"ಸೂರತ್ ನಗರದ ಭವ್ಯತೆಗೆ ಹೊಸ ವಜ್ರ ಸೇರ್ಪಡೆಗೊಂಡಿದೆ"
"ಸೂರತ್‌ ವಜ್ರದ ಮಾರುಕಟ್ಟೆಯು(ಸೂರತ್ ಡೈಮಂಡ್ ಬೋರ್ಸ್) ಭಾರತೀಯ ವಿನ್ಯಾಸಗಳು, ವಿನ್ಯಾಸಕರು, ವಸ್ತುಗಳು ಮತ್ತು ಪರಿಕಲ್ಪನೆಗಳ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಈ ಕಟ್ಟಡವು ನವ ಭಾರತದ ಸಾಮರ್ಥ್ಯ ಮತ್ತು ಸಂಕಲ್ಪಗಳ ಸಂಕೇತವಾಗಿದೆ"
"ಇಂದು, ಸೂರತ್ ಲಕ್ಷಾಂತರ ಯುವಕರ ಕನಸಿನ ನಗರವಾಗಿದೆ"
"ಸೂರತ್ ಜನರಿಗೆ ಮೋದಿಯವರ ಗ್ಯಾರಂಟಿಯ ಬಗ್ಗೆ ಬಹಳ ಹಿಂದಿನಿಂದಲೂ ತಿಳಿದಿದೆ"
"ಸೂರತ್ ನಿರ್ಧರಿಸಿದರೆ, ರತ್ನ-ಆಭರಣ ರಫ್ತಿನಲ್ಲಿ ನಮ್ಮ ಪಾಲು ಎರಡಂಕಿಯನ್ನು ಮುಟ್ಟಬಹುದು"
" ಅಂತರರಾಷ್ಟ್ರೀಯ ವ್ಯಾಪಾರ ಕೇಂದ್ರಗಳೊಂದಿಗೆ ಸೂರತ್ ನಿರಂತರವಾಗಿ ಸಂಪರ್ಕ ಹೊಂದಿದೆ. ವಿಶ್ವದ ಕೆಲವೇ ನಗರಗಳು ಇಂತಹ ಅಂತರರಾಷ್ಟ್ರೀಯ ಸಂಪರ್ಕವನ್ನು ಹೊಂದಿವೆ"
"ಸೂರತ್ ಮುಂದುವರಿದರೆ, ಗುಜರಾತ್ ಮುಂದೆ ಸಾಗುತ್ತದೆ. ಗುಜರಾತ್ ಮುನ್ನಡೆದರೆ ದೇಶ ಮುಂದೆ ಸಾಗುತ್ತದೆ"

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಜಿ, ಸ್ಥಳೀಯ ಸಂಸದ ಶ್ರೀ ಸಿ.ಆರ್. ಪಾಟೀಲ್ ಜಿ, ನನ್ನ ಸಂಪುಟ ಸಹೋದ್ಯೋಗಿಗಳೇ, ದೇಶದ ವಜ್ರ ಉದ್ಯಮದ ಎಲ್ಲಾ ಪ್ರಸಿದ್ಧ ವ್ಯಕ್ತಿಗಳೇ, ಇತರ ಗಣ್ಯರೇ, ಮಹಿಳೆಯರೇ ಮತ್ತು ಸಜ್ಜನರೇ, ನಿಮಗೆಲ್ಲರಿಗೂ ನಮಸ್ಕಾರ!

ಸೂರತ್ ತನ್ನದೇ ಆದ ಮಹತ್ವವನ್ನು ಹೊಂದಿದೆ. ಸೂರತ್ ನ ಇತಿಹಾಸದ ಪ್ರಸಿದ್ಧತೆ; ಅದರ ಹೆಚ್ಚುತ್ತಿರುವ ಪ್ರಸ್ತುತತೆ; ಮತ್ತು ಅದರ ಭವಿಷ್ಯದ ದೃಷ್ಟಿಕೋನ - ಅದುವೇ ಸೂರತ್ ನ ವಿಶೇಷತೆ! ಮತ್ತು ಅಂತಹ (ಅಭಿವೃದ್ಧಿ) ಕೆಲಸದಲ್ಲಿ ಯಾರೂ ಯಾವುದೇ ಉಪದ್ರಕಾರಿ ಕಲ್ಲನ್ನು ಹಾಕುವುದಿಲ್ಲ ಎಂಬುದು ನನ್ನ ನಂಬಿಕೆ. ಸೂರತ್ ನ ವ್ಯಕ್ತಿ ಪ್ರತಿ ಕ್ಷೇತ್ರದಲ್ಲೂ ಆತುರದಲ್ಲಿರಬಹುದು, ಆದರೆ ಅವನಿಗೆ ಆಹಾರದ ಅಂಗಡಿಯ ಹೊರಗೆ ಅರ್ಧ ಘಂಟೆಯವರೆಗೆ ಸರದಿಯಲ್ಲಿ ನಿಲ್ಲುವ ತಾಳ್ಮೆ ಇದೆ. ಉದಾಹರಣೆಗೆ, ಭಾರೀ ಮಳೆಯಾದರೂ ಮತ್ತು ಮೊಣಕಾಲು ಆಳದ ನೀರು ಇದ್ದರೂ ಪರವಾಗಿಲ್ಲ; ಪಕೋಡ ಸ್ಟಾಲ್ ನ ಹೊರಗೆ ಇನ್ನೂ ಸರತಿ ಸಾಲಾಗಿ ನಿಂತಿರುತ್ತಾನೆ. ಶರದ್ ಪೂರ್ಣಿಮಾ, ಚಂಡಿ ಪಾಡ್ವಾದಲ್ಲಿ, ಎಲ್ಲರೂ ಮೇಲ್ಛಾವಣಿಗೆ ಹೋಗುತ್ತಾರೆ,  ತನ್ನ ಕುಟುಂಬದೊಂದಿಗೆ ಫುಟ್ಪಾತ್ನಲ್ಲಿ ಸರತಿ ಸಾಲಾಗಿ ಘರಿ (ಸಿಹಿ) ತಿನ್ನುತ್ತಾನೆ. ಮತ್ತು ಅವನು ಹತ್ತಿರದಲ್ಲಿ ಎಲ್ಲಿಯೂ ಸುತ್ತಾಡಲು ಹೋಗುವುದಿಲ್ಲ, ಆದರೆ ಪ್ರಪಂಚದ ಪ್ರತಿಯೊಂದು ಮೂಲೆ ಮತ್ತು ಮೂಲೆಯಲ್ಲಿ ಸಂಚರಿಸುತ್ತಾನೆ. ಸುಮಾರು 40-45 ವರ್ಷಗಳ ಹಿಂದೆ ಸೌರಾಷ್ಟ್ರದಿಂದ ಯಾರೋ ಸೂರತ್ ಗೆ ಭೇಟಿ ನೀಡಿದ್ದು ನನಗೆ ಇನ್ನೂ ನೆನಪಿದೆ. ಹಾಗಾದರೆ, ನಾನು ಸೌರಾಷ್ಟ್ರದ ಆ ಸ್ನೇಹಿತನನ್ನು ಕೇಳಿದೆ - ನೀವು ಸೂರತ್ ಅನ್ನು ಹೇಗೆ ಇಷ್ಟಪಡುತ್ತೀರಿ? ಸೂರತ್ ಮತ್ತು ಕಥಿಯಾವರ್ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಅವರು ಹೇಳಿದರು. ಆದ್ದರಿಂದ, ನಾನು 40-45 ವರ್ಷಗಳ ಹಿಂದಿನ ಘಟನೆ ಬಗ್ಗೆ ಮಾತನಾಡುತ್ತಿದ್ದೇನೆ. ಕಾಠಿಯಾವರದಲ್ಲಿ ಮೋಟಾರು ಸೈಕಲ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದರೆ ಘೋರ ಜಗಳವಾಗುತ್ತದೆ ಎಂದು ಉದಾಹರಣೆ ನೀಡಿದರು. ಆದರೆ ಸೂರತ್ ನಲ್ಲಿ ಭಾಗಿಯಾದವರು ಹೇಳುತ್ತಿದ್ದರು, 'ಇದು ಎರಡೂ ಕಡೆಯವರ ತಪ್ಪು. ಹಾಗಾಗಿ ಈ ಸಮಸ್ಯೆಯನ್ನು ಈಗಲೇ ಕೈಬಿಡೋಣ'. ನಗರಗಳ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸವಿದೆ.

