ಶೇರ್
 
Comments
PM Modi inaugurates Dickoya hospital constructed with India’s assistance in Sri Lanka
Matter of pride that several people in the region speak Sinhala, one of the oldest-surviving classical languages in the world: PM
The Government and people of India are with people of Sri Lanka in their journey towards peace and greater prosperity: PM

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಭಾರತದ ನೆರವಿನಲ್ಲಿ ಶ್ರೀಲಂಕಾದ ಮಧ್ಯ ಪ್ರಾಂತ್ಯದ ಡಿಕೋಯಾದಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯನ್ನು ಉದ್ಘಾಟಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತ ಜನರು ಪ್ರಧಾನಿಯವರನ್ನು ಸ್ವಾಗತಿಸಿದರು, ನಂತರ ಮೋದಿ ಅವರು ಶ್ರೀಲಂಕಾ ಅಧ್ಯಕ್ಷರು, ಶ್ರೀಲಂಕಾ ಪ್ರಧಾನಮಂತ್ರಿಯರು ಹಾಗೂ ಸಮುದಾಯದ ದೊಡ್ಡ ನಾಯಕರ ಸಮ್ಮುಖದಲ್ಲಿ ನಾರ್ವುಡ್ ನಲ್ಲಿ ಭಾರತೀಯ ಮೂಲದ ತಮಿಳು ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು. ಈ ಭಾಷಣದಲ್ಲಿ ಪ್ರಧಾನಿಯವರು, ಶ್ರೀಲಂಕಾಗೆ ಭಾರತೀಯ ಮೂಲದ ತಮಿಳು ಸಮುದಾಯ ನೀಡಿರುವ ಕೊಡುಗೆ ಹಾಗೂ ಭಾರತ ಮತ್ತು ಶ್ರೀಲಂಕಾ ನಡುವಿನ ದೀರ್ಘ ಕಾಲದ ಹಂಚಿಕೆಯ ಪರಂಪರೆಯ ಬಗ್ಗೆ ಮಾತನಾಡಿದರು. 

 

 ಪ್ರಧಾನಮಂತ್ರಿಯವರು ಸಿಲೋನ್ ವರ್ಕರ್ಸ್ ಕಾಂಗ್ರೆಸ್ ಹಾಗೂ ತಮಿಳು ಪ್ರೋಗ್ರೆಸ್ಯೂ ಅಲೆಯನ್ಸ್ ಪ್ರತಿನಿಧಿಗಳನ್ನೂ ಭೇಟಿ ಮಾಡಿದರು.

 

 ಮಧ್ಯ ಶ್ರೀಲಂಕಾದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಅದರಲ್ಲೂ ಭಾರತೀಯ ಮೂಲದ ತಮಿಳು ಸಮಾದಾಯದ ಸಭಿಕರಿದ್ದ ಸಭೆಯಲ್ಲಿ ಪ್ರಧಾನಿಯವರು ಮಾಡಿದ ಭಾಷಣದ ಪ್ರಧಾನ ವಿಷಯಗಳು ಈ ಕೆಳಗಿನಂತಿವೆ: 

ಇಂದು ಇಲ್ಲಿರುವುದು ನನಗೆ ದೊಡ್ಡ ಹೆಮ್ಮೆ ಎನಿಸಿದೆ.

ಮತ್ತು, ನಾನು ನಿಮ್ಮ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತಕ್ಕೆ ಆಭಾರಿಯಾಗಿದ್ದೇನೆ.

ಶ್ರೀಲಂಕಾದ ಈ ಸುಂದರ ಪ್ರದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಮಂತ್ರಿ ಎಂಬ ಅದ್ಭುತ ಗೌರವ ಇದಾಗಿದೆ.

ಅದಕ್ಕಿಂತ, ನಿಮ್ಮನ್ನುದ್ದೇಶಿಸಿ ಮಾತನಾಡುವ ದೊಡ್ಡ ಗೌರವದ ಅವಕಾಶವೂ ನನಗೆ ಲಭಿಸಿದೆ.

