ಕಳೆದ ನಾಲ್ಕುವರೆ ವರ್ಷಗಳಿಂದ ಕೇಂದ್ರ ಸರಕಾರವು ಉತ್ತಮ ಆಡಳಿತದ ಉದ್ದೇಶವನ್ನು ಅನುಸರಿಸಿದೆ: ಪ್ರಧಾನಿ ಮೋದಿ
ಬೋಗಿಬೆಲ್ ಸೇತುವೆಯು ಈಶಾನ್ಯದಲ್ಲಿ "ಸುಗಮ ಜೀವನವನ್ನು" ಹೆಚ್ಚಿಸುತ್ತದೆ: ಪ್ರಧಾನಿ ಮೋದಿ
ಬಲವಾದ ಮತ್ತು ಪ್ರಗತಿಪರ ಈಶಾನ್ಯ ಭಾರತವು ಬಲವಾದ ಮತ್ತು ಪ್ರಗತಿಶೀಲ ಭಾರತಕ್ಕೆ ಪ್ರಮುಖವಾಗಿದೆ : ಪ್ರಧಾನಿ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಅಸ್ಸಾಂನಲ್ಲಿ ಬೋಗಿಬೀಲ್ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಅಸ್ಸಾಂನ ಧೀಬ್ರುಗಢ ಮತ್ತು ಧೀಮಜಿ ಜಿಲ್ಲೆಗಳನ್ನು ಸಂಪರ್ಕಿಸುವಂತೆ ನಿರ್ಮಾಣಗೊಂಡಿರುವ ಈ ಸೇತುವೆ ರಾಷ್ಟ್ರದ ಆರ್ಥಿಕ ಮತ್ತು ವ್ಯೂಹಾತ್ಮಕ ಮಹತ್ವವನ್ನು ಒಳಗೊಂಡಿದೆ. ಬ್ರಹ್ಮಪುತ್ರಾದ ಉತ್ತರ ದಡದಲ್ಲಿ ಕರೆಂಗಾ ಚಪೋರಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿ ಅವರು ಈ ಸೇತುವೆಯ ಮೂಲಕ ಕ್ರಮಿಸುವ ಮೊದಲ ಪ್ರಯಾಣಿಕ ರೈಲಿಗೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಇತ್ತೀಚಿಗೆ ಅಗಲಿದ ಅಸ್ಸಾಮೀ ಗಾಯಕ ದೀಪಾಲಿ ಬೋರ್ಥಕುರ್ ಅವರಿಗೆ ಶೃದ್ದಾಂಜಲಿ ಸಲ್ಲಿಸಿದರು. ವಿವಿಧ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಮತ್ತು ದೇಶಕ್ಕೆ ಕೀರ್ತಿ ತಂದ ರಾಜ್ಯದ ಹಲವಾರು ಇತರ ಪ್ರಖ್ಯಾತ ಮತ್ತು ಚಾರಿತ್ರಿಕ ವ್ಯಕ್ತಿಗಳನ್ನು ಸ್ಮರಿಸಿ ಗೌರವ ಸಲ್ಲಿಸಿದರು. ಕ್ರಿಸ್ಮಸ್ ಅಂಗವಾಗಿ ಅವರು ಜನತೆಗೆ ಶುಭ ಕೋರಿದರು. ಇಂದು ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಮತ್ತು ಇದನ್ನು ’ಸುಶಾಸನ ದಿನ’ ಅಥವಾ ’ಉತ್ತಮ ಆಡಳಿತ ದಿನ” ವಾಗಿಯೂ ಆಚರಿಸಲಾಗುತ್ತದೆ ಎಂದರು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರ ಸರಕಾರವು ಉತ್ತಮ ಆಡಳಿತದ ಉದ್ದೇಶವನ್ನು ಅನುಸರಿಸುತ್ತಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಚಾರಿತ್ರಿಕ ಬೋಗಿಬೀಲ್ ರೈಲು ಮತ್ತು ರಸ್ತೆ ಸೇತುವೆ ಈ ಉದ್ದೇಶದ ಒಂದು ಸಂಕೇತ ಎಂದರು. ಈ ಸೇತುವೆ ಒಂದು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಅಚ್ಚರಿ , ಮತ್ತು ಇದು ಭಾರೀ ವ್ಯೂಹಾತ್ಮಕ ಮಹತ್ವವನ್ನು ಹೊಂದಿದೆ ಎಂದವರು ಹೇಳಿದರು. 