ಸ್ನೇಹಿತರೇ,

ಇಂದು ಸೂರತ್ ನಗರದ ಭವ್ಯತೆಗೆ ಮತ್ತೊಂದು ವಜ್ರ ಸೇರ್ಪಡೆಯಾಗಿದೆ. ಮತ್ತು ಇದು ವಿಶ್ವದ ಅತ್ಯುತ್ತಮ ವಜ್ರವಾಗಿದೆ. ಮತ್ತು ಈ ವಜ್ರವು ಪ್ರಪಂಚದ ಕೆಲವು ದೊಡ್ಡ ಕಟ್ಟಡಗಳನ್ನು ಮೀರಿಸುತ್ತದೆ. ಮತ್ತು ಸ್ವಲ್ಪ ಸಮಯದ ಹಿಂದೆ, ವಲ್ಲಭ ಭಾಯಿ, ಲಾಲ್ಜಿ ಭಾಯಿ ಸಂಪೂರ್ಣ ನಮ್ರತೆಯಿಂದ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು. ಮತ್ತು ಬಹುಶಃ ಅಂತಹ ಬೃಹತ್ ಕಾರ್ಯಾಚರಣೆಯ ಯಶಸ್ಸಿನ ಹಿಂದಿನ ಕಾರಣವೆಂದರೆ ಅವರ ನಮ್ರತೆ ಮತ್ತು ಎಲ್ಲರನ್ನೂ ಕರೆದೊಯ್ಯುವ ಅವರ ಸ್ವಭಾವ. ನಾನು ಅವರನ್ನು ಸಾಕಷ್ಟು ಅಭಿನಂದಿಸಲು ಸಾಧ್ಯವಿಲ್ಲ. ವಲ್ಲಭಭಾಯಿ, ‘ನನಗೆ ಕೇವಲ ಐದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ’ ಎಂದರು. ಆದರೆ ವಲ್ಲಭ ಭಾಯ್, ನೀವು 'ಕಿರಣ್' ಜೊತೆ ಸಂಬಂಧ ಹೊಂದಿದ್ದೀರಿ. ಮತ್ತು ಕಿರಣವು ಸಂಪೂರ್ಣ ಸೂರ್ಯನನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಆದ್ದರಿಂದ, ನಿಮ್ಮ ಅಗಾಧ ಶಕ್ತಿಯನ್ನು ಪರಿಚಯ ಮಾಡಿಕೊಳ್ಳಲು ಐದು ನಿಮಿಷಗಳ ಕಾಲಾವಕಾಶ ಸಹ ನಮಗೆ ಸಹಾಯ ಮಾಡುತ್ತವೆ!

 

ಈಗ ಜಗತ್ತಿನಲ್ಲಿ ಯಾರಾದರೂ ಡೈಮಂಡ್ ವಾಣಿಜ್ಯ-ಮಾರುಕಟ್ಟೆ ಸಮುಚ್ಛಯದ (ಬೋರ್ಸ್) ಅನ್ನು ಉಲ್ಲೇಖಿಸಿದರೆ, ಸೂರತ್ ಜೊತೆಗೆ ಭಾರತವನ್ನು ಕೂಡ ಮಾತನಾಡುತ್ತಾರೆ. ಸೂರತ್ ಡೈಮಂಡ್ ವಾಣಿಜ್ಯ-ಮಾರುಕಟ್ಟೆ ಸಮುಚ್ಛಯ(ಬೋರ್ಸ್)  ಹೊಂದಿರುವ ಭಾರತೀಯ ವಿನ್ಯಾಸ, ಭಾರತೀಯ ವಿನ್ಯಾಸಕರು, ಭಾರತೀಯ ವಸ್ತುಗಳು ಮತ್ತು ಭಾರತೀಯ ಪರಿಕಲ್ಪನೆಗಳ ಶಕ್ತಿಯನ್ನು ಪ್ರದರ್ಶಿಸುತ್ತದೆ. ಈ ಕಟ್ಟಡವು ಹೊಸ ಭಾರತದ ಹೊಸ ಸಾಮರ್ಥ್ಯ ಮತ್ತು ಹೊಸ ನಿರ್ಣಯದ ಸಂಕೇತವಾಗಿದೆ. ಸೂರತ್ ಡೈಮಂಡ್ ಬೋರ್ಸ್ಗಾಗಿ ನಾನು ವಜ್ರ ಉದ್ಯಮ, ಸೂರತ್, ಗುಜರಾತ್ ಮತ್ತು ಇಡೀ ದೇಶವನ್ನು ಅಭಿನಂದಿಸುತ್ತೇನೆ.

ನೀವೆಲ್ಲರೂ ನನಗಾಗಿ ತುಂಬಾ ದಿನ ಕಾಯುವುದು ನನಗೆ ಇಷ್ಟವಿಲ್ಲದ ಕಾರಣ ನಾನು ಅದರ ಒಂದು ಭಾಗ ಮಾತ್ರ ಪೂರ್ತಿಯಾಗುವಾಗಲೇ ನೋಡಲು ಬಂದಿದ್ದೇನೆ. ಇಲ್ಲಿಯವರೆಲ್ಲಾ ನನ್ನ ಹಳೆಯ ಸ್ನೇಹಿತರಾಗಿರುವುದರಿಂದ ನಾನು ಅವರಿಗೆ ಏನಾದರೂ ಹೇಳುತ್ತೇನೆ. ನಾನು ಹೇಳಿದೆ, ಪರಿಸರ ಸಂರಕ್ಷಣೆಯ ಪ್ರತಿಪಾದಕರನ್ನು ಆಹ್ವಾನಿಸಿ ಮತ್ತು ಹಸಿರು ಕಟ್ಟಡ ಎಂದರೇನು ಎಂದು ತೋರಿಸಿ! ಎರಡನೆಯದಾಗಿ, ನಾನು ಹೇಳಿದ್ದೇನೆಂದರೆ, ಆಧುನಿಕ ರೂಪದಲ್ಲಿ ಕಟ್ಟಡಗಳನ್ನು ಹೇಗೆ ನಿರ್ಮಿಸಲಾಗಿದೆ ಎಂಬುದನ್ನು ಅಧ್ಯಯನ ಮಾಡಲು ದೇಶಾದ್ಯಂತದ ಆರ್ಕಿಟೆಕ್ಚರ್ ಮತ್ತು ಸ್ಟ್ರಕ್ಚರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬರಲು ಹೇಳಿ. ಮತ್ತು ಭೂವಿನ್ಯಾಸ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರನ್ನು ಸಹ ಭೂವಿನ್ಯಾಸವನ್ನು ಹೇಗೆ ಮಾಡಬೇಕು ಮತ್ತು ಪಂಚತತ್ತ್ವದ ಪರಿಕಲ್ಪನೆ (5 ಅಂಶಗಳು) ಏನೆಂದು ನೋಡಲು ಆಹ್ವಾನಿಸಬೇಕು ಎಂದು ನಾನು ಹೇಳಿದೆ.

