ಲೋಗೋ, ಥೀಮ್ ಮತ್ತು ವೆಬ್‌ಸೈಟ್ ಭಾರತದ ಸಂದೇಶವನ್ನು ಪ್ರತಿಬಿಂಬಿಸಲಿದೆ, ಜಗತ್ತಿಗೆ ಭಾರತದ ಆದ್ಯತೆಗಳನ್ನು ಸಾರಲಿದೆ
ಜಿ20 ಅಧ್ಯಕ್ಷತೆಯು ಅಂತಾರಾಷ್ಟ್ರೀಯ ಪ್ರಾಮುಖ್ಯದ ವಿಷಯಗಳ ಕುರಿತ ಜಾಗತಿಕ ಕಾರ್ಯಸೂಚಿಗೆ ಕೊಡುಗೆ ನೀಡಲು ಭಾರತಕ್ಕೆ ಉತ್ತಮ ಅವಕಾಶ ನೀಡುತ್ತದೆ
ಜಿ20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ 32 ವಲಯಗಳಿಗೆ ಅನ್ವಯವಾಗುವ ಸುಮಾರು 200 ಸಭೆಗಳನ್ನು ನಡೆಸಲಿದೆ

ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ (2022 ನವೆಂಬರ್ 08ರಂದು) ಸಂಜೆ 4.30ಕ್ಕೆ ಜಿ20 ಅಧ್ಯಕ್ಷ ಗಾದಿಯ ಲೋಗೊ, ಥೀಮ್(ಘೋಷವಾಕ್ಯ) ಮತ್ತು ವೆಬ್‌ಸೈಟ್ ಅನ್ನು ವೀಡಿಯೊ ಕಾನ್ಫರೆನ್ಸಿಂಗ್ ನಲ್ಲಿ ಅನಾವರಣಗೊಳಿಸಲಿದ್ದಾರೆ.

ಪ್ರಧಾನಮಂತ್ರಿ ಅವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟ ಭಾರತದ ವಿದೇಶಾಂಗ ನೀತಿಯು ಜಾಗತಿಕ ವೇದಿಕೆಯಲ್ಲಿ ನಾಯಕತ್ವದ ಪಾತ್ರಗಳನ್ನು ಕೈಗೊಳ್ಳಲು ವಿಕಸನಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಭಾರತವು 2022 ಡಿಸೆಂಬರ್ 01ರಂದು ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದೆ. ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನವು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಕುರಿತ ಜಾಗತಿಕ ಕಾರ್ಯಸೂಚಿಗೆ ಕೊಡುಗೆ ನೀಡಲು ಭಾರತಕ್ಕೆ ಒಂದು ಅನನ್ಯ ಅವಕಾಶ ನೀಡಲಿದೆ. ನಮ್ಮ ಜಿ20  ಅಧ್ಯಕ್ಷತೆಯ ಲೋಗೊ, ಥೀಮ್ ಮತ್ತು ವೆಬ್‌ಸೈಟ್, ಭಾರತದ ಸಂದೇಶ ಮತ್ತು ಜಗತ್ತಿಗೆ ಭಾರತದ ಆದ್ಯತೆಗಳನ್ನು ಸಾರಲಿದೆ.

ಜಿ20 ಶೃಂಗಸಭೆಯು  ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ ಏರ್ಪಡಿಸುವ  ಪ್ರಧಾನ ವೇದಿಕೆಯಾಗಿದ್ದು, ಜಾಗತಿಕ ಜಿಡಿಪಿಯ 85%, ಜಾಗತಿಕ ವ್ಯಾಪಾರದ 75% ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಆರ್ಥಿಕ ಸಹಕಾರವನ್ನು ಪ್ರತಿನಿಧಿಸುತ್ತದೆ. ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಭಾರತವು, ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ 32 ವಲಯಗಳಿಗೆ ಅನ್ವಯವಾಗುವ ಸುಮಾರು 200 ಸಭೆಗಳನ್ನು ನಡೆಸಲಿದೆ. ಭಾರತವು ಆಯೋಜಿಸುತ್ತಿರುವ ಅತ್ಯುನ್ನತ ಅಂತಾರಾಷ್ಟ್ರೀಯ ಕೂಟಗಳಲ್ಲಿ ಜಿ20 ಶೃಂಗಸಭೆಯು ಒಂದಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Khichdi To Moringa Paratha: 7 Traditional Foods PM Modi Loves

Media Coverage

Khichdi To Moringa Paratha: 7 Traditional Foods PM Modi Loves
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಆಗಸ್ಟ್ 2026
August 26, 2026

Accountability Meets Ambition: Record Low NPAs, Record Defence Output, Record Digital Adoption Under the Leadership of PM Modi