ಶೇರ್
 
Comments

ಭಾರತದ ಪರಿಧಿ ಹೊರಗೆ ನರೇಂದ್ರ ಮೋದಿ ಅವರ ಜನಮನ್ನಣೆ ಬೆಳೆಯಿತು. ಯುಎಸ್.ಎ, ಆಸ್ಟ್ರೇಲಿಯಾ, ಚೀನಾ, ಫ್ರಾನ್ಸ್, ಯುರೋಪ್, ಮಧ್ಯ ಪ್ರಾಚ್ಯದೇಶಗಳಲ್ಲೂ ಇವರ ಪ್ರಸಿದ್ದಿ ಬೆಳೆಯಿತು. ಇವರ ಕಾರ್ಯ ಚಟುವಟಿಕೆಗಳು, ವಿಭಿನ್ನ ರೀತಿಯಲ್ಲಿದ್ದವು. ವೈಬ್ರಂಟ್ ಗುಜರಾತ್ , ಪ್ರವಾಸಿ ಭಾರತೀಯ ದಿವಸ್ , ವಿದೇಶಿ ಭಾರತಿಯರನ್ನಲ್ಲದೆ, ಚೀನಾ, ಆಸ್ಟ್ರೇಲಿಯಾ, ಜಪಾನ್, ಮಾರಿಷಿಯಸ್, ಥಾಯಿಲ್ಯಾಂಡ್, ಉಗಾಂಡಾ ಮುಂತಾದ ರಾಷ್ಟ್ರಗಳನ್ನೂ ಆಕರ್ಷಿಸಿದವು.

Narendra Modi on the World Stage

2001ರಲ್ಲಿ ಅಧಿಕಾರ ಸ್ವೀಕರಿಸಿದ, ಒಂದು ತಿಂಗಳ ಒಳಗಾಗಿ, ಅಂದಿನ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ರಷ್ಯಾವನ್ನು ಭೇಟಿ ಮಾಡಿದರು

ದಕ್ಷಿಣ ಪೂರ್ವ ಏಷ್ಯಾ ಮತ್ತು ಭಾರತ ಸಂಬಂಧ ಇನ್ನೂ ಅದೇ ರೀತಿ ಮುಂದುವರಿದಿದ್ದು, ಅದರ ಖ್ಯಾತಿ ಇವರಿಗೆ ಸಲ್ಲುತ್ತದೆ. ಹಾಂಗ್ ಕೊಂಗ್ , ಮಲೇಷ್ಯಾ, ತೈವಾನ್ ಮತ್ತು ಥಾಯಿಲ್ಯಾಂಡ್ ದೇಶ ಸುತ್ತಿ ಹಲವು ಹೂಡಿಕೆದಾರರ ಮನಸೆಳೆದರು. ಗುಜರಾತಿ ಗಾಳಿಪಟ ಹಾರಾಟ ಮಹೋತ್ಸವ ಲೋಕಪ್ರಿಯಗೊಳಿಸಿದರು.

ದಕ್ಷಿಣ ಪೂರ್ವ ಏಷ್ಯಾ ಮತ್ತು ಭಾರತ ಸಂಬಂಧ ಇನ್ನೂ ಅದೇ ರೀತಿ ಮುಂದುವರಿದಿದ್ದು, ಅದರ ಖ್ಯಾತಿ ಇವರಿಗೆ ಸಲ್ಲುತ್ತದೆ. ಹಾಂಗ್ ಕೊಂಗ್ , ಮಲೇಷ್ಯಾ, ತೈವಾನ್ ಮತ್ತು ಥಾಯಿಲ್ಯಾಂಡ್ ದೇಶ ಸುತ್ತಿ ಹಲವು ಹೂಡಿಕೆದಾರರ ಮನಸೆಳೆದರು. ಗುಜರಾತಿ ಗಾಳಿಪಟ ಹಾರಾಟ ಮಹೋತ್ಸವ ಲೋಕಪ್ರಿಯಗೊಳಿಸಿದರು.

Narendra Modi on the World Stage


Shri Narendra Modi visiting research and development centre of Huawei Technologiesin Chengdu, during his visit to China in 2011.

