ಶೇರ್
 
Comments

ಬೆಳೆಯುತ್ತಿರುವ ನಗರಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆ ಜಾರಿಯಿಂದಾಗಿ ಖಾಸಗಿ ಹೂಡಿಗೆದಾರರಿಗೆ ಹೆಬ್ಬಾಗಿಲು ತೆರೆದಂತಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರದ ಸಹಾಯವನ್ನು ಪಡೆದುಕೊಳ್ಳಲು ಪಿಪಿಪಿ ಘಟಕವನ್ನು ಕಡ್ಡಾಯವಾಗಿ ಬಳಸಿಕೊಳ್ಳಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟಂತೆ ನಿಗಾ ವಹಿಸಲಾಗಿದೆ. ದೊಡ್ಡ ಸಾಮಥ್ರ್ಯದ ಮೆಟ್ರೋ ಯೋಜನೆಗೆಳಿಗೆ ಬೃಹತ್ ಸಂಪನ್ಮೂಲ ಬೇಡಿಕೆ ಪೂರೈಸಲು ಖಾಸಗಿ ಹೂಡಿಕೆ ಮತ್ತು ಇತರೆ ಹೂಡಿಕೆ ಸಂಸ್ಥೆಗಳು ಭಾಗವಹಿಸುವುದು ಯೋಜನೆಯ ಭಾಗವಾಗಿದೆ. ಖಾಸಗಿ ಸಂಸ್ಥೆಗಳು ಯೋಜನೆಯನ್ನು ಪೂರ್ಣಗೊಳಿಸಲು ( ಆಟೋಮೇಟಿಕ್ ಫಾರ್ ಕಲೆಕ್ಷನ್, ಆಪರೇಷನ್, ಮೇಂಟೆನೆನ್ಸ್ ಆಫ್ ಸರ್ವೀಸ್ ಇತರೆ) ಕೇಂದ್ರ ಸರ್ಕಾರದ ಆರ್ಥಿಕ ಸಹಾಯವನ್ನು ಪಡೆಯಬಹುದಾಗಿದೆ ಎಂಬುದು ಯೋಜನೆಯ ಮತ್ತೊಂದು ವಿಶೇಷವಾಗಿದೆ. ಆ ಮೂಲಕ ಖಾಸಗಿ ಬಂಡವಾಳವನ್ನು ಕ್ರೂಢೀಕರಿಸಬಹುದಾಗಿದೆ.
ಹೊಸ ಮೆಟ್ರೋ ಯೋಜನೆ ಅನುಸಾರ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶವನ್ನು (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕಿದೆ. ಹಾಲಿ ಇರುವ ಪ್ರದೇಶಗಳಲ್ಲಿ ಈ ರೀತಿಯ ಸೌಲಭ್ಯವಿಲ್ಲ. ಆದರೆ ಅದನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ.

