ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ನವೆಂಬರ್ 13ರಂದು ಬ್ರೆಸಿಲಿಯಾದಲ್ಲಿ 11ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಚೈನಾ ಪ್ರಜಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು, 2ನೇ ಅನೌಪಚಾರಿಕ ಶೃಂಗಸಭೆಯ ವೇಳೆ ಚೆನ್ನೈನಲ್ಲಿ ನೀಡಿದ ಆತಿಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಾರತದ ಜನರು ಮತ್ತು ಪ್ರಧಾನಮಂತ್ರಿ ಮೋದಿ ಅವರು ನೀಡಿದ ಆ ಸ್ವಾಗತವನ್ನು ತಾವು ಮರೆಯುವುದಿಲ್ಲ ಎಂದು ತಿಳಿಸಿದರು. 2020ರಲ್ಲಿ ಚೈನಾದಲ್ಲಿ ನಡೆಯಲಿರುವ 3ನೇ ಅನೌಪಚಾರಿಕ ಶೃಂಗಸಭೆಗೆ ಆಗಮಿಸುವಂತೆ ಪ್ರಧಾನಮಂತ್ರಿಯವರಿಗೆ ಅವರು ಆಹ್ವಾನ ನೀಡಿದರು. ಇದರ ದಿನಾಂಕ ಮತ್ತು ಸ್ಥಳವನ್ನು ರಾಜತಾಂತ್ರಿಕ ಮಾರ್ಗದಲ್ಲಿ ನಿರ್ಧರಿಸಲಾಗುವುದು.

ಹೂಡಿಕೆ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಆಪ್ತ ಮಾತುಕತೆಯನ್ನು ನಿರ್ವಹಿಸುವ ಮಹತ್ವವನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಅಧ್ಯಕ್ಷ ಕ್ಸಿ ಅವರು ಇತ್ತೀಚೆಗಷ್ಟೇ ಶಾಂಘೈನಲ್ಲಿ ಮುಕ್ತಾಯಗೊಂಡ ಚೈನಾ ಆಮದು ಮತ್ತು ರಫ್ತು ಎಕ್ಸ್ ಪೋನಲ್ಲಿ ಭಾರತದ ಗಣನೀಯ ಪಾಲ್ಗೊಳ್ಳುವಿಕೆಗೆ ಧನ್ಯವಾದ ಅರ್ಪಿಸಿದರು. ಇಬ್ಬರೂ ನಾಯಕರು ಹತ್ತಿರದ ದಿನಾಂಕದಲ್ಲಿ ಹೊಸ ಉನ್ನತ ಮಟ್ಟದ ವ್ಯವಸ್ಥೆ ಕುರಿತ ವಾಣಿಜ್ಯ ಮತ್ತು ಆರ್ಥಿಕತೆ ಸಭೆ ನಡೆಯಬೇಕೆಂಬುದಕ್ಕೆ ಸಮ್ಮತಿ ಸೂಚಿಸಿದರು.

 

ನಾಯಕರು ಎರಡೂ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯಾದ 70ನೇ ವಾರ್ಷಿಕೋತ್ಸವವನ್ನು ಮುಂದಿನ ವರ್ಷ ಆಚರಿಸುವ ಕುರಿತ ಸಿದ್ಧತೆಗಳನ್ನು ಪರಾಮರ್ಶಿಸಿದರು. ಇದು ಜನರೊಂದಿಗಿನ ಬಾಂಧವ್ಯವನ್ನು ಹೆಚ್ಚಿಸಲಿದೆ ಎಂಬುದನ್ನು ಅವರು ಒಪ್ಪಿಕೊಂಡರು.

ವಿಶೇಷ ಪ್ರತಿನಿಧಿಗಳು ಗಡಿ ಪ್ರಶ್ನೆಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತಂತೆ ಮತ್ತೊಂದು ಸಭೆಯನ್ನು ನಡೆಸಲಿದ್ದಾರೆ ಎಂಬುದನ್ನು ಪ್ರಸ್ತಾಪಿಸಿದ ಇಬ್ಬರೂ ನಾಯಕರು, ಗಡಿ ಪ್ರದೇಶಗಳಲ್ಲಿ ಆಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಮಹತ್ವವನ್ನೂ ಪುನರುಚ್ಚರಿಸಿದರು.

