ಶೇರ್
 
Comments
Constructive criticism is something I greatly look forward to: PM
New India is not about the voice of a select few. It is about the voice of each and every of the 130 crore Indians: PM
PM Modi calls for using language as a tool to unite India

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೊಚ್ಚಿಯಲ್ಲಿ ನಡೆಯುತ್ತಿರುವ ಮಲೆಯಾಳಂ ಮನೋರಮಾ ಸುದ್ದಿ ಸಮಾವೇಶ 2019 ಉದ್ದೇಶಿಸಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು.

ಕೇರಳದ ಜನತೆಯನ್ನು ಹೆಚ್ಚು ಜಾಗೃತಗೊಳಿಸುವ ನಿಟ್ಟನಲ್ಲಿ ಕೊಡುಗೆ ನೀಡಿರುವ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮ ಬೆಂಬಲಿಸಿ ಅದು ನಿರ್ವಹಿಸಿದ ಪಾತ್ರಕ್ಕೆ ಮಲಯಾಳಂ ಮನೋರಮಾವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ಸಂಘಟಿತ ಆಶಯಗಳು ನವಭಾರತದ ತಿರುಳು

“ನವ ಭಾರತ’ ವಿಷಯದ ಮೇಲೆ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ವೈಯಕ್ತಿಕ ಆಕಾಂಕ್ಷೆಗಳು, ಸಂಘಟಿತ ಪ್ರಯತ್ನ ಮತ್ತು ರಾಷ್ಟ್ರೀಯ ಪ್ರಗತಿಯ ಒಡೆತನದ ಸ್ಪೂರ್ತಿ ನವ ಭಾರತದ ತಿರುಳಾಗಿದೆ ಎಂದರು. ನವ ಭಾರತ ಎಂದರೆ ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆ, ನಾಗರಿಕ ಕೇಂದ್ರಿತ ಸರ್ಕಾರ ಮತ್ತು ಸಕ್ರಿಯ ನಾಗರಿಕ ಎಂದು ಅವರು ಪ್ರತಿಪಾದಿಸಿದರು. ನವ ಭಾರತ ಸ್ಪಂದಿಸುವ ಜನತೆ ಮತ್ತು ಸ್ಪಂದನೆಯ ಸರ್ಕಾರದ ಯುಗವಾಗಿದೆ ಎಂದು ಅವರು ಹೇಳಿದರು.

ನವಭಾರತದ ಉತ್ಸಾಹ ಈಗ ಅದು ಕ್ರೀಡೆಯಿರಲಿ ಅಥವಾ ನವೋದ್ಯಮ ಪರಿಸರವಿರಲಿ ವಿವಿಧ ಕ್ಷೇತ್ರಗಳಲ್ಲಿ ಗೋಚರಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಣ್ಣ ಪಟ್ಟಣಗಳ ಮತ್ತು ಗ್ರಾಮಗಳ ಧೈರ್ಯಶಾಲಿ ಯುವಜನರು ತಮ್ಮ ಆಕಾಂಕ್ಷೆಗಳನ್ನು ಉತ್ಕೃಷ್ಟತೆಯಾಗಿ ಪರಿವರ್ತಿಸುತ್ತಿದ್ದು, ಭಾರತ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ ಎಂದರು. ಈ ನಿಟ್ಟಿನಲ್ಲಿ, ಇದುವೇ ನವ ಭಾರತದ ಉತ್ಸಾಹ ಎಂದು ನನಗನಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಭಾರತದಲ್ಲಿ ವಂಶದ ಹೆಸರುಗಳು ಯುವಜನರಿಗೆ ಅಪ್ರಸ್ತುತವಾಗಿವೆ. ಅವರಿಗೆ ತಮ್ಮದೇ ಹೆಸರು ಮೂಡಿಸುವ ಸಾಮರ್ಥ್ಯ ಪ್ರಧಾನವಾಗಿದೆ ಎಂದರು. ಇದು ಎಂಥ ಭಾರತ ಎಂದರೆ, ವ್ಯಕ್ತಿ ಎಲ್ಲಿಯೇ ಇರಲಿ ಇಲ್ಲಿ ಭ್ರಷ್ಟಾಚಾರ ಎಂದಿಗೂ ಒಂದು ಆಯ್ಕೆಯಲ್ಲ ಎಂದರು. ದಕ್ಷತೆಯೊಂದೇ ಇಲ್ಲಿನ ನಿಯಮ.” ಎಂದರು. 130 ಕೋಟಿ ಭಾರತೀಯರೆಲ್ಲರ ಪ್ರತಿಯೊಬ್ಬರ ದನಿಯೇ ನವ ಭಾರತ ಎಂದು ಪ್ರತಿಪಾದಿಸಿದ ಅವರು, ಜನರ ಈ ದನಿಯನ್ನು ಆಲಿಸುವುದು ಮಾಧ್ಯಮ ವೇದಿಕೆಗಳ ಪ್ರಮುಖ ಕರ್ತವ್ಯವಾಗಿದೆ ಎಂದರು.

