ಇಂಡಿಯಾ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಭೂತಾನ್ ಪ್ರಧಾನಮಂತ್ರಿ ಮಾನ್ಯ ತ್ಸೆರಿಂಗ್ ಟೋಬ್ಗೆ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.

ಪ್ರಧಾನಮಂತ್ರಿ ಮೋದಿ ಅವರ ನವೆಂಬರ್‌ 2025ರ ಭೂತಾನ್ ಭೇಟಿಯ ಯಶಸ್ವಿ ಫಲಿತಾಂಶಗಳನ್ನಾಧರಿಸಿದ ವಿವಿಧ ಕ್ಷೇತ್ರಗಳಲ್ಲಿನ ಸಹಕಾರದ ಪ್ರಗತಿಯನ್ನು ಇಬ್ಬರೂ ನಾಯಕರು ಸಭೆಯಲ್ಲಿ ಪರಾಮರ್ಶಿಸಿದರು. 

ಭೂತಾನಿನ 13ನೇ ಪಂಚವಾರ್ಷಿಕ ಯೋಜನೆ ಹಾಗೂ ಗೆಲೆಫು ಮೈಂಡ್‌ ಫುಲ್‌ ನೆಸ್ ಸಿಟಿ ಯೋಜನೆಗೆ ಭಾರತದ ಬೆಂಬಲಕ್ಕಾಗಿ ಪ್ರಧಾನಿ ಟೋಬ್ಗೆ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಇಂಧನ, ಸಂಪರ್ಕ ಮತ್ತು ಅಭಿವೃದ್ಧಿ ಪಾಲುದಾರಿಕೆಯ ಆದ್ಯತೆಯ ವಲಯಗಳಲ್ಲಿನ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.

ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಹೊಸ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಭಾರತ ಮತ್ತು ಭೂತಾನ್ ನೀಡಿರುವ ಆದ್ಯತೆಗೆ ಅನುಗುಣವಾಗಿ ಅನುಭವ ಮತ್ತು ಪರಿಣತಿಯನ್ನು ಪರಸ್ಪರ ಹಂಚಿಕೊಳ್ಳಲು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಪರಿಹಾರಗಳ ಜಂಟಿ ಅಭಿವೃದ್ಧಿಗಾಗಿ ಎಐ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ ಬಲವರ್ಧನೆಗೆ ಉಭಯ ದೇಶಗಳ ಪ್ರಧಾನಿಗಳು ಸಮ್ಮತಿಸಿದರು.

ಭಾರತ ಮತ್ತು ಭೂತಾನ್ ನಂಬಿಕೆ, ಸದ್ಭಾವನೆ ಮತ್ತು ಅರ್ಥೈಸುವಿಕೆಯ ಆಧಾರದ ಮೇಲೆ ಸ್ನೇಹ ಮತ್ತು ಸಹಕಾರದ ವಿಶಿಷ್ಟ ಬಾಂಧವ್ಯ ಹೊಂದಿವೆ. ಭೂತಾನ್ ಪ್ರಧಾನಮಂತ್ರಿಗಳ ಭೇಟಿಯು ಭಾರತ ಮತ್ತು ಭೂತಾನ್ ನಡುವಿನ ನಿಯಮಿತ ಉನ್ನತ ಮಟ್ಟದ ವಿನಿಮಯ ಪದ್ಧತಿಗೆ ಅನುಗುಣವಾಗಿದೆ..

ಎಕ್ಸ್ ನ ಪ್ರತ್ಯೇಕ ಪೋಸ್ಟ್ ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:

"ಪ್ರಧಾನಮಂತ್ರಿ ತ್ಸೆರಿಂಗ್ ಟೋಬ್ಗೆ ಅವರೊಂದಿಗಿನ ಸಭೆ ಅತ್ಯುತ್ತಮವಾಗಿತ್ತು. ಜಾಗತಿಕ ಒಳಿತಿಗಾಗಿ ಮತ್ತು ಸುಸ್ಥಿರತೆಯ ತತ್ವಗಳಿಗೆ ಅನುಗುಣವಾಗಿ ಎಐ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ನಾವು ಚರ್ಚಿಸಿದೆವು.

