar & Pithoragarh districts of Uttarakhand
Congress has turned ‘Dev Bhoomi’ into “Loot Bhoomi: Shri Modi
Samajwadi party & Congress ruined Uttarakhand. They played with aspirations of people here: PM
Dev Bhoomi can attract tourists from all over the country. This land has so much potential for tourism sector to flourish: PM
Congress did not even note the difficulties our ex-servicemen faced: PM Modi
Why development projects are stalled in Uttarakhand? This has badly hit progress of the state: PM

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಾಖಂಡದ ಶ್ರೀನಗರ ಮತ್ತು ಪಿಥೋರಗಡ್ ಸಾರ್ವಜನಿಕ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದರು .

ರಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಉತ್ತರಾಖಂಡ್ ರಚನೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆಯನ್ನು ಶ್ರೀ ಮೋದಿ ನೆನಪಿಸಿಕೊಂಡರು . ಛತ್ತೀಸ್ಗಡ, ಜಾರ್ಖಂಡ್ ಮತ್ತು ಉತ್ತರಾಖಂಡ - ಈ ಮೂರು ರಾಜ್ಯಗಳನ್ನು ಅಟಲ್ ಜಿ ರಚಿಸಿದರು . ಬಿಜೆಪಿ ಆಡಳಿತದಲ್ಲಿ ಛತ್ತೀಸ್ಗಡ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳು ಪ್ರಗತಿ ಹೊಂದಿತ್ತು . ಯಾಕೆ ಕಾಂಗ್ರೆಸ್ ಉತ್ತರಾಖಂಡವನ್ನು ರಾಜ್ಯವನ್ನಾಗಿ ರಚಿಸಲು ವಿರೋಧಿಸಿತ್ತು ? ಜನರ ಒಳಿತಿಗಾಗಿ ಯೋಚಿಸದವರು , ಹೇಗೆ ಆಡಳಿತ ಮಾಡಬಹುದು ?" ಎಂದೂ ಅವರು ಹೇಳಿದರು ”

ವಿರೋಧ ಪಕ್ಷವನ್ನು ಟೀಕಿಸುತ್ತಾ , ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಉತ್ತರಾಖಂಡವನ್ನು ಅಭಿವೃದ್ಧಿ ಮಾಡಿಲ್ಲ . ಅವರು ಇಲ್ಲಿನ ಜನರ ಆಕಾಂಕ್ಷೆಗಳೊಂದಿಗೆ ಆಟ ಆಡಿದ್ದಾರೆ " ಎಂದು ಪ್ರಧಾನಿ ಹೇಳಿದರು”

ಉತ್ತರಾಖಂಡದಲ್ಲಿನ ಪ್ರವಾಸೋದ್ಯಮ ವ್ಯಾಪ್ತಿಯ ಬಗ್ಗೆ ಮಾತನಾಡಿದ ಪ್ರಧಾನಿ , " ದೇವ ಭೂಮಿ ದೇಶದಾದ್ಯಂತ ಪ್ರವಾಸಿಗರನ್ನು ಆಕರ್ಷಿಸಬಹುದು . ಪ್ರವಾಸೋದ್ಯಮ ವಲಯವನ್ನು ವೈಭವಗೊಳಿಸಲು ಈ ಭೂಮಿ ತುಂಬಾ ಸಮರ್ಥವಾಗಿದೆ " ಎಂದು ಹೇಳಿದರು”

ಚಾರ್ ಧಾಮ್ ಅನ್ನು ಉತ್ತಮ ರಸ್ತೆಗಳಿಂದ ಸಂಪರ್ಕಿಸಲು ಕೇಂದ್ರ ಸರ್ಕಾರ 12, 000 ಕೋಟಿಯನ್ನು ಮಂಜೂರು ಮಾಡಿದೆ . " ಎಲ್ಲ ಹವಾಮಾನಗಳಿಗೆ ಸೂಕ್ತವಾಗುವ ಉತ್ತಮ ರಸ್ತೆ ಸಂಪರ್ಕಗಳಿಂದ ಉತ್ತರಖಾಂಡವನ್ನು ನಾವು ಸಂಪೂರ್ಣ ದೇಶದೊಂದಿಗೆ ಸಂಪರ್ಕಿಸಲು ಬಯಸಿದ್ದೇವೆ . ಚಾರ್ ಧಾಮ್ ಅನ್ನು ಉತ್ತಮ ರಸ್ತೆಗಳಿಂದ ಸಂಪರ್ಕಿಸಲು 12, 000 ಕೋಟಿಯನ್ನು ಮಂಜೂರು ಮಾಡಿದ್ದೇವೆ ". ಎಂದು ಶ್ರೀ ಮೋದಿ ಹೇಳಿದರು ”

ಉತ್ತರಾಖಂಡ್ ಅಭಿವೃದ್ಧಿ ಹಾಗೂ ಅದರ ಆರ್ಥಿಕತೆಯ ನನ್ನ ಸರ್ಕಾರಕ್ಕೆ ಅತ್ಯಂತ ಪ್ರಮುಖವಾದ್ದದು , " ಒಬ್ಬ ಯೋಗದ ಬಗ್ಗೆ ಯೋಚಿಸಿದಾಗ , ಹರಿದ್ವಾರ ಮತ್ತು ರಿಷಿಕೇಷವನ್ನು ನೆನಪಿಸುತ್ತಾನೆ . ನಾವು ಸರಿಯಾದ ಮೂಲಸೌಕರ್ಯ ಅಭಿವೃದ್ಧಿ ಮೂಲಕ ವಲಯಕ್ಕೆ ಉತ್ತೇಜನವನ್ನು ನೀಡುತ್ತೇವೆ ". ಎಂದು ಪ್ರಧಾನಿ ಹೇಳಿದರು . " ವಿಶ್ವ ಸಮಗ್ರ ಆರೋಗ್ಯದ ಕಡೆಗೆ ಚಲಿಸುತ್ತಿದೆ . ಈ ಕ್ಷೇತ್ರಕ್ಕೆ ಕೊಡುಗೆ ನೀಡಲು ಉತ್ತರಾಖಂಡ್ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ " ಎಂದೂ ಅವರು ಹೇಳಿದರು .”

