Swami Vivekananda said that only rituals will not connect an individual to divinity. He said Jan Seva is Prabhu Seva: PM
More than being in search of a Guru, Swami Vivekananda was in search of truth: PM Modi
Swami Vivekananda had given the concept of 'One Asia.' He said that the solutions to the world's problems would come from Asia: PM
There is no life without creativity. Let our creativity strengthen our nation and fulfil the aspirations of our people: PM
India is changing. India's standing at the global stage is rising and this is due to Jan Shakti: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಶತಮಾನೋತ್ಸವ ಆಚರಣೆ ಹಾಗೂ ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ವಿದ್ಯಾರ್ಥಿ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು.


ಇತ್ತೀಚೆಗೆ 9/11 ಎಂದು ಖ್ಯಾತವಾಗಿರುವ ಇದೇ ದಿನದಂದು 125 ವರ್ಷಗಳ ಹಿಂದೆ ಕೆಲವೇ ಪದಗಳಿಂದ ಒಬ್ಬ ಭಾರತದ ಯುವಕ ಇಡೀ ಜಗತ್ತನ್ನು ಗೆದ್ದಿದ್ದ ಮತ್ತು ಇಡೀ ಜಗತ್ತಿಗೆ ಏಕತ್ವದ ಶಕ್ತಿಯನ್ನು ಸಾರಿದ್ದ ಎಂದು ಪ್ರಧಾನಮಂತ್ರಿ ಹೇಳಿದರು. 1893ರ 9/11 ಪ್ರೀತಿ, ಸೌಹಾರ್ದತೆ ಮತ್ತು ಭ್ರಾತೃತ್ವದ ಸಂಕೇತವಾಗಿತ್ತು ಎಂದೂ ತಿಳಿಸಿದರು.

ಸ್ವಾಮಿ ವಿವೇಕಾನಂದರು ನಮ್ಮ ಸಮಾಜದಲ್ಲಿ ಸೇರಿರುವ ಸಾಮಾಜಿಕ ಪಿಡುಗುಗಳ ವಿರುದ್ಧ ದನಿ ಎತ್ತಿದರು ಎಂದು ಪ್ರಧಾನಿ ಹೇಳಿದರು. ಆಚರಣೆಗಳು ಮಾತ್ರ ಒಬ್ಬ ವ್ಯಕ್ತಿಯನ್ನು ದೈವತ್ವದೊಂದಿಗೆ ಸಂಪರ್ಕಿಸುವುದಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು ಎಂಬುದನ್ನು ಸ್ಮರಿಸಿದ ಅವರು; 'ಜನ ಸೇವೆ' ಯೇ 'ಜನಾರ್ದನನ ಸೇವೆ' ಎಂದು ಸ್ವಾಮೀಜಿ ಪ್ರತಿಪಾದಿಸಿದ್ದರು ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಧರ್ಮೋಪದೇಶವನ್ನು ನಂಬುತ್ತಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಅವರ ಕಲ್ಪನೆಗಳು ಮತ್ತು ಆದರ್ಶವಾದವು ರಾಮಕೃಷ್ಣ ಮಿಷನ್ ಮೂಲಕ ಸಾಂಸ್ಥಿಕ ಚೌಕಟ್ಟನ್ನು ಪಡೆಯಿತು ಎಂದೂ ತಿಳಿಸಿದರು.


ವಂದೇ ಮಾತರಂ ಸ್ಫೂರ್ತಿಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಭಾರತವನ್ನು ಸ್ವಚ್ಛವಾಗಿಡಲು ಅವಿರತವಾಗಿ ಶ್ರಮಿಸುತ್ತಿರುವ ಎಲ್ಲ ಜನರನ್ನು ವಿಶೇಷವಾಗಿ ಪ್ರಧಾನಿ ಉಲ್ಲೇಖಿಸಿದರು. ವಿಶ್ವವಿದ್ಯಾಲಯಗಳ ಚುನಾವಣಾ ಪ್ರಚಾರ ಮಾಡುವಾಗ ವಿದ್ಯಾರ್ಥಿ ಸಂಘಟನೆಗಳು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. ಸ್ವಾಮಿ ವಿವೇಕಾನಂದರ ಭಾಷಣದಲ್ಲಿ "ಅಮೆರಿಕಾದ ನನ್ನ ಸಹೋದರ ಸಹೋದರಿಯರೇ" ಎಂಬ ಮಾತುಗಳಲ್ಲಿ ಮಹಿಳೆಯನ್ನು ಗೌರವಿಸುವವರು ಮಾತ್ರ ಹೆಮ್ಮೆ ಪಡಲು ಸಾಧ್ಯ ಎಂದು ಅವರು ಹೇಳಿದರು.

