ಶೇರ್
 
Comments

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರಕಾರ ಕೈಗೊಂಡ ಕಾರ್ಯ ಚಟುವಟಿಕೆಗಳು, ಯೋಜನೆಗಳು, ಹಾಗೂ ನೀತಿಗಳನ್ನು ವಿಶ್ವದ ಅನೇಕ ಸಂಸ್ಥೆಗಳು ಬದಲಾವಣೆಯ ಪ್ರಕ್ರಿಯೆಯೆಂದು ಗುರುತಿಸಿ ಪ್ರಶಂಸಿಸಿವೆ.

 2015-16ರಲ್ಲಿ 6.4% ಅಭಿವೃದ್ದಿಯಾಗಿದ್ದು ಇದು 2014-15 ರ ಸಾಲಿನಲ್ಲಿದ್ದ ವಾರ್ಷಿಕ 5.6%ಕ್ಕಿಂತ ಬಹಳ ಅಧಿಕವಾಗಿದೆ . ಇದನ್ನು ವಿಶ್ವ ಸಂಸ್ಥೆ ಮೋದಿ ಡೆವಿಡೆಂಡ್ ( ಲಾಭಾಂಶ ) ವೆಂದು ಗುರುತಿಸಿ ಪ್ರಶಂಸಿಸಿತು.ವಿಶ್ವ ಸಂಸ್ಥೆಯ ಅಧ್ಯಕ್ಷರು ಭಾರತಕ್ಕೊಬ್ಬ ಯೋಚನಾಬದ್ಧ ಚಿಂತನಾರ್ಹ ಜನನಾಯಕ ಸಿಕ್ಕಿದ್ದಾನೆಂದು ಪ್ರಶಂಸಿಸಿದರು. ಇವರ ಕಾರ್ಯ ವೈಖರಿ ಅತ್ಯಂತ ವಿಶೇಷವಾಗಿದ್ದು, ಇದಕ್ಕೆ ಜನ್ ಧನ್ ಯೋಜನೆ ಮೂಲಕ ಜನಸಾಮಾನ್ಯನರನ್ನೆಲ್ಲ ಆರ್ಥಿಕ ವ್ಯವಸ್ಥೆಹೆ ತರಲು ಮಾಡಿದ ಪ್ರಯತ್ನವೇ ಸಾಕ್ಷಿ ಎಂದರು

 

ಐ.ಎಮ್. ಎಫ್. ದೇಶದ ಆರ್ಥಿಕ ಬದಲಾವಣೆಯ ಪರ್ವವನ್ನು ಅತ್ಯುತ್ತಮ ರೀತಿಯ ಸುಧಾರಣಾ ವ್ಯವಸ್ಥೆ ಎಂದು ತಿಳಿಸಿದೆ. ಇದು ಬಂಡವಾಳ ಹೂಡಿಕೆದಾರರ ವಿಶ್ವಾಸ ಬೆಳೆಸಲಿದೆ. ಎಂದು ತನ್ನ ವರದಿಯಲ್ಲಿ ತಿಳಿಸಿದೆ

ವಿಶ್ವದ ಇನ್ನೊಂದು ದಿಗ್ಗಜ ಆರ್ಥಿಕ ಸಂಸ್ಥೆ ಓಇಸಿಡಿ (Organisation for Economic Co-operation and Development -OECD) ಅತ್ಯಂತ ಧೃಡ ಭಲಿಷ್ಠ ಹಾಗೂ ಸಮರ್ಥ ಆರ್ಥಿಕತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ದೇಶದಲ್ಲಿ ನಾವು ಕಾಣ ಬಹುದು ಎಂದು ತಿಳಿಸಿದೆ.

ಜಾಗತಿಕ ಸಂಸ್ಥೆ ಮೂಡಿ, ಸಕಾರಾತ್ಮಕ ದರ ವನ್ನು ಸಬಲತೆಯ ಲಕ್ಷಣವಾಗಿ ಸೂಚಿಸಿದೆ .ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸುತ್ತದೆ. ಇದರ ಶ್ರೇಯಸ್ಸು ಮೋದಿ ಅವರ ತಂಡಕ್ಕೆ ಹೋಗುತ್ತದೆ.