 ನಮ್ಮ ಎರಡೂ ದೇಶಗಳ ಜನರ ನಡುವಿನ ಪರಸ್ಪರ ನಂಬಿಕೆ, ಸದ್ಭಾವನೆ ಮತ್ತು ನಿಕಟ ಸಂಬಂಧಗಳಲ್ಲಿ ಬೇರೂರಿರುವ ಭಾರತ-ಭೂತಾನ್ ಶಾಶ್ವತ ಸ್ನೇಹವು ಹೊಸ ಮತ್ತು ಪರಿವರ್ತನಾತ್ಮಕ ಕ್ಷೇತ್ರಗಳಿಗೆ ನಮ್ಮ ಪಾಲುದಾರಿಕೆಗೆ  ಮಾರ್ಗದರ್ಶನ ಮುಂದುವರಿಸಿದೆ. 

@tsheringtobgay"

 

"བློན་ཆེན་ཚེ་རིང་སྟོབས་རྒྱས་དང་གཅིག་ཁར་ཕྱད་མི་འདི་ མཆོག་ཏུ་གྱུར་པ་ཅིག་ཨིན་མས། ང་བཅས་ཀྱིས་ ཡུན་བརྟན་གཞི་རྩ་དང་གཅིག་ཁར་ ཞི་བདེ་དང་ལྡནམ་སྦེ་ རྒྱལ་སྤྱིའི་ཁེ་ཕན་གྱི་དོན་ལུ་ བཅོས་རིག་གི་ནུས་པ་འདི་ ག་དེ་སྦེ་ལག་ལེན་འཐབ་ནི་ཨིན་ན་ གྲོས་བསྡུར་འབད་ཡི།

རྒྱ་གར་དང་འབྲུག་གི་བར་ན་ མཐུན་ལམ་ཡུན་བརྟན་སྦེ་གནས་མི་དང་ ཕན་ཚུན་གྱི་བློ་གཏད་དང་ མཐུན་ལམ་ལེགས་ཤོམ་ དེ་ལས་ མི་སེར་གཉིས་ཀྱི་བར་ན་ མཐུན་ལམ་དམ་ཟབ་སྦེ་ཡོད་མི་གིས་ ང་བཅས་རའི་མཉམ་འབྲེལ་འདི་ གནས་སྟངས་གསརཔ་ཅིག་ལུ་འགྱུར་ཚུགས་པའི་ལམ་སྟོན་འབད་དེ་ར་ཡོད།

@tsheringtobgay"

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s Electronics Exports Cross Rs 4 Lakh Crore, Begins PCB Exports To China: Vaishnaw

Media Coverage

India’s Electronics Exports Cross Rs 4 Lakh Crore, Begins PCB Exports To China: Vaishnaw
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of self-respect, courage and steadfastness
August 18, 2026

The Prime Minister, Shri Narendra Modi has shared a Sanskrit Subhashitam highlighting the importance of living with self-respect, courage and dignity. He emphasised that true valour and strength lie in remaining steadfast in one’s principles and values, without compromising them under any circumstances.

The Prime Minister shared a Sanskrit Subhashitam-

“उद्यच्छेदेव न नमेदुद्यमो ह्येव पौरुषम्।
अप्यपर्वणि भज्येत न नमत्वेव कस्यचित्॥”

The Subhashitam conveys that a person should always live with self-respect, courage and dignity. True valor and strength lie in never compromising one's principles and values under any circumstances, but remaining steadfast in one's ideals with truth, patience and self-pride.

The Prime Minister wrote on X;

“उद्यच्छेदेव न नमेदुद्यमो ह्येव पौरुषम्।

अप्यपर्वणि भज्येत न नमत्वेव कस्यचित्॥”