ಖ್ಯಾತ ಶಿಕ್ಷಣ ತಜ್ಞ ಬಾಬಾ ಇಕ್ಬಾಲ್ ಸಿಂಗ್ ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು :
“ಬಾಬಾ ಇಕ್ಬಾಲ್ ಸಿಂಗ್ ಜಿ ಅವರ ನಿಧನದಿಂದ ನೋವಾಗಿದೆ. ಯುವ ಸಮೂಹದಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಮಾಡಿದ ಪ್ರಯತ್ನಗಳಿಗಾಗಿ ಅವರು ಸ್ಮರಣೀಯರಾಗಿರುತ್ತಾರೆ. ಅವರು ಸಾಮಾಜಿಕ ಸಬಲೀಕರಣದ ಆಶಯಗಳನ್ನು ವೃದ್ಧಿಸಲು ಅವಿರತವಾಗಿ ಶ್ರಮಿಸಿದರು. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ. ಗುರುಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ.” ಎಂದು ಹೇಳಿದ್ದಾರೆ.
Pained by the passing away of Baba Iqbal Singh Ji. He will be remembered for his efforts to increase education among youngsters. He tirelessly worked towards furthering social empowerment. My thoughts are with his family and admirers in this sad hour. May Waheguru bless his soul.
— Narendra Modi (@narendramodi) January 29, 2022