ಸ್ನೇಹಿತರೇ,

ಇಂದು ಸೂರತ್ ನ ಜನರು, ಇಲ್ಲಿನ ವ್ಯಾಪಾರಿಗಳು ಮತ್ತು ಉದ್ಯಮಿಗಳು ಇನ್ನೆರಡು ಉಡುಗೊರೆಗಳನ್ನು ಸ್ವೀಕರಿಸುತ್ತಿದ್ದಾರೆ. ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಇಂದು ಉದ್ಘಾಟನೆಗೊಂಡಿದೆ. ಮತ್ತು ಎರಡನೆಯದಾಗಿ ಸೂರತ್ ವಿಮಾನ ನಿಲ್ದಾಣವು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನವನ್ನು ಪಡೆದುಕೊಂಡಿದೆ. ಸೂರತ್ ನಗರದ ಜನತೆಯ ಬಹುವರ್ಷಗಳ ಬೇಡಿಕೆ ಇಂದು ಈಡೇರಿದೆ. ಮತ್ತು ನಾನು ಹಿಂದೆ ಇಲ್ಲಿಗೆ ಬಂದಾಗ, ಬಸ್ ನಿಲ್ದಾಣವು ಸೂರತ್ ನ ವಿಮಾನ ನಿಲ್ದಾಣಕ್ಕಿಂತ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ನೆನಪಿದೆ. ವಿಮಾನ ನಿಲ್ದಾಣವು ಚಿಕ್ಕ ಗುಡಿಸಲಿನಂತೆ ಕಾಣುತ್ತಿತ್ತು. ಆದರೆ ಇಂದು ನಾವು ಬಹಳ ಎತ್ತರವನ್ನು ಮುಟ್ಟಿದ್ದೇವೆ ಮತ್ತು ಇದು ಸೂರತ್ ನ ಶಕ್ತಿಯನ್ನು ಚಿತ್ರಿಸುತ್ತದೆ, ಪ್ರತಿಬಿಂಬಿಸುತ್ತದೆ.

ಇಂದಿನಿಂದ ಸೂರತ್ನಿಂದ ದುಬೈಗೆ ನೇರ ವಿಮಾನ ಹಾರಾಟ ಪ್ರಾರಂಭವಾಗುತ್ತಿದ್ದು, ಶೀಘ್ರದಲ್ಲೇ ಹಾಂಕಾಂಗ್ ಗೆ ಕೂಡಾ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಮತ್ತು ಸೂರತ್ ನ ವಿಮಾನ ನಿಲ್ದಾಣವನ್ನು ಮರು ನಿರ್ಮಿಸಿದ ಕಾರಣ, ಈಗ ಗುಜರಾತ್ ನಲ್ಲಿ 3 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ವಜ್ರಗಳನ್ನು ಹೊರತುಪಡಿಸಿ, ಜವಳಿ ಉದ್ಯಮ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರದ ಉದ್ಯಮ ಸೇರಿದಂತೆ ಇಲ್ಲಿಯ ಪ್ರತಿಯೊಂದು ಕ್ಷೇತ್ರವೂ ಇದರಿಂದ ಪ್ರಯೋಜನ ಪಡೆಯುತ್ತದೆ. ಈ ಅದ್ಭುತ ಟರ್ಮಿನಲ್ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ನಾನು ಸೂರತ್ ನ ಜನರು ಮತ್ತು ಗುಜರಾತ್ ನ ಜನರನ್ನು ಅಭಿನಂದಿಸುತ್ತೇನೆ.

 

ನನ್ನ ಕುಟುಂಬದ ಸದಸ್ಯರೇ,

ಸೂರತ್ ನಗರದ ಬಗ್ಗೆ ನನಗಿರುವ ಆಳವಾದ ಪ್ರೀತಿ-ಭಾಂದವ್ಯಗಳನ್ನು ಪದಗಳಲ್ಲಿ ವ್ಯಕ್ತಪಡಿಸುವ ಅಗತ್ಯವಿಲ್ಲ, ಏಕೆಂದರೆ ಅದು ನಿಮಗೆ ಚೆನ್ನಾಗಿ ತಿಳಿದಿದೆ. ಸೂರತ್ ನನಗೆ ಬಹಳಷ್ಟು ಕಲಿಸಿದೆ. ಮತ್ತು ಪ್ರತಿಯೊಬ್ಬರೂ ಪ್ರಯತ್ನಗಳನ್ನು ಮಾಡುವಾಗ, ನಾವು ದೊಡ್ಡ ಸವಾಲುಗಳನ್ನು ಸಹ ಎದುರಿಸಬಹುದು ಎಂದು ಸೂರತ್ ನಮಗೆ ಕಲಿಸಿದೆ. ಸೂರತ್ ನ ಮಣ್ಣಿನಲ್ಲಿಯೇ ಏನೋ ಇದೆ, ಅದು ಎಲ್ಲಕ್ಕಿಂತ ಭಿನ್ನವಾಗಿದೆ. ಸೂರತ್ ನ ಜನರ ಸಾಮರ್ಥ್ಯ ಸರಳವಾಗಿದೆ, ಆದರೆ ಸಾಟಿಯಿಲ್ಲ.

ಸೂರತ್ ನಗರದ ಪ್ರಯಾಣ ಎಷ್ಟು ಏರಿಳಿತಗಳಿಂದ ಕೂಡಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಬ್ರಿಟಿಷರು ಕೂಡ ಈ ಸ್ಥಳದ ವೈಭವವನ್ನು ನೋಡಿದ ನಂತರ ಮೊದಲು ಸೂರತ್ ಗೆ ಬಂದರು. ಒಂದಾನೊಂದು ಕಾಲದಲ್ಲಿ ಜಗತ್ತಿನ ಅತಿ ದೊಡ್ಡ ಹಡಗುಗಳು ಸೂರತ್ ನಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದವು. ಸೂರತ್ ನಗರದ ಇತಿಹಾಸದಲ್ಲಿ ಹಲವಾರು ಪ್ರಮುಖ ಬಿಕ್ಕಟ್ಟುಗಳು ಸಂಭವಿಸಿದವು,  ಆದರೆ ಸೂರತ್ ನ ಜನರು ಒಟ್ಟಾಗಿ ಪ್ರತಿಯೊಂದನ್ನೂ ಎದುರಿಸಿದರು. ಒಂದು ಕಾಲದಲ್ಲಿ 84 ದೇಶಗಳ ಹಡಗು ಧ್ವಜಗಳು ಇಲ್ಲಿ ಹಾರಾಡುತ್ತಿದ್ದವು ಎಂದು ಹೇಳಲಾಗುತ್ತದೆ. ಮತ್ತು ಇಂದು ಮಾಥುರ್ ಭಾಯ್ ಇಲ್ಲಿ 125 ದೇಶಗಳ ಧ್ವಜಗಳು ಹಾರಲಿವೆ ಎಂದು ಹೇಳುತ್ತಿದ್ದರು.  

