ನಾಲ್ಕು ವರ್ಷಗಳ ಹಿಂದೆ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿಗಳಾದ ಕ್ರಿಶ್ಚಿಯನ್ ಮೈಕೆಲ್ ಅವರು ಬಂಧನದಲ್ಲಿರುತ್ತಾರೆಂದು ಯಾರೂ ಯೋಚಿಸಿರಲಿಲ್ಲ : ಪ್ರಧಾನಿ ಮೋದಿ
ಸರಕಾರವನ್ನು ದೂಷಿಸಿ ನ್ಯಾಯಾಲಯಕ್ಕೆ ಬಂದಾಗ, ಸರ್ಕಾರವು ತಪ್ಪು ಎಂದು ಮತ್ತು ಆಪಾದಕನು ಸರಿ ಎಂದು ನಂಬಲಾಗಿದೆ. ಆದರೆ ಭ್ರಷ್ಟಾಚಾರದ ಪ್ರತಿ ಆರೋಪವನ್ನು ತಪ್ಪು ಎಂದು ಸಾಬೀತುಪಡಿಸಲಾಗಿದೆ: ಪ್ರಧಾನಿ
ಭಾರತ ಎಂದಿಗೂ ನಿಲ್ಲುವುದಿಲ್ಲ , ನೀತಿ ಚಾಲಿತ ಆಡಳಿತ ದೆ ಮತ್ತು ಊಹಿಸಬಹುದಾದ ಪಾರದರ್ಶಕ ನೀತಿಗಳ ಮೂಲಕ ಅಡೆತಡೆಗಳನ್ನು ತೆಗೆದುಹಾಕಲಾಗಿದೆ : ಪ್ರಧಾನಿ ಮೋದಿ
ನನ್ನ ದೃಷ್ಟಿ ಸ್ಪಷ್ಟವಾಗಿದೆ- ವಿಶ್ವದಲ್ಲಿಯೇ ಯುವಜನತೆಯೊಂದಿಗೆ ದೇಶವು ಸಣ್ಣ ಕನಸುಗಳನ್ನು ನೋಡುವುದಿಲ್ಲ: ಪ್ರಧಾನಿ ಮೋದಿ
ಮಕ್ಕಳಿಗೆ ಸರಿಯಾದ ಶಿಕ್ಷಣ, ಯುವಜನರಿಗೆ ಉದ್ಯೋಗ, ಹಿರಿಯರಿಗೆ ವೈದ್ಯಕೀಯ ಸೌಲಭ್ಯಗಳು, ರೈತರಿಗೆ ನೀರಾವರಿ ಸೌಲಭ್ಯಗಳು ನಮ್ಮ ಗಮನವನ್ನು ಕೇಂದ್ರೀಕರಿಸಿದೆ ಮತ್ತು ಜನರ ಧ್ವನಿಯನ್ನು ಕೇಳುವುದನ್ನು ನಾವು ಖಚಿತಪಡಿಸುತ್ತೇವೆ: ಪ್ರಧಾನಿ ಮೋದಿ
2014 ರಲ್ಲಿ ಕೇವಲ ಎರಡು ಮೊಬೈಲ್ ತಯಾರಿಕಾ ಕಾರ್ಖಾನೆಗಳಿಂದ ನಾವು 120 ಉತ್ಪಾದನಾ ಘಟಕಗಳನ್ನು ದಾಟಿದ್ದೇವೆ: ಪ್ರಧಾನಿ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನಲ್ಲಿಂದು ರಿಪಬ್ಲಿಕ್ ಟಿ.ವಿ. ಶೃಂಗ ಉದ್ದೇಶಿಸಿ ಭಾಷಣ ಮಾಡಿದರು. ಮುಂಬೈನ ಆಸ್ಪತ್ರೆಯಲ್ಲಿ ನಿನ್ನೆ ಅಗ್ನಿ ಆಕಸ್ಮಿಕದಲ್ಲಿ ಆದ ಪ್ರಾಣ ಹಾನಿಗೆ ಅವರು ಸಂತಾಪ ಸೂಚಿಸಿದರು.

ಪ್ರಗತಿದಾಯಕ ಮತ್ತು ಚೈತನ್ಯದಾಯಕ ರಾಷ್ಟ್ರಕ್ಕಾಗಿ ಧನಾತ್ಮಕ ಸುದ್ದಿಯ ಮಹತ್ವವನ್ನು ಅವರು ಪ್ರತಿಪಾದಿಸಿದರು. ವಿಜ್ಞಾನ, ನಾವಿನ್ಯತೆ ಮತ್ತು ಕ್ರೀಡೆ ಇತ್ಯಾದಿ ಬಹು ಕ್ಷೇತ್ರದಲ್ಲಿ ಭಾರತ ಹೊಸ ಎತ್ತರಕ್ಕೆ ಏರಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಇದೇ ಧಾಟಿಯಲ್ಲಿ ಮಾಧ್ಯಮಗಳು ಕೂಡ ಎಂದು ಅವರು ಉಲ್ಲೇಖಿಸಿದರು.

