ಶೇರ್
 
Comments
"ವ್ಯವಹಾರವನ್ನು ಸುಗಮಗೊಳಿಸುವುದು ಕೇವಲ ನಾಲ್ಕು ಪದಗಳಂತೆ ಕಾಣಿಸಬಹುದು, ಆದರೆ ಅದರ ಶ್ರೇಯಾಂಕಗಳನ್ನು ಸುಧಾರಿಸುವ ಸಲುವಾಗಿ ತಳಮಟ್ಟದಲ್ಲಿ ನೀತಿಗಳು ಮತ್ತು ನಿಯಮಗಳನ್ನು ಬದಲಾಯಿಸುವುದು ಸೇರಿದಂತೆ ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ" ಎಂದರು.
ಇಂದು ಭಾರತವು ಜಾಗತಿಕವಾಗಿ ಒಂದು ಅತ್ಯಂತ ವ್ಯಾಪಾರಿ ಸ್ನೇಹಶೀಲ ರಾಷ್ಟ್ರವಾಗಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ತೆರಿಗೆ ವ್ಯವಸ್ಥೆಯಲ್ಲಿ ನಾವು ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವ ನಿಟ್ಟಿನಲ್ಲಿ ವ್ಯಕ್ತಿರಹಿತ ಆಡಳಿತ ತಂದಿದ್ದೇವೆ: ಪ್ರಧಾನಮಂತ್ರಿ

5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸಬಹುದಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ನವದೆಹಲಿಯಲ್ಲಿ ಇಂದು ನಡೆದ ಅಸ್ಸೋಚಾಮ್‌ನ ನೂರು ವರ್ಷಗಳ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಾರ್ಪೊರೇಟ್ ಜಗತ್ತು, ರಾಜತಾಂತ್ರಿಕರು ಮತ್ತು ಇತರ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತವನ್ನು 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯನ್ನಾಗಿ ಮಾಡುವ ಆಲೋಚನೆ ಹಠಾತ್ತಾಗಿ ಬಂದುದಲ್ಲ ಎಂದು ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ ದೇಶವು ತನ್ನನ್ನು ತಾನೇ ಬಲಪಡಿಸಿಕೊಂಡಿದೆ, ಅದು ತಾನೇ ಗುರಿಯನ್ನು ನಿಗದಿಪಡಿಸಿಕೊಳ್ಳುವುದಲ್ಲದೆ, ಆ ದಿಕ್ಕಿನಲ್ಲಿ ಪ್ರಯತ್ನಗಳನ್ನು ಸಹ ಮಾಡುತ್ತದೆ ಎಂದು ಅವರು ಹೇಳಿದರು.

“ಐದು ವರ್ಷಗಳ ಮೊದಲು, ಆರ್ಥಿಕತೆಯು ವಿಪತ್ತಿನತ್ತ ಸಾಗುತ್ತಿತ್ತು. ನಮ್ಮ ಸರ್ಕಾರ ಇದನ್ನು ಹತೋಟಿಗೆ ತಂದು ಆರ್ಥಿಕತೆಯಲ್ಲಿ ಶಿಸ್ತು ಮೂಡಿಸಿತು. ನಾವು ಭಾರತದ ಆರ್ಥಿಕತೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತಂದಿದ್ದೇವೆ ಇದರಿಂದ ಅದು ನಿಗದಿತ ನಿಯಮಗಳೊಂದಿಗೆ ಶಿಸ್ತುಬದ್ಧವಾಗಿ ಮುಂದುವರಿಯಬಹುದು. ಕೈಗಾರಿಕಾ ವಲಯದ ದಶಕಗಳಷ್ಟು ಹಳೆಯ ಬೇಡಿಕೆಗಳನ್ನು ನಾವು ಈಡೇರಿಸಿದ್ದೇವೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ನಾವು ಬಲವಾದ ಬುನಾದಿಯನ್ನು ಹಾಕಿದ್ದೇವೆ” ಎಂದು ಪ್ರಧಾನಿ ಹೇಳಿದರು.