ನಿಲ್ದಾಣಕ್ಕೆ ಆಗಮಿಸಲು ಅಗತ್ಯವಿರುವ ಸಂಚಾರದ ಸೌಲಭ್ಯಗಳ ಬಗ್ಗೆ ಸ್ಥಳೀಯ ಸರ್ಕಾರಗಳು ಯೋಜನೆಯ ವರದಿ ನೀಡಬೇಕಿದೆ. ನಿಲ್ದಾಣಕ್ಕೆ ನಡೆದುಕೊಂಡು ಬರುವುದು, ಅಥವಾ ಸೈಕಲ್‍ನಲ್ಲಿ ಬರುವುದೂ ಸೇರಿದಂತೆ ಇತರೆ ಸಂಚಾರ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವುದು ಸ್ಥಳೀಯ ಆಡಳಿತದ ಕೆಲಸವಾಗಿದೆ. ಸ್ಥಳೀಯ ಆಡಳಿತವು ಈ ಯೋಜನೆಗೆ ಸಂಬಂಧಪಟ್ಟಂತೆ ಯೋಜನಾ ವರದಿ ಮತ್ತು ಹೂಡಿಕೆ ವಿವರ ನೀಡಬೇಕಿದೆ. ನಿಲ್ದಾಣದ ಬಳಿ ಲಘು ವಾಹನ ಸೇವೆಯನ್ನು ಅಳವಡಿಸುವುದು ಅಗತ್ಯವಿದೆ. ಬಿಆರ್‍ಟಿಎಸ್( ಬಸ್ ರ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಮ್), ಲಘು ರೈಲಿನ ಸೇವೆ, ಟ್ರಾಮ್‍ವೇಗಳು, ಮೆಟ್ರೋ ರೈಲು ಮತ್ತು ಸ್ಥಳೀಯ ರೈಲು ಸೇವೆಯನ್ನು ಸಹ ಬೇಡಿಕೆಗೆ ತಕ್ಕಂತೆ ಪೂರೈಸಬೇಕಿದೆ. ಈ ಸೇವೆಗಳನ್ನು ಅಳವಡಿಸುವುದು ಸೇವೆಯ ಒಂದು ಭಾಗವಾಗಿದೆ. ಈ ವೇಳೆ ಅಗತ್ಯವಿರುವ ಸಲಹೆಗಳನ್ನು ನೀಡಲು ಅರ್ಬನ್ ಮೆಟ್ರೋಪಾಲಿಟನ್ ಟ್ರಾನ್ಸ್‍ಪೋರ್ಟ್ ಅಥಾರಿಟಿಯನ್ನು ಸ್ಥಾಪಿಸಲಾಗಿದೆ. ನಗರಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಈ ಸಂಸ್ಥೆ ಸೂಕ್ತವಾಗಿ ಕೆಲಸ ಮಾಡಲಿದೆ.
ಈ ಯೋಜನೆಯ ಕೆಲಸದ ಪ್ರಗತಿಯನ್ನು ಕೂಲಂಕಷವಾಗಿ ಪರೀಕ್ಷೆಗೆ ಒಳಪಡಿಸಲು ಸರ್ಕಾರವು ಇನ್ಸಿಟಿಟ್ಯೂಟ್ ಆಫ್ ಅರ್ಬನ್ ಟ್ರಾನ್ಸ್‍ಪೋರ್ಟ್ ಅಂತಹ ಕೆಲ ಸಂಸ್ಥೆಗಳನ್ನು ಹುಟ್ಟುಹಾಕುತ್ತಿದೆ.

ಜಾಗತಿಕವಾಗಿ, ಸಾಮಾಜಿಕ ಹಾಗೂ ಆರ್ಥಿಕವಾಗಿ ಯೋಜನೆಯನ್ನು ಉತ್ತಮಗೊಳಿಸಲು ಹೂಡಿಕೆ ದರವನ್ನು ಶೇ. 8ರಿಂದ 14ಕ್ಕೆ ಏರಿಸಲಾಗಿದೆ. ನಗರ ಯೋಜನೆಗಳು ಕೇವಲ ನಗರ ಯೋಜನೆಗಳಾಗುವುದು ಬೇಡ. ನಗರೀಕರಣದ ಯೋಜನೆಗೆ ಕೊಡುಗೆಯಂತಿರಲಿ. ಇದರ ಜತೆಗೆ ಟ್ರಾನ್ಸಿಟ್ ಓರಿಯೆಂಟೆಡ್ ಡೆವಲೆಪ್‍ಮೆಂಟ್ (ಟಿಒಡಿ) ಸಂಸ್ಥೆಯು ಮೆಟ್ರೋ ಯೋಜನೆ ಮೂಲಕ ನಗರದ ವಾಹನ ದಟ್ಟಣೆಯನ್ನು ಕಡಮೆ ಮಾಡುವಲ್ಲಿ ನೆರವಾಗಲಿದೆ. ಪ್ರಯಾಣ ದೂರವನ್ನು ಕಡಿಮೆ ಮಾಡುವುದು ಮತ್ತು ಅಗತ್ಯ ಭೂಮಿಯನ್ನು ಒದಗಿಸುವಲ್ಲಿ ಟಿಒಡಿ ನೆರವಾಗಲಿದೆ. ಈ ಯೋಜನೆಯಡಿ ರಾಜ್ಯಗಳು ಹಣಕಾಸು ಮೂಲಗಳನ್ನು ಕಂಡುಕೊಳ್ಳಬಹುದಾಗಿದೆ. ಮೆಟ್ರೋ ಹಾದುಹೋಗುವ ಭಾಗಗಳಲ್ಲಿ ಆಸ್ತಿ ತೆರಿಗೆ(ಬೆಟರ್‍ಮೆಂಟ್ ಲೆವಿ)ಯನ್ನು ಹೆಚ್ಚಳ ಮಾಡಬಹುದಾಗಿದೆ. ಇದರ ಜತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವುದು ಮತ್ತು ಕಾರ್ಪೋರೇಟ್ ಕಂಪನಿಗಳ ನೆರವನ್ನು ಪಡೆಯಬಹುದಾಗಿದೆ.

