Cabinet approves Ayushman Bharat: Initiative to provide coverage of Rs 5 lakh per family per year and benefit more than 10 crore vulnerable families
Ayushman Bharat: Benefits of the scheme are portable across the country, beneficiary covered under to be allowed to take cashless benefits from any public/private empanelled hospitals

ವರ್ಷಕ್ಕೆ 5 ಲಕ್ಷ ಕುಟುಂಬಗಳಿಗೆ ಅನುಕೂಲ: 10 ಕೋಟಿಗೂ ಅಧಿಕ ಕುಟುಂಬಗಳು ಇದರ ವ್ಯಾಪ್ತಿಗೆ; ಆರ್ ಎಸ್ ಬಿ ವೈ ಮತ್ತು ಎಸ್ ಸಿ ಎಚ್ ಐ ಎಸ್ ಯೋಜನೆಗಳು ಆಯುಷ್ಮಾನ್ ಭಾರತ್ – ಎನ್ ಎಚ್ ಪಿ ಎಸ್ ಯೋಜನೆಯಲ್ಲಿ ಸೇರ್ಪಡೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ಪ್ರಾಯೋಜಿತ ಆಯುಷ್ಮಾನ್ ಭಾರತ್ – ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಆರಂಭಕ್ಕೆ ಅನುಮೋದನೆ ನೀಡಲಾಯಿತು. ಕೇಂದ್ರದ ವಲಯ ಆಧಾರಿತ ಈ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಾರಿಗೊಳಿಸಲಿದೆ. ಈ ಯೋಜನೆಯಿಂದ ಪ್ರತಿ ವರ್ಷ 5 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಎಸ್ಇಇಸಿ ಅಂಕಿ-ಅಂಶ ಆಧರಿಸಿ ಬಡವರು ಹಾಗೂ ದುರ್ಬಲ ವರ್ಗದ 10 ಕೋಟಿಗೂ ಅಧಿಕ ಕುಟುಂಬಗಳಿಗೆ ಈ ಉದ್ದೇಶಿತ ಯೋಜನೆಯಡಿ ಪ್ರಯೋಜನ ಕಲ್ಪಿಸುವ ಗುರಿ ಹೊಂದಲಾಗಿದೆ. ಈ ಆಯುಷ್ಮಾನ್ ಭಾರತ್ -ಎಬಿ – ಎನ್ ಎಚ್ ಪಿ ಎಂ ಯೋಜನೆಯಲ್ಲಿ ಹಾಲಿ ಜಾರಿಯಲ್ಲಿರುವ ಕೇಂದ್ರದ ಪ್ರಾಯೋಜಿತ ಯೋಜನೆಗಳಾದ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ(ಆರ್ ಎಸ್ ಬಿ ವೈ) ಮತ್ತು ಹಿರಿಯ ನಾಗರಿಕರ ಆರೋಗ್ಯ ರಕ್ಷಣಾ ಯೋಜನೆ(ಎಸ್ ಸಿ ಹೆಚ್ ಐ ಎಸ್)ಗಳು ಸೇರ್ಪಡೆಯಾಗಲಿವೆ.

ಪ್ರಮುಖಾಂಶಗಳು:

1.ಎಬಿ – ಎನ್ ಎಚ್ ಬಿ ಎಂ ಅಡಿಯಲ್ಲಿ ಪ್ರತಿ ವರ್ಷ 5 ಲಕ್ಷ ಕುಟುಂಬಗಳಿಗೆ ನಿಗದಿತ ಆರೋಗ್ಯ ರಕ್ಷಣೆ

ಇದರಡಿ ಬಹುತೇಕ ಎಲ್ಲ ವಿಧವಾದ ದ್ವಿತೀಯ ಆರೋಗ್ಯ ರಕ್ಷಣಾ ಮತ್ತು ಎಲ್ಲ ತೃತೀಯ ಆರೋಗ್ಯ ರಕ್ಷಣಾ ಚಿಕಿತ್ಸೆಗಳನ್ನು ನೀಡಲಾಗುವುದು. ಈ ಯೋಜನೆಯಿಂದ ಯಾರೊಬ್ಬರು (ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು) ಹೊರಗುಳಿಯಬಾರದು ಎಂದು ಕುಟುಂಬದ ಗಾತ್ರ ಮತ್ತು ವಯಸ್ಸಿಗೆ ಯಾವುದೇ ಮಿತಿ ಹೇರಿಲ್ಲ, ಈ ಯೋಜನೆಯಡಿ ಆಸ್ಪತ್ರೆ ಸೇರುವ ಮುನ್ನ ಮತ್ತು ಆನಂತರ ವೆಚ್ಚಗಳನ್ನೂ ಸಹ ಭರಿಸಲಾಗುವುದು. ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವ ನಿರ್ಧಾರಿತ ಕಾಯಿಲೆಗಳಿಗೂ ಚಿಕಿತ್ಸೆ ಪಡೆಯಬಹುದಾಗಿದೆ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯನ್ನೂ ಸಹ ನೀಡಲಾಗುವುದು.

