Glad to know that Govt of Nepal has decided to translate Atal Ji’s poems in Nepali language: PM Modi
PM Narendra Modi and PM KP Oli jointly inaugurate Nepal-Bharat Maitri Pashupati Dharmashala in Kathmandu
There exist strong cultural and civilizational ties existing between India and Nepal: PM Modi in Kathmandu
The Dharmshala would be more than just a rest house for the pilgrims. It will further enhance ties between India and Nepal: PM Modi
India is among the fastest growing economies in the world today: PM Modi in Kathmandu
India believes in the mantra of ‘Sabka Saath, Sabka Vikas’, says Prime Minister Modi

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಠ್ಮಂಡುವಿನಲ್ಲಿಂದು ನೇಪಾಳದ ಪ್ರಧಾನಮಂತ್ರಿ ಶ್ರೀ ಕೆ.ಪಿ. ಓಲಿ ಅವರ ಜೊತೆ ಜಂಟಿಯಾಗಿ ಪಶುಪತಿನಾಥ ಧರ್ಮಶಾಲಾವನ್ನು ಉದ್ಘಾಟಿಸಿದರು. 
 
 ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಪ್ರತಿ ಬಾರಿ ಇಲ್ಲಿಗೆ ಬಂದಾಗಲೂ ಕಠ್ಮಂಡು ಜನರ ಪ್ರೀತಿ ಮತ್ತು ವಿಶ್ವಾಸವನ್ನು ನಾನು ಅನುಭವಿಸಿದ್ದೇನೆ ಎಂದರು. ನೇಪಾಳಕ್ಕೆ ಭಾರತ ತನ್ನದೆಂಬ ಭಾವನೆಯನ್ನು ಬೆಸೆದುಕೊಂಡಿದೆ ಎಂದು ಹೇಳಿದರು. ಅವರು, ಹಿಂದೆ ನೇಪಾಳದ ಪಶುಪತಿನಾಥ ಮತ್ತು ಇತರ ದೇವಾಲಯಗಳಿಗೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡರು. 
 ನೇಪಾಳ ಮತ್ತು ಭಾರತದ ನಡುವಿನ ಆಧ್ಯಾತ್ಮಿಕ ಸಂಬಂಧಗಳು ಕಾಲ ಮತ್ತು ದೂರ ಎರಡರನ್ನೂ ಮೀರಿವೆ, ಆ ನಿಟ್ಟಿನಲ್ಲಿ ಧರ್ಮಶಾಲಾ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ತಮ್ಮ ಸೌಭಾಗ್ಯ ಎಂದು ಪ್ರಧಾನಮಂತ್ರಿ ಭಾವಿಸಿದರು. 
 
 ಪಶುಪತಿನಾಥ, ಮುಕ್ತನಾಥ ಮತ್ತು ಜಾನಕಿಧಾಮ ದೇವಾಲಯಗಳು ನೇಪಾಳದ ವಿವಿಧತೆಯಲ್ಲಿನ ಏಕತೆಯನ್ನು ಪ್ರತಿಬಿಂಬಿಸುತ್ತದೆ, ಅಲ್ಲದೆ ಅವು ಭಾರತದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. 
 
 ಹಿಂದೂ ಮತ್ತು ಬೌದ್ಧ ಧರ್ಮಗಳ ಶ್ರೀಮಂತ ಪರಂಪರೆ ಕಠ್ಮಂಡು ನಗರದಲ್ಲಿ ಸಮ್ಮಿಳಿತಗೊಂಡಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಬೌದ್ಧಧರ್ಮ ಭಾರತ ಮತ್ತು ನೇಪಾಳದ ನಡುವೆ ಹೇಗೆ ಪ್ರಮುಖ ಸಂಪರ್ಕವನ್ನು ಬೆಸೆದಿದೆ ಎಂಬುದನ್ನು ಉಲ್ಲೇಖಿಸಿದರು. ಎರಡೂ ರಾಷ್ಟ್ರಗಳಿಗೂ ತಮ್ಮ ವೈಭವಯುತ ಪರಂಪರೆಯ ಬಗ್ಗೆ ಹೆಮ್ಮೆ ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. 

 

 
ಅಭಿವೃದ್ಧಿ ಅದರಲ್ಲೂ ವಿಶೇಷವಾಗಿ ಸಮಾಜದಲ್ಲಿನ ದುರ್ಬಲ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಅಗತ್ಯತೆಯನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಹೊಸ ಎತ್ತರಕ್ಕೆ ಏರಿದೆ ಎಂದ ಪ್ರಧಾನಮಂತ್ರಿ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮುನ್ನೋಟದಲ್ಲಿ ನೇಪಾಳದ ಜನತೆಯೂ ಸೇರಿದ್ದಾರೆ ಎಂದರು. ನೇಪಾಳದಲ್ಲಿ ರಾಜಕೀಯ ಸ್ಥಿರತೆ ಮೂಡಿರುವುದು ಭಾರತಕ್ಕೆ ಸಂತೋಷ ತಂದಿದೆ. ಭಾರತ ಸದ್ಭಾವನೆ ಮತ್ತು ಸಹಕಾರಗಳನ್ನು ನೇಪಾಳವು ಸದಾ ಕಾಲ ಗಮನದಲ್ಲಿಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. 

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's services exports rise by 12.7 pc in April despite West Asia crisis: RBI

Media Coverage

India's services exports rise by 12.7 pc in April despite West Asia crisis: RBI
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಮೇ 2026
May 30, 2026

Viksit Bharat in Motion: How PM Modi is Building a Self-Reliant Global India”