ಶಿವಾಜಿ ಮಹಾರಾಜರ ಜೀವನ ಮತ್ತು ಇತಿಹಾಸವನ್ನು ಜನರ ಬಳಿಗೆ ಕೊಂಡೊಯ್ಯುವ ಅವರ ಅದ್ಭುತ ಕೊಡುಗೆಗಾಗಿ ನಾವೆಲ್ಲರೂ ಅವರಿಗೆ ಯಾವಾಗಲೂ ಋಣಿಯಾಗಿರುತ್ತೇವೆ: ಪ್ರಧಾನಿ
ಛತ್ರಪತಿ ಶಿವಾಜಿ ಮಹಾರಾಜರಿಲ್ಲದೆ ಭಾರತದ ರೂಪ, ಅದರ ವೈಭವವನ್ನು ಊಹಿಸಿಕೊಳ್ಳುವುದು ಅಸಾಧ್ಯ: ಪ್ರಧಾನಿ
ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್’ ಹಿಂದುಳಿದ ಮತ್ತು ವಂಚಿತರಿಗೆ ನ್ಯಾಯ ಮತ್ತು ದೌರ್ಜನ್ಯದ ವಿರುದ್ಧದ ಯುದ್ಧದ ಸಾಟಿಯ ಅಪ್ರತಿಮ ಉದಾಹರಣೆಯಾಗಿದೆ: ಪ್ರಧಾನಿ
ಬಾಜಾ ಸಾಹೇಬ್ ಪುರಂದರೆ ಅವರು ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬರೆಯುವಾಗ ಅದೇ ಮಾನದಂಡಗಳನ್ನು ಕಾಯ್ದುಕೊಳ್ಳುವಂತೆ ನಾನು ಯುವ ಇತಿಹಾಸಕಾರರಿಗೆ ಮನವಿ ಮಾಡುತ್ತೇನೆ

ಬಾಬಾ ಸಾಹೇಬ್ ಪುರಂದರೆ ಜೀ ಅವರ ಶತಮಾನೋತ್ಸವ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.  ಬಾಬಾ ಸಾಹೇಬರ ಜೀವನ ಶತಮಾನೋತ್ಸವ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಪುರಂದರೆ ಅವರ ಶತಮಾನೋತ್ಸವ ಆಚರಣೆಯು ನಮ್ಮ ಋಷಿಗಳು ವಿವರಿಸಿದಂತೆ, ಸಕ್ರಿಯ ಮತ್ತು ಮಾನಸಿಕವಾಗಿ ಜಾಗೃತಗೊಳಿಸಿದ ಜೀವನದ ಉತ್ಕೃಷ್ಟ ಪರಿಕಲ್ಪನೆಯನ್ನು ಉದಾಹರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಭಾರತವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಕಾಲಘಟ್ಟದಲ್ಲೇ ಬಾಬಾ ಸಾಹೇಬ್ ಪುರಂದರೆ ಅವರ ಶತಮಾನೋತ್ಸವ ಆಚರಣೆ ನಡೆಯುತ್ತಿರುವುದು ಕಾಕತಾಳೀಯ ಮತ್ತು ಸಂತೋಷದ ವಿಷಯ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸ್ಮರಿಸಿದರು. ನಮ್ಮ ಇತಿಹಾಸದ ಅವಿಸ್ಮರಣೀಯ ಹೋರಾಟಗಾರರ (ಆತ್ಮಗಳು) ಇತಿಹಾಸ ಬರೆದಿರುವ ಬಾಬಾ ಸಾಹೇಬ್ ಪುರಂದರೆ ಅವರ ಕೊಡುಗೆಯನ್ನು ಎಂದಿಗೂ ಮರೆಯಲಾಗದು. ಶಿವಾಜಿ ಮಹಾರಾಜರ ಜೀವನ ಮತ್ತು ಚರಿತ್ರೆಯನ್ನು ಜನರ ಬಳಿಗೆ ಕೊಂಡೊಯ್ದು ಬಾಬಾ ಸಾಹೇಬ್ ಪುರಂದರೆ ಅವರ ಅದ್ಭುತ ಕೊಡುಗೆಗಳಿಗೆ ನಾವೆಲ್ಲಾ ಸದಾ ಚಿರಋಣಿಗಳಾಗಿರಬೇಕು. ಶ್ರೀ ಪುರಂದರೆ ಅವರಿಗೆ 2019ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.  ಇದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರ 2015ರಲ್ಲಿ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಿ, ಅವರ ಕೊಡುಗೆಗಳನ್ನು ಸ್ಮರಿಸಿತ್ತು. ಮಧ್ಯಪ್ರದೇಶ ಸರ್ಕಾರ ಅವರಿಗೆ ಕಾಳಿದಾಸ ಪ್ರಶಸ್ತಿ ನೀಡಿ, ಸನ್ಮಾನಿಸಿತ್ತು.

ಶಿವಾಜಿ ಮಹಾರಾಜರ ಅದ್ಭುತ ವ್ಯಕ್ತಿತ್ವದ ಬಗ್ಗೆ ಸುದೀರ್ಘವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಶಿವಾಜಿ ಮಹಾರಾಜರು ಭಾರತೀಯ ಇತಿಹಾಸದ ಮೇರು ವ್ಯಕ್ತಿಯಾಗಿ, ಪ್ರಸ್ತುತ ಭಾರತೀಯ ಭೌಗೋಳಿಕತೆಯ ಮೇಲೂ ಅಗಾಧ ಪ್ರಭಾವ ಬೀರಿದ್ದಾರೆ ಎಂದು ಸ್ಮರಿಸಿದರು.

