2014 ಕ್ಕಿಂತ ಮುಂಚೀನ 10-12 ವರ್ಷಗಳಲ್ಲಿ 200 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗಕ್ಕೆ ಹೋಲಿಸಿದರೆ, ಕಳೆದ 6 ವರ್ಷಗಳಲ್ಲಿ 400 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗವನ್ನು ಕಾರ್ಯಗತಗೊಳಿಸಲಾಗಿದೆ ಎಂದು ಅವರು ಹೇಳಿದರು. 27 ನಗರಗಳಲ್ಲಿ 1000 ಕಿಲೋಮೀಟರ್ ಹೊಸ ಮಾರ್ಗಗಳಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.
ಈ ಮೊದಲು ಸಮಗ್ರ ಆಧುನಿಕ ಚಿಂತನೆಯ ಅನುಪಸ್ಥಿತಿಯ ಬಗ್ಗೆ ಪ್ರಧಾನಿ ವಿಷಾದಿಸಿದರು. ಮೆಟ್ರೊಗೆ ಯಾವುದೇ ರಾಷ್ಟ್ರೀಯ ನೀತಿ ಇರಲಿಲ್ಲ. ಪರಿಣಾಮವಾಗಿ, ವಿವಿಧ ನಗರಗಳಲ್ಲಿ ಮೆಟ್ರೊದ ತಂತ್ರ ಮತ್ತು ವ್ಯವಸ್ಥೆಗಳಲ್ಲಿ ಯಾವುದೇ ಏಕರೂಪತೆಯಿಲ್ಲ. ಎರಡನೇ ಖಾಲಿಭಾಗ ನಗರದ ಉಳಿದ ಸಾರಿಗೆ ವ್ಯವಸ್ಥೆಯೊಂದಿಗೆ ಸಂಪರ್ಕದ ಅನುಪಸ್ಥಿತಿಯಾಗಿದೆ. ಸಾರಿಗೆ ವಿಧಾನಗಳಲ್ಲಿ ಯಾವುದೇ ಪೂರಕತೆ ಮತ್ತು ಸಂಪರ್ಕ ಇರಲಿಲ್ಲ. ಇಂದು ಈ ನಗರಗಳಲ್ಲಿ ಸಾರಿಗೆಯನ್ನು ಸಮಗ್ರ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ, ಇದರಲ್ಲಿ ಮೆಟ್ರೋ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ ಆದರೆ ಸಾಮೂಹಿಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಈ ಏಕೀಕರಣವನ್ನು ಇತ್ತೀಚೆಗೆ ಪ್ರಾರಂಭಿಸಲಾದ 'ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್' ಮತ್ತಷ್ಟು ಉತ್ತೇಜಿಸಲಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.