ಈ ಫಲವತ್ತಾದ ಭೂಮಿಯಲ್ಲಿ ಬೆಳೆಯುವ ಸಿಲೋನ್ ಚಹಾ ಬಗ್ಗೆ ಜಗತ್ತಿನ ಜನರಿಗೆ ಪರಿಚಯವಿದೆ.

ಆದರೆ ನಿಮ್ಮ ಬೆವರು ಮತ್ತು ಶ್ರಮ ಸಿಲೋನ್ ಚಹಾವನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಆಯ್ಕೆ ಮಾಡುವಂತೆ ಮಾಡಿದೆ ಎಂಬುದು ಕಡಿಮೆ ಜನರಿಗೆ ತಿಳಿದಿದೆ.

ಇಂದು ಶ್ರೀಲಂಕಾ ಮೂರನೇ ಅತಿ ದೊಡ್ಡ ಚಹಾ ರಫ್ತುದಾರನಾಗಿದ್ದರೆ, ಅದಕ್ಕೆ ನಿಮ್ಮ ಶ್ರಮವೇ ಕಾರಣ.

ನಿಮ್ಮ ಶ್ರಮಿಕ ಪ್ರೀತಿಯು ಶ್ರೀಲಂಕಾ ಜಗತ್ತಿನ ಶೇ.17ರಷ್ಟು ಚಹಾ ಬೇಡಿಕೆಯನ್ನು ಪೂರೈಸಲು ಮತ್ತು 1.5 ಶತಕೋಟಿ ಡಾಲರ್ ವಿದೇಶೀ ವಿನಿಮಯ ಗಳಿಸಲು ಕಾರಣವಾಗಿದೆ.

ಇಂದು ಜಾಗತಿಕ ವ್ಯಾಪ್ತಿ ಮತ್ತು ಯಶಸ್ಸು ಪಡೆದಿರುವ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಶ್ರೀಲಂಕಾದ ಚಹಾ ಕೈಗಾರಿಕೆಗೆ ನೀವು ಅನಿವಾರ್ಯ.

ನಿಮ್ಮ ಕೊಡುಗೆಯನ್ನು ಶ್ರೀಲಂಕಾ ಮತ್ತು ಅದರಾಚೆಯೂ ಗೌರವಿಸಲಾಗುತ್ತದೆ. . 
ನಾನು ನಿಜಕ್ಕೂ ನಿಮ್ಮ ಶ್ರಮವನ್ನು ಪ್ರಶಂಸಿಸುತ್ತೇನೆ.

ನಾನು ಮತ್ತು ನೀವು ಒಂದು ವಿಚಾರದಲ್ಲಿ ಸಮಾನರು.

ನಿಮ್ಮಲ್ಲಿ ಹಲವು ಜನರಿಗೆ ತಿಳಿದಿರಬಹುದು ನನಗೆ ಚಹಾ ಜೊತೆಗೆ ವಿಶೇಷ ನಂಟಿದೆ.

ಚಾಯ್ ಪೆ ಚರ್ಚಾ ಅಥವಾ ಚಹಾ ಮೇಲಿನ ಚರ್ಚೆ ಕೇವಲ ಒಂದು ಘೋಷಣೆಯಲ್ಲ.

ಅದು, ಪ್ರಾಮಾಣಿಕ ಕೆಲಸದ ಏಕತೆ ಮತ್ತು ಘನತೆಗೆ ನೀಡುವ ಆಳವಾದ ಗೌರವ.

ಇಂದು, ನೀವು ನಿಮ್ಮ ಪೂರ್ವಜರನ್ನು ಸ್ಮರಿಸುತ್ತೀರಿ.

ಆ ಪುರುಷ ಅಥವಾ ಮಹಿಳೆಗೆ ದೃಢ ಸಂಕಲ್ಪಶಕ್ತಿ ಮತ್ತು ಧೈರ್ಯವಿತ್ತು, ಅವರು ತಮ್ಮ ಬದುಕಿನ ಪಯಣವನ್ನು ಭಾರತದಿಂದ ಸಿಲೋನ್ ಗೆ ತಂದರು.