ಚೀನಾದ ಚೆಂಗ್ಡು ನಲ್ಲಿರುವ ಬೃಹತ್ ಹುವಾಯಿ ಸಂಸ್ಥೆಯ ತಂತ್ರಜ್ಞಾನ ಅಭಿವೃದ್ದಿ ಕೇಂದ್ರವನ್ನು 2011ರಲ್ಲಿ ಭೇಟಿಯಾದರು. ವಿವಿಧ ವಾಣಿಜ್ಯ ಅವಕಾಶಗಳಿಗೆ ಕರಾರು ಏರ್ಪಡಿಸಿದರು. ಇವರು ಮೂರು ಭಾರಿ ಔಪಚಾರಿಕವಾಗಿ ಚೀನಾ ಭೇಟಿ ಮಾಡಿದ್ದರು.

international-in3
Shri Narendra Modi engaged in fruitful meetings with top leaders during his visit to Japan in July 2012

ಮೇ 26, 2014ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ನೆರೆಕೆರೆ ದೇಶಗಳ ಜೊತೆ ಸೇಹಸೌಹಾರ್ದತೆಹೆಚ್ಚಾಗ ಬೇಕು, ವಿದೇಶಿಗಳು ಹೆಚ್ಚುಹೆಚ್ಚು ಭಾರತಕ್ಕೆ ಬರಬೇಕು, ಅಧಿಕಸಂಖ್ಯೆಯಲ್ಲಿ ಹೂಡಿಕೆಗಾರರು ಭಾರತವನ್ನು ಬಂಡವಾಳಕ್ಕಾಗಿ ತಮ್ಮ ತಾಣವನ್ನಾಗಿಸಬೇಕು, ಇದಕ್ಕಾಗಿ ಅತ್ಯಾಕರ್ಷಕ ವಿದೇಶ ನೀತಿ ಜಾರಿಯಾಗಬೇಕು. ಇದು ಶ್ರೀ ನರೇಂದ್ರ ಮೋದಿಯವರ ದೀರ್ಘಕಾಲ ಅಗ್ರಹಕೂಡಾ ಆಗಿತ್ತು.

Narendra Modi on the World Stage
Shri Narendra Modi with Mr. Shinzo Abe.

ಸಾರಕ್ ಮೂಲಕ ನೆರೆಕೆರೆ ದೇಶಗಳನ್ನು ಆಹ್ವಾನಿಸಿ ಅತಿಥಿಗಳಾಗಿ ಸ್ವೀಕಾರನೀಡಿ ಸ್ನೇಹ ಗಳಿಸಿದರು. ವಿದೇಶ ಪ್ರವಾಸಮೂಲಕ ಅವರು ಅದನ್ನು ಸಧೃಡಗೊಳಿಸಿದರು.

ಐತಿಹಾಸಿಕ ಬಾಂಗ್ಲಾ ಗಡಿ ವಿವಾದಕ್ಕೆ 2015ರಲ್ಲಿ ಪರಿಹಾರ ತೋರಿದರು. ಇವರ ಮಾಲ್ದೀವ್ಸ್ ದ್ವಿಪಕ್ಷೀಯ ಸಂಬಂಧಕ್ಕೆ 2015 ಸಾಕ್ಷಿಯಾಯಿತು. ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನ ಇನ್ನೊಂದು ಐತಿಹಾಸಿಕ ಘಟನೆಗೆ ಮುಹೂರ್ತವಾಯಿತು. ಬ್ರಿಕ್ಸ್ ಬ್ಯಾಂಕು ಸೃಷ್ಠಿಯಾಯಿತು, ಅದರ ಅಧ್ಯಕ್ಷತೆ ಭಾರತದ ಪಾಲಾಯಿತು.

international-in5


Shri Narendra Modi with a high-level delegation of South Africa led by High Commissioner F.K. Morule in Jan, 2014

