ಕ್ರಮ ಸಂಖ್ಯೆ

ಫಲಿತಾಂಶ

ವಿವರಣೆ
 

1.

ಆರ್ಥಿಕ ಭದ್ರತೆ ಕುರಿತ ಭಾರತ-ಜಪಾನ್‌ ಜಂಟಿ ಘೋಷಣೆ
 

ಸೆಮಿಕಂಡಕ್ಟರ್‌ಗಳು, ನಿರ್ಣಾಯಕ ಖನಿಜಗಳು, ಕೃತಕ ಬುದ್ಧಿಮತ್ತೆ, ಶುದ್ಧ ಇಂಧನ ಮತ್ತು ಔಷಧಗಳು ಸೇರಿದಂತೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಜಂಟಿ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಯೋಜನೆ ಆಧಾರಿತ ಸಹಯೋಗವನ್ನು ಉತ್ತೇಜಿಸುತ್ತದೆ. ಭಾರತ-ಜಪಾನ್‌ ಫ್ಯಾಕ್ಟ್ ಶೀಟ್‌ 2.0 ಈ ನಿರ್ಣಾಯಕ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಭಾರತ-ಜಪಾನ್‌ ಜಿ2ಜಿ ಮತ್ತು ಬಿ 2 ಬಿ ಕಾರ್ಯಕ್ರಮಗಳನ್ನು ಸೆರೆಹಿಡಿಯುತ್ತದೆ.

2.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಸಹಕಾರ ಕುರಿತು ಭಾರತ-ಜಪಾನ್‌ ಜಂಟಿ ಹೇಳಿಕೆ
 

ಭಾರತ-ಜಪಾನ್‌ ಬಾಂಧವ್ಯವನ್ನು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿವ್ಯೂಹಾತ್ಮಕ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆಗೆ ಏರಿಸುತ್ತದೆ. ಭಾರತ-ಜಪಾನ್‌ ಕೃತಕ ಬುದ್ಧಿಮತ್ತೆ ಉಪಕ್ರಮವನ್ನು ನಿರ್ಮಿಸಿ, ಜಂಟಿ ಹೇಳಿಕೆಯು ಸುರಕ್ಷಿತ, ಸುಭದ್ರ, ವಿಶ್ವಾಸಾರ್ಹ, ಅಂತರ್ಗತ ಮತ್ತು ಮಾನವ ಕೇಂದ್ರಿತ ಕೃತಕ ಬುದ್ಧಿಮತ್ತೆಯ ಹಂಚಿಕೆಯ ದೃಷ್ಟಿಕೋನದ ಅನ್ವೇಷಣೆಯಲ್ಲಿಇಡೀ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸ್ಟ್ಯಾಕ್‌ನಾದ್ಯಂತ ಹೆಚ್ಚಿನ ಸಹಕಾರಕ್ಕಾಗಿ ಮಾರ್ಗಸೂಚಿಯನ್ನು ಒದಗಿಸುತ್ತದೆ.
 

3.

ಇಂಧನ ಸ್ಥಿತಿಸ್ಥಾಪಕತ್ವ ಕುರಿತ ಜಂಟಿ ಹೇಳಿಕೆ(ಎಂ ಪಿಎನ್‌ಜಿ ಮತ್ತು ಎಂಇಟಿಐ ಜಪಾನ್‌ ನಡುವೆ)
 

ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವ್ಯೂಹಾತ್ಮಕ ದಾಸ್ತಾನು ಮತ್ತು ಮೀಸಲು ಕಾರ್ಯವಿಧಾನಗಳಲ್ಲಿ ಸಹಕಾರವನ್ನು ಬಲಪಡಿಸುತ್ತದೆ. ಸಾಗರ ಇಂಧನ ಸಾರಿಗೆ ಮೌಲ್ಯ ಸರಪಳಿಯಾದ್ಯಂತ ಜಂಟಿ ಹೂಡಿಕೆಗಳಲ್ಲಿಸಹಯೋಗವನ್ನು ಉತ್ತೇಜಿಸುತ್ತದೆ.
 

