ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮಗೆ ಗ್ಲೋಬಲ್ ಗೋಲ್ ಕೀಪರ್ಸ್ ಗೋಲ್ಸ್ ಪ್ರಶಸ್ತಿ 2019 ನೀಡಿದ್ದಕ್ಕಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭಾರತವು ಗಾಂಧೀಜಿ ಅವರ ಸ್ವಚ್ಛ ಭಾರತ ಕನಸನ್ನು ಈಡೇರಿಸಲು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಉತ್ತಮ ಪಡಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ, ಎಂದು ಅವರು ಹೇಳಿದರು.
ಯು.ಎಸ್.ಎ. ಭೇಟಿಯು ತಮಗೆ ವಿವಿಧ ಜಾಗತಿಕ ನಾಯಕರೊಂದಿಗೆ ಮಾತುಕತೆ ನಡೆಸಲು ಉತ್ತಮ ಅವಕಾಶ ನೀಡಿದೆ. ಭಾರತವು ಪೆಸಿಫಿಕ್ ದ್ವೀಪ ರಾಷ್ಟ್ರಗಳು ಮತ್ತು ಕರಿಕಾಮ್ ಗುಂಪಿನ ನಾಯಕರೊಂದಿಗೆ ಯುಎನ್.ಜಿ.ಎ. ವೇಳೆ ಮಾತುಕತೆ ನಡೆಸುತ್ತಿದೆ ಎಂದರು.
-ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 20, 2019