ಸರ್ಕಾರ ಮಾಡಿರುವ ಕಾರ್ಯಗಳ ಬಗ್ಗೆ ಮಾತನಾಡಿದ ಅವರು, ಸುಗಮ ಜೀವನಕ್ಕಾಗಿ ದರಗಳನ್ನು ನಿಯಂತ್ರಣದಲ್ಲಿಟ್ಟಿರುವುದು, ಐದು ವರ್ಷಗಳಲ್ಲಿ 1.25 ಕೋಟಿ ಮನೆಗಳನ್ನು ನಿರ್ಮಿಸುವುದು, ಎಲ್ಲ ಗ್ರಾಮಗಳಿಗೂ ವಿದ್ಯುತ್ ಪೂರೈಸುವುದು, ಪ್ರತಿಯೊಂದು ಮನೆಗೂ ನೀರು ಸರಬರಾಜು ಮಾಡುವುದು, ಆರೋಗ್ಯ ಮತ್ತು ಶಿಕ್ಷಣ ಮೂಲಸೌಕರ್ಯ ಸುಧಾರಣೆಯಂಥ ಹಲವಾರು ಪ್ರಯತ್ನ ಮಾಡಲಾಗಿದೆ, ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 36 ಕೋಟಿ ಬ್ಯಾಂಕ್ ಖಾತೆ ತರೆಯಲಾಗಿದೆ, 20 ಕೋಟಿ ಸಣ್ಣ ಉದ್ದಿಮೆದಾರರಿಗೆ ಸಾಲ ನೀಡಲಾಗಿದೆ, ಹೊಗೆ ರಹಿತ ಅಡುಗೆ ಮನೆಯ ಖಾತ್ರಿಗಾಗಿ 8 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ, ರಸ್ತೆ ನಿರ್ಮಾಣದ ವೇಗ ದುಪ್ಪಟ್ಟು ಮಾಡಲಾಗಿದೆ ಎಂದರು.

“ನಾವು ಮಾಡಬಹುದಾ” ಯಿಂದ “ನಾವು ಮಾಡುತ್ತೇವೆ” ವರೆಗೆ

ಎರಡು ಪದಗಳನ್ನು ಬದಲು ಮಾಡುವುದರಿಂದ ಭಾರತದಲ್ಲಿ ಎಂಥ ಬದಲಾವಣೆಯ ಉತ್ಸಾಹ ಕಂಡು ಬಂದಿದೆ ಎಂಬುದನ್ನು ಪ್ರಧಾನಿ ವಿವರಿಸಿದರು. ಐದು ವರ್ಷಗಳ ಹಿಂದೆ ಜನರು ಕೇಳುತ್ತಿದ್ದರು -ನಾವು ಮಾಡಬಹುದಾ? ನಾವು ಎಂದಾದರೂ ಕೊಳಕಿನಿಂದ ಮುಕ್ತರಾಗುತ್ತೇವೆಯೇ? ನಾವು ಎಂದಾದರೂ ಪಾರ್ಶ್ವವಾಯು ಪೀಡಿತ ನೀತಿ ತೆಗೆದುಹಾಕುತ್ತೇವೆಯೇ? ನಾವು ಎಂದಾದರೂ ಭ್ರಷ್ಟಾಚಾರವನ್ನು ತೊಡೆದುಹಾಕುತ್ತೇವೆಯೇ? ಇಂದು ಜನರು ಹೇಳುತ್ತಾರೆ- ನಾವು ಮಾಡುತ್ತೇವೆ! ನಾವು ಸ್ವಚ್ಛ ಭಾರತ್ ಆಗುತ್ತೇವೆ. ನಾವು ಭ್ರಷ್ಟಾಚಾರ ಮುಕ್ತ ರಾಷ್ಟ್ರವಾಗುತ್ತೇವೆ. ನಾವು ಉತ್ತಮ ಆಡಳಿತವನ್ನು ಜನಾಂದೋಲನ ಮಾಡುತ್ತೇವೆ. ಈ ಮೊದಲು ನಿರಾಶಾವಾದದ ಪ್ರಶ್ನೆಯನ್ನು ಸೂಚಿಸುತ್ತಿದ್ದ ‘ವಿಲ್’ ಎಂಬ ಪದವು ಈಗ ಯುವ ರಾಷ್ಟ್ರದ ಆಶಾವಾದಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.”

