ಸಶಸ್ತ್ರ ಪಡೆಗಳ ಗೌರವದ ಸಂಕೇತವಾಗಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿನ ʻಡಿಸ್‌ಪ್ಲೇ ಪಿಕ್ಚರ್‌ʼಗಳನ್ನುʼ(ಡಿಪಿ) ಬದಲಾಯಿಸುವಂತೆ ನಾಗರಿಕರಿಗೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಆಪರೇಷನ್ ಸಿಂದೂರ್‌ʼ ಕಾರ್ಯಾಚರಣೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಧೈರ್ಯ, ನಿಖರತೆ ಮತ್ತು ಸಂಕಲ್ಪಕ್ಕೆ ವಂದನೆ ಸಲ್ಲಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಮುಗ್ಧ ಭಾರತೀಯರ ಮೇಲೆ ದಾಳಿ ಮಾಡುವ ಧೈರ್ಯ ತೋರಿದವರಿಗೆ ಸಶಸ್ತ್ರ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

ʻಆಪರೇಷನ್ ಸಿಂದೂರ್‌’ ಕಾರ್ಯಾಚರಣೆಯು ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಪ್ರತಿಕ್ರಿಯೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ದೇಶದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಈ ಕಾರ್ಯಾಚರಣೆಯು ಸಶಸ್ತ್ರ ಪಡೆಗಳ ವೃತ್ತಿಪರತೆ, ಸನ್ನದ್ಧತೆ ಮತ್ತು ಸಂಘಟಿತ ಶಕ್ತಿಯನ್ನು ಉಲ್ಲೇಖಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. ಇದು ಮೂರೂ ಪಡೆಗಳ ಪಡೆಗಳ ನಡುವೆ ಹೆಚ್ಚುತ್ತಿರುವ ಸಹಭಾಗಿತ್ವವನ್ನು ಪ್ರದರ್ಶಿಸುತ್ತದೆ. ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗಾಗಿ ಭಾರತದ ತುಡಿತವು ರಾಷ್ಟ್ರೀಯ ಭದ್ರತೆಗೆ ನೀಡಿರುವ ಶಕ್ತಿಯನ್ನು ಹೇಳುತ್ತದೆ ಎಂದು ಹೇಳಿದ್ದಾರೆ.

ಭಯೋತ್ಪಾದನೆಯನ್ನು ಸೋಲಿಸುವ ಮತ್ತು ಅದನ್ನು ಸಕ್ರಿಯವಾಗಿರಿಸುವ ಪರಿಸರ ವ್ಯವಸ್ಥೆಯನ್ನು ನಾಶಪಡಿಸುವ ತನ್ನ ಸಂಕಲ್ಪದಲ್ಲಿ ಭಾರತವು ಸದಾ ದೃಢವಾಗಿ ಮುನ್ನಡೆಯುತ್ತಿದೆ ಎಂದು ಶ್ರೀ ಮೋದಿ ಅವರು ಪುನರುಚ್ಚರಿಸಿದ್ದಾರೆ.

ʻಆಪರೇಷನ್ ಸಿಂದೂರ್‌ʼ ಸಮಯದಲ್ಲಿ ಸಶಸ್ತ್ರ ಪಡೆಗಳು ತಮ್ಮ ಶೌರ್ಯವನ್ನು ಪ್ರದರ್ಶಿಸಿದವು ಮತ್ತು ಭಾರತದ ಜನರ ಮೇಲೆ ದಾಳಿ ಮಾಡಿದವರಿಗೆ ದಿಟ್ಟ ತಿರುಗೇಟು ನೀಡಿವೆ. ಪ್ರತಿಯೊಬ್ಬ ಭಾರತೀಯನೂ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಮತ್ತು ʻಆಪರೇಷನ್ ಸಿಂದೂರ್‌ʼ ಸಮಯದಲ್ಲಿ ಯೋಧರ ಯಶಸ್ಸಿನ ಸಂಕೇತವಾಗಿ ನಾಗರಿಕರು ತಮ್ಮ ʻಎಕ್ಸ್ʼ, ʻಫೇಸ್‌ಬುಕ್‌ʼ, ʻಇನ್‌ಸ್ಟಾಗ್ರಾಮ್ʼ ಮತ್ತು ʻವಾಟ್ಸ್‌ಆಪ್‌ʼ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ʻಡಿಸ್‌ಪ್ಲೇ ಪಿಕ್ಚರ್‌ʼ(ಡಿಪಿ) ಬದಲಾಯಿಸುವಂತೆ ಹಾಗೂ ತಾವು ಹಂಚಿಕೊಂಡ ಚಿತ್ರವನ್ನು ಅಲ್ಲಿ ಬಳಸುವಂತೆ ಪ್ರಧಾನಮಂತ್ರಿ ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿ ಅವರು ಈ ಬಗ್ಗೆ ʻಎಕ್ಸ್‌ʼಖಾತೆಯಲ್ಲಿ ಹೀಗೆ ಹೇಳಿದ್ದಾರೆ:

"ಒಂದು ವರ್ಷದ ಹಿಂದೆ, ನಮ್ಮ ಸಶಸ್ತ್ರ ಪಡೆಗಳು #OperationSindoor ಸಮಯದಲ್ಲಿ ಸಾಟಿಯಿಲ್ಲದ ಧೈರ್ಯ, ನಿಖರತೆ ಮತ್ತು ಸಂಕಲ್ಪವನ್ನು ಪ್ರದರ್ಶಿಸಿದವು. ಪಹಲ್ಗಾಮ್‌ನಲ್ಲಿ ಮುಗ್ಧ ಭಾರತೀಯರ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದವರಿಗೆ ನಮ್ಮ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ. ನಮ್ಮ ಪಡೆಗಳ ಶೌರ್ಯಕ್ಕೆ ಇಡೀ ದೇಶ ನಮಸ್ಕರಿಸುತ್ತದೆ.ʼʼ

“ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯು ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಪ್ರತಿಕ್ರಿಯೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ನಮ್ಮ ಸಶಸ್ತ್ರ ಪಡೆಗಳ ವೃತ್ತಿಪರತೆ, ಸನ್ನದ್ಧತೆ ಮತ್ತು ಸಂಘಟಿತ ಶಕ್ತಿಯನ್ನು ಉಲ್ಲೇಖಿಸಿದೆ. ಇದೇ ವೇಳೆ, ಇದು ನಮ್ಮ ಪಡೆಗಳ ನಡುವೆ ಹೆಚ್ಚುತ್ತಿರುವ ಸಹಭಾಗಿತ್ವವನ್ನು ಪ್ರದರ್ಶಿಸಿದೆ. ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗಾಗಿ ಭಾರತದ ತುಡಿತವು ನಮ್ಮ ರಾಷ್ಟ್ರೀಯ ಭದ್ರತೆಗೆ ತಂದಿರುವ ಶಕ್ತಿಯ ಕುರಿತು ತಿಳಿಸಿದೆ.ʼʼ

ಇಂದು, ಕಾರ್ಯಾಚರಣೆ ನಡೆದು ಒಂದು ವರ್ಷದ ನಂತರ, ಭಯೋತ್ಪಾದನೆಯನ್ನು ಸೋಲಿಸುವ ಮತ್ತು ಅದನ್ನು ಸಕ್ರಿಯವಾಗಿರಿಸುವ ಪರಿಸರ ವ್ಯವಸ್ಥೆಯನ್ನು ನಾಶಪಡಿಸುವ ನಮ್ಮ ಸಂಕಲ್ಪದಲ್ಲಿ ನಾವು ಎಂದಿನಂತೆ ದೃಢವಾಗಿದ್ದೇವೆ."

 

"ಒಂದು ವರ್ಷದ ಹಿಂದೆ, #OperationSindoor ವೇಳೆ, ನಮ್ಮ ಸಶಸ್ತ್ರ ಪಡೆಗಳು ತಮ್ಮ ಶೌರ್ಯವನ್ನು ಪ್ರದರ್ಶಿಸಿದವು ಮತ್ತು ನಮ್ಮ ಜನರ ಮೇಲೆ ದಾಳಿ ಮಾಡಿದವರಿಗೆ ದಿಟ್ಟ ಪ್ರತ್ಯುತ್ತರ ನೀಡಿದ್ದವು. ಪ್ರತಿಯೊಬ್ಬ ಭಾರತೀಯನೂ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಹೊಂದಿದ್ದಾರೆ. #OperationSindoor ಸಮಯದಲ್ಲಿ ನಮ್ಮ ಪಡೆಗಳು ಮತ್ತು ಅವರ ಯಶಸ್ಸಿಗೆ ಗೌರವದ ಸಂಕೇತವಾಗಿ, ನಾವೆಲ್ಲರೂ ʻಎಕ್ಸ್ʼ, ʻಫೇಸ್‌ಬುಕ್‌ʼ, ʻಇನ್‌ಸ್ಟಾಗ್ರಾಮ್ʼ ಮತ್ತು ʻವಾಟ್ಸಾಪ್‌ʼ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿನ ನಮ್ಮ ಡಿಸ್‌ಪ್ಲೇ ಚಿತ್ರಗಳನ್ನು (ಡಿಪಿ) ಕೆಳಗೆ ಹಂಚಿಕೊಂಡ ಚಿತ್ರಕ್ಕೆ ಬದಲಾಯಿಸೋಣ.”

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why Abrogation Of Article 370 Was A Strategic Necessity For India

Media Coverage

Why Abrogation Of Article 370 Was A Strategic Necessity For India
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 05 ಆಗಸ್ಟ್ 2026
August 05, 2026

Viksit Bharat in Action: Inclusive, Green, and Globally Competitive Under PM Modi