Quoteಪ್ರಯಾಗರಾಜ್ ಗೆ ಉತ್ತಮ ಸಂಪರ್ಕವನ್ನು ಖಾತ್ರಿ ಪಡಿಸಲು ಸರಕಾರ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ: ಪ್ರಧಾನಿ ಮೋದಿ
Quoteಕುಂಭವು ನಮ್ಮನ್ನು ಒಗ್ಗೂಡಿಸುತ್ತದೆ ಮತ್ತು ಏಕ ಭಾರತ, ಶ್ರೇಷ್ಠ ಭಾರತದ ಹೊಳವುಗಳನ್ನು ನೀಡುತ್ತದೆ
Quoteಕಾಂಗ್ರೆಸ್ ಪಕ್ಷದ ಕ್ರಿಯೆ ತಾವು ದೇಶ, ಪ್ರಜಾಪ್ರಭುತ್ವ, ನ್ಯಾಯಾಂಗ ಮತ್ತು ಸಾರ್ವಜನಿಕತೆಗಿಂತ ತಾವು ಎಲ್ಲಾ ಸಂಸ್ಥೆಗಳಿಗೂ ಮೀರಿದವರು ಎಂಬಂತೆ ಪರಿಗಣಿಸುತ್ತಿದ್ದಾರೆ : ಪ್ರಧಾನಿ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಯಾಗರಾಜ್ ನಲ್ಲಿ ಹೊಸ ವಿಮಾನ ನಿಲ್ದಾಣ ಸಂಕೀರ್ಣ ಮತ್ತು ಕುಂಭ ಮೇಳಕ್ಕಾಗಿ ಸಮಗ್ರ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ಕಾರ್ಯಾರಂಭಗೊಳಿಸಿದರು.

|

ಪ್ರಧಾನಮಂತ್ರಿ ಅವರು ಗಂಗಾ ಪೂಜೆ ನೆರವೇರಿಸಿದರು ಹಾಗೂ ಸ್ವಚ್ಚ ಕುಂಭ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದರು.ಅವರು ಪ್ರಯಾಗರಾಜ್ ನ ಅಕ್ಷಯ ವಟ್ ಗೂ ಭೇಟಿ ನೀಡಿದರು. ಪ್ರಯಾಗರಾಜ್ ನ ಅಂಡವಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ದೇಶಾರ್ಪಣೆ, ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯವನ್ನು ಅವರು ನೆರವೇರಿಸಿದರು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ಬಾರಿ ಅರ್ಧ ಕುಂಭದ ಪ್ರವಾಸಿಗರು ಅಕ್ಷಯ ವಟ್ ಗೂ ಭೇಟಿ ನೀಡಲು ಸಾಧ್ಯವಾಗಲಿದೆ ಎಂದರು. ಪ್ರಯಾಗರಾಜ್ ಗೆ ಉತ್ತಮ ಸಂಪರ್ಕವನ್ನು ಖಾತ್ರಿ ಪಡಿಸಲು ಸರಕಾರ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ ಎಂದರು. ಇಂದು ಲೋಕಾರ್ಪಣೆ ಮಾಡಲಾದ ವಿವಿಧ ಯೋಜನೆಗಳು ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ಸಹಾಯ ಮಾಡಲಿವೆ ಎಂದರು. ನೂತನ ವಿಮಾನ ನಿಲ್ದಾಣ ಟರ್ಮಿನಲ್ ದಾಖಲೆ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಂಡಿದೆ ಎಂದು ಪ್ರಧಾನಮಂತ್ರಿ ಅವರು ಸಂತಸದಿಂದ ನುಡಿದರು.

|

ಅರ್ಧ-ಕುಂಭಕ್ಕೆ ಆಗಮಿಸುವ ಭಕ್ತರಿಗೆ ವಿಶಿಷ್ಟ ಅನುಭವವನ್ನು ನೀಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಗಳು ಭಾರತದ ಭವ್ಯ ಇತಿಹಾಸ ಮತ್ತು ರೋಮಾಂಚಕ ಭವಿಷ್ಯವನ್ನು ಪ್ರದರ್ಶಿಸುವ ಪ್ರಯತ್ನಗಳನ್ನೂ ಮಾಡಲಾಗುವುದು ಎಂದರು. ಗಂಗೆಯ ಶುದ್ದೀಕರಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು. ಈ ನಿಟ್ಟಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಘಾಟ್ ಗಳ ಸುಂದರೀಕರಣ ದೀರ್ಘಾವಧಿಯ ಪ್ರಮುಖ ಹೆಜ್ಜೆಗಳಾಗಿವೆ

|

 

|

 

|

 

|

 

|

 

|

 

|

 

|

 

|

 

|



|



|

 

|

ಕುಂಭವು ಭಾರತದ ಮತ್ತು ಭಾರತೀಯತೆಯ ಸಂಕೇತ ಎಂದು ಪ್ರಧಾನಮಂತ್ರಿ ಅವರು ಬಣ್ಣಿಸಿದರು. ಇದು ನಮ್ಮನ್ನು ಒಗ್ಗೂಡಿಸುತ್ತದೆ,ಮತ್ತು ಏಕ ಭಾರತ, ಶ್ರೇಷ್ಠ ಭಾರತದ ಹೊಳವುಗಳನ್ನು ನೀಡುತ್ತದೆ ಎಂದರು. ಕುಂಭ ಸಂಘಟನೆ ಬರೇ ಮತ ವಿಶ್ವಾಸದ ವಿಷಯ ಮಾತ್ರವಲ್ಲ, ಅದು ಪ್ರತಿಷ್ಟೆಯ ವಿಷಯ ಮತ್ತು ಕುಂಭಕ್ಕೆ ಭೇಟಿ ನೀಡುವ ಪ್ರತೀಯೊಬ್ಬರ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ. ಅರ್ಧ ಕುಂಭವು ಭಾರತ ಹೇಗೆ ಪರಂಪರೆ ಮತ್ತು ಆಧುನಿಕತೆಯನ್ನು ಒಳಗೊಂಡಿದೆ ಎಂಬುದನ್ನು ತೋರಿಸುತ್ತದೆ ಎಂದೂ ಅವರು ಹೇಳಿದರು.

