ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಲ್ಲಿ (MSSC) ದಾಖಲಾತಿ ಮಾಡಿಕೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳಾ ವೃಂದವನ್ನು ಒತ್ತಾಯಿಸಿದ್ದಾರೆ.
ಎಂಎಸ್ಎಸ್ ಸಿ ಮೂಲಕ ಮಹಿಳೆಯರು ತಮ್ಮ ಆರ್ಥಿಕತೆಯನ್ನು ಹೆಚ್ಚಿಸುವ ಮತ್ತು ಉತ್ತಮ ಆದಾಯವನ್ನು ಒದಗಿಸುವ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮಾಡಿದ ಟ್ವೀಟ್ ನ್ನು ಮರುಟ್ವೀಟ್ ಮಾಡಿದ ಪ್ರಧಾನ ಮಂತ್ರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಎಂಎಸ್ ಎಸ್ ಸಿಗೆ ದಾಖಲಾಗುವಂತೆ ನಾನು ಒತ್ತಾಯಿಸುತ್ತೇನೆ. ಇದು ನಮ್ಮ ನಾರಿ ಶಕ್ತಿ ವೃಂದಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.
I also urge more women to enrol for MSSC. It offers many advantages for our Nari Shakti. https://t.co/xG7t8XBvOq
— Narendra Modi (@narendramodi) April 29, 2023


