ಶೇರ್
 
Comments
ಶ್ರೀ ಕಲ್ಯಾಣ್ ಸಿಂಗ್ ಗೆ ಅಂತಿಮ ಗೌರವ ಸಲ್ಲಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ
ಕಲ್ಯಾಣ್ ಸಿಂಗ್ ಜಿ ಸದಾ ಜನ ಕಲ್ಯಾಣಕ್ಕಾಗಿ ದುಡಿದ ನಾಯಕರು ಮತ್ತು ಭಾರತದಾದ್ಯಂತ ಸದಾ ಮೆಚ್ಚುವ ನಾಯಕರು: ಪ್ರಧಾನಮಂತ್ರಿ

ಈ ಕ್ಷಣ ನಮ್ಮೆಲ್ಲರಿಗೂ ದುಃಖದ ಕ್ಷಣ. ಕಲ್ಯಾಣ್ ಸಿಂಗ್ ಜಿ ಅವರ ಪೋಷಕರು ಅವರಿಗೆ ಕಲ್ಯಾಣ ಸಿಂಗ್ ಎಂದು ಹೆಸರಿಟ್ಟಿದ್ದರು. ಅವರು ತಮ್ಮ ಪೋಷಕರು ಇಟ್ಟ ಹೆಸರಿನಂತೆ ಜೀವನವನ್ನು ನಡೆಸಿದರು. ಅವರು ತಮ್ಮ ಇಡೀ ಜೀವನವನ್ನು ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದರು ಮತ್ತು ಅದನ್ನೇ ತಮ್ಮ ಜೀವನಮಂತ್ರವನ್ನಾಗಿ ಮಾಡಿಕೊಂಡಿದ್ದರು. ಅವರು ಭಾರತೀಯ ಜನತಾ ಪಾರ್ಟ, ಭಾರತೀಯ ಜನಸಂಘ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು.

ಕಲ್ಯಾಣ್ ಸಿಂಗ್ ಜಿ ಅವರ ಹೆಸರು ಭಾರತದಾದ್ಯಂತ ನಂಬಿಕೆಗೆ ಸಮಾನಾರ್ಥಕವಾಗಿದೆ. ಅವರು ಬದ್ಧ ನಿರ್ಧಾರ ಕೈಗೊಳ್ಳುವವರಾಗಿದ್ದರು ಮತ್ತು ತಮ್ಮ ಜೀವನದುದ್ಧಕ್ಕೂ ಸದಾ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದರು.  ಅವರು ಶಾಸಕರಾಗಿರಲಿ ಅಥವಾ ಸರ್ಕಾದೊಳಗಿರಲಿ ಅಥವಾ ರಾಜ್ಯಪಾಲರಾಗಿರಲಿ, ಯಾವುದೇ ಜವಾಬ್ದಾರಿ ನೀಡಿದರೂ ಅವರು ಇತರರಿಗೆ ಸ್ಫೂರ್ತಿಯಾಗಿದ್ದರು. ಅವರು ಜನಸಾಮಾನ್ಯರಿಗೆ ನಂಬಿಕೆಯ ಸಂಕೇತವಾಗಿದ್ದರು.

ರಾಷ್ಟ್ರವು ಮೌಲ್ಯಯುತ ವ್ಯಕ್ತಿತ್ವ ಮತ್ತು ಸಮರ್ಥ ನಾಯಕನನ್ನು ಕಳೆದುಕೊಂಡಿದೆ. ಅವರ ಆದರ್ಶಗಳನ್ನು ಅನುಸರಿಸಿ ಮತ್ತು ಅವರ ಕನಸುಗಳನ್ನು ಈಡೇರಿಸುವ ಮೂಲಕ ನಾವು ಅವರ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸಬೇಕು. ಶ್ರೀರಾಮನು ಅವರ ಆತ್ಮವನ್ನು ಆಶೀರ್ವದಿಸಲಿ ಮತ್ತು ಅವರ ಕುಟುಂಬಕ್ಕೆ ಈ ನಷ್ಟವನ್ನು ಭರಿಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಮೌಲ್ಯಗಳು, ಆದರ್ಶಗಳು ಮತ್ತು ಭಾರತದ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನಂಬಿಕೆ ಹೊಂದಿರುವ ಮತ್ತು ಅವರಿಗಾಗಿ ದುಃಖಿಸುತ್ತಿರುವ ಎಲ್ಲರಿಗೂ ಭಗವಾನ್ ಶ್ರೀ ರಾಮ ಶಕ್ತಿಯನ್ನು ನೀಡಲಿ.

 

 

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
An order that looks beyond just economics, prioritises humans

Media Coverage

An order that looks beyond just economics, prioritises humans
...

Nm on the go

Always be the first to hear from the PM. Get the App Now!
...
ಶೇರ್
 
Comments

Join Live for Mann Ki Baat