“ನಾವು ಭಾರತದ ಆರ್ಥಿಕತೆಯನ್ನು ಔಪಚಾರಿಕೀಕರಣ ಮತ್ತು ಆಧುನೀಕರಣದ ಎಂಬ ಎರಡು ಬಲವಾದ ಸ್ತಂಭಗಳ ಮೇಲೆ ನಿರ್ಮಿಸುತ್ತಿದ್ದೇವೆ. ಔಪಚಾರಿಕ ಆರ್ಥಿಕತೆಯ ವಲಯಕ್ಕೆ ಹೆಚ್ಚು ಹೆಚ್ಚು ಕ್ಷೇತ್ರಗಳನ್ನು ತರಲು ನಾವು ಪ್ರಯತ್ನಿಸುತ್ತಿದ್ದೇವೆ. ಇದರೊಂದಿಗೆ ನಾವು ನಮ್ಮ ಆರ್ಥಿಕತೆಯನ್ನು ಇತ್ತೀಚಿನ ತಂತ್ರಜ್ಞಾನದೊಂದಿಗೆ ಜೋಡಿಸುತ್ತಿದ್ದೇವೆ ಇದರಿಂದ ನಾವು ಆಧುನೀಕರಣದ ಪ್ರಕ್ರಿಯೆಯನ್ನು ವೇಗಗೊಳಿಸಬಹುದು. ಈಗ ಹೊಸ ಕಂಪನಿಯನ್ನು ನೋಂದಾಯಿಸಲು ಹಲವಾರು ವಾರಗಳ ಬದಲು ಕೆಲವೇ ಗಂಟೆಗಳು ಸಾಕು. ಗಡಿಗಳಾಚೆಯ ತ್ವರಿತ ವ್ಯಾಪಾರಕ್ಕೆ ಆಟೊಮೇಷನ್ ಸಹಾಯ ಮಾಡುತ್ತದೆ. ಮೂಲಸೌಕರ್ಯಗಳ ಉತ್ತಮ ಸಂಪರ್ಕದಿಂದಾಗಿ ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ತಲುಪುವ ಸಮಯವನ್ನು ಕಡಿಮೆ ಮಾಡಿದೆ. ಇವೆಲ್ಲವೂ ಆಧುನಿಕ ಆರ್ಥಿಕತೆಯ ಉದಾಹರಣೆಗಳಾಗಿವೆ. ಇಂದು ನಾವು ಉದ್ಯಮವನ್ನು ಆಲಿಸುವ, ಅದರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವರ ಸಲಹೆಗಳಿಗೆ ಸ್ಪಂದಿಸುವ ಸರ್ಕಾರವನ್ನು ಹೊಂದಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ಸತತ ಪ್ರಯತ್ನದಿಂದಾಗಿ ದೇಶವು ಸುಗಮ ವ್ಯವಹಾರ ಶ್ರೇಯಾಂಕದಲ್ಲಿ ಗಮನಾರ್ಹ ಜಿಗಿತವನ್ನು ಸಾಧಿಸಬಹುದು ಎಂದು ಪ್ರಧಾನಿ ಹೇಳಿದರು.

“ವ್ಯವಹಾರವನ್ನು ಸುಗಮಗೊಳಿಸುವುದು ಕೇವಲ ನಾಲ್ಕು ಪದಗಳಂತೆ ಕಾಣಿಸಬಹುದು, ಆದರೆ ಅದರ ಶ್ರೇಯಾಂಕಗಳನ್ನು ಸುಧಾರಿಸುವ ಸಲುವಾಗಿ ತಳಮಟ್ಟದಲ್ಲಿ ನೀತಿಗಳು ಮತ್ತು ನಿಯಮಗಳನ್ನು ಬದಲಾಯಿಸುವುದು ಸೇರಿದಂತೆ ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ” ಎಂದರು.

ತೆರಿಗೆ ಪಾವತಿಸುವವರು ಮತ್ತು ಅಧಿಕಾರಿಗಳ ನಡುವಿನ ಮಾನವ ಸಂಪರ್ಕವನ್ನು ಕಡಿಮೆ ಮಾಡುವ ಸಲುವಾಗಿ ದೇಶದಲ್ಲಿ ಮುಖರಹಿತ ತೆರಿಗೆ ಆಡಳಿತದತ್ತ ಮಾಡಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು.

“ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆಯನ್ನು ತರಲು, ನಾವು ಮುಖರಹಿತ ತೆರಿಗೆ ಆಡಳಿತದತ್ತ ಸಾಗುತ್ತಿದ್ದೇವೆ” ಎಂದು ಅವರು ಹೇಳಿದರು.

ಉದ್ಯಮಗಳ ಮೇಲಿನ ಹೊರೆ ಕಡಿಮೆ ಮಾಡಲು ಮತ್ತು ಉದ್ಯಮವು ನಿರ್ಭೀತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಸಲುವಾಗಿ ಕಾರ್ಪೊರೇಟ್ ವಲಯದಲ್ಲಿ ಸರ್ಕಾರ ಹಲವಾರು ಕಾನೂನುಗಳನ್ನು ಸರಳೀಕರಣಗೊಳಿಸಿದೆ ಎಂದು ಪ್ರಧಾನಿ ಹೇಳಿದರು.