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಶ್ವ ಸಂಸ್ಥೆಯ ಭಾಷಣದಲ್ಲಿ ಮಾಡಿದ ಮನವಿಯನ್ನು, ವಿಶ್ವ ಸಂಸ್ಥೆಯ 177 ಸದಸ್ಯ ರಾಷ್ಟ್ರಗಳು ಅನುಮೋದಿಸಿದವು, ಅಂತರ್ ರಾಷ್ಟ್ರೀಯ ಯೋಗದಿನವಾಗಿ ಅಂಗೀಕರಿಸಿದವು, ವಿಶ್ವದಾಧ್ಯಂತ ಪ್ರತಿ ವರ್ಷ ಜೂನ್ 21ರಂದು ಆಚರಿಸಿ ಸಂಭ್ರಮಿಸಲು ಡಿಸೆಂಬರ್ 2014ರಂದು ಒಕ್ಕೊರಳಿಂದ ನಿಶ್ಚಯಿಸಲಾಯಿತು. ಇದು ಭಾರತದ ಪ್ರತಿಷ್ಠೆಗೆ ಸಿಕ್ಕ ಮತ್ತೊಂದು ಹೆಗ್ಗಳಿಕೆಯ ಗರಿಮೆ. 

international-in6

ಜಿ20 ರಾಷ್ಟ್ರಗಳ , 2014ರ ಆಸ್ಟ್ರೇಲಿಯ ಮತ್ತು 2105ರ ಟರ್ಕಿ ಸಭೆಯಲ್ಲಿ ಭಾರತ ಪಾಲ್ಗೊಂಡು ಸಂಬಂಧ ವೃದ್ಧಿಸಿತು. ಕಾಳಧನ ಸಮಸ್ಯೆಗಳ ಬಗ್ಗೆ ಪ್ರಧಾನ ಮಂತ್ರಿ ತಮ್ಮ ಭಾಷಣದಲ್ಲಿ ಪ್ರಭಲವಾಗಿ ಪ್ರತಿಪಾದಿಸಿದರು.

ಅಸೀನ್ ರಾಷ್ಟ್ರಗಳ ಸಮಾರಂಭಗಳಲ್ಲಿ, ಮೈನ್ಮಾರ್ (2104) ಮತ್ತು 2015( ಕೌಲಾ ಲಾಂಪುರ್) ಸಭೆಗಳಲ್ಲಿ, ಏಷ್ಯಾದ ಸಹರಾಷ್ಟ್ರಗಳ ಒಟನಾಟ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೆಚ್ಚಿಸಿಕೊಂಡರು. ಎನ್.ಡಿ.ಎ. ಸರಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಪ್ರಚಾರ,  ಯಶಸ್ಸು ಮಾತ್ರ ಇವರ ಭಾಷಣದ ಮುಖ್ಯ ಲಕ್ಷ್ಯವಾಗಿತ್ತು.

ಪ್ಯಾರಿಸ್ ನಲ್ಲಿ ನಡೆದ  ಕೋಪ್ 21ರ ಸಮಾರಂಭದಲ್ಲಿ ಜಗತ್ತನ ವಿವಿಧ ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಸಿರು ಜಗತ್ತನ್ನು ಮುಂದಿನ ಪೀಳಿಗೆಗೆ ನೀಡಲು, ಸೂರ್ಯಕಿರಣದಿಂದ ಸೌರಶಕ್ತಿ ಬಳಕೆಯ ಸದುಪಯೋಗಕ್ಕಾಗಿ ಅವಕಾಶ ಬಳಸಿಕೊಳ್ಳಲು , ವಾತಾವರಣ ಬದಲಾವಣೆಯ ಕುರಿತು ಎಲ್ಲರೂ ಒಟ್ಟಾಗಿ ನಿರ್ಣಯ ತೆಗೆದುಕೊಳ್ಳುವ ಸಾವಕಾಶ ಪಡೆದರು. ಅಧ್ಯಕ್ಷ ಹೊಲ್ಲಂಡೆ ಜೊತೆ ಪ್ರಧಾನಿ ಶ್ರೀ ಮೋದಿ ಅಂತರ್ ರಾಷ್ಟ್ರೀಯ ಸೌರಶಕ್ತಿ ಅಲಯನ್ಸ್ ನಿಯಮಾವಳಿ ಒಪ್ಪಂದ ಬಿಡುಗಡೆ ಮಾಡಿದರು. 2016ರಲ್ಲಿ, ಅಮೇರಿಕಾ ಅಧ್ಯಕ್ಷರ ಬರಾಕ್ ಒಬಾಮಾ ಅವರ ಆತಿಥ್ಯದಲ್ಲಿ ನಡೆದ ನ್ಯೂಕ್ಲಿಯರ್ ಸುರಕ್ಷಾ ಸಭೆಯಲ್ಲಿ ಪಾಲ್ಗೊಂಡು ನ್ಯೂಕ್ಲಿಯರ್ ಮತ್ತು ಶಾಂತಿಯ ಸಂದೇಶದ ಅಂಗವಾದರು.