|

ಕೆಲವು ನಿರ್ದಿಷ್ಟ ಶಕ್ತಿಗಳು ನ್ಯಾಯಾಂಗದ ಮೇಲೆ ಅನವಶ್ಯಕ ಒತ್ತಡವನ್ನು ಹೇರುತ್ತಿರುವ ಬಗ್ಗೆ ಪ್ರಸ್ತಾವಿಸಿದ ಪ್ರಧಾನಮಂತ್ರಿ ಅವರು ಈ ಬಗ್ಗೆ ದೇಶವನ್ನು ಎಚ್ಚರಿಸಲು ಇಚ್ಚಿಸುತ್ತಿರುವುದಾಗಿ ಹೇಳಿದರು. ಈ ಶಕ್ತಿಗಳು ತಮ್ಮನ್ನು ತಾವು ಎಲ್ಲಾ ಸಂಸ್ಥೆಗಳನ್ನು ಮೀರಿದವರು ಎಂಬಂತೆ ಪರಿಗಣಿಸುತ್ತಿದ್ದಾರೆಂದರು.

|

ಅರ್ಧ-ಕುಂಭಕ್ಕೆ ಆಗಮಿಸುವ ಭಕ್ತರಿಗೆ ವಿಶಿಷ್ಟ ಅನುಭವವನ್ನು ಖಾತ್ರಿಪಡಿಸುವುದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಗಳು ಭಾರತದ ಭವ್ಯ ಇತಿಹಾಸವನ್ನು ಮತ್ತು ರೋಮಾಂಚಕ ಭವಿಷ್ಯವನ್ನು ಪ್ರದರ್ಶಿಸುವ ಪ್ರಯತ್ನಗಳನ್ನೂ ಮಾಡಲಾಗುವುದು ಎಂದರು. 

|

ಗಂಗೆಯ ಶುದ್ದೀಕರಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು. ಈ ನಿಟ್ಟಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಘಾಟ್ ಗಳ ಸುಂದರೀಕರಣ ಮುಂತಾದವುಗಳು ಬಹುದೂರ ಸಾಗಿಸುವ ಪ್ರಮುಖ ಹೆಜ್ಜೆಗಳು ಎಂದರು.

|

 ಕುಂಭವು ಭಾರತದ ಮತ್ತು ಭಾರತೀಯತೆಯ ಸಂಕೇತ ಎಂದು ಪ್ರಧಾನಮಂತ್ರಿ ಅವರು ಬಣ್ಣಿಸಿದರು. ಇದು ನಮ್ಮನ್ನು ಒಗ್ಗೂಡಿಸುತ್ತದೆ, ಮತ್ತು ಏಕ ಭಾರತ, ಶ್ರೇಷ್ಟ ಭಾರತದ ನೋಟವನ್ನು ನೀಡುತ್ತದೆ ಎಂದು ಹೇಳಿದರು.

|

ಕುಂಭ ಸಂಘಟನೆ ಬರೇ ಮತ ವಿಶ್ವಾಸದ ವಿಷಯ ಮಾತ್ರವಲ್ಲ, ಅದು ಪ್ರತಿಷ್ಟೆಯ ವಿಷಯ . ಕುಂಭಕ್ಕೆ ಭೇಟಿ ನೀಡುವ ಪ್ರತೀಯೊಬ್ಬರ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ. ಅರ್ಧ ಕುಂಭವು ಭಾರತ ಹೇಗೆ ಪರಂಪರೆ ಮತ್ತು ಆಧುನಿಕತೆಯನ್ನು ಒಳಗೊಂಡಿದೆ ಎಂಬುದನ್ನು ತೋರಿಸುತ್ತದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.

|

 

|

 

ಕೆಲವು ನಿರ್ದಿಷ್ಟ ಶಕ್ತಿಗಳು ನ್ಯಾಯಾಂಗದ ಮೇಲೆ ಅನವಶ್ಯಕ ಒತ್ತಡವನ್ನು ಹೇರುತ್ತಿರುವ ಬಗ್ಗೆ ಪ್ರಸ್ತಾವಿಸಿದ ಪ್ರಧಾನಮಂತ್ರಿ ಅವರು ಈ ಬಗ್ಗೆ ದೇಶವನ್ನು ಎಚ್ಚರಿಸಲು ಇಚ್ಚಿಸುತ್ತಿರುವುದಾಗಿ ಹೇಳಿದರು. ಈ ಶಕ್ತಿಗಳು ತಮ್ಮನ್ನು ತಾವು ಎಲ್ಲಾ ಸಂಸ್ಥೆಗಳಿಗೂ ಮೀರಿದವರು ಎಂಬಂತೆ ಪರಿಗಣಿಸುತ್ತಿದ್ದಾರೆಂದು ಪ್ರಧಾನಮಂತ್ರಿ ಅವರು ಹೇಳಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Click here to read full text speech

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
PM Modi urges states to unite as ‘Team India’ for growth and development by 2047

Media Coverage

PM Modi urges states to unite as ‘Team India’ for growth and development by 2047
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಮೇ 2025
May 25, 2025

Courage, Culture, and Cleanliness: PM Modi’s Mann Ki Baat’s Blueprint for India’s Future

Citizens Appreciate PM Modi’s Achievements From Food Security to Global Power