4.

ಭಾರತ-ಜಪಾನ್‌ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವ ಆಚರಣೆ

ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವಾರ್ಷಿಕೋತ್ಸವವಾದ 2027 ಅನ್ನು ಭಾರತ-ಜಪಾನ್‌ ಹಂಚಿಕೆಯ ದಿಗಂತದ ವರ್ಷವಾಗಿ ಆಚರಿಸಲು ಸ್ಮರಣಾರ್ಥ ಕಾರ್ಯಕ್ರಮಗಳ ಸರಣಿಯನ್ನು ವಿವರಿಸಿದರು

5.

ಬೆಳವಣಿಗೆಗಾಗಿ ಭಾರತ-ಜಪಾನ್‌ ಸಹಕಾರಿ ಜೈವಿಕ ಅನಿಲ (ಸಿಬಿಜಿ) ಉಪಕ್ರಮಕ್ಕಾಗಿ ಸಹಕಾರ ಒಪ್ಪಂದ
 

ಭಾರತದಾದ್ಯಂತ 1,000 ಜೈವಿಕ ಅನಿಲ ಮತ್ತು ಸಾವಯವ ರಸಗೊಬ್ಬರ ಘಟಕಗಳನ್ನು ಸ್ಥಾಪಿಸುವ ಗುರಿಯತ್ತ ಸಹಕಾರವನ್ನು ಉತ್ತೇಜಿಸುತ್ತದೆ, ಡೈರಿ ಸಹಕಾರಿಗಳ ವ್ಯಾಪಕ ಜಾಲವನ್ನು ಬಳಸಿಕೊಳ್ಳುತ್ತದೆ.

6.

ಬ್ಯಾಟರಿ ಕ್ಷೇತ್ರದಲ್ಲಿಸಹಕಾರ ಕುರಿತ ತಿಳಿವಳಿಕೆ ಒಪ್ಪಂದ

ಬ್ಯಾಟರಿ ಸಂಬಂಧಿತ ಯೋಜನೆಗಳಲ್ಲಿ ಸಹಕಾರವನ್ನು ಉತ್ತೇಜಿಸುತ್ತದೆ ಮತ್ತು ವಿಶ್ವಾಸಾರ್ಹ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಬ್ಯಾಟರಿ ಪೂರೈಕೆ ಸರಪಳಿಯನ್ನು ನಿರ್ಮಿಸುವ ಗುರಿಯೊಂದಿಗೆ ವ್ಯಾಪಾರ ಅವಕಾಶಗಳನ್ನು ವಿಸ್ತರಿಸುತ್ತದೆ.

7.

ಔಷಧ ಮತ್ತು ವೈದ್ಯಕೀಯ ಸಾಧನಗಳ ಕ್ಷೇತ್ರದಲ್ಲಿ ಸಹಕಾರ ಒಪ್ಪಂದ

ಸಕ್ರಿಯ ಔಷಧೀಯ ಪದಾರ್ಥಗಳು (ಎಪಿಐಗಳು) ಮತ್ತು ಪ್ರಮುಖ ಆರಂಭಿಕ ಸಾಮಗ್ರಿಗಳು (ಕೆಎಸ್‌ಎಂಗಳು) ಸೇರಿದಂತೆ ದ್ವಿಪಕ್ಷೀಯ ಹೂಡಿಕೆ ಮತ್ತು ವ್ಯಾಪಾರ ಸಂಪರ್ಕ, ತಾಂತ್ರಿಕ ಸಹಯೋಗ ಮತ್ತು ಉದ್ಯಮ-ಶೈಕ್ಷಣಿಕ ಸಹಯೋಗದ ಮೂಲಕ ಔಷಧ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ.

8.