ಭಾರತ ಮತ್ತು ಮೊರೀಷಿಯಸ್ ವಾಣಿಜ್ಯ, ವ್ಯವಹಾರಿಕ ಮತ್ತು ದ್ವಿಪಕ್ಷೀಯ ಒಪ್ಪಂದಗಳ ಸುಧಾರಣೆ ಹಿಂದೂ ಮಹಾಸಾಗರ ಹಾಗೂ ಶಾಂತಮಹಾಸಾಗರಗಳ ಇತರ ರಾಷ್ಟ್ರಗಳ ಜೊತೆ ತನ್ನ ವಿದೇಶಿ ನೀತಿಯ ಸುಧಾರಣೆಗೆ ಸಹಾಯ  ಮಾಡಿದವು.

2015ಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ಬೇಟಿ ಮಾಡಿದರು. ಅವರು ಉತ್ತಮ ಸಹಕಾರಕ್ಕಾಗಿ, ಯುರೋಪ್ ಮತ್ತು ಕೆನಡಾ ಭೇಟಿ ಮಾಡಿದರು. ನ್ಯೂಕ್ಲಿಯರ್ ಶಕ್ತಿ ಮತ್ತು ರಕ್ಷಣಾ ಕ್ಷೇತ್ರ ಸೇರಿದಂತೆ 17 ಒಪ್ಪಂದ ದಾಖಲೆಗಳಿಗೆ, ಸಹಿ ಹಾಕಿದರು. ಭಾರತದ ಪ್ರಧಾನ ಮಂತ್ರಿಯೊಬ್ಬರು 42 ವರ್ಷಗಳ ನಂತರ ಕೆನಡಾ ಸಂದರ್ಶಿಸಿದ ಹೆಗ್ಗಳಿಕೆ ಶ್ರೀ ನರೇಂದ್ರ ಮೋದಿ ಅವರದು.

international-in7
European nations are looking at Gujarat as an attractive destination for opportunities in every sector, be it economic, social or even cultural.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾ , ಮಂಗೋಲಿಯಾ , ಜಪಾನ್ ಭೇಟಿ ಬೌದ್ಧರ ರಾಷ್ಟ್ರಗಳಲ್ಲಿ ಭಾರತದ ಇನ್ನೊಂದು ಹೊಸ ಇತಿಹಾಸ ಬೆರೆಯಿತು. ಬೌದ್ಧರ ಕಲೆ ಸಂಸ್ಕೃತಿಯ ನಾಡಲ್ಲಿ ಸಾಂಸ್ಕೃತಿಕವಾಗಿ, ವ್ಯವಹಾರಿಕವಾಗಿ ಹೂಡಿಕೆಯ ಹೊಸೆ ಶಕೆ ಪ್ರಾರಂಭವಾಯಿತು.

