ಬುದ್ಧ ಪೌರ್ಣಿಮೆ ಅಂಗವಾಗಿ ಆಯೋಜಿಸಿದ್ದ ವೈಶಾಖ ಜಾಗತಿಕ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್|ನಲ್ಲಿ ಮುಖ್ಯ ಭಾಷಣ ಮಾಡಿದರು. ಬುದ್ಧ ಮಹಾಸಂಘದ ಪೂಜ್ಯ ಸದಸ್ಯರು, ನೇಪಾಳ ಮತ್ತು ಶ್ರೀಲಂಕಾದ ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ, ಶ್ರೀ ಕಿರೆನ್ ರಿಜಿಜು, ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ಮಹಾಕಾರ್ಯದರ್ಶಿ ಮತ್ತು ಘನತೆವೆತ್ತ ಖ್ಯಾತ ವೈದ್ಯ ಧಮ್ಮಾಪಿಯಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ವೈಶಾಖ ದಿನವು ಭಗವಾನ್ ಗೌತಮ ಬುದ್ಧನು ನಮ್ಮ ಪೃಥ್ವಿಯನ್ನು ಸುಂದರವಾಗಿಡಲು, ಸಾಮಾಜಿಕ ಬದುಕನ್ನು ಹಸನುಗೊಳಿಸಲು ನಡೆಸಿದ ಬದುಕು, ಹೋರಾಟ, ಆತನ ಉದಾತ್ತ ಚಿಂತನೆಗಳು, ಪರಿಕಲ್ಪನೆಗಳು ಮತ್ತು ತ್ಯಾಗವನ್ನು ಸಾರಿ ಹೇಳುತ್ತಿದೆ, ಪ್ರತಿಫಲಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ವಿರುದ್ಧ ಸತತ ಹೋರಾಟ ನಡೆಸುತ್ತಿರುವ ನಮ್ಮೆಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ಕಳೆದ ವರ್ಷದ ವೈಶಾಖ ದಿನದ ಕಾರ್ಯಕ್ರಮವನ್ನು ಸಮರ್ಪಿಸಲಾಗಿತ್ತು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ಒಂದು ವರ್ಷದ ತರುವಾಯವೂ ಕೋವಿಡ್-19 ಸಾಂಕ್ರಾಮಿಕ ಸೋಂಕು ನಮ್ಮಿಂದ ಹೋಗಿಲ್ಲ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಎರಡನೇ ಅಲೆಯ ಸೋಂಕು ಹೆಚ್ಚಾಗಿ ವ್ಯಾಪಿಸುತ್ತಿದೆ. ನಮ್ಮ ಜೀವಮಾನದಲ್ಲಿ ಈ ಸೋಂಕು ನಮ್ಮೆಲ್ಲರಿಗೆ ದುರಂತ ತಂದಿಟ್ಟಿದೆ. ಮನೆ ಮನೆಯಲ್ಲೂ ನರಳುವಂತೆ ಮಾಡುತ್ತಿದೆ. ಪ್ರತಿ ದೇಶವನ್ನು ಸಹ ಇದು ಕಾಡುತ್ತಿದೆ. ಬೃಹತ್ ಪ್ರಮಾಣದಲ್ಲಿ ಆರ್ಥಿಕ ದುಷ್ಪರಿಣಾಮ ಉಂಟುಮಾಡುತ್ತಿದೆ. ಹಾಗಾಗಿ, ಕೋವಿಡ್-19ರ ನಂತರ ನಮ್ಮ ಪೃಥ್ವಿ ಮೊದಲಿನಂತಿಲ್ಲ. ಆದರೂ ಕಳೆದ ಒಂದು ವರ್ಷದಿಂದ ದೇಶದಲ್ಲಿ ಸಾಕಷ್ಟು ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ. ಸಾಂಕ್ರಾಮಿಕ ಸೋಂಕಿನ ಬಗ್ಗೆ ಜನರಲ್ಲಿ ಉತ್ತಮ ತಿಳಿವಳಿಕೆ ಮೂಡುತ್ತಿದೆ. ಇದರಿಂದ ಕೋವಿಡ್-19 ವಿರುದ್ಧ ಹೋರಾಡುವ ಮತ್ತು ಲಸಿಕೆ ನೀಡುವ ನಮ್ಮ ಕಾರ್ಯತಂತ್ರಗಳು ಬಲಗೊಂಡಿವೆ. ಜನರ ಜೀವ ಉಳಿಸಲು ಮತ್ತು ಸಾಂಕ್ರಾಮಿಕ ಸೋಂಕನ್ನು ಹತ್ತಿಕ್ಕುವ ಈ ಕಾರ್ಯತಂತ್ರಗಳು ಬಹುಮುಖ್ಯವಾಗಿವೆ. ಒಂದೇ ವರ್ಷದಲ್ಲಿ ಕೋವಿಡ್-19 ಲಸಿಕೆ ಕಂಡುಹಿಡಿಯಲು ನಮ್ಮ ವಿಜ್ಞಾನಿಗಳು ಮತ್ತು ಸಂಶೋಧಕರು ನಡೆಸಿದ ಅವಿರತ ಪ್ರಯತ್ನಗಳು ಶ್ಲಾಘನೀಯವಾಗಿವೆ. ಇದು ಮಾನವನ ದೃಢ ನಿಶ್ಚಯ ಮತ್ತು ಸ್ಥಿರ ಶಕ್ತಿಯನ್ನು ತೋರುತ್ತಿದೆ ಎಂದು ಅವರು ತಿಳಿಸಿದರು.