ಸೂರತ್ ಕೆಲವೊಮ್ಮೆ ಕೆಲವು ಗಂಭೀರ ಕಾಯಿಲೆಗಳ ಪ್ರಭಾವಕ್ಕೆ ಒಳಗಾಗಿತ್ತು; ಕೆಲವೊಮ್ಮೆ ತಾಪಿಯಲ್ಲಿ ಪ್ರವಾಹ ಉಂಟಾಗುತ್ತಿತ್ತು. ವಿವಿಧ ರೀತಿಯ ಋಣಾತ್ಮಕತೆಯನ್ನು ಹರಡಿದ ಮತ್ತು ಸೂರತ್ ನ ಆತ್ಮಕ್ಕೆ ಸವಾಲೆಸೆದ ಆ ಅವಧಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಆದರೆ ಸೂರತ್ ಬಿಕ್ಕಟ್ಟಿನಿಂದ ಹೊರಬರುವುದು ಮಾತ್ರವಲ್ಲದೆ ಹೊಸ ಶಕ್ತಿಯೊಂದಿಗೆ ಜಗತ್ತಿನಲ್ಲಿ ತನ್ನ ಸ್ಥಾನವನ್ನು ಪಡೆಯುತ್ತದೆ ಎಂದು ನನಗೆ ವಿಶ್ವಾಸವಿತ್ತು. ಮತ್ತು ಇಂದು, ಈ ನಗರವು ವಿಶ್ವದ ಟಾಪ್ 10 ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ.

ಸೂರತ್ ನ ಬೀದಿ ಆಹಾರ, ಸೂರತ್ ನಲ್ಲಿ ಸ್ವಚ್ಛತೆ, ಸೂರತ್ ನಲ್ಲಿನ ಅಭಿವೃದ್ಧಿ ಕೆಲಸದ ಕೌಶಲ್ಯತೆ, ಎಲ್ಲವೂ ಅದ್ಭುತವಾಗಿದೆ! ಸೂರತ್ ಅನ್ನು ಒಂದು ಕಾಲದಲ್ಲಿ ಸನ್ ಸಿಟಿ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಜನರು ತಮ್ಮ ಶ್ರಮ ಮತ್ತು ಶಕ್ತಿಯಿಂದ ವಜ್ರ ನಗರಿ ಮತ್ತು ರೇಷ್ಮೆ ನಗರಿ ಮಾಡಿದರು. ನೀವೆಲ್ಲರೂ ಹೆಚ್ಚು ಶ್ರಮಿಸಿ ಸೂರತ್ ಸೇತುವೆ ನಗರವಾಯಿತು. ಇಂದು ಸೂರತ್ ಲಕ್ಷಾಂತರ ಯುವಕರ ಕನಸಿನ ನಗರವಾಗಿದೆ. ಮತ್ತು ಈಗ ಸೂರತ್ ಐಟಿ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದೆ. ಆಧುನೀಕರಣಗೊಳ್ಳುತ್ತಿರುವ ಈ ಸೂರತ್ ಗೆ ಡೈಮಂಡ್ ವಾಣಿಜ್ಯ ಸಮುಚ್ಛಯ  ರೂಪದಲ್ಲಿ ಅಂತಹ ಬೃಹತ್ ಕಟ್ಟಡವನ್ನು ಪಡೆಯುವುದು ಕೂಡಾ ಸ್ವತಃ ಐತಿಹಾಸಿಕವಾಗಿದೆ.

ಸ್ನೇಹಿತರೇ,

ಇತ್ತೀಚಿನ ದಿನಗಳಲ್ಲಿ ನೀವೆಲ್ಲರೂ ಮೋದಿಯವರ ಗ್ಯಾರಂಟಿ ಬಗ್ಗೆ ಸಾಕಷ್ಟು ಕೇಳುತ್ತಿರಬೇಕು. ಇತ್ತೀಚೆಗಿನ ಚುನಾವಣಾ ಫಲಿತಾಂಶದ ನಂತರ ಈ ವಿಷಯ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ಸೂರತ್ ಜನರಿಗೆ ಮೋದಿ ಗ್ಯಾರಂಟಿ ಬಗ್ಗೆ ಬಹಳ ಹಿಂದೆಯೇ ಗೊತ್ತು. ಮೋದಿಯವರ ಗ್ಯಾರಂಟಿ ವಾಸ್ತವಕ್ಕೆ ತಿರುಗುತ್ತಿರುವುದನ್ನು ಇಲ್ಲಿನ ಶ್ರಮಜೀವಿಗಳು ನೋಡಿದ್ದಾರೆ. ಮತ್ತು ಈ ಸೂರತ್ ಡೈಮಂಡ್ ವಾಣಿಜ್ಯ ಸಮುಚ್ಛಯ  ಕೂಡ ಈ ಗ್ಯಾರಂಟಿಗೆ ಉದಾಹರಣೆಯಾಗಿದೆ.

 

ವರ್ಷಗಳ ಹಿಂದೆ ನಿಮ್ಮಂತಹ ನನ್ನ ಗೆಳೆಯರೆಲ್ಲ ನಿಮ್ಮ ಸಮಸ್ಯೆಗಳ ಬಗ್ಗೆ ನನಗೆ ಹೇಳಿದ್ದು ನನಗೆ ಇನ್ನೂ ನೆನಪಿದೆ. ಇಲ್ಲಿ ವಜ್ರದ ವ್ಯವಹಾರಗಳಿಗೆ ಸಂಬಂಧಿಸಿದ ಸಣ್ಣ ಅಥವಾ ದೊಡ್ಡ ಉದ್ಯಮಗಳು ಮತ್ತು ಕುಶಲಕರ್ಮಿಗಳಿಗೆ ಸಂಬಂಧಿಸಿದ ಲಕ್ಷಗಟ್ಟಲೆ ಜನರ ಇಡೀ ಸಮುದಾಯವಿದೆ. ಆದರೆ ಅವರ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಅವರು ಪ್ರತಿಯೊಂದು ವಿಷಯಕ್ಕೂ ದೂರದ ಪ್ರಯಾಣ ಮಾಡಬೇಕಾಗಿತ್ತು. ಕಚ್ಚಾ ವಜ್ರಗಳನ್ನು ಪರೀಕ್ಷಿಸಲು ಮತ್ತು ಖರೀದಿಸಲು ವಿದೇಶಕ್ಕೆ ಹೋಗಬೇಕಾದರೆ, ಅದರಲ್ಲಿಯೂ ಅಡೆತಡೆಗಳು ಇದ್ದವು. ಪೂರೈಕೆ ಮತ್ತು ಮೌಲ್ಯ ಸರಪಳಿ ಸಮಸ್ಯೆಗಳು ಇಡೀ ವ್ಯವಹಾರದ ಮೇಲೆ ಪರಿಣಾಮ ಬೀರಿತು. ಈ ಸಮಸ್ಯೆಗಳನ್ನು ಪರಿಹರಿಸಲು ವಜ್ರ ಉದ್ಯಮಕ್ಕೆ ಸಂಬಂಧಿಸಿದ ಸ್ನೇಹಿತರೇ ನನ್ನನ್ನು ಪದೇ ಪದೇ ಕೇಳಿದರು.

