ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಜನ್ಮದಿನದಂದು ಅವರಿಗೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದ್ದಾರೆ.
ರಾಜಮಾತೆ ವಿಜಯರಾಜೇ ಸಿಂಧಿಯಾ ಅವರು ಸಮಾಜ ಸೇವೆಗಾಗಿ ಮಾಡಿದ ಜೀವಮಾನದ ಪ್ರಯತ್ನಗಳು ಸದಾ ಸ್ಮರಣೀಯವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.
ವಿಜಯರಾಜೇ ಸಿಂಧಿಯಾ ಅವರು ಭಾರತದ ಸಾಂಸ್ಕೃತಿಕ ಬೇರುಗಳ ಬಗ್ಗೆ ತೀವ್ರ ಉತ್ಸುಕರಾಗಿದ್ದರು ಎಂದು ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು. ಅವರು ದೇಶದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮತ್ತು ಜನಪ್ರಿಯಗೊಳಿಸಲು ನಿರಂತರವಾಗಿ ಕೆಲಸ ಮಾಡಿದರು. ಇದು ಭಾರತದ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಸಂರಕ್ಷಿಸುವ ಅವರ ಜೀವಮಾನದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಈ ಕುರಿತು ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:
"ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. ಸಮಾಜ ಸೇವೆಗಾಗಿ ಅವರು ಮಾಡಿದ ಪ್ರಯತ್ನಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. ಜನಸಂಘ ಮತ್ತು ಬಿಜೆಪಿಯನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ವಿಜಯರಾಜೇ ಸಿಂಧಿಯಾ ಅವರು ನಮ್ಮ ಸಾಂಸ್ಕೃತಿಕ ಬೇರುಗಳ ಬಗ್ಗೆ ಉತ್ಸುಕರಾಗಿದ್ದರು ಮತ್ತು ಅವುಗಳನ್ನು ರಕ್ಷಿಸಲು ಮತ್ತು ಜನಪ್ರಿಯಗೊಳಿಸಲು ಯಾವಾಗಲೂ ಕೆಲಸ ಮಾಡಿದರು."
Tributes to Rajmata Vijayaraje Scindia Ji on her birth anniversary. Her efforts to serve society will never be forgotten. She played a key role in strengthening the Jana Sangh and BJP. Vijayaraje Scindia Ji was passionate about our cultural roots and always worked to protect as… pic.twitter.com/PXP0UjUklz
— Narendra Modi (@narendramodi) October 12, 2025


