ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದರು.
ಸಂಭಾಷಣೆಯ ಸಂದರ್ಭದಲ್ಲಿ, ಉಭಯ ನಾಯಕರು ಪಶ್ಚಿಮ ಏಷ್ಯಾದಲ್ಲಿ ಬೆಳೆಯುತ್ತಿರುವ ಪರಿಸ್ಥಿತಿಯ ಬಗ್ಗೆ ತಮ್ಮ ಕಳವಳಗಳನ್ನು ಹಂಚಿಕೊಂಡು ಚರ್ಚಿಸಿದರು ಮತ್ತು ಪರಿಸ್ಥಿತಿಯು ಸಂವಾದ ಹಾಗೂ ರಾಜತಾಂತ್ರಿಕತೆಯಡೆಗೆ ಮರಳುವ ಅಗತ್ಯವನ್ನು ಒತ್ತಿ ಹೇಳಿದರು.
ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಪುನಃಸ್ಥಾಪನೆಗಾಗಿ ನಿಕಟವಾಗಿ ತೊಡಗಿಸಿಕೊಳ್ಳುವುದನ್ನು ಮತ್ತು ಸಮನ್ವಯ ಪ್ರಯತ್ನಗಳನ್ನು ಭಾರತ ಮತ್ತು ಫ್ರಾನ್ಸ್ ಮುಂದುವರಿಸುತ್ತವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ತಿಳಿಸಿದಿದ್ದಾರೆ;
“ಇಂದು ನನ್ನ ಸ್ನೇಹಿತ ಅಧ್ಯಕ್ಷರಾದ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿ ಬೆಳೆಯುತ್ತಿರುವ ಪರಿಸ್ಥಿತಿ ಮತ್ತು ಇದು ಆದಷ್ಟು ಬೇಗನೆ ಸಂವಾದ ಮತ್ತು ರಾಜತಾಂತ್ರಿಕತೆಯಡೆಗೆ ಮರಳುವ ಅಗತ್ಯತೆಯ ಬಗ್ಗೆ, ನಾವು ಪರಸ್ಪರ ಕಳವಳಗಳನ್ನು ಹಂಚಿಕೊಂಡು ಚರ್ಚಿಸಿದ್ದೇವೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಪುನಃಸ್ಥಾಪನೆಗಾಗಿ ನಾವು ನಿಕಟವಾಗಿ ತೊಡಗಿಸಿಕೊಳ್ಳುವುದನ್ನು ಮತ್ತು ಸಮನ್ವಯ ಪ್ರಯತ್ನಗಳನ್ನು ಮುಂದುವರಿಸುತ್ತೇವೆ.
@EmmanuelMacron”
Spoke with my friend President Emmanuel Macron today. We discussed our shared concerns over the evolving situation in West Asia and the need for a return to dialogue and diplomacy. We will continue to engage closely and coordinate efforts towards the early restoration of peace…
— Narendra Modi (@narendramodi) March 5, 2026
J’ai parlé aujourd’hui avec mon ami, le président Emmanuel Macron. Nous avons discuté de nos préoccupations communes concernant l’évolution de la situation en Asie occidentale et de l’importance de reprendre le dialogue et la voie diplomatique. Nous continuerons à nous engager…
— Narendra Modi (@narendramodi) March 5, 2026