ಈ ಹಿನ್ನಲೆಯಲ್ಲಿ 2014ರಲ್ಲಿ ದೆಹಲಿಯಲ್ಲಿ ವಿಶ್ವ ವಜ್ರ ಸಮ್ಮೇಳನ ನಡೆದಿತ್ತು ಮತ್ತು ವಜ್ರ ವಲಯಕ್ಕೆ ವಿಶೇಷ ಅಧಿಸೂಚಿತ ವಲಯವನ್ನು ಸ್ಥಾಪಿಸುವುದಾಗಿ ನಾನು ಘೋಷಿಸಿದ್ದೆ. ಇದು ಸೂರತ್ ಡೈಮಂಡ್ ವ್ಯವಹಾರ-ವಾಣಿಜ್ಯ ಸಮುಚ್ಛಯ   ಕನಸನ್ನು ನನಸಾಗಿಸಲು ದಾರಿ ಮಾಡಿಕೊಟ್ಟಿತು. ಕಾನೂನಿನಲ್ಲಿ ತಿದ್ದುಪಡಿಯನ್ನೂ ಮಾಡಿದ್ದೇವೆ. ಈಗ ಸೂರತ್ ಡೈಮಂಡ್ ವ್ಯವಹಾರ-ವಾಣಿಜ್ಯ ಸಮುಚ್ಛಯ(ಬೋರ್ಸ್) ರೂಪದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದ ಬೃಹತ್ ಕೇಂದ್ರ ಸಿದ್ಧವಾಗಿದೆ. ಅದು ಕಚ್ಚಾ ವಜ್ರ, ಪಾಲಿಶ್ ಮಾಡಿದ ವಜ್ರ, ಲ್ಯಾಬ್ ಬೆಳೆದ ವಜ್ರ ಅಥವಾ ಸಿದ್ಧ ಆಭರಣಗಳು, ಇಂದು ಎಲ್ಲಾ ರೀತಿಯ ವ್ಯಾಪಾರ ಒಂದೇ ಸೂರಿನಡಿ ಸಾಧ್ಯವಾಗಿದೆ. ಅದು ಕೆಲಸಗಾರನಾಗಿರಲಿ, ಕುಶಲಕರ್ಮಿಯಾಗಿರಲಿ ಅಥವಾ ಉದ್ಯಮಿಯಾಗಿರಲಿ, ಸೂರತ್ ಡೈಮಂಡ್ ವ್ಯವಹಾರ-ವಾಣಿಜ್ಯ ಸಮುಚ್ಛಯ   (ಬೋರ್ಸ್) ಎಲ್ಲರಿಗೂ ಒಂದು ನಿಲುಗಡೆ ಕೇಂದ್ರವಾಗಿದೆ.

ಅಂತರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ಕಮಾನುಗಳಿಗೆ ಸೌಲಭ್ಯಗಳಿವೆ. ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಾಲ್ ಇದೆ. ಸೂರತ್ ನ ವಜ್ರ ಉದ್ಯಮವು ಈಗಾಗಲೇ 8 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. ಈಗ ಸೂರತ್ ಡೈಮಂಡ್ ವ್ಯವಹಾರ-ವಾಣಿಜ್ಯ ಸಮುಚ್ಛಯ (ಬೋರ್ಸ್) ದಿಂದಾಗಿ 1.5 ಲಕ್ಷ ಹೊಸ ಜನರು ಉದ್ಯೋಗ ಪಡೆಯಲಿದ್ದಾರೆ. ಈ ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಹಗಲಿರುಳು ಶ್ರಮಿಸಿದ ವಜ್ರದ ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವ ನಿಮ್ಮೆಲ್ಲರನ್ನು ನಾನು ಪ್ರಶಂಸಿಸಲು ಬಯಸುತ್ತೇನೆ.

ಸ್ನೇಹಿತರೇ,

ಸೂರತ್, ಗುಜರಾತ್ ಮತ್ತು ದೇಶಕ್ಕೆ ಸಾಕಷ್ಟು ನೀಡಿದೆ, ಆದರೆ ಸೂರತ್ ಇದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ನನ್ನ ಪ್ರಕಾರ ಇದು ಆರಂಭ; ನಾವು ಮುಂದೆ ಸಾಗಬೇಕಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತ ವಿಶ್ವದಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿರುವುದು ನಿಮಗೆಲ್ಲ ಗೊತ್ತೇ ಇದೆ. ಮತ್ತು ಈಗ ಮೋದಿ ಅವರು ತಮ್ಮ ಮೂರನೇ ಇನ್ನಿಂಗ್ಸ್ ನಲ್ಲಿ ಭಾರತವನ್ನು ಖಂಡಿತವಾಗಿಯೂ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಸೇರಿಸಲಾಗುವುದು ಎಂದು ದೇಶಕ್ಕೆ ಭರವಸೆ ನೀಡಿದ್ದಾರೆ.

ಮುಂಬರುವ 25 ವರ್ಷಗಳ ಗುರಿಯನ್ನೂ ಸರ್ಕಾರ ನಿಗದಿಪಡಿಸಿದೆ. ಅದು 5 ಟ್ರಿಲಿಯನ್ ಡಾಲರ್ಗಳ ಗುರಿಯಾಗಿರಲಿ ಅಥವಾ 10 ಟ್ರಿಲಿಯನ್ ಡಾಲರ್ಗಳ ಗುರಿಯಾಗಿರಲಿ, ನಾವು ಇವುಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ದೇಶದ ರಫ್ತುಗಳನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಲು ನಾವು ಕೆಲಸ ಮಾಡುತ್ತಿದ್ದೇವೆ. ಅಂತಹ ಸನ್ನಿವೇಶದಲ್ಲಿ, ಸೂರತ್ನ ಮತ್ತು ವಿಶೇಷವಾಗಿ ಸೂರತ್ನ ವಜ್ರ ಉದ್ಯಮದ ಜವಾಬ್ದಾರಿಯು ಅನೇಕ ಪಟ್ಟು ಹೆಚ್ಚಾಗಿದೆ. ಸೂರತ್ ನ ಎಲ್ಲಾ ದಿಗ್ಗಜರು ಇಲ್ಲಿ ಇದ್ದಾರೆ. ಸೂರತ್ ನಗರವು ದೇಶದ ಬೆಳೆಯುತ್ತಿರುವ ರಫ್ತಿನಲ್ಲಿ ತನ್ನ ಭಾಗವಹಿಸುವಿಕೆಯನ್ನು ಇನ್ನಷ್ಟು ಹೆಚ್ಚಿಸುವುದು ಹೇಗೆ ಎಂಬ ಗುರಿಯನ್ನು ನಿಗದಿಪಡಿಸಬೇಕು.

