ಶೇರ್
 
Comments
PM Narendra Modi address public meeting in Meerut
Our Government is trying everything possible for progress of Uttar Pradesh: PM Modi
Shri Modi attacks Congress for allying with Samajwadi party
This election is about UP’s fight against SCAM - Samajwadi Party, Congress, Akhilesh Yadav and Mayawati, says Shri Modi

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಮೀರಟ್ ನಲ್ಲಿ ಒಂದು ದೊಡ್ಡ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು . ಸಮಾರಂಭದಲ್ಲಿ ಮಾತನಾಡಿದ ಮೋದಿ 1857 ರಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ವಿರುದ್ಧ ಮೊದಲ ಹೋರಾಟ ಮೀರಟ್ ನಲ್ಲಿ ಶುರುವಾಗಿತ್ತು ಮತ್ತು ಈಗ ಬಡತನದ ವಿರುದ್ದ ಹೋರಾಟ ಇಲ್ಲಿಂದ ಶುರುವಾಗಬೇಕು" ಎಂದು ಹೇಳಿದರು . ಉತ್ತರ ಪ್ರದೇಶದ ಅದೃಷ್ಟ ಬದಲಾಯಿಸಲು ರಾಜ್ಯದಲ್ಲಿ ಸರ್ಕಾರ ಬದಲಾಯಿಸಬೇಕೆಂದು ಜನರಿಗೆ ನೀಡಿದರು .

ಬಿಜೆಪಿ ರಾಜ್ಯದ ಯುವಕರ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ಯುವಕರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಲು ಬಯಸಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು . "ನಮ್ಮ ಸರ್ಕಾರ ಉತ್ತರ ಪ್ರದೇಶದ ಪ್ರಗತಿಗೆ ಎಲ್ಲಾ ಸಾಧ್ಯಗಳನ್ನು ಪ್ರಯತ್ನಿಸುತ್ತಿದೆ. ಬಹಳಷ್ಟು ಮಾಡಲಾಗಿದೆ ಆದರೆ ನಾನು ರಾಜ್ಯವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಬಹಳಷ್ಟು ಕೆಲಸ ಮಾಡಲು ಬಯಸುತ್ತೇನೆ" 

ಉತ್ತರ ಪ್ರದೇಶದ ಅಪರಾಧಿಗಳಲ್ಲಿ ಕಾನೂನಿನ ಯಾವುದೇ ಭಯ ಇಲ್ಲ ಎಂದು ಮೋದಿ ಟೀಕಿಸಿದ್ದಾರೆ . "ಮುಗ್ದ ನಾಗರಿಕರ ಕೊಲೆಯಾಗುತ್ತಿದೆ ?ಏಕೆ ಮುಗ್ದ ವ್ಯಾಪಾರಿಗಳ ಕೊಲೆಯಾಗುತ್ತಿದೆ ?" ಎಂದು ರಾಜ್ಯ ಸರ್ಕಾರವನ್ನು ಪ್ರಧಾನಿ ಪ್ರಶ್ನಿಸಿದರು .” 

"ಕಾಂಗ್ರೆಸ್ ಪ್ರತಿ ಹಳ್ಳಿಗೆ ಹೋಗಿ , ಉತ್ತರ ಪ್ರದೇಶವನ್ನು ಹೇಗೆ ಲೂಟಿ ಮಾಡಲಾಗಿದೆ ಹೇಳುತ್ತಿದ್ದಾರೆ . ಅವರು ಸಮಾಜವಾದಿ ಪಕ್ಷ ಮತ್ತು ರಾಜ್ಯ ಸರ್ಕಾರವನ್ನು ಕೀಳಾಗಿಸುತ್ತಿದ್ದರು . ಆದರೆ ಇದ್ದಕ್ಕಿದ್ದಂತೆ ಏನಾಯಿತು , ಕಾಂಗ್ರೆಸ್ ಸಮಾಜವಾದಿ ಪಕ್ಷದೊಂದಿಗೆ ಮಿತ್ರರಾದರು " ಎಂದು ಶ್ರೀ ಮೋದಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು .”