ಅವರ ಪಯಣ ಹೋರಾಟಮಯ ಮತ್ತು ತ್ರಾಸದಾಯಕವಾಗಿದ್ದಿರಬಹುದು ಆದರೆ, ಅವರು ಎಂದೂ ಸೋಲಲಿಲ್ಲ.

ಇಂದು ನಾವು ಅವರನ್ನು ಸ್ಮರಿಸುತ್ತೇವೆ ಮತ್ತು ನಮಿಸುತ್ತೇವೆ.

ನಿಮ್ಮ ಪೀಳಿಗೆ ಕೂಡ ಹಲವು ಕಷ್ಟಗಳನ್ನು ಎದುರಿಸಿದೆ.

ನೀವು ಕಠಿಣ ಸವಾಲುಗಳನ್ನು ಎದುರಿಸಿ ನಿಮ್ಮದೇ ಛಾಪು ಮತ್ತು ಗುರುತನ್ನು ಹೊಸ ಸ್ವಾತಂತ್ರ್ಯ ರಾಷ್ಟ್ರದಲ್ಲಿ ಮೂಡಿಸಿದ್ದೀರಿ.

ಆದರೆ, ನೀವು ಅದನ್ನು ಧೈರ್ಯದಿಂದ ಎದುರಿಸಿದ್ದೀರಿ. ನೀವು ನಿಮ್ಮ ಹಕ್ಕಿಗಾಗಿ ಹೋರಾಟ ಮಾಡಿದ್ದೀರಿ, ಆದರೆ, ಅದನ್ನು ನೀವು ಶಾಂತಿಯುತವಾಗಿ ಮಾಡಿದ್ದೀರಿ.

ನಿಮ್ಮ ಹಕ್ಕಗಾಗಿ, ನಿಮ್ಮ ಏಳಿಗೆಗಾಗಿ ಮತ್ತು ನಿಮ್ಮ ಆರ್ಥಿಕ ಪ್ರಗತಿಗಾಗಿ ಹೋರಾಡಿದ, ಸೌಮ್ಯಮೂರ್ತಿ ತೊಂಡಮಾನ್ ಅವರಂಥ ನಾಯಕರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ, ತಮಿಲು ವಿದ್ವಾಂಸ ಕನಿಯನ್ ಪುಂಗುರ್ನರ್ ಎರಡು ಸಮಸ್ರಮಾನಕ್ಕೂ ಮೊದಲೇ ಯಾತುಮ್ ಓರೆ, ಯಾವರುಮ್ ಕೆಲಿರ್ ಎಂದು ಘೋಷಿಸಿದ್ದಾರೆ. ಇದರರ್ಥ ‘ಎಲ್ಲ ಊರೂ ತವರೂರೇ ಮತ್ತು ಎಲ್ಲ ಜನರೂ ನಮ್ಮ ಆಪ್ತರೇ’

ಮತ್ತು, ನೀವು ಆ ನಿಜ ಸ್ಫೂರ್ತಿಯ ಸೆಲೆಯನ್ನು ಬಳಸಿಕೊಂಡಿದ್ದೀರಿ.

ನೀವು ಶ್ರೀಲಂಕಾವನ್ನು ನಿಮ್ಮ ತವರು ಮಾಡಿಕೊಂಡಿದ್ದೀರಿ.

ನೀವು ಈ ಸುಂದರ ರಾಷ್ಟ್ರದ ಸಾಮಾಜಿಕ ರಚನೆಯ ಭಾಗವಾಗಿದ್ದೀರಿ. ನೀವು ತಮಿಳು ತಾಯಿಯ ಮಕ್ಕಳಾಗಿದ್ದೀರಿ.

ನೀವು ಜಗತ್ತಿನಲ್ಲಿ ಉಳಿದಿರುವ ಅತ್ಯಂತ ಹಳೆಯ ಶಾಸ್ತ್ರೀಯ ಭಾಷೆಯನ್ನು ಮಾತನಾಡುತ್ತೀರಿ.

ನಿಮ್ಮಲ್ಲಿ ಹಲವರು ಸಿಂಹಳ ಭಾಷೆಯನ್ನೂ ಮಾತನಾಡುತ್ತಾರೆ ಎಂಬುದು ಹೆಮ್ಮೆಯ ವಿಚಾರ.