ವಜ್ರ, ರತ್ನಗಳು ಮತ್ತು ಆಭರಣ ಕ್ಷೇತ್ರಗಳಿಗೆ ಇದೊಂದು ಸವಾಲು ಮತ್ತು ಅವಕಾಶವೂ ಹೌದು. ಸದ್ಯ ಭಾರತ ವಜ್ರಾಭರಣ ರಫ್ತಿನಲ್ಲಿ ಬಹಳ ಮುಂದಿದೆ. ಸಿಲ್ವರ್ ಕಟ್ ಡೈಮಂಡ್ಸ್ ಮತ್ತು ಲ್ಯಾಬ್ ಗ್ರೋನ್ ಡೈಮಂಡ್ಸ್ ನಲ್ಲೂ ನಾವು ನಾಯಕರಾಗಿದ್ದೇವೆ. ಆದರೆ ನಾವು ಸಂಪೂರ್ಣ ರತ್ನಗಳು ಮತ್ತು ಆಭರಣ ಕ್ಷೇತ್ರದ ಬಗ್ಗೆ ಮಾತನಾಡಿದರೆ, ಪ್ರಪಂಚದ ಒಟ್ಟು ರಫ್ತಿನಲ್ಲಿ ಭಾರತದ ಪಾಲು ಕೇವಲ 3.5 ಪ್ರತಿಶತ ಮಾತ್ರ. ಸೂರತ್ ನಿರ್ಧರಿಸಿದರೆ, ಶೀಘ್ರದಲ್ಲೇ ನಾವು ರತ್ನಗಳು ಮತ್ತು ಆಭರಣಗಳ ರಫ್ತಿನಲ್ಲಿ ಎರಡು ಅಂಕಿಗಳನ್ನು ಭಾರತ ತಲುಪಬಹುದು. ಮತ್ತು ನಾನು ನಿಮಗೆ ಭರವಸೆ ನೀಡುತ್ತೇನೆ, ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಸರ್ಕಾರವು ನಿಮ್ಮೊಂದಿಗೆ ನಿಂತಿದೆ.

 

ರಫ್ತು ಉತ್ತೇಜನಕ್ಕಾಗಿ ನಾವು ಈಗಾಗಲೇ ಈ ವಲಯವನ್ನು ಕೇಂದ್ರೀಕೃತ ಏಕೀಕೃತ ಪ್ರದೇಶವಾಗಿ ಆಯ್ಕೆ ಮಾಡಿದ್ದೇವೆ. ಪೇಟೆಂಟ್ ಪಡೆದ ವಿನ್ಯಾಸಗಳನ್ನು ಪ್ರೋತ್ಸಾಹಿಸುವುದು, ರಫ್ತು ಉತ್ಪನ್ನಗಳನ್ನು ವೈವಿಧ್ಯಗೊಳಿಸುವುದು, ಇತರ ದೇಶಗಳ ಸಹಯೋಗದೊಂದಿಗೆ ಉತ್ತಮ ತಂತ್ರಜ್ಞಾನವನ್ನು ಅನ್ವೇಷಿಸುವುದು, ಲ್ಯಾಬ್ ಬೆಳೆದ ಅಥವಾ ಹಸಿರು ವಜ್ರಗಳನ್ನು ಉತ್ತೇಜಿಸುವುದು, ಇಂತಹ ಅನೇಕ ಪ್ರಯತ್ನಗಳನ್ನು ಕೇಂದ್ರ ಸರ್ಕಾರವು ಮಾಡುತ್ತಿದೆ.

ಸರ್ಕಾರವು ವಿಶೇಷ ನಿಬಂಧನೆಗಳನ್ನು ಸಹ ಮಾಡಿದೆ, ಹಸಿರು ವಜ್ರಗಳನ್ನು ಪ್ರೋತ್ಸಾಹಿಸಲು ಬಜೆಟ್ ಮಾಡಿದೆವು. ಈ ಎಲ್ಲಾ ಪ್ರಯತ್ನಗಳ ಗರಿಷ್ಠ ಲಾಭವನ್ನು ನೀವು ಪಡೆದುಕೊಳ್ಳಬೇಕು. ಇಂದು, ನೀವು ಪ್ರಪಂಚದಾದ್ಯಂತ ಪ್ರಯಾಣಿಸಿದಾಗಿನಿಂದ ನೀವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರ ವಾತಾವರಣವನ್ನು ಅನುಭವಿಸಿರಬೇಕು. ಪ್ರಪಂಚದ ಅನೇಕ ದೇಶಗಳ ಜನರು ಸಹ ಇಲ್ಲಿ ಇದ್ದಾರೆ. ಇಂದು ವಿಶ್ವದ ವಾತಾವರಣ ಭಾರತದ ಪರವಾಗಿದೆ. ಇಂದು ಭಾರತದ ಕೀರ್ತಿ ಪ್ರಪಂಚದಾದ್ಯಂತ ಉತ್ತುಂಗದಲ್ಲಿದೆ. ಪ್ರಪಂಚದಾದ್ಯಂತ ಭಾರತದ ಬಗ್ಗೆ ಮಾತನಾಡಲಾಗುತ್ತಿದೆ. 'ಮೇಡ್ ಇನ್ ಇಂಡಿಯಾ' ಈಗ ಪ್ರಬಲ ಬ್ರಾಂಡ್ ಆಗಿ ಮಾರ್ಪಟ್ಟಿದೆ. ನಿಮ್ಮ ವ್ಯಾಪಾರವು ಖಂಡಿತವಾಗಿಯೂ ಇದರಿಂದ ಸಾಕಷ್ಟು ಪ್ರಯೋಜನ ಪಡೆಯುತ್ತದೆ. ಆಭರಣ ಉದ್ಯಮಕ್ಕೂ ಲಾಭವಾಗುವುದು ಖಚಿತ. ಆದ್ದರಿಂದ ನಾನು ನಿಮಗೆಲ್ಲರಿಗೂ ಹೇಳುತ್ತೇನೆ, ಒಂದು ನಿರ್ಣಯವನ್ನು ತೆಗೆದುಕೊಂಡು ಅದನ್ನು ನನಸಾಗಿಸಿ!

