'ಆತ್ಮನಿರ್ಭರ್ ಭಾರತ್' ಅಭಿಯಾನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಹಾಗು ರೈಲುಗಳಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತಾ ಸೇವೆಗಳಿಗಾಗಿ ಬಳಸಲು ಭಾರತೀಯ ರೈಲ್ವೆಗೆ 700 ಮೆಗಾಹರ್ಟ್ಸ್ ಫ್ರೀಕ್ವೆನ್ಸಿ ಬ್ಯಾಂಡ್‌ನಲ್ಲಿ 5 ಮೆಗಾಹರ್ಟ್ಸ್ ತರಂಗಗುಚ್ಛವನ್ನು ಹಂಚಿಕೆ ಮಾಡುವ ಪ್ರಸ್ತಾಪಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಈ ತರಂಗಗುಚ್ಛದೊಂದಿಗೆ, ಭಾರತೀಯ ರೈಲ್ವೆಯು ತನ್ನ ಮಾರ್ಗದುದ್ದಕ್ಕೂ ʻಎಲ್‌ಟಿಇʼ (ದೀರ್ಘಕಾಲೀನ ವಿಕಾಸ) ಆಧಾರಿತ ʻಮೊಬೈಲ್ ರೈಲು ರೇಡಿಯೋ ಸಂವಹನʼವನ್ನು ಒದಗಿಸಲು ಉದ್ದೇಶಿಸಿದೆ. ಈ ಯೋಜನೆಗೆ ಅಂದಾಜು 25,000 ಕೋಟಿ ರೂ.ಗಿಂತಲೂ ಹೆಚ್ಚು ಹೂಡಿಕೆ ಮಾಡಲಾಗುವುದು. ಮುಂದಿನ 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.

ಇದರ ಜೊತೆಗೆ, ಭಾರತೀಯ ರೈಲ್ವೆಯು ʻಟಿಸಿಎಎಸ್ʼ (ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ) ಅನ್ನು ಅನುಮೋದಿಸಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಿದ ʻಎಟಿಪಿʼ (ಸ್ವಯಂಚಾಲಿತ ರೈಲು ರಕ್ಷಣೆ) ವ್ಯವಸ್ಥೆಯಾಗಿದೆ. ಇದು ರೈಲುಗಳ ನಡುವೆ ಡಿಕ್ಕಿ ತಪ್ಪಿಸಲು ಸಹಾಯ ಮಾಡುತ್ತದೆ. ಇದರಿಂದ ಅಪಘಾತಗಳು ಕಡಿಮೆಯಾಗುತ್ತವೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ. 

ಇದು ರೈಲ್ವೆಯ ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ವ್ಯೂಹಾತ್ಮಕ ಬದಲಾವಣೆಗೆ ಕಾರಣವಾಗಲಿದೆ. ಸುರಕ್ಷತೆಯನ್ನು ಸುಧಾರಿಸಲು ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಬಳಸಿಕೊಂಡು ಹೆಚ್ಚಿನ ರೈಲುಗಳ ಓಡಾಟಕ್ಕೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಮಾರ್ಗ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಧುನಿಕ ರೈಲ್ವೆ ಜಾಲವು ಸಾರಿಗೆ ವೆಚ್ಚ ಇಳಿಕೆ ಮತ್ತು ಹೆಚ್ಚಿನ ದಕ್ಷತೆಗೆ ಕಾರಣವಾಗುತ್ತದೆ. ಅಲ್ಲದೆ, ಇದು 'ಮೇಕ್ ಇನ್ ಇಂಡಿಯಾ' ಅಭಿಯಾನದ ಅಂಗವಾಗಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮತ್ತು ಉದ್ಯೋಗ ಸೃಷ್ಟಿಸಲು ಬಹುರಾಷ್ಟ್ರೀಯ ಉದ್ಯಮಗಳನ್ನು ಆಕರ್ಷಿಸುತ್ತದೆ.

ಕಾರ್ಯಾಚರಣೆ, ಸುರಕ್ಷತೆ ಮತ್ತು ಭದ್ರತಾ ಉದ್ದೇಶಕ್ಕೆ ಬಳಸಲು ಸುರಕ್ಷಿತ ಮತ್ತು ವಿಶ್ವಾಸಾರ್ಹ ಧ್ವನಿ, ವೀಡಿಯೊ ಹಾಗೂ ಡೇಟಾ ಸಂವಹನ ಸೇವೆಗಳನ್ನು ಒದಗಿಸುವುದು ಭಾರತೀಯ ರೈಲ್ವೆಯ ʻಎಲ್‌ಟಿಇʼ ವ್ಯವಸ್ಥೆಯ ಉದ್ದೇಶವಾಗಿದೆ. ಇದನ್ನು ಆಧುನಿಕ ಸಿಗ್ನಲಿಂಗ್ ಮತ್ತು ರೈಲು ರಕ್ಷಣಾ ವ್ಯವಸ್ಥೆಗಳಿಗೆ ಬಳಸಲಾಗುತ್ತದೆ. ಲೋಕೋ ಪೈಲಟ್‌ಗಳು ಮತ್ತು ಗಾರ್ಡ್‌ಗಳ ನಡುವೆ ತಡೆರಹಿತ ಸಂವಹನವನ್ನು ಇದು ಖಚಿತಪಡಿಸುತ್ತದೆ. ಇದು ದಕ್ಷ, ಸುರಕ್ಷಿತ ಮತ್ತು ವೇಗದ ರೈಲು ಕಾರ್ಯಾಚರಣೆಗಳಿಗಾಗಿ ʻಇಂಟರ್ನೆಟ್ ಆಫ್ ಥಿಂಗ್ಸ್ʼ (ಐಒಟಿ) ಆಧಾರಿತ ರಿಮೋಟ್ ಅಸೆಟ್ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅದರಲ್ಲೂ ವಿಶೇಷವಾಗಿ ಬೋಗಿಗಳು, ವ್ಯಾಗನ್‌ಗಳು ಮತ್ತು ಲೋಕೋಗಳು, ರೈಲು ಬೋಗಿಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಲೈವ್ ವೀಡಿಯೊ ಫೀಡ್‌ಗಳ ಮೇಲ್ವಿಚಾರಣೆಗೆ ಅವಕಾಶ ಒದಗಿಸುತ್ತದೆ.

ರಾಯಧನಕ್ಕೆ ದೂರ ಸಂಪರ್ಕ ಇಲಾಖೆಯು ನಿಗದಿಪಡಿಸಿರುವ ಸೂತ್ರದ ಆಧಾರದ ಮೇಲೆ ತರಂಗಗುಚ್ಛ ಶುಲ್ಕವನ್ನು ವಿಧಿಸಬಹುದು ಮತ್ತು ಬಂಡವಾಳ ಉದ್ದೇಶದ ಬಳಕೆಗಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಶಿಫಾರಸು ಮಾಡಿರುವಂತೆ ಲೈಸೆನ್ಸ್‌ ಶುಲ್ಕವನ್ನು ವಿಧಿಸಬಹುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's 1 Trillion Retail Moment: Dawn of Retail Revenue Intelligence

Media Coverage

India's 1 Trillion Retail Moment: Dawn of Retail Revenue Intelligence
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಜೂನ್ 2026
June 27, 2026

Appreciation for PM Modi's Development-Focused and People-Centric Governance