ಯುಎಸ್ ನಿಯೋಗವು ಭಾರತದಲ್ಲಿ ಚುನಾವಣೆಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಪ್ರಮಾಣ, ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಶ್ಲಾಘಿಸುತ್ತದೆ
ಭಾರತ-ಯುಎಸ್ ಸಂಬಂಧಗಳನ್ನು ಮುನ್ನಡೆಸುವಲ್ಲಿ ಯುಎಸ್ ಕಾಂಗ್ರೆಸ್ ನ ಸ್ಥಿರ ಮತ್ತು ದ್ವಿಪಕ್ಷೀಯ ಬೆಂಬಲದ ಮಹತ್ವವನ್ನು ಪ್ರಧಾನಿ ಉಲ್ಲೇಖಿಸಿದರು
ಕಳೆದ ವರ್ಷ ತಾವು ಅಮೆರಿಕಕ್ಕೆ ನೀಡಿದ್ದ ಐತಿಹಾಸಿಕ ಭೇಟಿಯನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಆ ಸಂದರ್ಭದಲ್ಲಿ ತಾವು ಎರಡನೇ ಬಾರಿಗೆ ಕಾಂಗ್ರೆಸ್ ಅನ್ನುದ್ದೇಶಿಸಿ ಭಾಷಣ ಮಾಡಿದ್ದನ್ನು ಸ್ಮರಿಸಿದರು

ಹೌಸ್ (ಸಂಸತ್) ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಮೈಕೆಲ್ ಮೆಕ್ ಕೌಲ್ ನೇತೃತ್ವದ ಏಳು ಸದಸ್ಯರ ಯುಎಸ್ ಕಾಂಗ್ರೆಸ್ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.

ನಿಯೋಗದ ಇತರ ಸದಸ್ಯರಲ್ಲಿ ಪ್ರತಿನಿಧಿ ನ್ಯಾನ್ಸಿ ಪೆಲೋಸಿ, ಪ್ರತಿನಿಧಿ ಗ್ರೆಗೊರಿ ಮೀಕ್ಸ್, ಪ್ರತಿನಿಧಿ ಮರಿಯಾನೆಟ್ ಮಿಲ್ಲರ್-ಮೀಕ್ಸ್, ಪ್ರತಿನಿಧಿ ನಿಕೋಲ್ ಮಲ್ಲಿಯೊಟಾಕಿಸ್, ಪ್ರತಿನಿಧಿ ಅಮರೀಶ್ ಬಾಬುಲಾಲ್ "ಅಮಿ ಬೆರಾ" ಮತ್ತು ಪ್ರತಿನಿಧಿ ಜಿಮ್ ಮೆಕ್ಗವರ್ನ್ ಸೇರಿದ್ದಾರೆ.

ಸತತ ಮೂರನೇ ಅವಧಿಗೆ ಆಯ್ಕೆಯಾಗಿರುವ ಪ್ರಧಾನಮಂತ್ರಿಯವರಿಗೆ ನಿಯೋಗದ ಸದಸ್ಯರು ಅಭಿನಂದನೆ ಸಲ್ಲಿಸಿದರು.

ಭಾರತದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣಾ ಪ್ರಕ್ರಿಯೆಯ ಪ್ರಮಾಣ, ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಬಗ್ಗೆ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಯೋಗವು ಭಾರತ-ಅಮೆರಿಕ ಸಂಬಂಧಗಳನ್ನು ಅತ್ಯಂತ ಪರಿಣಾಮಾತ್ಮಕವಾಗಿದೆ ಎಂದು ಬಣ್ಣಿಸಿತು ಮತ್ತು ವ್ಯಾಪಾರ, ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನ, ರಕ್ಷಣೆ, ಜನರ ನಡುವಿನ ವಿನಿಮಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಕಾರ್ಯತಂತ್ರದ ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ತಮ್ಮ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿತು.

ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮಕ್ಕೆ ಗೌರವ ಮತ್ತು ಜನರ ನಡುವಿನ ಬಲವಾದ ಸಂಬಂಧಗಳನ್ನು ಆಧರಿಸಿದ ಭಾರತ-ಅಮೆರಿಕ ಸಂಬಂಧಗಳನ್ನು ಮುನ್ನಡೆಸುವಲ್ಲಿ ಯುಎಸ್ ಕಾಂಗ್ರೆಸ್ ನ ಸ್ಥಿರ ಮತ್ತು ದ್ವಿಪಕ್ಷೀಯ ಬೆಂಬಲವು ವಹಿಸಿದ ಮಹತ್ವದ ಪಾತ್ರವನ್ನು ಪ್ರಧಾನಿ ಬಿಂಬಿಸಿದರು. ಜಾಗತಿಕ ಒಳಿತಿಗಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಕಳೆದ ವರ್ಷ ಜೂನ್ ನಲ್ಲಿ ತಾವು ಅಮೆರಿಕಕ್ಕೆ ನೀಡಿದ್ದ ಅಧಿಕೃತ ಭೇಟಿಯನ್ನು ಸ್ಮರಿಸಿದ ಪ್ರಧಾನಮಂತ್ರಿ, ಈ ಸಂದರ್ಭದಲ್ಲಿ ಐತಿಹಾಸಿಕ ಎರಡನೇ ಬಾರಿಗೆ ಅಮೆರಿಕ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ಅವಕಾಶ ಸಿಕ್ಕಿತ್ತು ಎಂದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why The SHANTI Bill Makes Modi Government’s Nuclear Energy Push Truly Futuristic

Media Coverage

Why The SHANTI Bill Makes Modi Government’s Nuclear Energy Push Truly Futuristic
NM on the go

Nm on the go

Always be the first to hear from the PM. Get the App Now!
...
Chief Minister of Gujarat meets Prime Minister
December 19, 2025

The Chief Minister of Gujarat, Shri Bhupendra Patel met Prime Minister, Shri Narendra Modi today in New Delhi.

The Prime Minister’s Office posted on X;

“Chief Minister of Gujarat, Shri @Bhupendrapbjp met Prime Minister @narendramodi.

@CMOGuj”