ಸ್ನೇಹಿತರೇ,

ನಿಮ್ಮೆಲ್ಲರ ಸಾಮರ್ಥ್ಯವನ್ನು ಹೆಚ್ಚಿಸಲು, ಸರ್ಕಾರವು ಸೂರತ್ ನಗರದ ಸಾಮರ್ಥ್ಯವನ್ನು ಸಹ ಉತ್ಕೃಷ್ಟ ಮಟ್ಟಕ್ಕೇರಿಸುತ್ತಿದೆ. ಸೂರತ್ ನಲ್ಲಿ ಆಧುನಿಕ ಮೂಲಸೌಕರ್ಯಗಳ ಸೃಷ್ಟಿಗೆ ನಮ್ಮ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ. ಇಂದು ಸೂರತ್ ತನ್ನದೇ ಆದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿದೆ. ಇಂದು ಸೂರತ್ ತನ್ನದೇ ಆದ ಮೆಟ್ರೋ ರೈಲು ಸೇವೆಯನ್ನು ಹೊಂದಿದೆ. ಇಂದು ಅನೇಕ ಪ್ರಮುಖ ಉತ್ಪನ್ನಗಳನ್ನು ಸೂರತ್ ಬಂದರಿನಲ್ಲಿ ನಿರ್ವಹಿಸಲಾಗುತ್ತದೆ. ಇಂದು ಸೂರತ್ ಹಜಿರಾ ಬಂದರು, ಆಳವಾದ ನೀರಿನ ಎಲ್.ಎನ್.ಜಿ. ಟರ್ಮಿನಲ್ ಮತ್ತು ಬಹು-ಸರಕು ಬಂದರು ಹೊಂದಿದೆ. ಸೂರತ್ ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರಗಳೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುತ್ತಿದೆ. ಮತ್ತು ವಿಶ್ವದ ಕೆಲವೇ ಕೆಲವು ನಗರಗಳು ಅಂತಹ ಅಂತರರಾಷ್ಟ್ರೀಯ ಸಂಪರ್ಕವನ್ನು ಹೊಂದಿವೆ. ಸೂರತ್ ಗೆ ಬುಲೆಟ್ ಟ್ರೈನ್ ಯೋಜನೆಗೂ ಸಂಬಂಧ ಕಲ್ಪಿಸಲಾಗಿದೆ. ಇಲ್ಲಿ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾಮಗಾರಿಯೂ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಇದು ಸೂರತ್ನಿಂದ ಉತ್ತರ ಮತ್ತು ಪೂರ್ವ ಭಾರತಕ್ಕೆ ರೈಲು ಸಂಪರ್ಕವನ್ನು ಬಲಪಡಿಸುತ್ತದೆ. ದೆಹಲಿ ಮುಂಬೈ ಎಕ್ಸ್ಪ್ರೆಸ್ವೇ ಸೂರತ್ ನ ವ್ಯವಹಾರಗಳಿಗೆ ಹೊಸ ಅವಕಾಶಗಳನ್ನು ಒದಗಿಸಲಿದೆ.

ಸೂರತ್ ಒಂದು ರೀತಿಯಲ್ಲಿ, ಅಂತಹ ಆಧುನಿಕ ಸಂಪರ್ಕವನ್ನು ಹೊಂದಿರುವ ದೇಶದ ಏಕೈಕ ನಗರವಾಗಿದೆ. ನೀವೆಲ್ಲರೂ ಇದರ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಸೂರತ್ ಮುಂದಕ್ಕೆ ಸಾಗಿದರೆ ಗುಜರಾತ್ ಮುನ್ನಡೆಯುತ್ತದೆ ಮತ್ತು ಗುಜರಾತ್ ಮುಂದೆ ಸಾಗಿದರೆ ನನ್ನ ದೇಶ ಮುಂದುವರಿಯುತ್ತದೆ. ಇದಕ್ಕೆ ಸಂಬಂಧಿಸಿದ ಇತರ ಹಲವು ಸಾಧ್ಯತೆಗಳಿವೆ. ಇಲ್ಲಿ ವಿವಿಧ ದೇಶಗಳ ಜನರ ಚಲನೆ ಎಂದರೆ ಅದು ಒಂದು ರೀತಿಯಲ್ಲಿ ಜಾಗತಿಕ ನಗರವಾಗಿ ಪರಿವರ್ತನೆಯಾಗುತ್ತಿದೆ. ಮಿನಿ ಭಾರತವಾಗಿ ಮಾರ್ಪಟ್ಟಿದೆ.

ಇತ್ತೀಚೆಗಷ್ಟೇ ಜಿ-20 ಶೃಂಗಸಭೆ ನಡೆದಾಗ ಸಂವಹನಕ್ಕೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದೇವೆ. ಚಾಲಕನಿಗೆ ಹಿಂದಿ ಮಾತ್ರ ತಿಳಿದಿದ್ದರೆ, ಅವನೊಂದಿಗೆ ಕುಳಿತ ಅತಿಥಿಗೆ ಕೇವಲ ಫ್ರೆಂಚ್ ತಿಳಿದಿದ್ದರೆ, ಅವರು ಹೇಗೆ ಮಾತನಾಡುತ್ತಿದ್ದರು? ಹಾಗಾಗಿ ಮೊಬೈಲ್ ಆಪ್ ವ್ಯವಸ್ಥೆ ಮಾಡಿದೆವು. ಅವನು ಫ್ರೆಂಚ್ ನಲ್ಲಿ ಮಾತನಾಡಿದರೆ, ಚಾಲಕನು ಅದನ್ನು ಹಿಂದಿಯಲ್ಲಿ ಕೇಳಬಹುದು ಆದರೆ ಚಾಲಕ ಹಿಂದಿಯಲ್ಲಿ ಮಾತನಾಡಿದರೆ, ಅತಿಥಿಯು ಫ್ರೆಂಚ್ನಲ್ಲಿ ಅದನ್ನು ಕೇಳಬಹುದು.

ಆದ್ದರಿಂದ ಪ್ರಪಂಚದಾದ್ಯಂತದ ಜನರು ನಮ್ಮ ಡೈಮಂಡ್ ವ್ಯವಹಾರ-ವಾಣಿಜ್ಯ ಸಮುಚ್ಛಯಕ್ಕೆ (ಬೋರ್ಸ್)  ಬರಲಿದ್ದಾರೆ. ಭಾಷೆಯ ವಿಷಯದಲ್ಲಿ ಸಂವಹನಕ್ಕೆ ಏನೇ ಬೆಂಬಲ ಬೇಕಾದರೂ ಕೇಂದ್ರ ಸರ್ಕಾರ ಖಂಡಿತಾ ನಿಮಗೆ ನೀಡುತ್ತದೆ. ಮತ್ತು ನಾವು ಈ ಕಾರ್ಯವನ್ನು ಮೊಬೈಲ್ ಅಪ್ಲಿಕೇಶನ್, ಭಾಷಿನಿ ಅಪ್ಲಿಕೇಶನ್ ಮೂಲಕ ಸರಳಗೊಳಿಸುತ್ತೇವೆ.