ಸರ್ಕಾರ ನವ ಭಾರತದ ನಿರ್ಮಾಣಕ್ಕಾಗಿ ಸಮಗ್ರವಾಗಿ ಶ್ರುಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ನಿಟ್ಟಿನಲ್ಲಿ, ಅವರು 1.5 ಕೋಟಿ ಮನೆಗಳನ್ನು ಬಡವರಿಗಾಗಿ ನಿರ್ಮಿಸುವ ಕುರಿತು ಮಾತನಾಡಿದರು. ಹೆಚ್ಚಿನ ಸೌಲಭ್ಯ ಒದಗಿಸುವುದು, ಹೆಚ್ಚಿನ ಮೌಲ್ಯ ಒದಗಿಸುವುದು, ಕಡಿಮೆ ಅವಧಿಯಲ್ಲಿ ಸೇವೆ ಒದಗಿಸುವುದು ಮತ್ತು ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದೆ ಒದಗಿಸುವುದೂ ಸೇರಿದಂತೆ ತಾವು ಸಮಗ್ರ ದೃಷ್ಟಿಕೋನವನ್ನು ಪಾಲಿಸುತ್ತಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು. ಜನರ ಅಗತ್ಯಗಳನ್ನು ಆಲಿಸಲಾಗುತ್ತಿದೆ, ಸ್ಥಳೀಯ ಕುಶಲಕರ್ಮಿಗಳು ಭಾಗಿಯಾಗುತ್ತಿದ್ದಾರೆ ಮತ್ತು ತಂತ್ರಜ್ಞಾನವನ್ನು ಈ ಪ್ರಕ್ರಿಯೆಯ ಪ್ರಮುಖ ಅಂಶವನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.

ನವ ಭಾರತದ ನಮ್ಮ ಮುನ್ನೋಟ ಕೇವಲ ದೇಶದಲ್ಲಿ ಜೀವಿಸುತ್ತಿರುವವರ ಕಾಳಜಿಯಷ್ಟೇ ಅಲ್ಲ, ದೇಶದ ಹೊರಗೆ ಇರುವವರ ಬಗ್ಗೆಯೂ ಇದೆ ಎಂದರು. ವಿದೇಶದಲ್ಲಿನ ಭಾರತೀಯ ಸಮುದಾಯ ನಮ್ಮ ಹೆಮ್ಮೆ, ಅವರು ಭಾರತದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ.

ತಮ್ಮ ಇತ್ತೀಚಿನ ಬಹರೇನ್ ಭೇಟಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಆ ದೇಶಕ್ಕೆ ಭೇಟಿ ನೀಡಿದ ಪ್ರಪ್ರಥಮ ಭಾರತದ ಪ್ರಧಾನಿ ಎಂಬ ಗೌರವ ತಮ್ಮದಾಗಿದೆ ಎಂದರು. ಈ ಭೇಟಿಯ ವೇಳೆ ಅಲ್ಲಿ ಶಿಕ್ಷೆ ಅನುಭವಿಸುತ್ತಿರುವ 250 ಭಾರತೀಯರಿಗೆ ಕ್ಷಮಾದಾನ ನೀಡುವ ರಾಜ ಮನೆತನದ ಸಹಾನುಭೂತಿಯ ನಿರ್ಧಾರ ಮುಖ್ಯವಾದುದಾಗಿದೆ ಎಂದರು. ಯುಎಇಯಲ್ಲಿ ರೂಪೇ ಕಾರ್ಡ್ ಗೆ ಚಾಲನೆ ನೀಡಿದ್ದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕೊಲ್ಲಿ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಜನರಿಗೆ ಇದು ಪ್ರಯೋಜನವಾಗಲಿದೆ, ಅವರು ತಮ್ಮ ಮನೆಗೂ ಹಣ ಕಳುಹಿಸಬಹುದಾಗಿದೆ ಎಂದರು.