ಶಿವಾಜಿ ಮಹಾರಾಜರು ಇಲ್ಲದಿದ್ದರೆ, ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯದ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಬಹುದೊಡ್ಡ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರಿಲ್ಲದೆ ಭಾರತದ ರೂಪ, ಅದರ ವೈಭವವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಶಿವಾಜಿ ಮಹಾರಾಜ್ ತನ್ನ ಕಾಲದಲ್ಲಿ ಏನು ಮಾಡಿದ, ಅದೇ ಪಾತ್ರವನ್ನು ಅವನ ನಂತರ ಅವನ ದಂತಕಥೆ, ಸ್ಫೂರ್ತಿ ಮತ್ತು ಕಥೆಗಳು ನಿರ್ವಹಿಸಿದವು. ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್’ ಹಿಂದುಳಿದವರು ಮತ್ತು ವಂಚಿತ ಸಮುದಾಯಕ್ಕೆ ನ್ಯಾಯ ದೊರಕಿಸಿದ ಸರಿಸಾಟಿಯಲ್ಲದ ಅಪ್ರತಿಮ ಉದಾಹರಣೆಯಾಗಿದೆ. ವೀರ ಶಿವಾಜಿಯ ಆಡಳಿತ ನಿರ್ವಹಣೆ, ನೌಕಾ ಶಕ್ತಿಯ ಬಳಕೆ, ಅವರ ನೀರಿನ ನಿರ್ವಹಣೆ ಇನ್ನೂ ಅನುಕರಿಸಲು ಯೋಗ್ಯವಾದ ಆಡಳಿತ ಕ್ರಮಗಳಾಗಿವೆ ಎಂದು ಶ್ರೀ ಮೋದಿ ಹೇಳಿದರು.

ಬಾಬಾ ಸಾಹೇಬ್ ಪುರಂದರೆ ಅವರ ಬರಹಗಳು ಶಿವಾಜಿ ಮಹಾರಾಜರ ಮೇಲಿನ ಅವರ ಅಚಲ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ, ಶಿವಾಜಿ ಮಹಾರಾಜರು ನಮ್ಮ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂಬುದನ್ನು ಅವರು ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.

ಬಾಬಾ ಸಾಹೇಬ್ ಪುರಂದರೆ ಅವರ ಕಾರ್ಯಕ್ರಮಗಳಿಗೆ ವೈಯಕ್ತಿಕವಾಗಿ ಪಾಲ್ಗೊಂಡಿದ್ದನ್ನು ನೆನಪು ಮಾಡಿಕೊಂಡ ಪ್ರಧಾನ ಮಂತ್ರಿ, ದೇಶದ ಇತಿಹಾಸವನ್ನು ವೈಭವ ಮತ್ತು ಸ್ಫೂರ್ತಿಯಿಂದ ಯುವ ಸಮುದಾಯಕ್ಕೆ ಕೊಂಡೊಯ್ದ ಅವರ ಉತ್ಸಾಹ ಶ್ಲಾಘನೀಯ ಎಂದು ಬಣ್ಣಿಸಿದರು.

ಇತಿಹಾಸ ನೈಜ ರೂಪದಲ್ಲಿ ಮೂಡಬೇಕು ಎಂದು ಸದಾ ನಂಬಿದ್ದ ಅವರು, ತನ್ನ ಭಕ್ತಿ ಮತ್ತು ಸಾಹಿತ್ಯ ಅಭಿರುಚಿಯನ್ನು ಇತಿಹಾಸದೊಂದಿಗೆ ಬೆರೆಸಲಿಲ್ಲ. ಹಾಗಾಗಿ, ನಾನು ನಮ್ಮ ಯುವ ಇತಿಹಾಸಕಾರರಿಗೆ ಮನವಿ ಮಾಡುವುದೇನೆಂದರೆ, “ಆಜಾ಼ದಿ ಕಾ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬರೆಯುವಾಗ ಬಾಬಾ ಸಾಹೇಬ್ ಪುರಂದರೆ ಅವರ ಮಾನದಂಡಗಳನ್ನು ಕಾಯ್ದುಕೊಳ್ಳಿ” ಎಂದು ಮನವಿ ಮಾಡಿದರು.

ಗೋವಾ ಮುಕ್ತಿ ಸಂಗ್ರಾಮದಿಂದ ಹಿಡಿದು ದಾದರ್ ನಗರ ಹವೇಲಿ ಸ್ವಾತಂತ್ರ್ಯ ಹೋರಾಟದವರೆಗೆ ಬಾಬಾ ಸಾಹೇಬ್ ಪುರಂದರೆ ಅವರ ಕೊಡುಗೆಗಳನ್ನು ಪ್ರಧಾನಮಂತ್ರಿ ಸ್ಮರಿಸಿದರು.

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India vehicle retail sales seen steady in December as tax cuts spur demand: FADA

Media Coverage

India vehicle retail sales seen steady in December as tax cuts spur demand: FADA
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಡಿಸೆಂಬರ್ 2025
December 09, 2025

Aatmanirbhar Bharat in Action: Innovation, Energy, Defence, Digital & Infrastructure, India Rising Under PM Modi