2015ರಲ್ಲಿ, ಮಧ್ಯ ಏಷ್ಯಾ ಐದು ರಾಷ್ಟ್ರಗಳಾದ ಉಜೆಕಿಸ್ತಾನ್, ಕಜಖಸ್ತಾನ್ , ತುರ್ಕ್ಮೇನಿಸ್ತಾನ್ ಮತ್ತು ಕಿರ್ಜಿಸ್ತಾನ್ ಗಳನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂದರ್ಶಿಸಿದರು. ಈ ಪ್ರದೇಶದ ರಾಷ್ಟ್ರಗಳ ಪರಸ್ಪರ ಸಂಬಂಧ, ಅದರಲ್ಲೂ ಭಾರತದ ಪಾತ್ರ, ಇಂಧನ ಸಾಂಸ್ಕೃತಿಕವಾಗಿ ಆರ್ಥಿಕರೂಪದಲ್ಲಿ ಇನ್ನೂ ಬಲಿಷ್ಠವಾಗಲು ಸಹಕಾರಿಯಾಯಿತು.

international-in8

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಯು.ಎ.ಇ. , ಸೌದಿ ಅರೇಬಿಯಾ ಐತಿಹಾಸಿಕ ಬೇಟಿ, ಭಾರತಕ್ಕೆ ಪರಸ್ಪರ ಹಲವು ವ್ಯವಹಾರಿಕ ಒಪ್ಪಂದಗಳಿಗೆ ಪೂರಕವಾಯಿತು. ಯು.ಎ.ಇ. ಯಲ್ಲಿನ ಭಾರತೀಯ ಲೇಬರ್ ಕ್ಯಾಂಪ್ ಬೇಟಿಮಾಡಿ, ಅವರ ಜೊತೆ ತಿಂಡಿ ತಿಂದರು. ಈ ಮೂಲಕ ವಿದೇಶದಲ್ಲಿರುವ ಭಾರತೀಯ ಕಾರ್ಮಿಕ ವರ್ಗಕ್ಕೆ ನಿಮ್ಮ ಜೊತೆ ಭಾರತ ಸರಕಾರವಿದೆ ಎಂಬ ಸಂದೇಶ ತಿಳಿಸಿದರು.

ವಿದೇಶದ ದಿಗ್ಗಜ ರಾಷ್ಟ್ರಗಳ ನಾಯಕರನ್ನು ಭಾರತ ಆಹ್ವಾನಿಸಿ, ಸತ್ಕರಿಸಿತು. ಅವರುಗಳೊಂದಿಗೆ, ವ್ಯವಹಾರಿಕ ಚೌಕಟ್ಟು ಯಶಸ್ಸಾಯಿತು. ಅಮೇರಿಕಾ ಅಧ್ಯಕ್ಷ ಬರಾಕ್ ಓಬಾಮ, ಗಣರಾಜ್ಯೋತ್ಸವ ದಿನಾಚರಣೆಗೆ ಅಧಿಕೃತ ವಿಶೇಷ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜಗತ್ತನ್ನೇ ಬೆರಗುಗೊಳಿಸಿದರು.

ಯುಏಇ, ಸೌದಿ ಅರೇಬಿಯಾ ಮುಂತಾದ ಅರಬ್ ರಾಷ್ಟ್ರ ನಾಯಕರು, ಆಫ್ರಿಕಾ ದೇಶಗಳ, ಫಿಜಿ, ಚೀನಾ, ಅಮೇರಿಕಾ ದೇಶಗಳ ನಾಯಕರು ಭಾರತದತ್ತ ಮುಖಮಾಡಿದರು. ಪ್ರತಿಯೊಂದೂ ವಿದೇಶ ಪ್ರವಾಸದಲ್ಲೂ ಅವರು, ಪ್ರತಿಕ್ಷಣವನ್ನೂ ಮಾತುಕತೆ, ಚರ್ಚೆ, ಸಂವಾದ, ಭೇಟಿಗಳಿಗಾಗಿ ಪೂರ್ತಿಯಾಗಿ ಮೀಸಲಿಡುತ್ತಿದ್ದರು. ತಾಯಿನಾಡಿನಲ್ಲಿ, ಮೂಲಸೌಕರ್ಯ, ಕೌಶಲ್ಯ ಅಭಿವೃದ್ದಿ, ಇಂಧನ, ಉತ್ಪಾದನೆ, ಕೈಗಾರಿಕೆ , ಹೂಡಿಕೆ ಮುಂತಾದವುಗಳ ಬಗ್ಗೆ ಮಾತ್ರ ಅವರು ಸದಾ ಯೋಚಿಸುತ್ತಿದ್ದರು. ತಾಯನಾಡಿನ ಜನತೆಯ ಮುಖದಲ್ಲಿ ಸಂತಸದ ಬಾಳು ಕಾಣಲು ಅಗತ್ಯದ ಹೆಜ್ಜೆಗಳ ಬಗ್ಗೆ ಸದಾ ಚಿಂತಿಸುತ್ತಿದ್ದರು, ವಿದೇಶದ ಭಾರತೀಯ ಸಮುದಾಯ ಕೂಡಾ ಪ್ರಧಾನ ಮಂತ್ರಿ ಜೊತೆ ತಮ್ಮ ಚಿಂತನೆಯನ್ನು ಹಂಚಿಕೊಳ್ಳವಲ್ಲಿ , ಸಹಮತಸೂಚಿಸುವಲ್ಲಿ ಮತ್ತು ಪಾಲ್ಗೊಳ್ಳುವಲ್ಲಿ ಯಶಸ್ಸು ಕಂಡಿದೆ.