ಭಾಷೆ ಸಂವಹನದ ಒಂದು ಸಾಧನ.

ಅದು ನಮ್ಮ ಸಂಸ್ಕೃತಿಯನ್ನು ವ್ಯಾಖ್ಯಾನಿಸುತ್ತದೆ, ಸಂಬಂಧ ಕಟ್ಟುತ್ತದೆ, ಸಮುದಾಯಗಳನ್ನು ಬೆಸೆಯುತ್ತದೆ ಮತ್ತು ಅದು ಸಂಘಟಿತ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.ಬಹುಭಾಷೀಯ ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿಯಿಂದ ಜೀವಿಸುವುದಕ್ಕಿಂಥ ಉತ್ತಮವಾದ್ದು ಮತ್ತೊಂದಿಲ್ಲ.

ವಿವಿಧ್ಯತೆ ಸಂಭ್ರಮಾಚರಣೆಗೆ ಬಯಸುತ್ತದೆಯೇ ಹೊರತು ಸಂಘರ್ಷವನ್ನಲ್ಲ.

ನಮ್ಮ ಭೂತಕಾಲ ಸದಾ ಸೌಹಾರ್ದತೆಯ ಅಂತರ ಸಂಘಟಿತವಾಗಿತ್ತು.

ಹಲವು ಜಾತಕ ಕಥೆ ಸೇರಿದಂತೆ ಬೌದ್ಧ ಬರಹಗಳಲ್ಲಿ ಅಗಸ್ತ್ಯಮಹರ್ಷಿ ತಮಿಳು ಭಾಷೆಯ ಜನಕ ಎಂದು ಉಲ್ಲೇಖಿಸಲಾಗಿದೆ.

ಕ್ಯಾಂಡಿಯ ಸಿಂಹಳದ ನಾಯಕ ದೊರೆಗಳು ಮದುರೈ ಮತ್ತು ತಂಜಾವೂರಿನ ನಾಯಕ ದೊರೆಗಳೊಂದಿಗೆ ವೈವಾಹಿಕ ಸಂಬಂಧ ಹೊಂದಿದ್ದರು.

ಸಿಂಹಳ ಮತ್ತು ತಮಿಳು ಎರಡೂ ಸಭಾ ಭಾಷೆಗಳಾಗಿದ್ದವು.

ಹಿಂದೂ ಮತ್ತು ಬೌದ್ಧ ಮಂದಿರಗಳಲ್ಲಿ ಎರಡೂ ಭಾಷೆಯನ್ನು ಗೌರವಿಸಲಾಗುತ್ತಿತ್ತು ಮತ್ತ ಸ್ವೀಕರಿಸಲಾಗಿತ್ತು.

ನಾವು ಈ ಸಮಾನತೆ ಮತ್ತು ಸೌಹಾರ್ದತೆಯ ಎಳೆಗಳನ್ನು ಬಲಪಡಿಸಬೇಕೇ ಹೊರತು ಪ್ರತ್ಯೇಕಿಸಬಾರದು. ಮತ್ತು ಅಂತಹ ಪ್ರಯತ್ನಗಳ ನೇತೃತ್ವ ವಹಿಸಲು ಮತ್ತು ನಿಮ್ಮ ಕೊಡುಗೆ ನೀಡಲು ನಿಮಗೆ ಉತ್ತಮ ಅವಕಾಶವಿದೆ.

ನಾನು ಮಹಾತ್ಮಾಗಾಂಧಿ ಅವರ ಜನ್ಮ ಸ್ಥಳ ಭಾರತದ ಗುಜರಾತ್ ರಾಜ್ಯದಿಂದ ಬಂದವನಾಗಿದ್ದೇನೆ.