ಭಗವಾನ್ ಗೌತಮ ಬುದ್ಧನ ಜೀವನದಲ್ಲಿ ಹೊತ್ತಿಕೊಂಡ ನಾಲ್ಕು ದೃಷ್ಟಿಕೋನಗಳು ಅವನ ಜೀವನ ಗತಿಯನ್ನೇ ಬದಲಿಸಿದವು. ಮಾನವನ ನರಳಾಟಗಳನ್ನು ದೂರ ಮಾಡಬೇಕಾದರೆ ನನ್ನ ಜೀವನವನ್ನು ಜನರ ಒಳಿತಗಾಗಿ ಮುಡಿಪಾಗಿಡಬೇಕು ಎಂದು ಬುದ್ಧ ಮಾಡಿದ ಸಂಕಲ್ಪವೇ ಇಂದು ಸುಂದರ ಪೃಥ್ವಿಯ ಸೃಷ್ಟಿಗೆ ಕಾರಣವಾಗಿದೆ. ಕಳೆದ ವರ್ಷ ದೇಶದಲ್ಲಿ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಹಲವಾರು ಸ್ವಯಂಸೇವಕರು, ನಾನಾ ಸಂಘ ಸಂಸ್ಥೆಗಳು ಮುಂದೆ ಬಂದು ನಡೆಸಿದ ಹೋರಾಟ ನಡೆಸಿ, ಸಾಧ್ಯವಾದ ಎಲ್ಲಾ ಸಹಾಯ ಮತ್ತು ನೆರವು ನೀಡಿದರು. ಮಾನವನ ಸಂಕಷ್ಟಗಳನ್ನು ನಿಯಂತ್ರಿಸಲು ಅವಿರತ ದುಡಿದರು. ಉದಾರ ಕೊಡುಗೆ ನೀಡಿದರು. ವಿಶ್ವಾದ್ಯಂತ ಇರುವ ಬೌದ್ಧ ಸಂಘಟನೆಗಳು ಮತ್ತು ಬುದ್ಧ ಧರ್ಮದ  ಅನುಯಾಯಿಗಳು ಸಾಧನ ಸಲಕರಣೆಗಳು, ಆಹಾರ ವಸ್ತುಗಳು ಮತ್ತು ಅಗತ್ಯ ಸರಕುಗಳನ್ನು ದಾನ ಮಾಡಿದರು. ಈ ಎಲ್ಲಾ ನೆರವು ಮತ್ತು ಕೊಡುಗೆಗಳು ಬುದ್ಧನ ಬೋಧನೆಯಾದ ‘ಆಶೀರ್ವಾದ, ಸಹಾನುಭೂತಿ ಮತ್ತು ಎಲ್ಲರ ಕಲ್ಯಾಣ(भवतु सब्ब मंगलम)’ಕ್ಕೆ ಪೂರಕವಾಗಿವೆ.

ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುವಾಗ, ಹವಾಮಾನ ಬದಲಾವಣೆಯಂತಹ ಇಡೀ ಮಾನವತೆ ಎದುರಿಸುತ್ತಿರುವ ಇತರ ಸವಾಲುಗಳ ಬಗ್ಗೆ ಯಾರೊಬ್ಬರೂ ದೃಷ್ಟಿ ಬದಲಿಸಬಾರದು ಎಂದು ಪ್ರಧಾನಿ ಹೇಳಿದರು.

ಪ್ರಸ್ತುತ ಪೀಳಿಗೆಯ ಅಜಾಗರೂಕ ಜೀವನ ಶೈಲಿಗಳು ಭವಿಷ್ಯದ ಪೀಳಿಗೆಗೆ ಬೆದರಿಕೆ ಹಾಕುತ್ತಿವೆ. ನಮ್ಮ ಸುಂದ ಪೃಥ್ವಿಯು ಘಾಸಿಗೊಳ್ಳಲು ಬಿಡದಂತೆ ನಾವೆಲ್ಲಾ ಇಂದೇ ದೃಢ ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು.

ಪ್ರಕೃತಿ ಮಾತೆಯನ್ನು ಗೌರವಿಸುವ ಜೀವನ ಶೈಲಿ ನಮ್ಮೆಲ್ಲರದಾಗಬೇಕು ಎಂದು ಭಗವಾನ್ ಬುದ್ಧ ನೀಡಿರುವ ಉದಾತ್ತ ಸಂದೇಶ ಸದಾ ಕಾಲ ಚಿರಸ್ಮರಣೀಯವಾಗಿರ ಬೇಕು. ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದದ ಗುರಿ ಸಾಧನೆಯ ಹಾದಿಯಲ್ಲಿ ಭಾರತವು ಬೃಹತ್ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ. ಭಾರತವು ಸುಸ್ಥಿರ ಜೀವನ ಶೈಲಿಯಲ್ಲಿರುವ ರಾಷ್ಟ್ರ ಎಂಬ ಸಮರ್ಪಕ ಪದಗಳನ್ನು ಬಳಕೆ ಮಾಡುವುದಷ್ಟೇ ಅಲ್ಲ, ಅದು  ಸಮರ್ಪಕ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂಬುದು ಗಮನಾರ್ಹ ಎಂದು ನರೇಂದ್ರ ಮೋದಿ ತಿಳಿಸಿದರು.

ಶಾಂತಿ, ಸೌಹಾರ್ದ, ಸಹಬಾಳ್ವೆಯ ಸಂದೇಶ ಸಾರಿದ ಭಗವಾನ್ ಗೌತಮ ಬುದ್ಧನ ಸಂದೇಶಗಳು ಸದಾಕಾಲಕ್ಕೂ ಪ್ರಸ್ತುತ. ಆದರೆ ಪ್ರಸ್ತುತ ಸಮಾಜದಲ್ಲಿ ಕೆಲವು ವಿಚ್ಛಿದ್ರಕಾರಕ ಶಕ್ತಿಗಳು ದ್ವೇಶ, ಭಯೋತ್ಪಾದನೆ ಮತ್ತು ಅರ್ಥಹೀನ ಹಿಂಸೆ ಹರಡುತ್ತಿವೆ. ಅವುಗಳ ಮನಸ್ಥಿತಿ ಇಂತಹ ಕುಕೃತ್ಯಗಳನ್ನೇ ಅವಲಂಬಿಸಿದೆ. ಇಂತಹ ದುಷ್ಟಶಕ್ತಿಗಳು ಉದಾರ ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ. ಈ ನಿಟ್ಟಿನಲ್ಲಿ, ಮಾನವತೆಯಲ್ಲಿ ನಂಬಿಕೆ ಹೊಂದಿರುವ ಎಲ್ಲ ಶಕ್ತಿಗಳು ಮತ್ತು ಜನರು ಭಯೋತ್ಪಾದನೆ ಮತ್ತು ಮೂಲಭೂತವಾದವನ್ನು ಸಂಪೂರ್ಣ ಹತ್ತಿಕ್ಕಲು ಒಟ್ಟುಗೂಡಬೇಕು. ಸಾಮಾಜಿಕ ನ್ಯಾಯಕ್ಕಾಗಿ ಗೌತಮ ಬುದ್ಧ ನೀಡಿರುವ ಬೋಧನೆಗಳು ಮತ್ತು ಅವುಗಳ ಮಹತ್ವವು ಜಾಗತಿಕ ಏಕೀಕರಣ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಪ್ರಧಾನ ಮಂತ್ರಿ ಕರೆ ನೀಡಿದರು.

