PM-CARES Fund to procurement 1,50,000 units of Oxycare System at a cost of Rs 322.5 Crore.
Comprehensive system developed by DRDO to regulate oxygen being administrated to patients based on the sensed values of their SpO2 levels.
DRDO has transferred the technology to multiple industries in India who will be producing the Oxycare Systems for use all across India.
Oxycare system reduces the work load and exposure of healthcare providers by eliminating the need of routine measurement and manual adjustments of Oxygen flow

322.5 ಕೋಟಿ ರೂ.ಗಳ ವೆಚ್ಚದಲ್ಲಿ 1,50,000 ಯುನಿಟ್ ಆಕ್ಸಿಕೇರ್ ಸಿಸ್ಟಮ್ ಗಳನ್ನು ಖರೀದಿಸಲು ಪಿಎಂ-ಕೇರ್ಸ್ ನಿಧಿ ಅನುಮತಿ ನೀಡಿದೆ. ರೋಗಿಗಳಿಗೆ ನೀಡುವ ಆಮ್ಲಜನಕವನ್ನು ಅವರ ಎಸ್‌ಪಿಒ 2 ಮಟ್ಟಗಳ ಆಧಾರದ ಮೇಲೆ ನಿಯಂತ್ರಿಸಲು ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸಮಗ್ರ ವ್ಯವಸ್ಥೆ ಇದಾಗಿದೆ.

ವ್ಯವಸ್ಥೆಯನ್ನು ಎರಡು ಸಂರಚನೆಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೂಲ ಆವೃತ್ತಿಯು 10 ಲೀಟರ್ ಆಕ್ಸಿಜನ್ ಸಿಲಿಂಡರ್, ಒತ್ತಡ ನಿಯಂತ್ರಕ ಕಮ್ ಹರಿವಿನ ನಿಯಂತ್ರಕ, ಆರ್ದ್ರಕ ಮತ್ತು ಮೂಗಿನ ತೂರುನಳಿಗೆಯನ್ನು ಒಳಗೊಂಡಿದೆ. ಇದರಲ್ಲಿ ಎಸ್‌ಪಿಒ 2 ಮಟ್ಟವನ್ನು ಆಧರಿಸಿ ಆಮ್ಲಜನಕದ ಹರಿವನ್ನು ಕೈಯಾರೆ ನಿಯಂತ್ರಿಸಲಾಗುತ್ತದೆ. ಇಂಟಿಲಿಜೆಂಟ್ (ಬುದ್ಧಿವಂತ) ಸಂರಚನೆಯು ಮೂಲ ಆವೃತ್ತಿಯ ಜೊತೆಗೆ ಕಡಿಮೆ ಒತ್ತಡದ ನಿಯಂತ್ರಕ, ಎಲೆಕ್ಟ್ರಾನಿಕ್ ನಿಯಂತ್ರಣ ವ್ಯವಸ್ಥೆ ಮತ್ತು ಎಸ್‌ಪಿಒ 2 ಪ್ರೋಬ್ ಮೂಲಕ ಆಮ್ಲಜನಕವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುವ ವ್ಯವಸ್ಥೆಯನ್ನು ಒಳಗೊಂಡಿದೆ.

ಎಸ್‌ಪಿಒ 2 ಆಧಾರಿತ ಆಮ್ಲಜನಕ ನಿಯಂತ್ರಣ ವ್ಯವಸ್ಥೆಯು ರೋಗಿಯ ಎಸ್‌ಪಿಒ 2 ಮಟ್ಟವನ್ನು ಆಧರಿಸಿ ಆಮ್ಲಜನಕದ ಬಳಕೆಯನ್ನು ಉತ್ತಮಗೊಳಿಸುತ್ತದೆ ಮತ್ತು ಪೋರ್ಟಬಲ್ ಆಕ್ಸಿಜನ್ ಸಿಲಿಂಡರ್‌ನ ಕ್ಷಮತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ. ವ್ಯವಸ್ಥೆಯಿಂದ ಹರಿವನ್ನು ಪ್ರಾರಂಭಿಸಲು ಎಸ್‌ಪಿಒ 2  ಮೌಲ್ಯವನ್ನು ಆರೋಗ್ಯ ಸಿಬ್ಬಂದಿಯು ಸರಿಹೊಂದಿಸಬಹುದು ಮತ್ತು ಎಸ್‌ಪಿಒ 2  ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ವ್ಯವಸ್ಥೆಯು ಅದನ್ನು ಪ್ರದರ್ಶಿಸುತ್ತದೆ. ಇದು ದಿನನಿತ್ಯದ ಮಾಪನ ಮತ್ತು ಆಕ್ಸಿಜನ್ ಹರಿವಿನ ಮಾನವ ಹೊಂದಾಣಿಕೆಗಳ ಅಗತ್ಯವನ್ನು ತೆಗೆದುಹಾಕುವ ಮೂಲಕ ಆರೋಗ್ಯ ಸಿಬ್ಬಂದಿಯ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಟೆಲಿ-ಸಮಾಲೋಚನೆಗೆ ಸಹ ಅನುಕೂಲವಾಗುತ್ತದೆ. ಕಡಿಮೆ ಎಸ್‌ಪಿಒ 2 ಮಟ್ಟ ಮತ್ತು ಪ್ರೋಬ್ ಗಳ ಸಂಪರ್ಕ ಕಡಿತ ಸೇರಿದಂತೆ ವಿವಿಧ ವೈಫಲ್ಯಗಳ ಸಂದರ್ಭದಲ್ಲಿ ಸ್ವಯಂಚಾಲಿತ ವ್ಯವಸ್ಥೆಯು ಸೂಕ್ತ ಆಡಿಯೊ ಎಚ್ಚರಿಕೆ ನೀಡುತ್ತದೆ. ಈ ಆಕ್ಸಿಕೇರ್ ವ್ಯವಸ್ಥೆಗಳನ್ನು ಮನೆಗಳು, ಕ್ವಾರಂಟೈನ್ ಕೇಂದ್ರಗಳು, ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಬಳಸಬಹುದು.

ಇದರ ಜೊತೆಯಲ್ಲಿ, ಆಮ್ಲಜನಕವನ್ನು ಸಮರ್ಥವಾಗಿ ಬಳಸುವುದಕ್ಕಾಗಿ ನಾನ್-ರಿಬ್ರೀಥರ್ ಮಾಸ್ಕ್ (ಎನ್‌ಆರ್‌ಎಂ) ಅನ್ನು ಆಕ್ಸಿಕೇರ್ ಸಿಸ್ಟಂಗಳೊಂದಿಗೆ ಸಂಯೋಜಿಸಲಾಗಿದೆ, ಇದರಿಂದಾಗಿ ಶೇ.30-40 ರಷ್ಟು ಆಮ್ಲಜನಕ ಉಳಿತಾಯವಾಗುತ್ತದೆ.

ಪ್ರಸ್ತುತ ವೈದ್ಯಕೀಯ ಶಿಷ್ಟಾಚಾರವು ಎಲ್ಲಾ ತೀವ್ರ ಮತ್ತು ನಿರ್ಣಾಯಕ ಕೋವಿಡ್ -19 ರೋಗಿಗಳಿಗೆ ಆಮ್ಲಜನಕದ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತದೆ. ಆಮ್ಲಜನಕದ ಉತ್ಪಾದನೆ, ಸಾರಿಗೆ ಮತ್ತು ಶೇಖರಣೆಯ ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ, ಆಮ್ಲಜನಕ ಸಿಲಿಂಡರ್‌ಗಳು ಪರಿಣಾಮಕಾರಿ ಎಂದು ಸಾಬೀತಾಗಿದೆ. ಆಮ್ಲಜನಕ ಚಿಕಿತ್ಸೆಯ ಅಗತ್ಯವಿರುವ ಬಹುತೇಕ ಸಂಖ್ಯೆಯ ರೋಗಿಗಳ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಕೇವಲ ಒಂದು ರೀತಿಯ ವ್ಯವಸ್ಥೆಯನ್ನು ಮಾತ್ರ ಹೊಂದುವುದು ಸಾಧುವಾಗುವುದಿಲ್ಲ.  ಏಕೆಂದರೆ ವ್ಯವಸ್ಥೆಯ ಮೂಲ ಸಾಧನಗಳನ್ನು ತಯಾರಿಸುವ ಎಲ್ಲಾ ಉತ್ಪಾದನಾ ಘಟಕಗಳು ಈಗಾಗಲೇ ಅವುಗಳ ಗರಿಷ್ಠ ಸಾಮರ್ಥ್ಯದಲ್ಲಿ ಚಾಲನೆಯಲ್ಲಿವೆ. ವ್ಯವಸ್ಥೆಯ ಮಿಶ್ರಣ ಮತ್ತು ಹೊಂದಾಣಿಕೆಯು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಉಪಯುಕ್ತ ವ್ಯವಸ್ಥೆ ಎಂದು ಸಾಬೀತುಪಡಿಸುತ್ತದೆ. ಈಗಿರುವ ಕಾರ್ಬನ್-ಮ್ಯಾಂಗನೀಸ್ ಸ್ಟೀಲ್ ಸಿಲಿಂಡರ್‌ಗಳ ದೇಶೀಯ ತಯಾರಕರ ಸಾಮರ್ಥ್ಯವು ಬಹಳ ಸೀಮಿತವಾಗಿದೆ. ಪರ್ಯಾಯವಾಗಿ, ಡಿಆರ್‌ಡಿಒ ಲಘುವಾದ ಪೋರ್ಟಬಲ್ ಸಿಲಿಂಡರ್‌ಗಳನ್ನು ಸಲಹೆ ಮಾಡಿದೆ. ಇದು ಸಾಮಾನ್ಯ ಆಮ್ಲಜನಕ ಸಿಲಿಂಡರ್‌ಗಳಿಗೆ ಬದಲಿಯಾಗಿ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ.

ಡಿಆರ್‌ಡಿಒ ತಂತ್ರಜ್ಞಾನವನ್ನು ಭಾರತದ ಅನೇಕ ಕೈಗಾರಿಕೆಗಳಿಗೆ ವರ್ಗಾಯಿಸಿದೆ, ಇವುಗಳು ಭಾರತದಾದ್ಯಂತ ಆಕ್ಸಿಕೇರ್ ವ್ಯವಸ್ಥೆಗಳನ್ನು ಉತ್ಪಾದಿಸಲಿವೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From drugs to aircraft parts, what India gets under the $500 billion US trade deal

Media Coverage

From drugs to aircraft parts, what India gets under the $500 billion US trade deal
NM on the go

Nm on the go

Always be the first to hear from the PM. Get the App Now!
...
Prime Minister Congratulates India’s U-19 Cricket Team on World Cup Victory
February 06, 2026

The Prime Minister, Shri Narendra Modi, has lauded the outstanding performance of India’s Under-19 cricket team for clinching the World Cup title.

Prime Minister commended the team for playing very well through the tournament, showcasing exceptional skill. This win will inspire several young sportspersons too, he added.

In a message on X, Shri Modi said:

“India’s cricketing talent shines!

Proud of our U-19 team for bringing home the World Cup. The team has played very well through the tournament, showcasing exceptional skill. This win will inspire several young sportspersons too. Best wishes to the players for their upcoming endeavours.”