2. ಈ ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳು ದೇಶಾದ್ಯಂತ ಏಕರೂಪವಾಗಿ ದೊರಕಲಿವೆ. ದೇಶಾದ್ಯಂತ ಯಾವುದೇ ಖಾಸಗಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಸೇವೆಗಳನ್ನೂ ಸಹ ಪಡೆಯಲು ಅವಕಾಶವಿದೆ.

3. ಎ ಬಿ ಎನ್ ಪಿ ಎಚ್ ಎಂ ಇದು ಅರ್ಹತೆ ಆಧಾರಿತ ಯೋಜನೆಯಾಗಿದೆ. ಎಸ್ ಇ ಇಸಿ ನೀಡುವ ಅಂಕಿ-ಅಂಶ ಆಧರಿಸಿ ಅರ್ಹತೆಯನ್ನು ನಿರ್ಧರಿಸಲಾಗುವುದು. ಗ್ರಾಮೀಣ ಪ್ರದೇಶದ ನಾನಾ ವರ್ಗಗಳ ಕುಟುಂಬಗಳನ್ನು ಇದರಲ್ಲಿ ಸೇರಿಸಲಾಗಿದೆ. ಅವುಗಳೆಂದರೆ ಕಚ್ಚಾ ಮೇಲ್ಛಾವಣಿ ಮತ್ತು ಗೋಡೆ ಹಾಗೂ ಒಂದು ಕೋಣೆ ಹೊಂದಿರುವ ಕುಟುಂಬಗಳು; 16ರಿಂದ 59 ವರ್ಷದೊಳಗಿನ ವಯಸ್ಕರು ಇಲ್ಲದಿರುವಂತಹ ಕುಟುಂಬ, 16ರಿಂದ 59 ವರ್ಷದೊಳಗಿನ ಪುರುಷನಿಲ್ಲದ ಮಹಿಳೆ ಮುನ್ನಡೆಸುತ್ತಿರುವ ಕುಟುಂಬ; ಕುಟುಂಬದಲ್ಲಿ ಯಾವುದೇ ವಯಸ್ಕರಿಲ್ಲದೆ ವಿಕಲಚೇತನರಿರುವ ಕುಟುಂಬ. ಎಸ್ ಇ ಎಸ್ ಟಿ ಕುಟುಂಬಗಳು ಮತ್ತು ಯಾವುದೇ ಆಧಾಯವಿಲ್ಲದೆ ದಿನಗೂಲಿ ಕೆಲಸ ಮಾಡುವ ಭೂರಹಿತ ಕುಟುಂಬಗಳು, ಅಲ್ಲದೆ ವಸತಿ ಹೊಂದಿಲ್ಲದಂತಹ ಕುಟುಂಬಗಳು ಗುಡಿಸಲಿನಲ್ಲಿ ವಾಸವಿರುವವರು, ನಿರಾಶ್ರಿತರು, ಮಲಹೊರುವ ಕುಟುಂಬಗಳು, ಬುಡಕಟ್ಟು ಗುಂಪುಗಳು, ಜೀತಮುಕ್ತರು ಮತ್ತಿತರ ಗ್ರಾಮೀಣ ಕುಟುಂಬಗಳು ಸಹಜವಾಗಿಯೇ ಇದರ ವ್ಯಾಪ್ತಿಗೆ ಒಳಪಡುತ್ತವೆ. ಆದರೆ, ನಗರ ಪ್ರದೇಶಗಳಲ್ಲಿ 11 ನಿಗದಿತ ವೃತ್ತಿಗಳಲ್ಲಿ ತೊಡಗಿರುವವರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.

