PM Modi extends New Year greetings to citizens across the Nation
People across India are celebrating the start of New Year. New Year greetings to everyone. May the year bring peace, joy & prosperity: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ದೇಶದಾದ್ಯಂತ ಹೊಸ ಸಂವತ್ಸರದ ಸಂಭ್ರಮಾಚರಣೆಯಲ್ಲಿರುವ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, ಹೊಸ ವರ್ಷವು ಎಲ್ಲರಿಗೂ ಶಾಂತಿ, ಸಂತಸ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.

“ದೇಶದಾದ್ಯಂತ ಜನರು ಹೊಸ ವರ್ಷದ ಆಚರಣೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷವು ಶಾಂತಿ, ಸಂತಸ ಮತ್ತು ಸಮೃದ್ಧಿ ತರಲಿ.

ಹೊಸವರ್ಷ ಮತ್ತು ನವರಾತ್ರಿಯ ಸಂದರ್ಭದಲ್ಲಿ ದೇಶವಾಸಿಗಳಿಗೆ ಕೋಟಿ ಕೋಟಿ ಶುಭಾಶಯಗಳು. ನವಸಂವತ್ಸರ ನಮ್ಮೆಲ್ಲರ ಜೀವನದಲ್ಲಿ ಸಮೃದ್ಧಿ, ಸಂತಸ ಮತ್ತು ಉತ್ತಮ ಆರೋಗ್ಯ ಹೊತ್ತು ತರಲಿ.

ಮಣಿಪುರದ ನನ್ನ ಸಹೋದರ ಸಹೋದರಿಯರಿಗೆ ಸಜಿಬು ಚೈರೋಬಾ ಶುಭಾಶಯಗಳು. ಹರ್ಷದಾಯಕ ಮತ್ತು ಸೌಹಾರ್ದಯುತ ವರ್ಷವಾಗಲಿ.

ನವರೆಹ್ ಆಚರಿಸುತ್ತಿರುವ ಎಲ್ಲರಿಗೂ ಈ ಪವಿತ್ರ ಸಂದರ್ಭದಲ್ಲಿ ನನ್ನ ಶುಭಾಶಯಗಳು. ಮುಂದಿನ ವರ್ಷ ಉತ್ತಮ ಆರೋಗ್ಯ ಹಾಗೂ ಧನಾತ್ಮಕವಾಗಿರಲಿ.

ಯುಗಾದಿಯನ್ನು ಆಚರಿಸುತ್ತಿರುವ ಎಲ್ಲರಿಗೂ ಶುಭಾಶಯಗಳು. ಮುಂಬರುವ ವರ್ಷವು ನಿಮ್ಮ ಎಲ್ಲ ಕೋರಿಕೆಗಳನ್ನೂ ಈಡೇರಿಸಲಿ ಮತ್ತು ಎಲ್ಲೆಡೆ ಸಂತಸ ಮನೆ ಮಾಡಲಿ.

ಸಿಂದಿ ಸಮುದಾಯದವರಿಗೆ ಚೆಟಿ ಚಾಂದ್ ಶುಭಾಶಯಗಳು. ಭಗವಾನ್ ಜುಲೇಲಾಲ್ ನಮ್ಮನ್ನು ಹರಸಲಿ ಮತ್ತು ಮುಂಬರುವ ವರ್ಷವು ಸ್ಮರಣೀಯ ಮತ್ತು ಸಂತಸಪೂರ್ಣವಾಗಿರಲಿ.

ಗುಡಿ ಪಡ್ವಾ ವಿಶೇಷ ಸಂದರ್ಭದಲ್ಲಿ ಮಹಾರಾಷ್ಟ್ರದ ಜನತೆಗೆ ಶುಭಾಶಯಗಳು. ಮುಂಬರುವ ವರ್ಷವು ಸಂತಸ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ತರಲಿ”, ಎಂದು ಪ್ರಧಾನಿ ಹೇಳಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PUSA's IARI enters QS university ranking in agriculture, forestry category

Media Coverage

PUSA's IARI enters QS university ranking in agriculture, forestry category
NM on the go

Nm on the go

Always be the first to hear from the PM. Get the App Now!
...
Chief Minister of Uttarakhand meets the Prime Minister
March 27, 2026

Chief Minister of Uttarakhand, Shri Pushkar Singh Dhami met with the Prime Minister Shri Narendra Modi, today, at New Delhi.

The Prime Minister posted on X;

Chief Minister of Uttarakhand, Shri @pushkardhami met Prime Minister @narendramodi.

@ukcmo