 

ಶ್ರೀ ನರೇಂದ್ರ ಮೋದಿ ಅವರು ಜೂನ್ 2013ರಲ್ಲಿ ಲ್ಯಾಟಿನ್ ಅಮೇರಿಕಾ ಮತ್ತು ಕರಿಬ್ಬೀಯನ್ ರಾಷ್ಟ್ರಗಳ ವಿಶೇಷ ತಂಡಗಳ ಜೊತೆ

ವಿಶೇಷ ವ್ಯಪಾರ ಕ್ಷೇತ್ರ ನಿರ್ಮಿಸಿದರು, ವಿಶೇಷ ವಾಣಿಜ್ಯ ವ್ಯಾಪಾರ ಒಪ್ಪಂದ ನೆರವೇರಿಸಿದರು.

international-in9
Shri Narendra Modi with a delegation of Latin American and Caribbean Countries (LAC) in June 2013

ಶ್ರೀ ನರೇಂದ್ರ ಮೋದಿ ಅವರು ಜೂನ್ 2013ರಲ್ಲಿ ಲ್ಯಾಟಿನ್ ಅಮೇರಿಕಾ ಮತ್ತು ಕರಿಬ್ಬೀಯನ್ ರಾಷ್ಟ್ರಗಳ ವಿಶೇಷ ತಂಡಗಳ ಜೊತೆ

ವಿಶೇಷ ವ್ಯಪಾರ ಕ್ಷೇತ್ರ ನಿರ್ಮಿಸಿದರು, ವಿಶೇಷ ವಾಣಿಜ್ಯ ವ್ಯಾಪಾರ ಒಪ್ಪಂದ ನೆರವೇರಿಸಿದರು.

20ನೇ ಮೇ, 2012ರಲ್ಲಿ ಅನಿವಾಸಿ ಭಾರತೀಯರ ಮಹಾಪೂರವನ್ನು ಉದ್ದೇಶಿಸಿ, ಅದೂ ಅಮೇರಿಕಾದ 12 ನಗರಗಳಲ್ಲಿ, ಗುಜರಾತ್ ದಿನದ ವೀಡಿಯೊ ಸಮಾವೇಶ – ಸಂವಾದ ನಡೆಸಿದರು. ಗುಜರಾತ್ ಮತ್ತು ದೇಶದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು. ವಿದೇಶದ ಭಾರತೀಯರ ಜೊತೆ ಸತತ ಸಂಬಂಧ ಇಟ್ಟುಕೊಂಡು ರಾಜ್ಯ ಮತ್ತು ದೇಶದ ಅಭಿವೃದ್ದಿಗಾಗಿ ಅದನ್ನು ಬೆಳೆಸಿದರು.