4. ಈ ಯೋಜನೆಯಡಿ ಸಾರ್ವಜನಿಕ ಹಾಗೂ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಫಲಾನುಭವಿಗಳು ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ರಾಜ್ಯಗಳಲ್ಲಿ ಎ ಬಿ – ಎನ್ ಎಚ್ ಪಿ ಎಂ ಜಾರಿಗೊಳಿಸುತ್ತಿರುವ ಎಲ್ಲ ಸಾರ್ವಜನಿಕ ಆಸ್ಪತ್ರೆಗಳು ಈ ಯೋಜನೆಯಡಿ ಮಾನ್ಯತೆ ಪಡೆದಿರುತ್ತವೆ. ನೌಕರರ ರಾಜ್ಯ ವಿಮಾ ನಿಗಮ(ಇಎಸ್ಐಸಿ)ಗೆ ಸೇರಿದ ಆಸ್ಪತ್ರೆಗಳಲ್ಲೂ ಹಾಸಿಗೆಗಳ ಲಭ್ಯತೆ ಆಧಾರದ ಮೇಲೆ ಚಿಕಿತ್ಸೆ ಪಡೆಯಬಹುದು. ನಿಗದಿತ ಮಾನದಂಡವನ್ನು ಆಧರಿಸಿ, ಖಾಸಗಿ ಆಸ್ಪತ್ರೆಗಳೂ ಕೂಡ ಆನ್ ಲೈನ್ ಮೂಲಕ ಇದರಡಿ ನೋಂದಣಿ ಮಾಡಿಕೊಳ್ಳಬಹುದು.

5. ವೆಚ್ಚವನ್ನು ನಿಯಂತ್ರಿಸುವ ಸಲುವಾಗಿ ಚಿಕಿತ್ಸೆಗಳಿಗೆ ಪ್ಯಾಕೇಜ್ ದರ ಆಧರಿಸಿ(ಸರ್ಕಾರ ಮುಂಚಿತವಾಗಿಯೇ ಅದನ್ನು ನಿಗದಿಪಡಿಸಲಿದೆ) ಪಾವತಿ ಮಾಡಲಿದೆ. ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ವೆಚ್ಚವೂ ಈ ಪ್ಯಾಕೇಜ್ ದರಗಳಲ್ಲಿ ಸೇರಿರುತ್ತದೆ. ಫಲಾನುಭವಿಗಳಿಗೆ ಅದು ನಗದುರಹಿತ ಮತ್ತು ಕಾಗದರಹಿತ ಸೇವೆಯಾಗಿದೆ. ರಾಜ್ಯಗಳ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಅನುಕೂಲಕ್ಕೆ ತಕ್ಕಂತೆ ಸೀಮಿತವಾಗಿ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲು ಅವಕಾಶವಿದೆ.

6. ಎ ಬಿ – ಎನ್ ಎಚ್ ಪಿ ಎಂಯ ಒಂದು ಪ್ರಮುಖ ತತ್ವವೆಂದರೆ ಅದು ಸಹಕಾರ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಗಳ ಸರಳತೆ ಇದರಲ್ಲಿ ರಾಜ್ಯಗಳೂ ಕೂಡ ಸಹ ಒಪ್ಪಂದ ಮಾಡಿಕೊಂಡು ಪಾಲುದಾರಿಕೆ ಸಾಧಿಸಲು ಅವಕಾಶವಿದೆ. ಇದರಿಂದಾಗಿ ಈಗಾಗಲೇ ಜಾರಿಯಲ್ಲಿರುವ ಆರೋಗ್ಯ ವಿಮಾ ಯೋಜನೆಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಜಾರಿಗೊಳಿಸಿರುವ ಆರೋಗ್ಯ ರಕ್ಷಣಾ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು(ಸ್ವಂತ ವೆಚ್ಚ ಭರಿಸುತ್ತಿರುವ), ಈ ಎ ಬಿ – ಎನ್ ಎಚ್ ಪಿ ಎಂಯಡಿ ವಿಸ್ತರಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ ಮತ್ತು ಇದರ ಅನುಷ್ಠಾನದ ಮಾರ್ಗಸೂಚಿಗಳನ್ನು ಆಯ್ಕೆ ಮಾಡಿಕೊಳ್ಳಲೂ ಸಹ ರಾಜ್ಯಗಳಿಗೆ ಮುಕ್ತ ಅವಕಾಶವಿದೆ. ಅವುಗಳು ವಿಮಾ ಕಂಪನಿ ಅಥವಾ ನೇರವಾಗಿ ಅಥವಾ ಟ್ರಸ್ಟ್/ಸೊಸೈಟಿ ಇಲ್ಲವೇ ಎಲ್ಲವನ್ನೂ ಸೇರಿಸಿ ಅನುಷ್ಠಾನಗೊಳಿಸಬಹುದು.