ಭೂವಿಜ್ಞಾನ ಮತ್ತು ಖನಿಜ ಪರಿಶೋಧನೆ ಕ್ಷೇತ್ರದಲ್ಲಿ ಸಹಕಾರ ಒಪ್ಪಂದ

ತಾಂತ್ರಿಕ ಪರಿಣತಿಯ ವಿನಿಮಯದ ಮೂಲಕ ನಿರ್ಣಾಯಕ ಖನಿಜಗಳ ಪರಿಶೋಧನೆಯಲ್ಲಿ ಸಹಕಾರವನ್ನು ಬಲಪಡಿಸುತ್ತದೆ.
 

9.

ಇಂಡಿಯಾ ಎಐ ಮಿಷನ್‌ ಮತ್ತು ಜಪಾನಿನ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ (ಎಂಇಟಿಐ) ನಡುವೆ ಸಹಕಾರ ಒಪ್ಪಂದ
 

ಭಾರತೀಯ ಕೃತಕ ಬುದ್ಧಿಮತ್ತೆ ಮಿಷನ್‌ ಮತ್ತು ಜಪಾನ್‌ನ ಜೆನಿಯಾಕ್‌ ಉಪಕ್ರಮದ ನಡುವೆ ಸಾಂಸ್ಥಿಕ ಸಹಕಾರವನ್ನು ಉತ್ತೇಜಿಸುತ್ತದೆ - ಬಿ2ಬಿ ಹೊಂದಾಣಿಕೆ, ಎಐ ನೀತಿಗಳು ಮತ್ತು ಸವಾಲುಗಳ ಕುರಿತು ವೆಬಿನಾರ್ಗಳು ಮತ್ತು ಕಂಪ್ಯೂಟಿಂಗ್‌ ಸಂಪನ್ಮೂಲಗಳ ಪ್ರವೇಶದ ಮೂಲಕ ಜಂಟಿ ಯೋಜನೆಗಳಿಗೆ ಬೆಂಬಲ

10.

ಮುಂದಿನ ಪೀಳಿಗೆಯ ಸಂಚಾರ ಪಾಲುದಾರಿಕೆ (ಎನ್‌.ಜಿ.ಎಂ.ಪಿ.) ಕುರಿತ ಸಹಕಾರ ಒಪ್ಪಂದ

2025ರ ಆಗಸ್ಟ್‌ನಲ್ಲಿ ನಡೆದ 15ನೇ ವಾರ್ಷಿಕ ಶೃಂಗಸಭೆಯಲ್ಲಿಘೋಷಿಸಲಾದ ಮುಂದಿನ ಪೀಳಿಗೆಯ ಮೊಬಿಲಿಟಿ ಪಾಟ್ರ್ನರ್‌ಷಿಪ್‌ (ಎನ್‌ಜಿಎಂಪಿ) ಅನ್ನು ಕಾರ್ಯಗತಗೊಳಿಸಲು ಒಂದು ಚೌಕಟ್ಟನ್ನು ಸ್ಥಾಪಿಸುತ್ತದೆ. ರೈಲು, ವಾಹನ ಮತ್ತು ರಸ್ತೆ ಮೂಲಸೌಕರ್ಯ, ವಾಯುಯಾನ, ಹಡಗು ನಿರ್ಮಾಣ ಮತ್ತು ಬಂದರುಗಳು, ಲಾಜಿಸ್ಟಿಕ್ಸ್‌ ಮತ್ತು ನಗರಾಭಿವೃದ್ಧಿ ಸೇರಿದಂತೆ ಸಾರಿಗೆ ಕ್ಷೇತ್ರಗಳಲ್ಲಿ ಖಾಸಗಿ ವಲಯದ ಸಹಕಾರ ಮತ್ತು ಹೂಡಿಕೆಯನ್ನು ಎನ್‌ಜಿಎಂಪಿ ವೇಗಗೊಳಿಸುತ್ತದೆ, ಭಾರತವನ್ನು ಮೂರನೇ ದೇಶಗಳಿಗೆ ‘ಮೇಕ್‌ ಇನ್‌ ಇಂಡಿಯಾ ಫಾರ್‌ದಿ ವರ್ಲ್ಡ್‌’ ರಫ್ತು ಕೇಂದ್ರವಾಗಿ ಇರಿಸುತ್ತದೆ.
 

