ಶೇರ್
 
Comments

ಜೋರ್ಡಾನ್ ಸಾಮ್ರಾಜ್ಯದ 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು  ಬಯಸುತ್ತೇನೆ.

ಘನತೆವೆತ್ತ ದೊರೆ ಅಬ್ದುಲ್ಲಾ ಮತ್ತು ಜೋರ್ಡಾನ್ ಜನರಿಗೆ ನನ್ನ ಆತ್ಮೀಯ ಶುಭಾಶಯಗಳು.

ವಿಶ್ವದ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಜೋರ್ಡಾನ್ ಗೆ ಗೌರವಾನ್ವಿತ ಹೆಸರಿದೆ.

ಘನತೆವೆತ್ತ ದೊರೆ ಅಬ್ದುಲ್ಲಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಜೋರ್ಡಾನ್ ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಯನ್ನು ಸಾಧಿಸಿದೆ.

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಇದರ ಪ್ರಗತಿ ಗಮನಾರ್ಹವಾಗಿದೆ.

ವಿಶ್ವದ ಒಂದು ಪ್ರಮುಖ ಪ್ರಾಂತ್ಯದಲ್ಲಿರುವ ಜೋರ್ಡಾನ್, ಪ್ರಬಲ ಧ್ವನಿಯಾಗಿ ಮತ್ತು ಮಂದಗಾಮಿತ್ವ ಮತ್ತು ಸರ್ವರ ಒಳಗೊಳ್ಳುವಿಕೆಯ ಜಾಗತಿಕ ಸಂಕೇತವಾಗಿ ಹೊರಹೊಮ್ಮಿದೆ.

ಜೋರ್ಡಾನ್ ತನ್ನ ನೆರೆಹೊರೆಯ ದೇಶಗಳೊಂದಿಗೆ ಶಾಂತಿಯುತವಾಗಿ ಬದುಕುವ ಮೂಲಕ ಮಾದರಿ ದೇಶವಾಗಿ ಹೊರಹೊಮ್ಮಿದೆ ಮತ್ತು ಸ್ಥಿರತೆಯ ಸಂಕೇತವಾಗಿದೆ ಮತ್ತು ವಿವೇಚನೆಯ ಧ್ವನಿಯಾಗಿದೆ.

ಘನತೆವೆತ್ತ ದೊರೆಗಳು ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಪ್ರಾದೇಶಿಕ ಶಾಂತಿ ಮತ್ತು ಸುರಕ್ಷತೆಯ ಬಗ್ಗೆ ಸಮನ್ವಯವನ್ನು ಉತ್ತೇಜಿಸುವಲ್ಲಿ ʻಅಕಾಬಾ ಪ್ರಕ್ರಿಯೆʼಯ ಕೊಡುಗೆ ಅಪಾರ.

ಅದೇ ರೀತಿ, 2004ರ ʻಅಮ್ಮನ್ ಸಂದೇಶʼವು ಸಹಿಷ್ಣುತೆ, ಏಕತೆ ಮತ್ತು ಮಾನವ ಘನತೆಯನ್ನು ಗೌರವಿಸುವ ನಿಟ್ಟಿನಿಲ್ಲಿ ನೀಡಿದಂತಹ ಪ್ರಬಲ ಕರೆಯಾಗಿತ್ತು.

2018ರಲ್ಲಿ ಘನತೆವೆತ್ತ ದೊರೆಗಳ ಐತಿಹಾಸಿಕ ಭಾರತ ಭೇಟಿಯ ಸಂದರ್ಭದಲ್ಲಿ ನವದೆಹಲಿಯಲ್ಲಿ ಇದೇ ಸಂದೇಶವನ್ನು ಅವರು ಪುನರುಚ್ಚರಿಸಿದರು.

ಧಾರ್ಮಿಕ ವಿದ್ವಾಂಸರ ಕೂಟದಲ್ಲಿ ''ವಿಶ್ವದ ಭವಿಷ್ಯದಲ್ಲಿ ನಂಬಿಕೆಯ ಪಾತ್ರ'' ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ನಾನು ನೀಡಿದ ಆಹ್ವಾನವನ್ನು ಅವರು ಹೃತ್ಪೂರ್ವಕವಾಗಿ ಸ್ವೀಕರಿಸಿದರು.

ಶಾಂತಿ ಮತ್ತು ಸಮೃದ್ಧಿಗೆ ಮಂದಗಾಮಿತ್ವ ಮತ್ತು ಶಾಂತಿಯುತ ಸಹಬಾಳ್ವೆ ಅತ್ಯಗತ್ಯ ಎಂಬ ನಂಬಿಕೆಯಲ್ಲಿ ಭಾರತ ಮತ್ತು ಜೋರ್ಡಾನ್ ಒಂದಾಗಿವೆ.

ಸಮಸ್ತ ಮನುಕುಲದ ಉತ್ತಮ ಭವಿಷ್ಯಕ್ಕಾಗಿ ನಮ್ಮ ಜಂಟಿ ಪ್ರಯತ್ನಗಳಲ್ಲಿ ನಾವು ಜತೆಯಾಗಿ ಜೊತೆ ಜೊತೆಯಾಗಿ ಸಾಗುತ್ತೇವೆ. ಮತ್ತೊಮ್ಮೆ, ಈ ಸಂತೋಷದ ಸಂದರ್ಭದಲ್ಲಿ ಘನತೆವೆತ್ತ ದೊರೆಗಳು ಮತ್ತು ಜೋರ್ಡಾನ್ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ.

ಅಲ್ಫ್ ಮುಬಾರಕ್, ಸಹಸ್ರ ಅಭಿನಂದನೆಗಳು ಮತ್ತು ಶುಕ್ರನ್,

ಧನ್ಯವಾದಗಳು.

 

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Over 44 crore vaccine doses administered in India so far: Health ministry

Media Coverage

Over 44 crore vaccine doses administered in India so far: Health ministry
...

Nm on the go

Always be the first to hear from the PM. Get the App Now!
...
"ಪೋರ್ಚುಗಲ್ ನ ಲಿಸ್ಬನ್ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಸಂವಾದ "
June 24, 2017
ಶೇರ್
 
Comments
PM Modi pays historic visit to Portugal, interacts with Indian community, highlights several aspects of India-Portugal partnership
Appreciate Portugal's participation in Yoga Day celebrations and furthering it's reach: PM Modi
India is now among the fastest growing countries in the world and is touching skies of development: PM
In the field of space, our scientists have done great work. Recently 30 nano satellites were launched: PM Modi

Prime Minister Modi who was on a historic visit to Portugal, met Indian community and interacted with them. During his address, Shri Modi highlighted several aspects of India-Portugal partnership.

Shri Modi highlighted his meeting with António Guterres, who was also the former Prime Minister of Portugal. The PM spoke about yoga and holistic healthcare and appreciated the role Portugal was playing to further the message of yoga.

Prime Minister Modi said that India was now among the fastest growing countries in the world and was touching skies of development. Lauding the role of ISRO scientists, Shri Modi said, "In the field of space, our scientists have done great work. Recently 30 nano satellites were launched."

Earlier he also expressed sadness over loss of lives in forest fire in Portugal.

Prime Minister Modi also presented Overseas Citizen of India card to Portuguese Prime Minister Antonio Costa.

Click here to read full text speech