7. ಕೇಂದ್ರ ಮತ್ತು ರಾಜ್ಯಗಳ ನಡುವೆ ನೀತಿ ನಿರ್ದೇಶನ ನೀಡಲು ಮತ್ತು ಸಮನ್ವಯವನ್ನು ಸಾಧಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದಲ್ಲಿ ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಮಂಡಳಿ(ಎ ಬಿ – ಎನ್ ಎಚ್ ಪಿ ಎಂ ಸಿ) ರಚಿಸಲು ಉದ್ದೇಶಿಸಲಾಗಿದೆ. ಇದಲ್ಲದೆ ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನಾ ನಿರ್ವಹಣ ಮಂಡಳಿ(ಎ ಬಿ-ಎನ್ ಎಚ್ ಪಿ ಎಂ ಜಿ ಬಿ) ರಚಿಸಲಾಗುವುದು. ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರ್ಯದರ್ಶಿ ಮತ್ತು ನೀತಿ ಆಯೋಗದ ಸದಸ್ಯರು(ಆರೋಗ್ಯ) ಇವರು ಅಧ್ಯಕ್ಷರಾಗಿರುತ್ತಾರೆ. ಇದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಲಾಯದ ಹಣಕಾಸು ಸಲಹೆಗಾರರು ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯ ಯೋಜನಾ ನಿರ್ದೇಶಕರು ಮತ್ತು ಹೆಚ್ಚುವರಿ ಕಾರ್ಯದರ್ಶಿ(ಎ ಬಿ – ಎನ್ ಎಚ್ ಪಿ ಎಂ) ಮತ್ತು ಜಂಟಿ ಕಾರ್ಯದರ್ಶಿ(ಎ ಬಿ – ಎನ್ ಎಚ್ ಪಿ ಎಂ) ಅವರು ಸದಸ್ಯರಾಗಿರುತ್ತಾರೆ. ಆಯುಷ್ಮಾನ್ ಭಾರತ – ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಅಗತ್ಯಕ್ಕೆ ತಕ್ಕಂತೆ ರಾಜ್ಯಗಳ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಇದರ ಸದಸ್ಯರಾಗಿರುತ್ತಾರೆ. ಇದಲ್ಲದೆ ಒಟ್ಟಾರೆ ಕಾರ್ಯಚಟುವಟಿಕೆಯನ್ನ ನೋಡಿಕೊಳ್ಳಲು ಆಯುಷ್ಮಾನ್ ಭಾರತ – ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ(ಎ ಬಿ – ಎನ್ ಎಚ್ ಪಿ ಎಂ) ಏಜೆನ್ಸಿಯನ್ನು ರಚನೆ ಮಾಡಲು ಉದ್ದೇಶಿಸಲಾಗಿದೆ. ಭಾರತ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಮಟ್ಟದ ಪೂರ್ಣ ಪ್ರಮಾಣದ ಸಿಇಒ ಈ ಏಜೆನ್ಸಿಯ ಮುಖ್ಯಸ್ಥರಾಗಿರುತ್ತಾರೆ.

8. ಈ ಯೋಜನೆಯನ್ನು ಜಾರಿಗೊಳಿಸಲು ರಾಜ್ಯಗಳು ರಾಜ್ಯ ಆರೋಗ್ಯ ಏಜೆನ್ಸಿ(ಎಸ್ಎಚ್ಎ)ಗಳನ್ನು ಹೊಂದಬೇಕಾಗುತ್ತದೆ. ಅವುಗಳಿಗೆ ಹಾಲಿ ಇರುವ ಟ್ರಸ್ಟ್/ಸೊಸೈಟಿ/ಲಾಭದ ಉದ್ದೇಶವಿಲ್ಲದ/ರಾಜ್ಯದ ನೋಡೆಲ್ ಏಜೆನ್ಸಿ ಅಥವಾ ಹೊಸದಾಗಿ ಟ್ರಸ್ಟ್ ರಚನೆ/ಸೊಸೈಟಿ ಅಥವಾ ಲಾಭದ ಉದ್ದೇಶವಿಲ್ಲದ ಕಂಪನಿ ಅಥವಾ ರಾಜ್ಯ ಆರೋಗ್ಯ ಏಜೆನ್ಸಿ ರಚನೆ ಮಾಡಬಹುದು. ಜಿಲ್ಲಾಮಟ್ಟದಲ್ಲೂ ಸಹ ಯೋಜನೆ ಜಾರಿಗೆ ಒಂದು ವ್ಯವಸ್ಥೆಯನ್ನು ಸ್ಥಾಪಿಸಬೇಕಾಗುತ್ತದೆ.

9. ಸಕಾಲದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಗಳ ಆರೋಗ್ಯ ಏಜೆನ್ಸಿಗಳಿಗೆ ಎ ಬಿ – ಎನ್ ಎಚ್ ಪಿ ಎಂ ಯೋಜನೆಯಡಿ ಸಕಾಲದಲ್ಲಿ ಹಣ ವರ್ಗಾವಣೆಯನ್ನು ನೇರವಾಗಿ ಮಾಡಲು ಎಸ್ಕ್ರೂ ಪದ್ಧತಿ ಅನುಸರಿಸಲಾಗುವುದು. ಕಾಲಕಾಲಕ್ಕೆ ರಾಜ್ಯಗಳು ತಮ್ಮ ಪಾಲಿನ ಅನುದಾನದ ಪ್ರಮಾಣವನ್ನು ನೀಡಬೇಕು.

10. ನೀತಿ ಆಯೋಗದ ಸಹಭಾಗಿತ್ವದಲ್ಲಿ ಅತ್ಯುತ್ತಮ ಮಾದರಿಯಾದ ಮಾಹಿತಿ ತಂತ್ರಜ್ಞಾನ ವೇದಿಕೆಯನ್ನು ಕಾರ್ಯಾಚರಣೆ ಮಾಡಲಾಗುವುದು. ಇದು ಕಾಗದರಹಿತ ಮತ್ತು ನಗದುರಹಿತವಾಗಿರುತ್ತದೆ. ಇದು ಯಾವುದೇ ರೀತಿಯ ಸಂಭಾವ್ಯ ಹಣ ದುರ್ಬಳಕೆ, ವಂಚನೆಗೆ ಅವಕಾಶವಿಲ್ಲದೆ ನಿಯಂತ್ರಣವನ್ನು ಹೊಂದಿರುತ್ತದೆ. ಇದರಡಿ ದೂರು ಇತ್ಯರ್ಥ ಕಾರ್ಯತಂತ್ರ ವ್ಯವಸ್ಥೆಯೂ ಇರಲಿದೆ. ಇದಲ್ಲದೆ ಸಂಭಾವ್ಯ ದುರ್ಬಳಕೆಯನ್ನು ತಡೆಯಲು ಹಲವು ಚಿಕಿತ್ಸೆಗಳಿಗೆ ಮೊದಲೇ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

11. ನಿಗದಿತ ಫಲಾನುಭವಿಗಳಿಗೆ ಮತ್ತು ತಲುಪಬೇಕಾದವರಿಗೆ ಯೋಜನೆಯನ್ನು ತಲುಪಿಸಲು ಸಂಬಂಧಿಸಿದವರ ಜೊತೆ ಸೇರಿ ಸಮಗ್ರ ಮಾಧ್ಯಮ ಮತ್ತು ಜನರನ್ನು ತಲುಪುವ ಕಾರ್ಯತಂತ್ರವನ್ನು ಅಭಿವೃದ್ಧಿಗೊಳಿಸಲಾಗುವುದು. ಇದರಲ್ಲಿ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸಾಂಪ್ರದಾಯಿಕ ಮಾಧ್ಯಮಗಳು, ಐಇಸಿ ಮತ್ತು ಹೊರಾಂಗಣ ಚಟುವಟಿಕೆಗಳು ಹಾಗೂ ಮತ್ತಿತರವುಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗುವುದು.

ಜಾರಿ ಕಾರ್ಯತಂತ್ರ :

ರಾಷ್ಟ್ರಮಟ್ಟದಲ್ಲಿ ಆಯುಷ್ಮಾನ್ ಭಾರತ – ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಏಜೆನ್ಸಿ(ಎ ಬಿ – ಎನ್ ಎಚ್ ಪಿ ಎಂ ಎ) ಕಾರ್ಯನಿರ್ವಹಿಸಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಗದಿತ ರಾಜ್ಯ ಆರೋಗ್ಯ ಏಜೆನ್ಸಿ(ಎಸ್ಎಚ್ಎ)ಗಳ ಮೂಲಕ ಯೋಜನೆ ಜಾರಿಗೊಳಿಸಲು ಸೂಚಿಸಲಾಗುವುದು. ಅವು ಹಾಲಿ ಇರುವ ಟ್ರಸ್ಟ್/ಸೊಸೈಟಿ/ಲಾಭದ ಉದ್ದೇಶವಿಲ್ಲದ ಕಂಪನಿ/ರಾಜ್ಯದ ನೋಡೆಲ್ ಏಜೆನ್ಸಿಗಳು ಅಥವಾ ಹೊಸ ಪ್ರತ್ಯೇಕ ಸಂಸ್ಥೆಯನ್ನು ಹುಟ್ಟುಹಾಕಿ ಯೋಜನೆಯನ್ನು ಜಾರಿಗೊಳಿಸಬಹುದು, ಇಲ್ಲವೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ವಿಮಾ ಕಂಪನಿ ಅಥವಾ ನೇರವಾಗಿ, ಟ್ರಸ್ಟ್ ಅಥವಾ ಸೊಸೈಟಿ ಅಥವಾ ಏಕೀಕೃತ ಮಾದರಿಯನ್ನು ಬಳಕೆ ಮಾಡಬಹುದು.