ಸುಮಾರು 90 ವರ್ಷಗಳ ಹಿಂದೆ, ಅವರು ಕ್ಯಾಂಡಿ, ನುವಾರ ಇಲಿಯಾ, ಮತಾಲೆ, ಬದ್ಧುಲ, ಬಂಡಾರವೇಲ ಮತ್ತು ಹ್ಯಾಟನ್ ಸೇರಿದಂತೆ ಈ ಸುಂದರ ಶ್ರೀಲಂಕಾಗೆ ಭೇಟಿ ನೀಡಿದ್ದರು. ಗಾಂಧೀಜಿ ಅವರ ಪ್ರಥಮ ಮತ್ತು ಏಕೈಕ ಪ್ರವಾಸ, ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಸಂದೇಶ ಪಸರಿಸುವುದಾಗಿತ್ತು.

ಆ ಐತಿಹಾಸಿಕ ಭೇಟಿಯ ಅಂಗವಾಗಿ, ಮಹಾತ್ಮಾಗಾಂಧಿ ಅಂತಾರಾಷ್ಟ್ರೀಯ ಕೇಂದ್ರವನ್ನು ಭಾರತ ಸರ್ಕಾರದ ನೆರವಿನಲ್ಲಿ 2015ರಲ್ಲಿ ಮತಾಲೆಯಲ್ಲಿ ಸ್ಥಾಪಿಸಲಾಗಿದೆ. ಭಾರತದ ಮತ್ತೊಬ್ಬ ಹಾಗೂ ಇತ್ತೀಚಿನ ವರ್ಷಗಳ ರಾಷ್ಟ್ರೀಯ ನಾಯಕ, ಪುರುಚ್ಚಿ ತಲೈವಾರ್ ಎಂ.ಜಿ.ಆರ್. ಅವರು ಈ ನೆಲದಲ್ಲಿ ಹುಟ್ಟಿದವರು.

ಇತ್ತೀಚಿನ ವರ್ಷಗಳಲ್ಲಿ ನೀವು ವಿಶ್ವಕ್ಕೆಮುತ್ತಯ್ಯ ಮುರಳೀಧರನ್ ರಂಥ ಶ್ರೇಷ್ಠ ಕ್ರಿಕೆಟಿಗ ಸ್ಪಿನ್ನರ್ ನನ್ನು ನೀಡಿದ್ದೀರಿ. 
 
ನಿಮ್ಮ ಪ್ರಗತಿ ನಮ್ಮ ಹೆಮ್ಮೆ.

ಜೀವನದ ವಿವಿಧ ಹಂತಗಳಲ್ಲಿ ನಿಮ್ಮ ಸಾಧನೆಗಳಿಂದ ನಾವು ಹೆಚ್ಚು ಸಂತೋಷವನ್ನು ಪಡೆಯುತ್ತೇವೆ.

ನಾವು ಭಾರತೀಯ ಮೂಲದ ಸಮುದಾಯದ ಯಶಸ್ಸನ್ನು ಸಂಭ್ರಮಿಸುತ್ತೇವೆ. ನಾನು ಇನ್ನೂ ಹೆಚ್ಚಿನ ಪ್ರಕಾಶಮಾನ ಯಶಸ್ಸನ್ನು ಎದಿರು ನೋಡುತ್ತೇನೆ. ನೀವು ಭಾರತ ಮತ್ತು ಶ್ರೀಲಂಕಾ ಜನತೆಯ ಮತ್ತು ಸರ್ಕಾರದ ನಡುವೆ ಮಹತ್ವದ ಕೊಂಡಿಯಾಗಿದ್ದೀರಿ.v ನಾವು ನಿಮ್ಮನ್ನು ನಮ್ಮ ದೇಶಗಳ ಬಾಂಧವ್ಯದ ಸಾಟಿಯಿಲ್ಲದ ನಂಟಾಗಿ ಕಾಣುತ್ತೇವೆ.

ಇಂಥ ಸಂಬಂಧಗಳನ್ನು ಬಳಸಿಕೊಳ್ಳುವುದು ನನ್ನ ಸರ್ಕಾರದ ಆದ್ಯತೆಯಾಗಿದೆ.