ಮೆಟ್ರೋ ಯೋಜನೆಗಾಗಿ ಹಣವನ್ನು ಕ್ರೋಢೀಕರಿಸುವಲ್ಲಿ ರಾಜ್ಯ ಸರ್ಕಾರಗಳು ಹಲವು ರೀತಿಯ ಪ್ರಯೋಗಗಳನ್ನು ಮಾಡಬಹುದಾಗಿದೆ. ಮೆಟ್ರೋ ನಿಲ್ದಾಣದ ಬಳಿ ಇರುವ ಆಸ್ತಿಯನ್ನು ವಾಣಿಜ್ಯಬಳಕೆಗಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಯೋಜನೆಯ ವರದಿಯಲ್ಲಿ ತಿಳಿಸಲಾಗಿದೆ. ಇದರ ಜತೆಗೆ ಜಾಹೀರಾತುಗಳನ್ನು ಪಡೆಯುವ ಮೂಲಕ ಹಾಗೂ ಖಾಲಿ ಇರುವ ಸ್ಥಳವನ್ನು ಗುತ್ತಿಗೆಗೆ ನೀಡುವ ಮೂಲವೂ ಹಣವನ್ನು ಶೇಖರಿಸಬಹುದಾಗಿದೆ. ಜತೆಗೆ ಸ್ಥಳೀಯವಾಗಿ ಅನುಮತಿ ನೀಡುವುದರ ಬಗ್ಗೆ ಸರ್ಕಾರಗಳು ಕೆಲಸ ಮಾಡಬೇಕಿದೆ.

ಮೆಟ್ರೋ ರೈಲು ಪ್ರಯಾಣದ ದರವನ್ನು ಕಾಲಕಾಲಕ್ಕೆ ನಿಗದಿಗೊಳಿಸುವ ಮತ್ತು ಕಾನೂನು ಕಟ್ಟಲೆಗಳನ್ನು ಜಾರಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಯೋಜನೆಯನ್ನು ಸರ್ಕಾರಗಳು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರದ ಮೂರು ರೀತಿಯ ಸಹಾಯವನ್ನು ಪಡೆಯಬಹುದಾಗಿದೆ.

ಪಿಪಿಪಿ, ಕೇಂದ್ರ ಹಣಕಾಸು ಸಚಿವಾಲಯದಿಂದ ಗ್ಯಾಪ್ ಫಂಡಿಂಗ್, ಶೇ. 50ರ ಅನುಪಾತದಲ್ಲಿ ಕೇಂದ್ರ ಸರ್ಕಾರದ ಸಹಾಯವನ್ನು ಪಡೆಯಬಹುದಾಗಿದೆ. ಈ ಎಲ್ಲ ಆಯ್ಕೆಗಳ ನಡುವೆ ಖಾಸಗಿ ವಲಯ ಭಾಗವಹಿಸುವುದು ಅಗತ್ಯವಾಗಿದೆ.