ಹಿಂದಿನ ಸರ್ಕಾರ ನಮ್ಮ ಮಾಜಿ ಸೈನಿಕರಿಗಾಗಿ ಏನೂ ಮಾಡಿಲ್ಲ ಎಂದು ಶ್ರೀ ಮೋದಿ ಹೇಳಿದರು . " ಮಾಜಿ ಸೈನಿಕರು ಎದುರಿಸಿದ ಸಮಸ್ಯೆಗಳಿಗೆ ಕಾಂಗ್ರೆಸ್ ಗಮನ ಕೂಡ ಹರಿಸಿಲ್ಲ! ದೇಶಕ್ಕಾಗಿ ಹೋರಾಡಿದವರಿಗಾಗಿ ಹೀಗೆ ಮಾಡಿದರೆ , ಇದನ್ನು ಸ್ವೀಕರಿಸಲಾಗುವುದಿಲ್ಲ ?" ಎಂದು ಹೇಳಿದರು . "ಕಾಂಗ್ರೆಸ್ ಒನ್ ರಾಂಕ್ ಒನ್ ಪೆಂಷನ್ ನ ಅಪಹಾಸ್ಯ ಮಾಡಿದೆ . ನಾವು ಅಧಿಕಾರಕ್ಕೆ ಬಂದ ನಂತರ ಇದನ್ನು ಜಾರಿಗೆ ಮಾಡಲಾಗಿದೆ " ಎಂದೂ ಹೇಳಿದರು .”

70 ವರ್ಷಗಳ ಕಾಲ ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ ಮತ್ತು ಅವರು ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು . ನಾವು ಭ್ರಷ್ಟಾಚಾರದ ವಿರುದ್ಧ ಕ್ರಮಗಳನ್ನು ಕೈಗೊಂಡೆವು ಆದರೆ ಕೆಲವು ಜನರಿಗೆ ಇದು ಇಷ್ಟವಾಗಿಲ್ಲ . ರಾಷ್ಟ್ರವನ್ನು ಲೂಟಿ ಮಾಡಿದವರನ್ನು ಬಿಡಲಾಗುವುದಿಲ್ಲ ಎಂದು ಪ್ರಧಾನಿ ಹೇಳಿದರು .

ನನ್ನ ಸರ್ಕಾರ ಉತ್ತರಾಖಂಡ್ ಜನರಿಗೆ ಉತ್ತಮ ಜೀವನವನ್ನು ಒದಗಿಸಲು ಮೀಸಲಾಗಿದೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು . " ನಮ್ಮ ಸರ್ಕಾರ ಬಡವರ ಸೇವೆ ಮಾಡಲು ಬದ್ಧವಾಗಿದೆ ನಾವು ಬಡವರಿಗೆ ಎಲ್ ಪಿಜಿ ಸಂಪರ್ಕವನ್ನು ಒದಗಿಸುತ್ತಿದ್ದೇವೆ . ಇದು ಹಲವಾರು ಗ್ರಾಮೀಣ ಮನೆಗಳಿಗೆ ಪ್ರಯೋಜನವಾಗಿದೆ ", ಎಂದು ಪ್ರಧಾನಿ ಹೇಳಿದರು .

ಉತ್ತರಾಖಂಡದಲ್ಲಿ ಅಭಿವೃದ್ಧಿಯ ಅಗತ್ಯವಿದೆ , ಆದರೆ ಪ್ರಸ್ತುತದಲ್ಲಿರುವ ರಾಜ್ಯ ಸರ್ಕಾರ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ , " ಕೆಲವರು ಹರ್ದಾ ತೆರಿಗೆಯ ಬಗ್ಗೆ ಮಾತುನಾಡುವುದನ್ನು ಕಂಡು ನಾನು ಆಶ್ಚರ್ಯಗೊಂಡೆ! ಆದರೆ ಯಾಕೆ ಅಭಿವೃದ್ಧಿ ಯೋಜನೆಗಳು ನಿಂತು ಹೋಗಿದೆ ? ಇದು ರಾಜ್ಯದ ಪ್ರಗತಿಗೆ ಪ್ರತಿಕೂಲ ಪರಿಣಾಮ ಬೀರಿದೆ ". ಎಂದು ಅವರು ಹೇಳಿದರು. 

ಹಲವಾರು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s GDP To Grow 7% In FY26: Crisil Revises Growth Forecast Upward

Media Coverage

India’s GDP To Grow 7% In FY26: Crisil Revises Growth Forecast Upward
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the power of collective effort
December 17, 2025

The Prime Minister, Shri Narendra Modi, shared a Sanskrit Subhashitam-

“अल्पानामपि वस्तूनां संहतिः कार्यसाधिका।

तृणैर्गुणत्वमापन्नैर्बध्यन्ते मत्तदन्तिनः॥”

The Sanskrit Subhashitam conveys that even small things, when brought together in a well-planned manner, can accomplish great tasks, and that a rope made of hay sticks can even entangle powerful elephants.

The Prime Minister wrote on X;

“अल्पानामपि वस्तूनां संहतिः कार्यसाधिका।

तृणैर्गुणत्वमापन्नैर्बध्यन्ते मत्तदन्तिनः॥”