ಪ್ರಮುಖ ಪರಿಣಾಮ

ಕಳೆದ ಹತ್ತು ವರ್ಷಗಳಲ್ಲಿ ಭಾರತ ದೇಶದ ಆಸ್ಪತ್ರೆಗಳಲ್ಲಿನ ಒಳರೋಗಿಗಳ ಚಿಕಿತ್ಸಾ ವೆಚ್ಚ ಶೇ.300ರಷ್ಟು ಹೆಚ್ಚಾಗಿದೆ.(ಎನ್ಎಸ್ಎಸ್ಒ-2015) ಶೇ.80ಕ್ಕೂ ಅಧಿಕ ವೆಚ್ಚವನ್ನು ಜೇಬಿನಿಂದ ಖರ್ಚು ಮಾಡಲಾಗುತ್ತಿದೆ, ಗ್ರಾಮೀಣ ಕುಟುಂಬಗಳು ಪ್ರಮುಖವಾಗಿ ಆಸ್ಪತ್ರೆ ವೆಚ್ಚಕ್ಕೆ ಕೌಟುಂಬಿಕ ಆದಾಯ ಮತ್ತು ಉಳಿತಾಯದಿಂದ ಶೇ.68ರಷ್ಟು ಮತ್ತು ಸಾಲದಿಂದ ಶೇ.25ರಷ್ಟು ಅವಲಂಬಿತರಾಗಿದ್ದಾರೆ. ನಗರ ಪ್ರದೇಶಗಳ ಜನತೆ ಚಿಕಿತ್ಸಾ ವೆಚ್ಚಕ್ಕೆ ಆದಾಯ ಮತ್ತು ಉಳಿತಾಯದ ಮೇಲೆ ಶೇ.75ರಷ್ಟು ಅವಲಂಬಿತವಾಗಿದ್ದು, ಶೇ.18ರಷ್ಟು ಸಾಲವನ್ನು ಅವಲಂಬಿಸಿರುತ್ತಾರೆ(ಎನ್ಎಸ್ಎಸ್ಒ-2015). ಜೇಬಿನಿಂದ ಖರ್ಚು ಮಾಡುವುದು ಭಾರತದಲ್ಲಿ ಶೇ.60ರಷ್ಟು ಹೆಚ್ಚಾಗಿದ್ದು, ಇದರಿಂದಾಗಿ ಸುಮಾರು 6 ಮಿಲಿಯನ್ ಕುಟುಂಬಗಳು ಬಡತನಕ್ಕೆ ದೂಡಲ್ಪಡುತ್ತಿವೆ. ಅವರು ಆರೋಗ್ಯಕ್ಕಾಗಿ ಅಧಿಕ ಹಣ ಖರ್ಚು ಮಾಡುತ್ತಿದ್ದಾರೆ. ಎ ಬಿ – ಎನ್ ಎಚ್ ಪಿ ಎಂ ಯೋಜನೆ ಅತ್ಯಂತ ಪ್ರಮುಖ ಪರಿಣಾಮ ಬೀರಲಿದ್ದು, ಇದು ಜೇಬಿನಿಂದ ಖರ್ಚುಮಾಡುವ ವೆಚ್ಚವನ್ನು ತಗ್ಗಿಸಲಿದೆ. ಅದು ಹೇಗೆಂದರೆ

1. ಆರೋಗ್ಯ ರಕ್ಷಣಾ ವ್ಯಾಪ್ತಿ ಶೇ.40ರಷ್ಟು ಜನಸಂಖ್ಯೆಗೆ ಸಿಗಲಿದೆ(ಬಡವರು ಮತ್ತು ದುರ್ಬಲ ವರ್ಗದವರು)

2. ದ್ವಿತೀಯ ಹಾಗೂ ತೃತೀಯ ಹಂತದ ಎಲ್ಲ ಬಗೆಯ ಕಾಯಿಲೆಗಳು ಇದರ ವ್ಯಾಪ್ತಿಗೆ ಬರುತ್ತವೆ(ನಕಾರಾತ್ಮಕ ಪಟ್ಟಿಯಲ್ಲಿರುವುದನ್ನು ಹೊರತುಪಡಿಸಿ)

3. ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಚಿಕಿತ್ಸೆ(ಕುಟುಂಬದ ಗಾತ್ರಕ್ಕೆ ಯಾವುದೇ ಮಿತಿ ಇಲ್ಲ).