11.

ಭಾರತದ ಸೆಲ್ಯುಲಾರ್‌ ಮತ್ತು ಮಾಲಿಕ್ಯುಲರ್‌ ಪ್ಲಾಟ್‌ಫಾರ್ಮ್ಸ್‌ ಕೇಂದ್ರ (ಸಿ-ಕ್ಯಾಂಪ್‌) ಮತ್ತು ಜಪಾನಿನ ರಿಕೆನ್‌ ನಡುವೆ ತಿಳಿವಳಿಕೆ ಒಪ್ಪಂದ

 

ಆರೋಗ್ಯ ರಕ್ಷಣೆ, ಕೃಷಿ ಮತ್ತು ಪರಿಸರವನ್ನು ಒಳಗೊಂಡ ಆಳವಾದ ತಂತ್ರಜ್ಞಾನ ಮತ್ತು ಜೀವ ವಿಜ್ಞಾನಗಳಲ್ಲಿ ಶೈಕ್ಷಣಿಕ, ಟ್ರಾನ್ಸ್‌ಲೇಷನಲ್‌ ಸಂಶೋಧನೆ ಮತ್ತು ನವೋದ್ಯಮ ಆಧಾರಿತ ನಾವೀನ್ಯತೆಗಾಗಿ ಚೌಕಟ್ಟನ್ನು ಸ್ಥಾಪಿಸುತ್ತದೆ.

12.

ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಧಿ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಮತ್ತು ಜಪಾನಿನ ಆರ್‌.ಐ.ಕೆ.ಇ.ಎನ್‌. ನಡುವೆ ತಿಳಿವಳಿಕೆ ಒಪ್ಪಂದ

ಎರಡು ಪ್ರಮುಖ ಸಂಶೋಧನಾ ಸಂಸ್ಥೆಗಳ ನಡುವೆ ಮೂಲಭೂತ ಜೈವಿಕ ಮತ್ತು ನರವಿಜ್ಞಾನ ಸಂಶೋಧನೆಯ ಸಹಕಾರಕ್ಕಾಗಿ ಚೌಕಟ್ಟು ರೂಪಿಸುತ್ತದೆ

13.

ಐಐಟಿ ಬಾಂಬೆ, ಭಾರತ್‌ ಜೆನ್‌ ಟೆಕ್ನಾಲಜಿ ಫೌಂಡೇಶನ್‌ ಮತ್ತು ಜಪಾನಿನ ನ್ಯಾಷನಲ್‌ ಇನಾಧಿರ್ಮ್‌ಯಾಟಿಕ್ಸ್‌ ಇನ್‌ಸ್ಟಿಟ್ಯೂಟ್‌ ನಡುವೆ ತಿಳಿವಳಿಕೆ ಒಪ್ಪಂದ

ಜಂಟಿ ಸಂಶೋಧನಾ ವಿನಿಮಯದ ಮೂಲಕ ವರ್ಧಿತ ವೈಜ್ಞಾನಿಕ ತಾರ್ಕಿಕತೆಗಾಗಿ ಎಲ್‌ಎಲ್‌ಎಂಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿ, ದೊಡ್ಡ ಭಾಷಾ ಮಾದರಿಗಳ (ಎಲ್‌ಎಲ್‌ಎಂಗಳು) ಮೇಲೆ ಮತ್ತಷ್ಟು ಸಹಯೋಗ

14.