ಮತ್ತು, ಎಲ್ಲ ಭಾರತೀಯರ ಮತ್ತು ಎಲ್ಲ ಶ್ರೀಲಂಕಾ ಪ್ರಜೆಗಳ ಪ್ರಗತಿಗೆ ಮತ್ತು ಅದು ನಿಮ್ಮ ಬದುಕಿಗೂ ತಟ್ಟುವಂತೆ ಕೊಡುಗೆ ನೀಡುವಂತೆ ನಮ್ಮ ಪಾಲುದಾರಿಕೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ.

ನೀವು ನಿಮ್ಮ ಬಾಂಧವ್ಯವನ್ನು ಭಾರತದೊಂದಿಗೆ ಜೀವಂತವಾಗಿಟ್ಟುಕೊಂಡಿದ್ದೀರಿ.

ನಿಮಗೆ ಭಾರತದಲ್ಲಿ ಗೆಳೆಯರು ಬಂಧುಗಳು ಇದ್ದಾರೆ.

ನೀವು ಭಾರತೀಯ ಹಬ್ಬಗಳನ್ನು ನಿಮ್ಮದೆಂದು ಆಚರಿಸುತ್ತೀರಿ ನೀವು ನಮ್ಮ ಸಂಸ್ಕೃತಿಯಲ್ಲಿ ಮಿಂದು ಅದನ್ನು ನಿಮ್ಮದಾಗಿಸಿಕೊಂಡಿದ್ದೀರಿ. ನಿಮ್ಮ ಹೃದಯದಲ್ಲಿ ಭಾರತ ಮಿಡಿಯುತ್ತಿದೆ.vv ಮತ್ತು, ಭಾರತವು ಸದಾ ನಿಮ್ಮ ಆತ್ಮೀಯ ಭಾವನೆಗಳಿಗೆ ಸ್ಪಂದಿಸುತ್ತದೆ ಎಂದು ನಾನು ಹೇಳುತ್ತೇನೆ.

ನಾವು ನಿಮ್ಮ ಸಾಮಾಜಿಕ-ಆರ್ಥಿಕ ಏಳಿಗೆಗಾಗಿ ಎಲ್ಲ ಸಾದ್ಯ ಮಾರ್ಗಗಳಲ್ಲಿ ಶ್ರಮರಹಿತವಾಗಿ ಶ್ರಮಿಸುತ್ತಲೇ ಇರುತ್ತೇವೆ. ಶ್ರೀಲಂಕಾ ಸರ್ಕಾರ ನಿಮ್ಮ ಜೀವನ ಮಟ್ಟ ಸುಧಾರಣೆಗೆ ಪಂಚ ವಾರ್ಷಿಕ ರಾಷ್ಟ್ರೀಯ ಕ್ರಿಯಾ ಯೋಜನೆ ಜೊತೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂಬುದು ನನಗೆ ತಿಳಿದಿದೆ. ಭಾರತ ಈ ನಿಟ್ಟಿನಲ್ಲಿ ಅವರ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ.

ಭಾರತ ಸಹ ಶ್ರೀಲಂಕಾ ಸರ್ಕಾರದೊಂದಿಗೆ ನಿಮ್ಮ ಯೋಗಕ್ಷೇಮಕ್ಕಾಗಿ ಅದರಲ್ಲೂ ಆರೋಗ್ಯ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿ ವಲಯದಲ್ಲಿ ಹಲವು ಯೋಜನೆ ಕೈಗೊಂಡಿದೆ,

ಆಸಕ್ತ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರಿಸಲು ಸಿಲೋನ್ ಎಸ್ಟೇಟ್ ಕಾರ್ಮಿಕರ ಶಿಕ್ಷಣ ಟ್ರಸ್ಟ್ (ಸಿಇಡಬ್ಯ್ಲುಇಟಿ) ಅನ್ನು 1947ರಲ್ಲೇ ಸ್ಥಾಪಿಸಲಾಯಿತು.

ಇದರಡಿ, ನಾವು ಪ್ರತಿ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ಶಿಕ್ಷಣ ಪಡೆಯುತ್ತಿರುವ 700 ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡುತ್ತಿದ್ದೇವೆ.

ಇದರಿಂದ ನಿಮ್ಮ ಮಕ್ಕಳು ಲಾಭ ಪಡೆಯುತ್ತಿದ್ದಾರೆ.