ಇದರಿಂದಾಗಿ ಆರೋಗ್ಯ ರಕ್ಷಣಾ ಸೌಕರ್ಯಗಳು ಮತ್ತು ವೈದ್ಯಕೀಯ ಆರೈಕೆ ಹೆಚ್ಚಾಗಲಿದೆ. ಅಲ್ಲದೆ ಜನರು ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಪಡೆಯಲಾಗದ ಕೆಲವು ಅಗತ್ಯತೆಗಳನ್ನು ಇದು ಪೂರೈಸಲಿದೆ. ಇದರಿಂದಾಗಿ ಜನರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತದೆ, ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ, ರೋಗಿಗಳು ತೃಪ್ತರಾಗುತ್ತಾರೆ, ಉತ್ಪಾದನೆ ಹೆಚ್ಚಳವಾಗುತ್ತದೆ. ಉದ್ಯೋಗ ಸೃಷ್ಟಿಗಳು ಹೆಚ್ಚಾಗಲಿದ್ದು, ಇದರಿಂದ ಜೀವನಮಟ್ಟವೂ ಸುಧಾರಣೆಯಾಗಲಿದೆ.

ಒಳಗೊಂಡಿರುವ ವೆಚ್ಚ :

ಪ್ರೀಮಿಯಂ ಪಾವತಿಯ ವೆಚ್ಚ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರ ನಡುವೆ ಹಂಚಿಕೆಯಾಗಲಿದೆ. ಹಣಕಾಸು ಸಚಿವಾಲಯದ ಮಾರ್ಗಸೂಚಿ ಅನ್ವಯ ಹಂಚಿಕೆ ಪ್ರಮಾಣ ನಿಗದಿಯಾಗಲಿದೆ. ಒಟ್ಟಾರೆ ವೆಚ್ಚ ಎ ಬಿ – ಎನ್ ಎಚ್ ಪಿ ಎಂ ಯೋಜನೆ ಅನುಷ್ಠಾನಗೊಳಿಸಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಮಾ ಕಂಪನಿಗಳಿಗೆ ಪಾವತಿಸುವ ವೆಚ್ಚದ ಒಟ್ಟಾರೆ ಮಾರುಕಟ್ಟೆ ದರ ಆಧರಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಟ್ರಸ್ಟ್ ಅಥವಾ ಸೊಸೈಟಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಕೇಂದ್ರ ಸರ್ಕಾರ ಪೂರ್ವ ನಿಗದಿತ ಅನುಪಾತಕ್ಕೆ ಅನುಗುಣವಾಗಿ ಒಟ್ಟಾರೆ ವೆಚ್ಚದ ಪ್ರೀಮಿಯಂ(ಯಾವುದು ಕಡಿಮೆಯೋ ಅದು) ಭರಿಸಲಿದೆ.

ಫಲಾನುಭವಿಗಳ ಸಂಖ್ಯೆ:

ಎ ಬಿ – ಎನ್ ಎಚ್ ಪಿ ಎಂ ಯೋಜನೆಯಡಿ 10.74 ಕೋಟಿ ಬಡ ಹಾಗೂ ದುರ್ಬಲವರ್ಗದ ಗ್ರಾಮೀಣ ಕುಟುಂಬಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಂತೆ ಇತ್ತೀಚಿನ ಸಾಮಾಜಿಕ ಆರ್ಥಿಕ ಜಾತಿಗಣತಿ(ಎಸ್ಇಸಿಸಿ) ಆಧರಿಸಿ ನಗರ ಪ್ರದೇಶಗಳ ನೌಕರರ ಕುಟುಂಬಗಳಿಗೆ ಕೆಲವೊಂದು ವೃತ್ತಿಗಳನ್ನು ಗುರುತಿಸಲಾಗುವುದು. ಯೋಜನೆಯನ್ನು ಅತ್ಯಂತ ಕ್ರಿಯಾಶೀಲವಾಗಿ ಮತ್ತು ಆಶಾದಾಯಕವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದು ಎಸ್ಇಸಿಸಿ ಅಂಕಿ-ಅಂಶಗಳಲ್ಲಿ ಭವಿಷ್ಯದಲ್ಲಿ ಆಗುವ ಸೇರ್ಪಡೆ, ಬೇರ್ಪಡೆ ಮತ್ತು ಮತ್ತಿತರ ಬದಲಾವಣೆಗಳನ್ನು ಪರಿಗಣಿಸಲಾಗುವುದು.