ಈ ಸೇತುವೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ ದೂರವನ್ನು ಕಡಿಮೆ ಮಾಡುತ್ತದೆ , ಈ ಭಾಗದಲ್ಲಿ “ಜೀವಿಸುವ ಅವಕಾಶವನ್ನು” ಉತ್ತಮಪಡಿಸುತ್ತದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. ಹಲವು ತಲೆಮಾರುಗಳಿಂದ ಈ ಸೇತುವೆ ಇಲ್ಲಿನ ಜನರ ಕನಸಾಗಿತ್ತು, ಅದೀಗ ನನಸಾಗಿದೆ . ಡೀಬ್ರುಗಢ ಈ ವಲಯದ ಆರೋಗ್ಯ ರಕ್ಷಣೆಯ, ಶಿಕ್ಷಣ ಮತ್ತು ವಾಣಿಜ್ಯ ಕೇಂದ್ರವಾಗಿದೆ ಮತ್ತು ಬ್ರಹ್ಮಪುತ್ರಾ ಉತ್ತರ ದಂಡೆಯಲ್ಲಿ ವಾಸಿಸುವ ಜನರು ಈಗ ಈ ನಗರವನ್ನು ಹೆಚ್ಚು ಸುಲಭದಲ್ಲಿ ತಲುಪಬಹುದು ಎಂದು ಪ್ರಧಾನಮಂತ್ರಿ ಹೇಳಿದರು.

ಈ ಸೇತುವೆ ನಿರ್ಮಾಣದಲ್ಲಿ ಭಾಗಿಯಾದ ಎಲ್ಲರನ್ನೂ ಪ್ರಧಾನಮಂತ್ರಿ ಅವರು ಅಭಿನಂದಿಸಿದರು.

2017 ರ ಮೇ ತಿಂಗಳಲ್ಲಿ ಅಸ್ಸಾಂನ ಸಾಡಿಯಾದಲ್ಲಿ ದೇಶದ ಅತ್ಯಂತ ಉದ್ದದ ರಸ್ತೆ ಸೇತುವೆ ಭುಪೇನ್ ಹಜಾರಿಕಾ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದನ್ನು ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡರು.

ಕಳೆದ 60-70 ವರ್ಷಗಳಲ್ಲಿ ಬ್ರಹ್ಮಪುತ್ರಾ ನದಿಗೆ ಬರೇ ಮೂರು ಸೇತುವೆಗಳನ್ನು ಕಟ್ಟಲಾಗಿತ್ತು, ಕಳೆದ ಬರೇ ನಾಲ್ಕುವರೆ ವರ್ಷಗಳಲ್ಲಿ ಇನ್ನೂ ಮೂರು ಸೇತುವೆಗಳು ಪೂರ್ಣಗೊಂಡಿವೆ. ಮತ್ತೆ ಐದು ಸೇತುವೆಗಳು ಪ್ರಗತಿಯಲ್ಲಿವೆ ಎಂದವರು ಹೇಳಿದರು. ಬ್ರಹ್ಮಪುತ್ರಾದ ಉತ್ತರ ಮತ್ತು ದಕ್ಷಿಣ ದಂಡೆಗಳ ನಡುವೆ ಸಂಪರ್ಕ ಹೆಚ್ಚಳಗೊಂಡಿರುವುದು ಉತ್ತಮ ಆಡಳಿತದ ಒಂದಂಶ ಎಂದರು. ಈ ಅಭಿವೃದ್ಧಿಯ ಹಾದಿ ಈಶಾನ್ಯ ಭಾರತವನ್ನು ಪರಿವರ್ತಿಸಲಿದೆ ಎಂದೂ ಪ್ರಧಾನಮಂತ್ರಿ ಹೇಳಿದರು.

ಸಾರಿಗೆ ಮೂಲಕ ಪರಿವರ್ತನೆ ಎಂಬ ಕೇಂದ್ರ ಸರಕಾರದ ಚಿಂತನೆಯ ಬಗ್ಗೆ ಪ್ರಧಾನ ಮಂತ್ರಿ ಅವರು ಮಾತನಾಡಿದರು. ದೇಶದಲ್ಲೀಗ ಮೂಲಸೌಕರ್ಯಗಳು ತ್ವರಿತಗತಿಯಿಂದ ಬೆಳೆಯುತ್ತಿವೆ ಎಂದು ಪ್ರಧಾನಮಂತ್ರಿ ಅವರು ನುಡಿದರು.

ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಅಸ್ಸಾಂ ರಾಜ್ಯ ಸರಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಕೊಂಡಾಡಿದರು. ನಾಲ್ಕೂವರೆ ವರ್ಷಗಳಲ್ಲಿ ಸುಮಾರು 700 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಲಾಗಿದೆ ಎಂದ ಅವರು ಈಶಾನ್ಯ ವಲಯದಲ್ಲಿಯ ಹಲವಾರು ಸಂಪರ್ಕ ಸಂಬಂಧಿ ಯೋಜನೆಗಳನ್ನು ಪ್ರಸ್ತಾಪಿಸಿದರು. 

ಬಲಿಷ್ಟ ಮತ್ತು ಪ್ರಗತಿಪರ ಪೂರ್ವ ಭಾರತ ಬಲಿಷ್ಟ ಮತ್ತು ಪ್ರಗತಿಪರ ಭಾರತಕ್ಕೆ ಕೀಲಿಕೈ ಎಂದು ಪ್ರಧಾನ ಮಂತ್ರಿ ಅವರು ಬಣ್ಣಿಸಿದರು. ಮೂಲಸೌಕರ್ಯಗಳ ಜೊತೆಗೆ ಪ್ರಧಾನ ಮಂತ್ರಿ ಅವರು ಇತರ ಹಲವು ಉಪಕ್ರಮಗಳಾದ ಉಜ್ವಲಾ ಮತ್ತು ಸ್ವಚ್ಚ ಭಾರತ್ ಅಭಿಯಾನವನ್ನು ಪ್ರಸ್ತಾಪಿಸಿ ಇವುಗಳು ಅಸ್ಸಾಂನಲ್ಲಿ ಭಾರೀ ಪ್ರಗತಿ ಸಾಧಿಸಿವೆ ಎಂದರು.

ಇಂದು ದೇಶದ ಯುವಕರು , ಬಹಳ ದೂರ ಪ್ರದೇಶಗಳಿಂದ ಬಂದವರು ಭಾರತಕ್ಕೆ ಕೀರ್ತಿಯನ್ನು ತರುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. ಅಸ್ಸಾಂನ ಪ್ರಖ್ಯಾತ ಅಥ್ಲೀಟ್ ಹಿಮಾ ದಾಸ್ ಅವರನ್ನು ಪ್ರಧಾನಮಂತ್ರಿಗಳು ಪ್ರಸ್ತಾಪಿಸಿದರು. ಯುವಕರು ನವ ಭಾರತದ ಅತ್ಮವಿಶ್ವಾಸದ ಸಂಕೇತಗಳಾಗುತ್ತಿದ್ದಾರೆ ಎಂದರು.

ಭಾರತದ ಭವಿಷ್ಯದ ಆವಶ್ಯಕತೆಗಳಿಗಾಗಿ ಮೂಲಸೌಕರ್ಯಗಳನ್ನು ನಿರ್ಮಿಸಲು ಸರಕಾರ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ ಪ್ರಧಾನಮಂತ್ರಿ ಅವರು ನುಡಿದರು.

Click here to read full text of speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Small towns emerge big growth driver for connected TV in India

Media Coverage

Small towns emerge big growth driver for connected TV in India
NM on the go

Nm on the go

Always be the first to hear from the PM. Get the App Now!
...
Prime Minister congratulates H.E. President Hakainde Hichilema on re-election as President of Zambia
August 20, 2026

The Prime Minister, Shri Narendra Modi, has extended his heartiest congratulations to President H.E. Hakainde Hichilema on his re-election as the President of Zambia.

The Prime Minister said that India greatly values its multifaceted partnership with Zambia.

Shri Modi expressed his desire to work together with President Hakainde Hichilema to further strengthen the relations between India and Zambia under his leadership.

The Prime Minister said in a X post;

“Heartiest Congratulations to President Hakainde Hichilema on being re-elected as the President of Zambia.

India greatly values its multifaceted partnership with Zambia and I look forward to working together to further strengthen our relations under his leadership.

@HHichilema”