ನವದೆಹಲಿಯ ಪ್ರವಾಸ ಭಾರತೀಯ ದಿವಸ್ 2014

ಫೆಬ್ರವರಿ 13, 2014ರಂದು ಯು.ಎಸ್.ಎ ಯ ಭಾರತದ ರಾಯಭಾರಿ  ಮಿಸ್ ನ್ಯಾನ್ಸಿ ಪೊವೆಲ್ ಗಾಂಧಿನಗರಕ್ಕೆ ಬಂದಿದ್ದರು, ಶ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಅವರಿಬ್ಬರೂ ಸುದೀರ್ಘ ಕಾಲ ಚರ್ಚೆ ನಡೆಸಿದರು

ಮುಖ್ಯಂತ್ರಿ ಶ್ರ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು , ದೇಶದೊಳಗೆ ಮತ್ತು ಹೊರಗೆ ಪಡೆದ ಜನಮನ್ನಣೆಯ ಹಲವು ಉದಾಹರಣೆಗಳನ್ನು ಅವರು ಮೋದಿ ಜೊತೆ ಹಂಚಿಕೊಂಡರು. ವ್ಯಾಪಾರಿಗಳಿಂದ  ಹಿಡಿದು ಜನಸಾಮಾನ್ಯರಲ್ಲೂ ಜಾಗತಿಕ ಮಟ್ಟದ ಜನನಾಯಕನಾಗಿ ಗುರುತಿಸಲ್ಪಟ್ಟ ಮೋದಿ, ಗುಜರಾತನ್ನು ಭಾರತ ಅಭಿವೃದ್ದಿ ಪಥದ ಯಂತ್ರವೆಂಬಂತೆ ಮುನ್ನಡೆಸಿದರು.

 

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Viral Video: Kid Dressed As Narendra Modi Narrates A to Z of Prime Minister’s Work

Media Coverage

Viral Video: Kid Dressed As Narendra Modi Narrates A to Z of Prime Minister’s Work
...

Nm on the go

Always be the first to hear from the PM. Get the App Now!
...
ಶೇರ್
 
Comments

5 ನೇ ಮೇ 2017 ರಂದು, ದಕ್ಷಿಣ ಏಷ್ಯಾದ ಸಹಕಾರವು ಬಲವಾದ ಪ್ರಚೋದನೆಯನ್ನು ಪಡೆದ ದಿನ , ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದಿನ, ಎರಡು ವರ್ಷಗಳ ಹಿಂದೆ ಭಾರತ ಮಾಡಿದ ಬದ್ಧತೆಯನ್ನು ಪೂರೈಸುವ ದಿನ.

ದಕ್ಷಿಣ ಏಷ್ಯಾ ಉಪಗ್ರಹದೊಂದಿಗೆ, ದಕ್ಷಿಣ ಏಷ್ಯಾದ ರಾಷ್ಟ್ರಗಳು ತಮ್ಮ ಸಹಕಾರವನ್ನು ಬ್ಯಾಹ್ಯಾಕಾಶಕ್ಕೆ ವಿಸ್ತರಿಸಿದೆ!

ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗಲು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಉಪಗ್ರಹವನ್ನು ಸಾಧಿಸುವ ಸಾಮರ್ಥ್ಯದ ಸಂಪೂರ್ಣ ಚಿತ್ರವನ್ನು ನೀಡಿದರು.

ಉಪಗ್ರಹವು ಉತ್ತಮ ಆಡಳಿತ, ಪರಿಣಾಮಕಾರಿ ಸಂವಹನ, ಉತ್ತಮ ಬ್ಯಾಂಕಿಂಗ್ ಮತ್ತು ದೂರದ ಪ್ರದೇಶಗಳಲ್ಲಿ ಶಿಕ್ಷಣ, ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ಟೆಲಿ-ಮೆಡಿಸಿನ್ ಮೂಲಕ ಜನರನ್ನು ಸಂಪರ್ಕಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

"ನಾವು  ಒಟ್ಟಿಗೆ ಸೇರ್ಪಡೆಗೊಂಡು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯ ಫಲವನ್ನು ಹಂಚಿಕೊಂಡಾಗ, ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ನಾವು ವೇಗಗೊಳಿಸಬಹುದು" ಎಂದು ಮೋದಿ ಸರಿಯಾಗಿ ಹೇಳಿದರು .