ರಾಜ್ಯಗಳು/ಜಿಲ್ಲೆಗಳ ವ್ಯಾಪ್ತಿ

ಎ ಬಿ – ಎನ್ ಎಚ್ ಪಿ ಎಂ ಯೋಜನೆ ನಿಗದಿತ ಫಲಾನುಭವಿಗಳನ್ನು ತಲುಪಲು ಸಾಧ್ಯವಾಗುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು.

ಹಿನ್ನೆಲೆ:

ಕಾರ್ಮಿಕ ಮತ್ತು ಔದ್ಯೋಗಿಕ ಸಚಿವಾಲಯ 2008ರಲ್ಲಿ ಆರ್ ಎಸ್ ಬಿ ವೈ ಯೋಜನೆಯನ್ನು ಆರಂಭಿಸಿತು. ಇದರಡಿ ಅಸಂಘಟಿತ ವಲಯದ 11 ನಿಗದಿತ ವರ್ಗಗಳಡಿ ದುಡಿಯುವ ಮತ್ತು ಬಡತನರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ (ಐವರು ಸದಸ್ಯರ) ವಾರ್ಷಿಕ 30 ಸಾವಿರ ರೂ.ವರೆಗೆ ನಗದುರಹಿತ ಆರೋಗ್ಯ ವಿಮೆ ಒದಗಿಸಲಾಗುತ್ತದೆ. ಈ ಆರ್ ಎಸ್ ಬಿ ವೈ ಯೋಜನೆಯನ್ನು ಆರೋಗ್ಯ ಸೇವೆಗಳ ಜತೆ ಸೇರಿಸಲು ಮತ್ತು ಭಾರತ ಸರ್ಕಾರದ ಆರೋಗ್ಯ ರಕ್ಷಣಾ ವ್ಯವಸ್ಥೆಯಡಿ ತರಲು ಆರ್ ಎಸ್ ಬಿ ವೈಯನ್ನು 2015ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವರ್ಗಾಯಿಸಲಾಯಿತು.

2016-17ನೇ ಸಾಲಿನಲ್ಲಿ ದೇಶದ 278 ಜಿಲ್ಲೆಗಳಲ್ಲಿ ಆರ್ ಎಸ್ ಬಿ ವೈ ಯೋಜನೆ 3.63 ಕೋಟಿ ಕುಟುಂಬಗಳಿಗೆ ಅನುಕೂಲ ಕಲ್ಪಿಸಿದೆ. ಅವರು ಮಾನ್ಯತೆ ಪಡೆದ 8,697 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲವು ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಆರೋಗ್ಯ ವಿಮಾ/ರಕ್ಷಣಾ ಯೋಜನೆಗಳನ್ನು ನಿಗದಿತ ಫಲಾನುಭವಿಗಳಿಗೆ ಆರಂಭಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಜಾರಿಗೆ ಬಂದಿತು. ಈ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸಲು ಇನ್ನಷ್ಟು ಜನರಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಮಾಡಲು ಈ ಎಲ್ಲ ಯೋಜನೆಗಳನ್ನು ಸೇರಿಸಿ ಹೊಸ ಯೋಜನೆ ರೂಪಿಸಲಾಗಿದೆ.

 
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Project Cheetah: How A Species Declared Extinct During Nehru Era Returned To India Under Modi Govt

Media Coverage

Project Cheetah: How A Species Declared Extinct During Nehru Era Returned To India Under Modi Govt
NM on the go

Nm on the go

Always be the first to hear from the PM. Get the App Now!
...
Prime Minister visits L&T complex at Hazira, Gujarat
June 05, 2026

Prime Minister Shri Narendra Modi today visited the Larsen & Toubro (L&T) complex at Hazira, Gujarat, where he witnessed pioneering innovations being developed by the company across various sectors.

The Prime Minister highly commended the significant role played by L&T in furthering self-reliance in India's defence sector. Sharing glimpses from the visit, Shri Modi appreciated the engineering achievements and advancements being spearheaded at the facility.

In a series of posts on X, the Prime Minister shared:

"This afternoon, went to the L&T complex at Hazira. Witnessed some of their pioneering innovations across different sectors. The role played by L&T in furthering self-reliance in the defence sector is commendable.
@larsentoubro"

"Here are some more glimpses from the visit to the L&T complex in Hazira, Gujarat."