ಜೀವನೋಪಾಯ ಕ್ಷೇತ್ರದಲ್ಲಿ ಮತ್ತು ಸಾಮರ್ಥ್ಯ ವರ್ಧನೆ ಕ್ಷೇತ್ರದಲ್ಲಿ ನಾವು, ವೃತ್ತಿಪರ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ ಮತ್ತು 10 ಇಂಗ್ಲಿಷ್ ಭಾಷೆ ತರಬೇತಿ ಕೇಂದ್ರಗಳು ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದು, ಇದು ಸೂಕ್ತ ಕೌಶಲ ಪಡೆಯಲು ನೆರವಾಗುತ್ತಿದೆ.

ಅದೇ ರೀತಿ, ನಾವು ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳನ್ನು ತೋಟಗಾರಿಕೆ ಶಾಲೆಗಳಲ್ಲಿ ಸ್ಥಾಪಿಸಲು ನೆರವು ನೀಡಿದ್ದೇವೆ.

ನಾವು ಹಲವು ತೋಟದ ಶಾಲೆಗಳನ್ನು ಮೇಲ್ದರ್ಜೆಗೇರಿಸಿದ್ದೇವೆ. 
ಕೆಲವೇ ಹೊತ್ತಿನ ಮೊದಲು ಅಧ್ಯಕ್ಷ ಸಿರಿಸೇನಾ, ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆ ಮತ್ತು ನಾನು 150 ಹಾಸಿಗೆಗಳ ಸಮುಚ್ಛಯವನ್ನು ಡಿಕೋಯಾದಲ್ಲಿ ಜನತೆಗೆ ಸಮರ್ಪಿಸಿದ್ದೇವೆ. ಅದನ್ನು ಭಾರತದ ನೆರವಿನಲ್ಲಿ ನಿರ್ಮಿಸಲಾಗಿದೆ.

ಇದು ಸುಸಜ್ಜಿತ ಸೌಲಭ್ಯ ಹೊಂದಿದ್ದು, ಈ ವಲಯದ ಆರೋಗ್ಯ ಸೇವೆಗಳ ಅಗತ್ಯ ಪೂರೈಸುತ್ತದೆ. ಅಲ್ಲದೆ ನಾವು 1990 ತುರ್ತು ಆಂಬುಲೆನ್ಸ್ ಸೇವೆಯನ್ನು ವಿಸ್ತರಿಸಲೂ ನಿರ್ಧರಿಸಿದ್ದೇವೆ, ಪ್ರಸ್ತುತ ಇದು ಪಶ್ಚಿಮ ಮತ್ತು ದಕ್ಷಿಣ ಪ್ರಾಂತ್ಯಗಳಲ್ಲಿ ಇದ್ದು, ಎಲ್ಲ ಇತರ ಪ್ರಾಂತ್ಯಗಳಿಗೂ ಇದರ ಸೇವೆ ದೊರಕಲಿದೆ.

ನಾವು ಭಾರತದ ಸಾಂಪ್ರದಾಯಿಕ ಆರೋಗ್ಯ ರಕ್ಷಣಾ ಸೇವೆಗಳಾದ ಯೋಗ ಮತ್ತು ಆಯುರ್ವೇದವನ್ನು ಸಹ ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷ ಪಡುತ್ತೇವೆ. ನಾವು ಮುಂದಿನ ತಿಂಗಳು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದ್ದು, ಅದರ ಬಹು ಉಪಯೋಗವನ್ನು ಜನಪ್ರಿಯಗೊಳಿಸಲು ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ನಾವು ಎದಿರು ನೋಡುತ್ತಿದ್ದೇವೆ.