“ಕಂಪನಿ ಕಾಯ್ದೆಯಲ್ಲಿ ಹಲವಾರು ನಿಬಂಧನೆಗಳು ಇದ್ದವು ಎಂಬುದು ನಿಮಗೆ ತಿಳಿದಿದೆ, ಅದರ ಪ್ರಕಾರ ಸಣ್ಣ ಪುಟ್ಟ ತಪ್ಪುಗಳನ್ನೂ ಸಹ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿತ್ತು. ನಮ್ಮ ಸರ್ಕಾರ ಈಗ ಅಂತಹ ಅನೇಕ ನಿಬಂಧನೆಗಳನ್ನು ಸಡಿಲಿಸಿದೆ. ನಾವು ಇನ್ನೂ ಅನೇಕ ನಿಬಂಧನೆಗಳನ್ನು ಸರಳಗೊಳಿಸಲು ಪ್ರಯತ್ನಿಸುತ್ತಿದ್ದೇವೆ.”

ದೇಶದಲ್ಲಿ ಈಗ ಕಾರ್ಪೊರೇಟ್ ತೆರಿಗೆ ಅತ್ಯಂತ ಕಡಿಮೆ ಇದೆ ಮತ್ತು ಇದು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.

“ಕಾರ್ಪೊರೇಟ್ ತೆರಿಗೆ ಈಗ ಅತ್ಯಂತ ಕಡಿಮೆ ಇದೆ, ಅಂದರೆ ಉದ್ಯಮದಿಂದ ಕಡಿಮೆ ಕಾರ್ಪೊರೇಟ್ ತೆರಿಗೆಯನ್ನು ತೆಗೆದುಕೊಳ್ಳುವ ಯಾವುದೇ ಸರ್ಕಾರವಿದ್ದರೆ, ಅದು ನಮ್ಮ ಸರ್ಕಾರ ಮಾತ್ರ” ಎಂದರು.

 

ಕಾರ್ಮಿಕ ಸುಧಾರಣೆಗಳ ಪ್ರಯತ್ನಗಳ ಬಗ್ಗೆಯೂ ಪ್ರಧಾನಿಯವರು ಮಾತನಾಡಿದರು.

 

ಬ್ಯಾಂಕಿಂಗ್ ಕ್ಷೇತ್ರವನ್ನು ಹೆಚ್ಚು ಪಾರದರ್ಶಕ ಮತ್ತು ಲಾಭದಾಯಕವಾಗುವಂತೆ ಮಾಡುವ ಸುಧಾರಣೆಗಳ ಬಗ್ಗೆಯೂ ಅವರು ಮಾತನಾಡಿದರು.

“ಇಂದು ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ 13 ಬ್ಯಾಂಕುಗಳು ಲಾಭದ ಹಾದಿಯಲ್ಲಿವೆ, ಅವುಗಳಲ್ಲಿ 6 ಬ್ಯಾಂಕುಗಳು ಪಿಸಿಎಯಿಂದ ಹೊರಗಿವೆ. ಬ್ಯಾಂಕುಗಳ ಏಕೀಕರಣದ ಪ್ರಕ್ರಿಯೆಯನ್ನು ಸಹ ನಾವು ತ್ವರಿತಗೊಳಿಸಿದ್ದೇವೆ. ಇಂದು ಬ್ಯಾಂಕುಗಳು ದೇಶಾದ್ಯಂತ ತಮ್ಮ ಜಾಲವನ್ನು ವಿಸ್ತರಿಸುತ್ತಿವೆ ಮತ್ತು ಜಾಗತಿಕ ಮನ್ನಣೆಯನ್ನು ಗಳಿಸುವ ದಿಕ್ಕಿನಲ್ಲಿವೆ” ಎಂದರು.

ಈ ಎಲ್ಲ ಸರ್ವಾಂಗೀಣ ಸಕಾರಾತ್ಮಕತೆಯೊಂದಿಗೆ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್ ಗುರಿಯತ್ತ ಸಾಗುತ್ತಿದೆ ಎಂದು ಅವರು ಹೇಳಿದರು. ಗುರಿ ಸಾಧಿಸಲು ನೆರವು ನೀಡುವ ಸಲುವಾಗಿ ಸರ್ಕಾರವು 100 ಲಕ್ಷ ಕೋಟಿ ರೂಪಾಯಿಗಳನ್ನು ಮೂಲಸೌಕರ್ಯ ಕ್ಷೇತ್ರದಲ್ಲಿ ಮತ್ತು ಗ್ರಾಮೀಣ ವಲಯದಲ್ಲಿ ಇನ್ನೂ 25 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ಹೇಳಿದರು.

 

 

 

 

 

 

 

 

 

Click here to read full text speech

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Big dip in terrorist incidents in Jammu and Kashmir in last two years, says government

Media Coverage

Big dip in terrorist incidents in Jammu and Kashmir in last two years, says government
...

Nm on the go

Always be the first to hear from the PM. Get the App Now!
...
Weekday weekend, sunshine or pouring rains - karyakartas throughout Delhi ensure maximum support for the #NaMoAppAbhiyaan
July 31, 2021
ಶೇರ್
 
Comments

Who is making the Booths across Delhi Sabse Mazboot? The younger generation joins the NaMo App bandwagon this weekend! Also, find out who made it to the #NaMoAppAbhiyaan hall of fame for connecting the highest number of members so far.