ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಡಿಸೆಂಬರ್ 14 ,2022 ರಂದು ಅಹಮದಾಬಾದ್ನಲ್ಲಿ ಸಂಜೆ 5:30ಕ್ಕೆ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಭಾರತ ಮತ್ತು ಪ್ರಪಂಚದಾದ್ಯಂತ ಅಸಂಖ್ಯಾತ ಜನರ ಮಾರ್ಗದರ್ಶಿ ಮತ್ತು ಗುರು ಆಗಿದ್ದರು. ಅವರು ಮಹಾನ್ ಆಧ್ಯಾತ್ಮಿಕ ನಾಯಕರಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟರು ಮತ್ತು ಪ್ರಶಂಸಿಸಲ್ಪಟ್ಟರು. ಅವರ ಜೀವನವು ಆಧ್ಯಾತ್ಮಿಕತೆ ಮತ್ತು ಮಾನವೀಯತೆಯ ಸೇವೆಗೆ ಮೀಸಲಾಗಿತ್ತು. ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಮುಖ್ಯಸ್ಥರಾಗಿ, ಅವರು ಲೆಕ್ಕವಿಲ್ಲದಷ್ಟು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಉಪಕ್ರಮಗಳನ್ನು ಪ್ರೇರೇಪಿಸಿದರು, ಹಾಗೂ ಲಕ್ಷಾಂತರ ಜನರಿಗೆ ಸಾಂತ್ವನ ಮತ್ತು ಆರೈಕೆಯನ್ನುನೀಡಿದರು.

ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ, ಪ್ರಪಂಚದಾದ್ಯಂತದ ಜನರು ಅವರ ಜೀವನ ಮತ್ತು ಸುಕಾರ್ಯಗಳ ನೆನಪಿನಲ್ಲಿ ಆಚರಿಸುತ್ತಿದ್ದಾರೆ. ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಪ್ರಧಾನ ಕಛೇರಿಯಾಗಿರುವ ಶಾಹಿಬಾಗ್ನ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವು ಆಯೋಜಿಸುವ 'ಪ್ರಮುಖ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ'ದಲ್ಲಿ ವರ್ಷಪೂರ್ತಿ ನಡೆಯುತ್ತಿರುವ ವಿಶ್ವಾದ್ಯಂತ ಆಚರಣೆಗಳು ಮುಕ್ತಾಯಗೊಳ್ಳುತ್ತವೆ. ಇದು ಅಹಮದಾಬಾದ್ನಲ್ಲಿ 15ನೇ ಡಿಸೆಂಬರ್ 2022 ರಿಂದ 15ನೇ ಜನವರಿ 2023 ರವರೆಗೆ ನಡೆಯುವ ಒಂದು ತಿಂಗಳ ಅವಧಿಯ ಆಚರಣೆಯಾಗಿದ್ದು, ದೈನಂದಿನ ಕಾರ್ಯಕ್ರಮಗಳು, ವಿಷಯಾಧಾರಿತ ಪ್ರದರ್ಶನಗಳು ಮತ್ತು ಚಿಂತನಶೀಲ ವೇದಿಕೆಗಳನ್ನು ಒಳಗೊಂಡಿರುತ್ತದೆ.

ಬಿಎಪಿಎಸ್ಸ್ವಾಮಿನಾರಾಯಣ ಸಂಸ್ಥೆಯನ್ನು 1907 ರಲ್ಲಿ ಶಾಸ್ತ್ರೀಜಿ ಮಹಾರಾಜ್ ಸ್ಥಾಪಿಸಿದರು. ವೇದಗಳ ಬೋಧನೆಗಳ ಆಧಾರದ ಮೇಲೆ ಮತ್ತು ಪ್ರಾಯೋಗಿಕ ಆಧ್ಯಾತ್ಮಿಕತೆಯ ಸ್ತಂಭಗಳ ಮೇಲೆ ಸ್ಥಾಪಿತವಾಗಿದೆ, ಇಂದಿನ ಆಧ್ಯಾತ್ಮಿಕ, ನೈತಿಕ ಮತ್ತು ಸಾಮಾಜಿಕ ಸವಾಲುಗಳನ್ನು ಪರಿಹರಿಸಲು ಬಿಎಪಿಎಸ್ ಯಶಸ್ವಿಯಾಗಿದೆ.  ಬಿಎಪಿಎಸ್ ನಂಬಿಕೆ, ಏಕತೆ ಮತ್ತು ನಿಸ್ವಾರ್ಥ ಸೇವೆಯ ಮೌಲ್ಯಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ ಮತ್ತು ಸಮಾಜದ ಎಲ್ಲಾ ಹಂತಗಳ ಜನರ ಆಧ್ಯಾತ್ಮಿಕ, ಸಾಂಸ್ಕೃತಿಕ, ದೈಹಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಒದಗಿಸುತ್ತದೆ. ಇದು ಜಾಗತಿಕ ಕಾರ್ಯಕ್ರಮಗಳ ಪ್ರಯತ್ನಗಳ ಮೂಲಕ ಮಾನವೀಯ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Apple exports record $2 billion worth of iPhones from India in November

Media Coverage

Apple exports record $2 billion worth of iPhones from India in November
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2025
December 17, 2025

From Rural Livelihoods to International Laurels: India's Rise Under PM Modi