“ಬೆಳೆವ ಭಾರತ” ಎಂಬ ಪದವು 130 ಕೋಟಿ ಭಾರತೀಯರ ಸ್ಫೂರ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಕೆಲವು ವರ್ಷಗಳ ಹಿಂದೆ, ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗಿ ಬೆಳೆಯುತ್ತದೆ ಮತ್ತು ಸುಗಮ ವಾಣಿಜ್ಯ ನಡೆಸುವ ರಾಷ್ಟ್ರಗಳ ಶ್ರೇಣಿಯಲ್ಲಿ ಮೇಲೇರುತ್ತದೆ ಎಂದು ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ ಎಂದು ಅವರು ಹೇಳಿದರು. ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದವರನ್ನು ಇಂದು ಹೇಗೆ ಬಂಧಿಸಿ ನ್ಯಾಯದ ಕಟಕಟೆಗೆ ತರಲಾಗುತ್ತಿದೆ ಎಂಬುದನ್ನು ಸೋದಾಹರಣವಾಗಿ ವಿವರಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಪರಿವರ್ತನೆಯನ್ನು ವಿವರಿಸಲು ನೈರ್ಮಲ್ಯದಿಂದ ತೆರಿಗೆ ನೆಲೆಯವರಗೆ ಉದಾಹರಣೆ ನೀಡಿದರು. ಕೇಂದ್ರ ಸರ್ಕಾರ ನೀತಿ ಚಾಲಿತ ಆಡಳಿತ ಮತ್ತು ಊಹಾತ್ಮಕವಾದ ಪಾರದರ್ಶಕ ನೀತಿಗಳ ಮೂಲಕ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ಮೂಲಸೌಕರ್ಯದ ತ್ವರಿತ ವೇಗದ ಅಭಿವೃದ್ಧಿಯನ್ನು ಅವರು ಉಲ್ಲೇಖಿಸಿದರು. ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಮಾಸಿಕ ಪ್ರಗತಿ ಸಭೆಯನ್ನು ಅವರು ಉಲ್ಲೇಖಿಸಿದರು. ಈ ಮೂಲಕ 12 ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಯೋಜನೆಗಳು ತ್ವರಿತಗೊಂಡಿವೆ ಎಂದರು.

ಕಾನೂನುಗಳು ಮತ್ತು ಕಾಯಿದೆಗಳು ಕ್ರಿಯೆಯಲ್ಲಿ ಅನುಸರಣೆಯಾಗಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ, ದಿವಾಳಿ ಮತ್ತು ದಿವಾಳಿತನ ಸಂಹಿತೆಯನ್ನು ಪ್ರಸ್ತಾಪಿಸಿದರು.

ಭಾರತೀಯ ವಿದೇಶಾಂಗ ನೀತಿಯನ್ನು ಈಗ ರಾಷ್ಟ್ರೀಯ ಹಿತ ಮಾರ್ಗದರ್ಶಿಸುತ್ತಿದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಧ್ವನಿಯನ್ನು ಆಲಿಸಲಾಗುತ್ತಿದೆ ಎಂದರು.

ಜಿ.ಎಸ್.ಟಿ.ಯ ಶೇ.28ರ ಹಂತವು ಕೇವಲ ಆಯ್ದ ವಸ್ತುಗಳಿಗೆ ಅಂದರೆ ಐಶಾರಾಮಿ ಸರಕುಗಳಿಗೆ ಮಾತ್ರ ಸೀಮಿತವಾಗಲಿದೆ ಎಂಬ ಸೂಚನೆಯನ್ನು ಪ್ರಧಾನಮಂತ್ರಿ ನೀಡಿದರು. ಶ್ರೀಸಾಮಾನ್ಯರು ಬಳಸುವ ಬಹುತೇಕ ಎಲ್ಲ ವಸ್ತುಗಳೂ ಸೇರಿದಂತೆ ಶೇಕಡ 99ರಷ್ಟು ಎಲ್ಲ ವಸ್ತುಗಳಿಗೆ ಶೇ.18ರ ಅಥವಾ ಅದಕ್ಕಿಂತ ಕಡಿಮೆ ಹಂತದ ಜಿ.ಎಸ್.ಟಿ.ಯಲ್ಲಿಡುವುದನ್ನು ಖಾತ್ರಿ ಪಡಿಸುವ ಪ್ರಯತ್ನ ಇದಾಗಿದೆ ಎಂದು ಪ್ರಧಾನಿ ಹೇಳಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India solar capacity to quadruple, wind to triple over decade: Power ministry adviser

Media Coverage

India solar capacity to quadruple, wind to triple over decade: Power ministry adviser
NM on the go

Nm on the go

Always be the first to hear from the PM. Get the App Now!
...
Prime Minister extends Eid-ul-Fitr greetings to everyone
March 21, 2026

Prime Minister Shri Narendra Modi today extended his heartiest greetings to the nation on the auspicious occasion of Eid-ul-Fitr.

The Prime Minister wrote on X:

"Best wishes on Eid-ul-Fitr. May this day further brotherhood and kindness all around. May everyone be happy and healthy.
Eid Mubarak!"