ಸರ್ವಮ್‌ ಎಐ ಮತ್ತು ಎಲ್‌ಎಲ್‌ಎಂ ಅಭಿವೃದ್ಧಿ ಕುರಿತ ಆದ್ಯತೆಯ ನೆಟ್ವರ್ಕ್‌ ನಡುವೆ ತಿಳಿವಳಿಕೆ ಒಪ್ಪಂದ

ಫೌಂಡೇಶನ್‌ ಮಾದರಿಗಳನ್ನು ಒಳಗೊಂಡಂತೆ ಪೂರ್ಣ ಎಐ ತಂತ್ರಜ್ಞಾನ ಸ್ಟ್ಯಾಕ್‌ನಾದ್ಯಂತ ಸಹಕಾರಕ್ಕಾಗಿ ಚೌಕಟ್ಟನ್ನು ರಚಿಸುತ್ತದೆ.

15.

ರಾಷ್ಟ್ರೀಯ ಅಂತರ್ಜಾಲ ವಿನಿಮಯ ಕೇಂದ್ರ (ಎನ್‌.ಐ.ಎಕ್ಸ್‌.ಐ.) ಮತ್ತು ಜಪಾನ್‌ ನೆಟ್ವರ್ಕ್‌ ಮಾಹಿತಿ ಕೇಂದ್ರ (ಜೆ.ಪಿ.ಎನ್‌.ಐ.ಸಿ.) ನಡುವೆ ತಿಳಿವಳಿಕೆ ಒಪ್ಪಂದ
 

ರಾಷ್ಟ್ರೀಯ ಅಂತರ್ಜಾಲ ನೋಂದಾವಣೆ ಕಾರ್ಯಾಚರಣೆಗಳು, ಐಪಿವಿ6 ಅಳವಡಿಕೆ, ಅಂತರ್ಜಾಲ ಭದ್ರತೆ ಸುಧಾರಣೆಗಳು, ಸಾಮರ್ಥ್ಯ ವೃದ್ಧಿ, ವಿದ್ಯಾರ್ಥಿ/ವೃತ್ತಿಪರ ವಿನಿಮಯ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ವೇದಿಕೆಗಳಲ್ಲಿಅಂತರ್ಜಾಲ ಆಡಳಿತದ ಬಗ್ಗೆ ಅಭಿಪ್ರಾಯಗಳ ವಿನಿಮಯದಲ್ಲಿ ಸಹಕಾರವನ್ನು ಉತ್ತೇಜಿಸುತ್ತದೆ.
 

16.

ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರ (ಐ.ಎಫ್‌.ಎಸ್‌.ಸಿ.ಎ.) ಮತ್ತು ಜಪಾನಿನ ಹಣಕಾಸು ಸೇವೆಗಳ ಏಜೆನ್ಸಿ (ಜೆ.ಎಫ್‌.ಎಸ್‌.ಎ.) ನಡುವೆ ಪತ್ರಗಳ ವಿನಿಮಯ
 

ಹಣಕಾಸು ಸೇವೆಗಳ ಅಭಿವೃದ್ಧಿ, ನಿಯಂತ್ರಣ ಮತ್ತು ಮೇಲ್ವಿಚಾರಣೆ ಮತ್ತು ಹಣಕಾಸು ಮಾರುಕಟ್ಟೆಯ ಪ್ರವೃತ್ತಿಗಳು ಮತ್ತು ಉತ್ತಮ ರೂಢಿಗಳ ಮಾಹಿತಿ ವಿನಿಮಯ, ವಿಶೇಷವಾಗಿ ಫಿನ್‌ಟೆಕ್‌ ಮತ್ತು ರೆಗ್ಟೆಕ್‌ ನಲ್ಲಿನ ಸಹಕಾರಕ್ಕಾಗಿ ಚೌಕಟ್ಟನ್ನು ಸ್ಥಾಪಿಸುತ್ತದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Give mothers, sisters their due rights’: PM Modi pushes for women's reservation from the ramparts of Red Fort

Media Coverage

‘Give mothers, sisters their due rights’: PM Modi pushes for women's reservation from the ramparts of Red Fort
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಆಗಸ್ಟ್ 2026
August 16, 2026

Aatmanirbhar Ambitions Meet Global Alliances: The Modi Doctrine in Action