ಈಗ ಉತ್ತರ ಪ್ರದೇಶ ಸ್ಕಾಮ್ ವಿರುದ್ಧ ಹೋರಾಡಬೇಕು , ‘SCAM’ ಅಂದರೆ - ಸಮಾಜವಾದಿ ಪಕ್ಷ , ಕಾಂಗ್ರೆಸ್ , ಅಖಿಲೇಶ್ ಯಾದವ್ ಮತ್ತು ಮಾಯಾವತಿ ಎಂದು ಶ್ರೀ ಮೋದಿ ಹೇಳಿದರು . " ಇದು ಸ್ಕಾಮ್ ವಿರುದ್ಧ ಹೋರಾಟ . ಜನರು ನಿರ್ಧರಿಸಬೇಕು ಅವರಿಗೆ ಸ್ಕಾಮ್ ಬೇಕಾ ಅಥವಾ ಅಭಿವೃದ್ಧಿಗೆ ಮೀಸಲಾಗಿರುವ ಬಿಜೆಪಿ ಸರ್ಕಾರ . ಉತ್ತರ ಪ್ರದೇಶದ ಅಭಿವೃಧಿಗಾಗಿ ನಾವು ಎಲ್ಲಾ ಸಾಧ್ಯಗಳನ್ನು ಮಾಡಲು ಸಿದ್ದರಿದ್ದೇವೆ .”

ರಾಜ್ಯ ಸರ್ಕಾರ ಜನರ ಆರೋಗ್ಯಕ್ಕೆ ಗಮನಹರಿಸಿಲ್ಲ ಎಂದು ಪ್ರಧಾನಿ ಆರೋಪಿಸಿದರು . "ಕೇಂದ್ರ ಸರ್ಕಾರ ಜನರ ಆರೋಗ್ಯಕ್ಕಾಗಿ ಹಣ ಮಂಜೂರು ಮಾಡಿದೆ . ಆದರೆ ರಾಜ್ಯ ಸರ್ಕಾರ ಅದನ್ನು ಜನರಿಗಾಗಿ ಉಪಯೋಗಿಸಿಲ್ಲ . ಅಭಿವೃದ್ಧಿ ಕೆಲಸ ಮತ್ತು ಆರೋಗ್ಯವನ್ನು ಜನರಿಗೆ ತಲುಪುವುದನ್ನು ತಡೆಯುವ ಎಂತಹ ರಾಜಕೀಯ ನಿಮ್ಮದು ? " ಎಂದು ಶ್ರೀ ಮೋದಿ ಹೇಳಿದರು ”

ಕಬ್ಬು ರೈತರ ಕಲ್ಯಾಣಕ್ಕಾಗಿ ಯೋಜನೆ ಮತ್ತು ಮಾಜಿ ಸೈನಿಕರಿಗಾಗಿ ಒನ್ ರಾಂಕ್ , ಒನ್ ಪೆಂಷನ್ ನಂತಹ ಉಯೋಜನೆಗಳ ಬಗ್ಗೆ ಪ್ರಧಾನಿ ಮಾತನಾಡಿದರು . ಶ್ರೀ ಮೋದಿ ನೋಟು ಅಮಾನ್ಯತೆ ಬಗ್ಗೆ ಮಾತನಾಡಿದರು, " 8ನೇ ನವೆಂಬರ್ ನಂದು ನಾನು ತೆಗೆದುಕೊಂಡ ನಿರ್ಧಾರ , ದೇಶವನ್ನು ಲೂಟಿ ಮಡಿದ ಜನರಿಗೆ ಇಷ್ಟವಾಗುವುದಿಲ್ಲ ಮತ್ತು ಅವರು ನನ್ನ ವಿರುದ್ಧ ನಿಲ್ಲುತ್ತಾರೆ ಎಂದು ನಂಗೆ ತಿಳಿದಿತ್ತು . ಅದ್ದರೆ ನಾನು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮುಂದುವರೆಸುತ್ತೇನೆ" ಎಂದೂ ಅವರು ಹೇಳಿದರು . ” 

ಈ ಕಾರ್ಯಕ್ರಮದಲ್ಲಿ ಅನೇಕ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಂಡರು.

Click here to read full text speech

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
In 100-crore Vaccine Run, a Victory for CoWIN and Narendra Modi’s Digital India Dream

Media Coverage

In 100-crore Vaccine Run, a Victory for CoWIN and Narendra Modi’s Digital India Dream
...

Nm on the go

Always be the first to hear from the PM. Get the App Now!
...
ಸೋಶಿಯಲ್ ಮೀಡಿಯಾ ಕಾರ್ನರ್ 22 ಅಕ್ಟೋಬರ್ 2021
October 22, 2021
ಶೇರ್
 
Comments

A proud moment for Indian citizens as the world hails India on crossing 100 crore doses in COVID-19 vaccination

Good governance of the Modi Govt gets praise from citizens