ಉತ್ತಮ ಸ್ಪಂದನ ವಿಶ್ವ ಸಂಸ್ಥೆಯಿಂದ ಬಂತು. ಜಾಗತಿಕ ಆರ್ಥಿಕ ಪರಿಸ್ಥಿತಿಯ ಅರ್ಧ ವಾರ್ಷಿಕ ವರದಿಯಲ್ಲಿ ಭಾರತದ ಪ್ರಗತಿಯನ್ನು ಈ ವಾರ್ಷಿಕ ಸಾಲಿಗೆ 7% ಹೆಚ್ಚಳ ಗುರುತಿಸಿದ್ದು, ಮುಂಬರುವ ವರ್ಷಕ್ಕೆ ಇದು ಪೂರಕವಾಗಲಿದೆ.

ಸುಧಾರಣಾವಾದಿ ಪ್ರಧಾನ ಮಂತ್ರಿ ತ್ವರಿತಗತಿಯಲ್ಲಿ ಬದಲಾವಣೆ ತರುವ ಹುಮ್ಮಸ್ಸು ಹೊಂದಿದ್ದಾರೆ, ಇದನ್ನು ಜಗತ್ತೇ ಆಕರ್ಷಿಸಿದೆ. ಇದು ದೇಶದ ಆರ್ಥಿಕತೆಗೊಂದು ಆಶಾದಾಯಕ ಹೊಸ ದಿಗಂತವಾಗಿ ಬದಲಾಗಲಿದೆ.

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
KT EXCLUSIVE: Even the sky is not the limit for UAE-India ties, says Indian PM Modi

Media Coverage

KT EXCLUSIVE: Even the sky is not the limit for UAE-India ties, says Indian PM Modi
...

Nm on the go

Always be the first to hear from the PM. Get the App Now!
...
ಶೇರ್
 
Comments

5 ನೇ ಮೇ 2017 ರಂದು, ದಕ್ಷಿಣ ಏಷ್ಯಾದ ಸಹಕಾರವು ಬಲವಾದ ಪ್ರಚೋದನೆಯನ್ನು ಪಡೆದ ದಿನ , ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದಿನ, ಎರಡು ವರ್ಷಗಳ ಹಿಂದೆ ಭಾರತ ಮಾಡಿದ ಬದ್ಧತೆಯನ್ನು ಪೂರೈಸುವ ದಿನ.

ದಕ್ಷಿಣ ಏಷ್ಯಾ ಉಪಗ್ರಹದೊಂದಿಗೆ, ದಕ್ಷಿಣ ಏಷ್ಯಾದ ರಾಷ್ಟ್ರಗಳು ತಮ್ಮ ಸಹಕಾರವನ್ನು ಬ್ಯಾಹ್ಯಾಕಾಶಕ್ಕೆ ವಿಸ್ತರಿಸಿದೆ!

ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗಲು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಉಪಗ್ರಹವನ್ನು ಸಾಧಿಸುವ ಸಾಮರ್ಥ್ಯದ ಸಂಪೂರ್ಣ ಚಿತ್ರವನ್ನು ನೀಡಿದರು.

ಉಪಗ್ರಹವು ಉತ್ತಮ ಆಡಳಿತ, ಪರಿಣಾಮಕಾರಿ ಸಂವಹನ, ಉತ್ತಮ ಬ್ಯಾಂಕಿಂಗ್ ಮತ್ತು ದೂರದ ಪ್ರದೇಶಗಳಲ್ಲಿ ಶಿಕ್ಷಣ, ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ಟೆಲಿ-ಮೆಡಿಸಿನ್ ಮೂಲಕ ಜನರನ್ನು ಸಂಪರ್ಕಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

"ನಾವು  ಒಟ್ಟಿಗೆ ಸೇರ್ಪಡೆಗೊಂಡು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯ ಫಲವನ್ನು ಹಂಚಿಕೊಂಡಾಗ, ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ನಾವು ವೇಗಗೊಳಿಸಬಹುದು" ಎಂದು ಮೋದಿ ಸರಿಯಾಗಿ ಹೇಳಿದರು .