ಇಲ್ಲಿನ ನರ್ಮದ್ ವಿಶ್ವವಿದ್ಯಾನಿಲಯವು ವಿವಿಧ ಭಾಷೆಗಳಲ್ಲಿ ವ್ಯಾಖ್ಯಾನ-ಭಾಷಾಂತರಕಾರರನ್ನು ತಯಾರು ಮಾಡುವ ಪ್ರಯತ್ನವನ್ನು ಪ್ರಾರಂಭಿಸಬೇಕು ಮತ್ತು ಇಲ್ಲಿನ ಮಕ್ಕಳು ಪ್ರಪಂಚದ ವಿವಿಧ ಭಾಷೆಗಳಲ್ಲಿ ವ್ಯಾಖ್ಯಾನವನ್ನು ತಿಳಿದುಕೊಳ್ಳಬೇಕು, ಇದರಿಂದಾಗಿ ಇಲ್ಲಿನ ನಮ್ಮ ಯುವಕರು ವ್ಯಾಖ್ಯಾನ-ಭಾಷಾಂತರದ ಉದ್ಯೋಗವನ್ನು ಪಡೆಯುತ್ತಾರೆ ಎಂದು ನಾನು ಮುಖ್ಯಮಂತ್ರಿಗಳಿಗೆ ಸಲಹೆಯನ್ನು ನೀಡುತ್ತೇನೆ. ಇಲ್ಲಿಗೆ ಬರುವ ಉದ್ಯಮಿಗಳು. ಮತ್ತು ಜಾಗತಿಕ ಕೇಂದ್ರವನ್ನು ರಚಿಸುವ ಅವಶ್ಯಕತೆಗಳಲ್ಲಿ, ಸಂವಹನವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇಂದು ತಂತ್ರಜ್ಞಾನವು ಬಹಳಷ್ಟು ಸಹಾಯ ಮಾಡುತ್ತಿದೆ, ಆದರೆ ಅದೇ ಸಮಯದಲ್ಲಿ ಹಸ್ತಚಾಲಿತ ವ್ಯಾಖ್ಯಾನವು ಸಮಾನವಾಗಿ ಅವಶ್ಯಕವಾಗಿದೆ. ನರ್ಮದಾ ವಿಶ್ವವಿದ್ಯಾನಿಲಯ ಅಥವಾ ಇನ್ನಾವುದೇ ವಿಶ್ವವಿದ್ಯಾನಿಲಯದ ಮೂಲಕ ಭಾಷಾ ಮದ್ಯಂತರಗಾರರು(ಇಂಟರ್ಪ್ರಿಟರ್) ಕೋರ್ಸ್ಗಳನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂದು ನಾನು ನಂಬುತ್ತೇನೆ.

ಸೂರತ್  ಡೈಮಂಡ್ ವ್ಯವಹಾರ-ವಾಣಿಜ್ಯ ಸಮುಚ್ಛಯ (ಬೋರ್ಸ್)  ಮತ್ತು ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಮುಂದಿನ ತಿಂಗಳು ವೈಬ್ರೆಂಟ್ ಗುಜರಾತ್ ಶೃಂಗಸಭೆ ಕೂಡ ನಡೆಯಲಿದೆ. ಇದಕ್ಕಾಗಿ ಗುಜರಾತ್ ಗೆ ಶುಭ ಹಾರೈಸುತ್ತೇನೆ. ಮತ್ತು ಗುಜರಾತ್ ನ ಈ ಪ್ರಯತ್ನವು ದೇಶಕ್ಕೆ ಸಹಾಯ ಮಾಡುತ್ತಿದೆ ಮತ್ತು ಅದಕ್ಕಾಗಿಯೇ ನಾನು ವಿಶೇಷವಾಗಿ ಗುಜರಾತ್ ಅನ್ನು ಅಭಿನಂದಿಸುತ್ತೇನೆ.

ಈ ಅಭಿವೃದ್ಧಿಯ ಹಬ್ಬವನ್ನು ಆಚರಿಸಲು ನೀವೆಲ್ಲರೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದೀರಿ. ಎಷ್ಟು ಬದಲಾವಣೆಯಾಗಿದೆ ಎಂದು ನೋಡಿ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಅಭಿವೃದ್ಧಿಯತ್ತ ಬದ್ಧರಾಗುತ್ತಿದ್ದಾರೆ. ಭಾರತವು ಮುನ್ನಡೆಯಲು ಇದು ಬಹುದೊಡ್ಡ ಶುಭ ಸಂಕೇತವಾಗಿದೆ. ಮತ್ತೊಮ್ಮೆ, ನಾನು ವಲ್ಲಭ ಭಾಯಿ ಮತ್ತು ಅವರ ಇಡೀ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಮತ್ತು ನನಗೆ ಗೊತ್ತು, ಆಗ ಕೋವಿಡ್ ನಮ್ಮನ್ನು ಹೊಡೆದು ಆಘಾತಗೊಳಿಸದಿದ್ದರೆ, ಬಹುಶಃ ನಾವು ಈ ಕೆಲಸವನ್ನು ಬೇಗ , ಈಗಾಗಲೇ ಪೂರ್ಣಗೊಳಿಸುತ್ತಿದ್ದೆವು. ಆದರೆ ಕೋವಿಡ್ನಿಂದಾಗಿ ಕೆಲವು ಕೆಲಸಗಳಿಗೆ ಅಡಚಣೆಯಾಗಿದೆ. ಆದರೆ ಇಂದು ಈ ಕನಸು ನನಸಾಗಿರುವುದನ್ನು ಕಂಡು ತುಂಬಾ ಸಂತೋಷವಾಗುತ್ತಿದೆ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು!

ಧನ್ಯವಾದಗಳು. 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From welfare to opportunity: How DPI 2.0 and AI will unlock India’s productivity

Media Coverage

From welfare to opportunity: How DPI 2.0 and AI will unlock India’s productivity
NM on the go

Nm on the go

Always be the first to hear from the PM. Get the App Now!
...
State Visit of Prime Minister to Seychelles
June 28, 2026

As part of Prime Minister Shri Narendra Modi’s State Visit to Seychelles from 27-29 June 2026, Prime Minister and the President of Seychelles, H.E. Dr. Patrick Herminie today held official talks at the State House in Victoria, Mahe.

The talks covered the full spectrum of bilateral relations, with the leaders agreeing to further strengthen cooperation in health, education, capacity building, digital transformation, sustainable development, social infrastructure, renewable energy, maritime security and defence. They also exchanged views on regional and global developments, including challenges in the Indian Ocean region, such as illegal fishing, drug trafficking and piracy. Both leaders expressed satisfaction at the progress made in the implementation of projects and initiatives under the Special Economic Package announced by India. Prime Minister reaffirmed India’s commitment to supporting the development priorities of Seychelles and to further deepen the close and enduring partnership between the two countries.

Following the official talks, both leaders released a joint commemorative logo marking 50 years of the establishment of diplomatic relations between the two countries. Several MoUs/agreements in the fields of Capacity Building, UPI, Health, Agriculture, Shipping, Space, Extradition and Line of Credit were exchanged thereafter. The amount of the Line of Credit stands at INR 1250 crores. The full list of MoUs/agreements may be seen here [link]. In addition, several announcements in the fields of food security, infrastructure, health, vocational training, maritime security and defence were made in support of the development needs of Seychelles. The details of these announcements may be seen here [link]. Seychelles also announced that it is joining the Coalition for Disaster Resilient Infrastructure [CDRI].

Later in the day, Prime Minister addressed an Extraordinary Sitting of the National Assembly of Seychelles, becoming the first Indian Prime Minister to do so. In his address, he highlighted the historical bonds of friendship between India and Seychelles and underscored the shared values of democracy, rule of law and people-centric governance that guide the two countries. He noted that mutual trust and close cooperation have shaped a robust partnership spanning development cooperation, maritime security, technology, innovation, health and capacity building. Prime Minister also called for enhanced parliamentary exchanges between the two democracies. The full address of Prime Minister may be seen here [link]

The Leader of Opposition of Seychelles, H.E. Mr. Bernard Georges, also called on Prime Minister. The two leaders discussed India-Seychelles bilateral ties and conveyed their strong support to further build the special friendship between the two countries.