ಸ್ವಾಮಿ ವಿವೇಕಾನಂದ ಮತ್ತು ಜಮ್ ಶೇಟ್ ಜೀ ಟಾಟಾ ಅವರೊಂದಿಗಿನ ಪತ್ರವ್ಯವಹಾರಗಳು, ಭಾರತದ ಸ್ವಾವಲಂಬನೆಯ ಬಗ್ಗೆ ಸ್ವಾಮೀಜಿ ಅವರು ಹೊಂದಿದ್ದ ಕಾಳಜಿಯನ್ನು ತೋರುತ್ತದೆ ಎಂದು ತಿಳಿಸಿದರು. ಜ್ಞಾನ ಮತ್ತು ಕೌಶಲ ಎರಡೂ ಸಮಾನ ಮಹತ್ವವಾದವು ಎಂದು ಪ್ರಧಾನಿ ತಿಳಿಸಿದರು.


21ನೇ ಶತಮಾನವನ್ನು ಏಷ್ಯಾದ ಶತಮಾನ ಎಂದು ಜನ ಈಗ ಹೇಳುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಆದರೆ, ಬಹಳ ಹಿಂದೆಯೇ ಸ್ವಾಮಿ ವಿವೇಕಾನಂದರು, ಒಂದು ಏಷ್ಯಾ ಕಲ್ಪನೆಯನ್ನು ನೀಡಿದ್ದರು ಮತ್ತು ಜಗತ್ತಿನ ಸಮಸ್ಯೆಗಳಿಗೆಲ್ಲಾ ಏಷ್ಯಾದಿಂದಲೇ ಪರಿಹಾರ ಬರುತ್ತದೆ ಎಂದು ತಿಳಿಸಿದ್ದರು ಎಂದರು.


ಸೃಜನಶೀಲತೆ ಮತ್ತು ನಾವಿನ್ಯತೆಗೆ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಹೊರತಾಗಿ ಮತ್ತೊಂದು ಉತ್ತಮ ಸ್ಥಳವಿಲ್ಲ ಎಂದ ಪ್ರಧಾನಮಂತ್ರಿಯವರು, ‘ಏಕ ಭಾರತ, ಶ್ರೇಷ್ಠ ಭಾರತ’ ಸ್ಫೂರ್ತಿಯನ್ನು ಬಲಪಡಿಸಲು ಕ್ಯಾಂಪಸ್ ಗಳಲ್ಲಿ ವಿವಿಧ ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿ ದಿನಗಳನ್ನು ಆಚರಿಸಬೇಕು ಎಂದು ಹೇಳಿದರು.

ಜಾಗತಿಕ ವೇದಿಕೆಯಲ್ಲಿ ಭಾರತ ಬದಲಾಗುತ್ತಿದೆ, ಭಾರತ ಎದ್ದು ನಿಲ್ಲುತ್ತಿದೆ,ಇದಕ್ಕೆ ಜನ ಶಕ್ತಿ ಕಾರಣ ಎಂದು ಪ್ರಧಾನಿ ಹೇಳಿದರು. ‘ಕಾನೂನು ಪಾಲಿಸಿ ಮತ್ತು ಆಗ ಭಾರತ ಆಳುತ್ತದೆ’ ಎಂದು ಅವರು ವಿದ್ಯಾರ್ಥಿ ಸಮುದಾಯವನ್ನು ಪ್ರೇರೇಪಿಸಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
UPI reigns supreme in digital payments kingdom

Media Coverage

UPI reigns supreme in digital payments kingdom
NM on the go

Nm on the go

Always be the first to hear from the PM. Get the App Now!
...
Assam Chief Minister meets PM Modi
December 02, 2024