ಶ್ರೀಲಂಕಾದಲ್ಲಿ ನಾವಿನ್ಯಪೂರ್ಣ ಭಾರತೀಯ ವಸತಿ ಯೋಜನೆ ಅಡಿಯಲ್ಲಿ 4000 ಮನೆಗಳನ್ನು ಒಳನಾಡ ಪ್ರದೇಶಗಳಲ್ಲಿ ನಾವು ನಿರ್ಮಾಣ ಮಾಡಿದ್ದೇವೆ. ಅಲ್ಲದೆ ಇದೇ ಪ್ರಥಮಬಾರಿಗೆ ಫಲಾನುಭವಿಗಳಿಗೆ ಮನೆಯನ್ನು ನಿರ್ಮಿಸಿರುವ ಜಾಗದ ಒಡೆತನವನ್ನೂ ನೀಡಲಾಗಿದೆ ಎಂಬುದು ನನಗೆ ಸಂತೋಷ ತಂದಿದೆ.

ಈ ಕ್ಷೇತ್ರದಲ್ಲಿನ ನಮ್ಮ ಬದ್ಧತೆಯನ್ನು ಮುಂದುವರಿಸಲು, ನಾನು ಇನ್ನೂ ಹೆಚ್ಚುವರಿಯಾಗಿ 10 ಸಾವಿರ ಮನೆಗಳನ್ನು ಒಳನಾಡ ಪ್ರದೇಶಗಳಲ್ಲಿ ಈ ಯೋಜನೆಯಡಿ ನಿರ್ಮಿಸುವುದಾಗಿ ಘೋಷಿಸುತ್ತೇನೆ.

ಇಂದು ಬೆಳಗ್ಗೆ, ನಾನು ವಾರಾಣಸಿಯಿಂದ ಕೊಲಂಬೋಗೆ ನೇರ ವಿಮಾನಯಾನ ಸೇವೆಯನ್ನು ಘೋಷಿಸಿದ್ದೆ. ಇದರಿಂದ ನೀವು ಸುಲಭವಾಗಿ ವಾರಾಣಸಿಗೆ ಭೇಟಿ ನೀಡಬಹುದು ಮತ್ತು ಶಿವನ ಆಶೀರ್ವಾದ ಪಡೆಯಬಹುದು.

ಭಾರತ ಸರ್ಕಾರ ಮತ್ತು ಜನತೆ ನಿಮ್ಮ ಶಾಂತಿ ಮತ್ತು ಪ್ರಗತಿಯ ಪಯಣದಲ್ಲಿ ನಿಮ್ಮೊಂದಿಗಿದ್ದಾರೆ.

ನಿಮ್ಮ ಹಿಂದಿನ ಸವಾಲುಗಳಿಂದ ಹೊರಬರಲು ಮತ್ತು ನಿಮ್ಮ ಭರವಸೆಯ ಭವಿಷ್ಯಕ್ಕೆ ನಾವು ನಿಮಗೆ ಸಹಾಯ ಮಾಡುತ್ತೇವೆ ಶ್ರೇಷ್ಠ ಕವಿ ತಿರುವಳ್ಳುವರ್ ಹೇಳುವಂತೆ "ಸಂಪತ್ತು ಮನುಷ್ಯನ ವಿಫಲವಾಗದ ಶಕ್ತಿ ಮತ್ತು ಪ್ರಯತ್ನದಲ್ಲಿ ತನ್ನದೇ ಆದ ದಾರಿಯನ್ನು ಕಂಡುಕೊಳ್ಳುತ್ತದೆ". ನಿಮ್ಮ ಪರಂಪರೆ ಮತ್ತು ನಿಮ್ಮ ಮಕ್ಕಳ ಸಾಮರ್ಥ್ಯಕ್ಕೆ ಮತ್ತು ಕನಸಿಗೆ ಹೊಂದುವಂಥ ಭವ್ಯ ಭವಿಷ್ಯ ನಿಮಗೆ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಧನ್ಯವಾದ, ನಂಡ್ರಿ.

ತುಂಬಾ ತುಂಬಾ ಧನ್ಯವಾದಗಳು.

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Narendra-Devendra formula is super-hit in terms of development, says PM Modi

Media Coverage

Narendra-Devendra formula is super-hit in terms of development, says PM Modi
...

Nm on the go

Always be the first to hear from the PM. Get the App Now!
...
Here are the Top News Stories for 17th October 2019
October 17, 2019
ಶೇರ್
 
Comments

Top News Stories is your daily dose of positive news. Take a look and share news about all latest developments about the government, the Prime Minister and find out how it impacts you!