ಒ ಮತ್ತು ಎಂ ಯೋಜನೆ
1. ಕಾಸ್ಟ್ ಪ್ಲಸ್ ಶುಲ್ಕದ ಗುತ್ತಿಗೆ: ಖಾಸಗಿ ನೌಕರನು ಒಮತ್ತು ಎಂ ಮಾಸಿಕ ಮತ್ತು ವಾರ್ಷಿಕ ವೇತವನ್ನು ಪಾವತಿಸಲಾಗುತ್ತದೆ. ಸೇವೆಯ ಸ್ಥಿರ ಮತ್ತು ಸೇವೆಯ ಗುಣಮಟ್ಟದ ಆಧಾರದ ಮೇಲೆ ಇದು ನಿರ್ಧರಿತವಾಗಿರುತ್ತದೆ. ಕಾರ್ಯಚಟುವಟಿಕೆ ಮತ್ತು ಆದಾಯದ ಜವಾಬ್ದಾರಿ ಮಾಲೀಕನದಾಗಿರುತ್ತದೆ.

2. ನಿವ್ವಳ ವೆಚ್ಚದ ಗುತ್ತಿಗೆ: ಗುತ್ತಿಗೆ ಅವಧಿಯಲ್ಲಿ ಸಂಗ್ರಹಿಸಲಾದ ಮೊತ್ತವನ್ನು ಆಪರೇಟರ್‍ಗೆ ನೀಡಲಾಗುತ್ತದೆ. ಒ ಮತ್ತು ಎಂ ಬಗ್ಗೆ ನೌಕರನ ಜವಾಬ್ದಾರಿಯಾಗಿರುತ್ತದೆ. ಅದೇ ರೀತಿ ಹಣ ಸಂಗ್ರಹವು ಮಾಲೀಕನರ ಜವಾಬ್ದಾರಿಯಾಗಿರುತ್ತದೆ.

3. ನೀಡಿರುವ ಸೇವೆಗಳನ್ನು ನಿರ್ವಹಿಸುವುದು ನೌಕರನ ಜವಾಬ್ದಾರಿಯಾಗಿರುತ್ತದೆ. ಒ ಮತ್ತು ಎಂಗಿಂತ ಕಡಿಮೆ ಹಣ ಸಂಗ್ರಹವಾದಲ್ಲಿ ಅದನ್ನು ಸರಿದೂಗಿಸುವುದು ಮಾಲೀಕನ ಜವಾಬ್ದಾರಿಯಾಗಿದೆ.