ಸ್ವಚ್ಛಭಾರತ, ಏಕ ಬಳಕೆ ಪ್ಲಾಸ್ಟಿಕ್ ನಿರ್ಮೂಲನೆ, ಜಲ ಸಂರಕ್ಷಣೆ, ಫಿಟ್ ಇಂಡಿಯಾದಂಥ ವಿವಿಧ ಆಂದೋಲನಗಳಲ್ಲಿ ಮಾಧ್ಯಮಗಳು ನಿರ್ವಹಿಸಬೇಕಾದ ಧನಾತ್ಮಕ ಪಾತ್ರವನ್ನು ಅವರು ಒತ್ತಿ ಹೇಳಿದರು.

ಭಾಷೆಗೆ ಒಗ್ಗೂಡಿಸುವ ಶಕ್ತಿ ಇದೆ:

ಭಾಷೆಗೆ ಭಾರತವನ್ನು ಒಗ್ಗೂಡಿಸುವ ಶಕ್ತಿ ಇದೆ ಎಂದ ಪ್ರಧಾನಮಂತ್ರಿಯವರು, ವಿವಿಧ ಭಾಷೆಗಳನ್ನು ಮಾತನಾಡುವ ಜನರನ್ನು ಹತ್ತಿರ ತರಲು ಮಾಧ್ಯಮಗಳು ಸೇತುವೆಯಂತೆ ಕಾರ್ಯ ನಿರ್ವಹಿಸಲು ಸಾಧ್ಯವೇ ಎಂದು ಕೇಳಿದರು. ಮಾಧ್ಯಮಗಳು ಒಂದು ಪದ ಮತ್ತು 10-12 ವಿವಿಧ ಭಾಷೆಗಳಲ್ಲಿನ ಆ ಪದವನ್ನು ಪ್ರಕಟಿಸಬೇಕು ಎಂಬ ಸಲಹೆ ಮಾಡಿದರು. ಈ ಮಾರ್ಗವಾಗಿ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ವಿವಿಧ ಭಾಷೆಯ 300ಕ್ಕೂ ಹೆಚ್ಚು ಹೊಸ ಪದ ಕಲಿಯಬಹುದು ಎಂದರು. ಒಬ್ಬ ವ್ಯಕ್ತಿ ಮತ್ತೊಂದು ಭಾರತೀಯ ಭಾಷೆ ಕಲಿತರೆ, ಅವರು ಸಾಮಾನ್ಯ ಎಳೆಯನ್ನೂ ತಿಳಿದುಕೊಳ್ಳುತ್ತಾರೆ ಮತ್ತು ಭಾರತೀಯ ಸಂಸ್ಕೃತಿಯಲ್ಲಿನ ಏಕತೆಯನ್ನು ನಿಜವಾಗಿಯೂ ಪ್ರಶಂಸಿಸುತ್ತಾರೆ ಎಂದರು.

ನಮ್ಮ ಪೂರ್ವಜರ ಕನಸುಗಳನ್ನು ನನಸಾಗಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ ಪ್ರಧಾನಮಂತ್ರಿಯವರು, ಅವರು ಹೆಮ್ಮೆ ಪಡುವಂಥ ಭಾರತ ನಿರ್ಮಿಸೋಣ ಎಂದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Click here to read full text speech

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
BRICS summit to focus on strengthening counter-terror cooperation: PM Modi

Media Coverage

BRICS summit to focus on strengthening counter-terror cooperation: PM Modi
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ನವೆಂಬರ್ 2019
November 13, 2019
ಶೇರ್
 
Comments

PM Narendra Modi reaches Brazil for the BRICS Summit; To put forth India’s interests & agenda in the 5 Nation Conference

Showering appreciation, UN thanks India for gifting solar panels

New India on the rise under the leadership of PM Narendra Modi