ಗೌತಮ ಬುದ್ಧ ಇಡೀ ವಿಶ್ವಕ್ಕೆ ತೇಜಸ್ಸಿನ ಜಲಾಶಯವಿದ್ದಂತೆ. ಆತನ ಬುದ್ಧಿವಂತಿಕೆ, ಜಾಣ್ಮೆ, ಉದಾತ್ತ ಆಲೋಚನೆಗಳು ವಿಶ್ವವ್ಯಾಪಿ. ಆತನ ಪ್ರಖರ ಚಿಂತನೆಯಿಂದ ನಾವೆಲ್ಲಾ ಕಾಲ ಕಾಲಕ್ಕೆ ಜ್ಞಾನದ ಬೆಳಕು ಪಡೆದು, ಸಹಾನುಭೂತಿ, ಸಾರ್ವತ್ರಿಕ ಜವಾಬ್ದಾರಿ ಮತ್ತು ಕಲ್ಯಾಣದ ಹಾದಿಯಲ್ಲಿ ಮುನ್ನಡೆಯಬೇಕು. “ಬುದ್ಧನು ಸತ್ಯ ಮತ್ತು ಪ್ರೀತಿಯ ಅಂತಿಮ ವಿಜಯೋತ್ಸವದಲ್ಲಿ ನಂಬಿಕೆ ಹೊಂದುವುದನ್ನು ಕಲಿಸಿದ್ದಾನೆ” ಎಂಬ ಮಹಾತ್ಮ ಗಾಂಧೀಜಿಯವರ ಉಲ್ಲೇಖವನ್ನು ಪ್ರಸ್ತಾಪಿಸಿದ ಪ್ರಧಾನಿ, ಪ್ರತಿಯೊಬ್ಬರೂ ಬುದ್ಧನ ಆದರ್ಶಗಳನ್ನು ಪಾಲಿಸುವ ಬದ್ಧತೆಯನ್ನು ಪರಿಷ್ಕರಿಸಬೇಕು ಎಂದು ಕರೆ ನೀಡಿದರು.

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಅವಿರತ ಹೋರಾಡುತ್ತಿರುವ ನಮ್ಮ ಮುಂಚೂಣಿ ಕಾರ್ಯಕರ್ತರು, ವೈದ್ಯರು, ದಾದಿಯರು ಮತ್ತು ಸ್ವಯಂಸೇವಾ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಪ್ರತಿದಿನ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರಿಗೂ ಇಲ್ಲಿ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಸೋಂಕಿನಿಂದ ಜೀವ ಕಳೆದುಕೊಂಡವರು ಮತ್ತು ಪ್ರೀತಿ ಪಾತ್ರರ ಅಗಲಿಕೆಯಿಂದ ದುಃಖದಲ್ಲಿರುವ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ನೆರಹೊರೆಯವರು ನೋವು ಅನುಭವಿಸುತ್ತಿದ್ದಾರೆ. ಅವರಿಗೂ ಈ ಸಂದರ್ಭದಲ್ಲಿ ಸಂತಾಪ ಸೂಚಿಸುತ್ತೇನೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why The SHANTI Bill Makes Modi Government’s Nuclear Energy Push Truly Futuristic

Media Coverage

Why The SHANTI Bill Makes Modi Government’s Nuclear Energy Push Truly Futuristic
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಡಿಸೆಂಬರ್ 2025
December 19, 2025

Citizens Celebrate PM Modi’s Magic at Work: Boosting Trade, Tech, and Infrastructure Across India