ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಇಂದು ರೈಲ್ವೆ ಸಚಿವಾಲಯದ ಒಟ್ಟು ಅಂದಾಜು 3,907 ಕೋಟಿ ರೂಪಾಯಿ ವೆಚ್ಚದ 2 (ಎರಡು) ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು ಈ ಕೆಳಗಿನಂತಿವೆ:
a. ಪಾರದೀಪ್ – ಹರಿದಾಸ್ ಪುರ – ಎರಡನೇ ರೈಲು ಮಾರ್ಗ
b. ರಾಜ್ ಖರಸಾವನ್ – ಡಂಗೋವಾಪೋಸಿ - ನಾಲ್ಕನೇ ರೈಲು ಮಾರ್ಗ
ಹೆಚ್ಚಿದ ಮಾರ್ಗ ಸಾಮರ್ಥ್ಯವು ಸಂಚಾರವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ, ಇದು ಭಾರತೀಯ ರೈಲ್ವೆಯ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವೆಯ ವಿಶ್ವಾಸಾರ್ಹತೆಯನ್ನು ಸುಧಾರಿಸಲು ಕಾರಣವಾಗುತ್ತದೆ. ಈ ಮಲ್ಟಿ-ಟ್ರ್ಯಾಕಿಂಗ್ ಪ್ರಸ್ತಾವನೆಗಳು ಕಾರ್ಯಾಚರಣೆಯನ್ನು ಸುಗಮಗೊಳಿಸಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಸಜ್ಜಾಗಿವೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ 'ನವ ಭಾರತ'ದ ದೃಷ್ಟಿಕೋನಕ್ಕೆ ಅನುಗುಣವಾಗಿವೆ, ಇದು ಈ ಪ್ರದೇಶದ ಸಮಗ್ರ ಅಭಿವೃದ್ಧಿಯ ಮೂಲಕ ಜನರನ್ನು "ಆತ್ಮನಿರ್ಭರ"ರನ್ನಾಗಿ ಮಾಡುತ್ತದೆ ಮತ್ತು ಅವರ ಉದ್ಯೋಗ ಮತ್ತು ಸ್ವಯಂ-ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
ಸಮಗ್ರ ಯೋಜನೆ ಮತ್ತು ಪಾಲುದಾರರ ಸಮಾಲೋಚನೆಗಳ ಮೂಲಕ ಬಹು ಮಾದರಿ ಸಂಪರ್ಕ ಮತ್ತು ಸಾಗಾಣಿಕೆ (ಲಾಜಿಸ್ಟಿಕ್ಸ್) ದಕ್ಷತೆಯನ್ನು ಹೆಚ್ಚಿಸುವತ್ತ ಗಮನ ಹರಿಸಿರುವ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಈ ಯೋಜನೆಗಳನ್ನು ಯೋಜಿಸಲಾಗಿದೆ. ಈ ಯೋಜನೆಗಳು ಜನರು, ಸರಕುಗಳು ಮತ್ತು ಸೇವೆಗಳ ಸಂಚಾರಕ್ಕೆ ಸುಗಮ ಸಂಪರ್ಕವನ್ನು ಒದಗಿಸಲಿವೆ.
ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳ 4 ಜಿಲ್ಲೆಗಳನ್ನು ಒಳಗೊಂಡಿರುವ ಈ 2 (ಎರಡು) ಯೋಜನೆಗಳು ಭಾರತೀಯ ರೈಲ್ವೆಯ ಪ್ರಸ್ತುತ ಜಾಲವನ್ನು ಸುಮಾರು 145 ಕಿಲೋಮೀಟರ್ ಗಳಷ್ಟು ಹೆಚ್ಚಿಸಲಿವೆ.
ಪ್ರಸ್ತಾವಿತ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯು ಸುಮಾರು 14 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸುಮಾರು 1,526 ಹಳ್ಳಿಗಳಿಗೆ ಸಂಪರ್ಕವನ್ನು ಹೆಚ್ಚಿಸಲಿದೆ.
ಪ್ರಸ್ತಾವಿತ ಸಾಮರ್ಥ್ಯ ವರ್ಧನೆಯು ಲಲಿತ್ ಗಿರಿ ಬೌದ್ಧ ಸಂಕೀರ್ಣ, ಶ್ರೀ ಬಲದೇವ್ ಜೀವ್ ದೇವಾಲಯ, ಮೇಘಹತುಬುರು ಬೆಟ್ಟಗಳು ಸೇರಿದಂತೆ ದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ.
ಪ್ರಸ್ತಾವಿತ ಯೋಜನೆಗಳು ಕಲ್ಲಿದ್ದಲು, ಕಬ್ಬಿಣದ ಅದಿರು, ಡೊಲೊಮೈಟ್, ಸುಣ್ಣದ ಕಲ್ಲು, ಜಿಪ್ಸಮ್ ಮುಂತಾದ ಸರಕುಗಳ ಸಾಗಣೆಗೆ ಅತ್ಯಗತ್ಯ ಮಾರ್ಗಗಳಾಗಿವೆ. ಸಾಮರ್ಥ್ಯ ವರ್ಧನೆ ಕಾರ್ಯಗಳು 44 ಎಂಟಿಪಿಎ (ವರ್ಷಕ್ಕೆ ಮಿಲಿಯನ್ ಟನ್) ಪ್ರಮಾಣದ ಹೆಚ್ಚುವರಿ ಸರಕು ಸಾಗಣೆಗೆ ಕಾರಣವಾಗಲಿವೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷತೆಯ ಸಾರಿಗೆ ವಿಧಾನವಾಗಿದ್ದು, ಇದು ಹವಾಮಾನಸ್ನೇಹಿ ಗುರಿಗಳನ್ನು ಸಾಧಿಸಲು ಮತ್ತು ದೇಶದ ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ತೈಲ ಆಮದನ್ನು (6 ಕೋಟಿ ಲೀಟರ್) ಕಡಿಮೆ ಮಾಡುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು 29 ಕೋಟಿ ಕೆಜಿಯಷ್ಟು ಕಡಿಮೆ ಮಾಡುತ್ತದೆ, ಇದು 1 (ಒಂದು) ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ.
A major boost to connectivity and economic growth in Odisha and Jharkhand!
— Narendra Modi (@narendramodi) July 15, 2026
The Cabinet has approved two important railway multitracking projects, the doubling of the Paradeep-Haridaspur line and the fourth line between Rajkharsawan and Dangoaposi. These projects will further…