ಹಾಲಿ ಒಟ್ಟು 370 ಕಿಮೀ ಮೆಟ್ರೋ ಯೋಜನೆಯ ಕೆಲಸಗಳು ಒಟ್ಟು 8 ನಗರಗಳಲ್ಲಿ ಪ್ರಗತಿಯಲ್ಲಿವೆ. ದೆಹಲಿ (217), ಬೆಂಗಳೂರು(42.30), ಕೊಲ್ಕತ್ತ (27.39), ಚೆನ್ನೈ (27.36), ಕೊಚ್ಚಿ (13.30), ಮುಂಬೈ (ಮೆಟ್ರೋ ಲೈನ್ 1-140 ಕೀಮಿ), ಮೊನೊ ರೈಲು ಫೇಸ್ 1-9.0ಕಿಮೀ) ಜೈಪುರ (9.00 ಕಿಮೀ), ಮತ್ತು ಗುರ್‍ಗಾವ್ (ರ್ಯಾಪಿಡ್ ಮೆಟ್ರೋ 1.60 ಕಿಮೀ) ಒಟ್ಟಾರೆ ಈ ಮೇಲ್ಕಂಡ 8 ನಗರಗಳು ಸೇರಿದಂತೆ 13 ನಗರಗಳಲ್ಲಿ ಮೆಟ್ರೋ ಯೋಜನೆಯು 537 ಕಿಮೀ ಕೆಲಸ ಪ್ರಗತಿಯಲ್ಲಿದೆ. ಈ ಯೋಜನೆಯು ಒಳಪಟ್ಟಿರುವ ಹೊಸ ನಗರಗಳು ಅಂದರೆ ಹೈದರಾಬಾದ್ (71ಕಿಮೀ), ನಾಗಪುರ (38ಕಿಮೀ), ಅಹಮದಾಬಾದ್ (36), ಪುಣೆ (31.25 ಕಿಮೀ), ಪುಣೆ (31.25 ಕಿಮೀ), ಮತ್ತು ಲಖನೌ (23 ಕಿಮೀ). ಮೆಟ್ರೋ ಯೋಜನೆಯು ಒಟ್ಟು 595 ಕಿಮೀ ಉದ್ದವಿದ್ದು, ಒಟ್ಟು 13 ನಗರಗಳನ್ನು ಒಳಗೊಂಡಿದೆ. ಅದರಲ್ಲಿ 10 ಹೊಸ ನಗರಗಳೂ ಸೇರಿವೆ. ಆದರೆ ಅವುಗಳು ಇನ್ನು ಯೋಜನೆಯ ಪ್ರಗತಿಯಲ್ಲಿವೆ. ಅವುಗಳೆಂದರೆ ದೆಹಲಿ ಮೆಟ್ರೋ ಫೇಸ್ 4- 103-93 ಕಿಮೀ, ದೆಹಲಿ ಮತ್ತು ಎನ್‍ಸಿಆರ್ 21.10 ಕಿಮೀ, ವಿಜಯವಾಡ 26.03 ಕಿಮೀ, ವಿಶಾಖಪಟ್ಟಣ 12055 ಕಿಮೀ, ಭೋಪಾಲ್ 27.87 ಕಿಮೀ, ಇಂದೋರ್ 31.55 ಕಿಮೀ, ಕೊಚ್ಚಿ ಮೆಟ್ರೋ ಫೇಸ್ 11-11.20 ಕಿಮೀ,ಗ್ರೇಟರ್ ಚಂಡಿಗಢ ಮೆಟ್ರೋ ಪ್ರಾಜೆಕ್ಟ್ 37.56 ಕಿಮೀ, ಪಟನಾ27.88 ಕಿಮೀ, ಗುವಾಹತಿ 61 ಕಿಮೀ, ವಾರಾಣಸಿ 29.24 ಕಿಮೀ, ತಿರುವನಂತಪುರಂ ಮತ್ತು ಕಾಚಿಗೂಡ (ಲೈಟ್ ರೈಲು ಟ್ರಾನ್ಸ್‍ಪೋರ್ಟ್) 35012 ಮತ್ತು ಚೆನ್ನೈ ಫೇಸ್ 2 107.50 ಕಿಮೀ.

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Highlighting light house projects, PM Modi says work underway to turn them into incubation centres

Media Coverage

Highlighting light house projects, PM Modi says work underway to turn them into incubation centres
...

Nm on the go

Always be the first to hear from the PM. Get the App Now!
...
You gave your best and that is all that counts: PM to fencer Bhavani Devi
July 26, 2021
ಶೇರ್
 
Comments

The Prime Minister, Shri Narendra Modi has appreciated efforts of  India's fencing player C A Bhavani Devi who registered India's first win in an Olympic fencing match before bowing out in the next round. 

Reacting to an emotional tweet by the Olympian, the Prime Minister tweeted: 

"You gave your best and that is all that counts. 

Wins and losses are a part of life. 

India is very proud of your contributions. You are an inspiration for our citizens."