ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತದ ಸುಪ್ರೀಂ ಕೋರ್ಟ್‌ ನ ನ್ಯಾಯಾಧೀಶರ ಸಂಖ್ಯೆಯನ್ನು ಪ್ರಸ್ತುತ ಇರುವ 33 ರಿಂದ 37 ಕ್ಕೆ (ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಹೊರತುಪಡಿಸಿ) ಅಂದರೆ 4 ರಷ್ಟು ಹೆಚ್ಚಿಸಲು 'ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ಕಾಯ್ದೆ, 1956' ಕ್ಕೆ ತಿದ್ದುಪಡಿ ತರಲು 'ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, 2026' ಅನ್ನು ಸಂಸತ್ತಿನಲ್ಲಿ ಮಂಡಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಅಂಶವಾರು ವಿವರಗಳು:

ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, 2026 ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು 04 ರಷ್ಟು ಹೆಚ್ಚಿಸಲು ಅಂದರೆ 33 ರಿಂದ 37 ಕ್ಕೆ (ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಹೊರತುಪಡಿಸಿ) ಹೆಚ್ಚಿಸಲು ಅವಕಾಶ ನೀಡುತ್ತದೆ.

ಪ್ರಮುಖ ಪ್ರಭಾವ:

ನ್ಯಾಯಾಧೀಶರ ಸಂಖ್ಯೆಯ ಹೆಚ್ಚಳವು ಸುಪ್ರೀಂ ಕೋರ್ಟ್ ಹೆಚ್ಚು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಹಾಗೂ ತ್ವರಿತ ನ್ಯಾಯದಾನವನ್ನು ಖಚಿತಪಡಿಸುತ್ತದೆ.

ವೆಚ್ಚ:

ನ್ಯಾಯಾಧೀಶರ ಮತ್ತು ಸಹಾಯಕ ಸಿಬ್ಬಂದಿಯ ಸಂಬಳ ಹಾಗೂ ಇತರ ಸೌಲಭ್ಯಗಳ ವೆಚ್ಚವನ್ನು ಭಾರತದ ಸಂಚಿತ ನಿಧಿಯಿಂದ ಭರಿಸಲಾಗುವುದು.

ಹಿನ್ನೆಲೆ:

ಭಾರತದ ಸಂವಿಧಾನದ 124 (1) ನೇ ವಿಧಿಯು ಇತರ ವಿಷಯಗಳ ಜೊತೆಗೆ ಹೀಗೆ ಹೇಳುತ್ತದೆ - "ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಒಳಗೊಂಡ ಭಾರತದ ಸುಪ್ರೀಂ ಕೋರ್ಟ್ ಇರತಕ್ಕದ್ದು ಮತ್ತು ಸಂಸತ್ತು ಕಾನೂನಿನ ಮೂಲಕ ಹೆಚ್ಚಿನ ಸಂಖ್ಯೆಯನ್ನು ನಿಗದಿಪಡಿಸುವವರೆಗೆ, ಏಳಕ್ಕಿಂತ ಹೆಚ್ಚು ಇತರ ನ್ಯಾಯಾಧೀಶರು ಇರಬಾರದು".

ಭಾರತದ ಸುಪ್ರೀಂ ಕೋರ್ಟ್‌ ನ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಕಾಯ್ದೆಯನ್ನು 1956 ರಲ್ಲಿ 'ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ಕಾಯ್ದೆ 1956' ರ ಮೂಲಕ ಜಾರಿಗೆ ತರಲಾಯಿತು. ಈ ಕಾಯ್ದೆಯ ಸೆಕ್ಷನ್‌ 2 ಗರಿಷ್ಠ ನ್ಯಾಯಾಧೀಶರ ಸಂಖ್ಯೆ (ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಹೊರತುಪಡಿಸಿ) 10 ಎಂದು ನಿಗದಿಪಡಿಸಿತ್ತು.

ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಕಾಯ್ದೆ, 1960 ರ ಮೂಲಕ ನ್ಯಾಯಾಧೀಶರ ಸಂಖ್ಯೆಯನ್ನು 13ಕ್ಕೆ ಮತ್ತು ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಕಾಯ್ದೆ, 1977 ರ ಮೂಲಕ 17ಕ್ಕೆ ಹೆಚ್ಚಿಸಲಾಯಿತು. ಆದರೆ, 1979ರ ಕೊನೆಯವರೆಗೆ ಸುಪ್ರೀಂ ಕೋರ್ಟ್‌ ನ ಕಾರ್ಯನಿರ್ವಹಣಾ ಬಲವನ್ನು ಸಂಪುಟವು ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿ 15ಕ್ಕೆ ಸೀಮಿತಗೊಳಿಸಿತ್ತು. ನಂತರ ಮುಖ್ಯ ನ್ಯಾಯಮೂರ್ತಿಯವರ ಕೋರಿಕೆಯ ಮೇರೆಗೆ ಈ ನಿರ್ಬಂಧವನ್ನು ಹಿಂಪಡೆಯಲಾಯಿತು.

ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಕಾಯ್ದೆ, 1986 ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು (ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿ) 17 ರಿಂದ 25ಕ್ಕೆ ಹೆಚ್ಚಿಸಿತು. ತರುವಾಯ, ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಕಾಯ್ದೆ, 2008 ನ್ಯಾಯಾಧೀಶರ ಸಂಖ್ಯೆಯನ್ನು 25 ರಿಂದ 30ಕ್ಕೆ ಹೆಚ್ಚಿಸಿತು.

ಕೊನೆಯದಾಗಿ, ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಕಾಯ್ದೆ, 2019 ರ ಮೂಲಕ ಮೂಲ ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ತಂದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು 30 ರಿಂದ 33ಕ್ಕೆ (ಮುಖ್ಯ ನ್ಯಾಯಮೂರ್ತಿಯವರನ್ನು ಹೊರತುಪಡಿಸಿ) ಹೆಚ್ಚಿಸಲಾಗಿತ್ತು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s pharmaceutical sector records transformative growth over 12 years, strengthening affordable healthcare and self-reliance

Media Coverage

India’s pharmaceutical sector records transformative growth over 12 years, strengthening affordable healthcare and self-reliance
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಜೂನ್ 2026
June 19, 2026

Appreciation for India’s Domestic Growth and Rising Global Influence under PM Modi’s Leadership