ಡಬ್ಲ್ಯುಟಿಓ, ಬ್ರಿಕ್ಸ್ ಮತ್ತು ಆರ್.ಸಿ.ಇ.ಪಿ. ಸೇರಿದಂತೆ ಬಹುಪಕ್ಷೀಯ ವಿಚಾರಗಳ ಬಗ್ಗೆಯೂ ಇಬ್ಬರೂ ನಾಯಕರು ತಮ್ಮ ಅಭಿಪ್ರಾಯ ವಿನಿಮಯ ಮಾಡಿಕೊಂಡರು.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Mapping the subsurface: How ICAR’s ‘Soil Intelligence’ is reshaping India’s mega infrastructure boom

Media Coverage

Mapping the subsurface: How ICAR’s ‘Soil Intelligence’ is reshaping India’s mega infrastructure boom
NM on the go

Nm on the go

Always be the first to hear from the PM. Get the App Now!
...
ಆಚಾರ್ಯ ವಿನೋಬಾ ಭಾವೆ ಅವರ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ
September 11, 2026

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಚಾರ್ಯ ವಿನೋಬಾ ಭಾವೆ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಆಚಾರ್ಯ ವಿನೋಬಾ ಭಾವೆ ಅವರ ಸ್ಫೂರ್ತಿದಾಯಕ 'ಜೈ ಜಗತ್' ಕರೆ ಎಲ್ಲ ಎಲ್ಲೆಗಳನ್ನು ಮೀರಿ, ಮಾನವೀಯತೆಗೆ ಎಲ್ಲಕ್ಕಿಂತ ಮಿಗಿಲಾದ ಸ್ಥಾನ ನೀಡಿತು ಎಂದು ಪ್ರಧಾನಮಂತ್ರಿಗಳು ಉದ್ಗರಿಸಿದ್ದಾರೆ.

ಆಚಾರ್ಯ ವಿನೋಬಾ ಭಾವೆ ಅವರು ಎಲ್ಲರ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ವಿವಿಧ ಬಗೆಯ ಪ್ರಯತ್ನ ಮಾಡಿದ್ದರು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಸಮಾನತೆ, ಘನತೆ ಮತ್ತು ಸೇವೆಯ ಬಗೆಗಿನ ಅವರ ಅಚಲ ನಂಬಿಕೆಯು ಅತ್ಯಂತ ತಳಮಟ್ಟದ ಹಾಗೂ ಅವಕಾಶ ವಂಚಿತ ವರ್ಗಗಳಿಗೆ ಬಲ ನೀಡಿತು ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ.

ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:

ಆಚಾರ್ಯ ವಿನೋಬಾ ಭಾವೆ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು.

'ಜೈ ಜಗತ್' ಎಂಬ ಅವರ ಸ್ಫೂರ್ತಿದಾಯಕ ಕರೆಯು ಪ್ರತಿ ಗಡಿಯನ್ನೂ ಮೀರಿ ಮಾನವೀಯತೆಗೆ ಎಲ್ಲಕ್ಕಿಂತ ಮಿಗಿಲಾದ ಸ್ಥಾನವನ್ನು ನೀಡಿತು.

ತಮ್ಮ ವಿವಿಧ ಪ್ರಯತ್ನಗಳ ಮೂಲಕ ಅವರು ಎಲ್ಲರ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ಶ್ರಮಿಸಿದರು.

ಸಮಾನತೆ, ಘನತೆ ಮತ್ತು ಸೇವೆಯ ಮೇಲಿನ ಅವರ ಅಚಲ ನಂಬಿಕೆಯು ಅತ್ಯಂತ ದುರ್ಬಲ ವರ್ಗದವರಲ್ಲಿ ಬಲ ತುಂಬಿತು.”