ಶೇರ್
 
Comments

ಅಧ್ಯಕ್ಷ ಮ್ಯಾಕ್ರಾನ್ ಅವರೇ,

ಘನತೆವೆತ್ತ ಗಣ್ಯರೇ,

ನಮಸ್ಕಾರ!

ಸಾಗರಗಳ ಕುರಿತಾಗಿ ಈ ಪ್ರಮುಖ ಜಾಗತಿಕ ಉಪಕ್ರಮಕ್ಕಾಗಿ ನಾನು ಅಧ್ಯಕ್ಷ ಮ್ಯಾಕ್ರೋನ್ ಅವರನ್ನು ಅಭಿನಂದಿಸುತ್ತೇನೆ.

ಭಾರತದ್ದು ಸದಾ ಕಡಲ ನಂಟಿನ ನಾಗರಿಕತೆಯಾಗಿದೆ.

ನಮ್ಮ ಪ್ರಾಚೀನ ಧರ್ಮಗ್ರಂಥಗಳು ಮತ್ತು ಸಾಹಿತ್ಯವು ಸಮುದ್ರ ಜೀವಿಗಳು ಸೇರಿದಂತೆ ಸಾಗರಗಳ ಉಡುಗೊರೆಗಳ ಬಗ್ಗೆ ಮಾತನಾಡುತ್ತವೆ.

ಇಂದು, ನಮ್ಮ ಭದ್ರತೆ ಮತ್ತು ಸಮೃದ್ಧಿಯು ಸಾಗರಗಳೊಂದಿಗೆ ನಿಕಟ ಸಂಬಂಧ ಹೊಂದಿದೆ.

ಭಾರತದ 'ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ'ವು ಸಾಗರ ಸಂಪನ್ಮೂಲಗಳನ್ನು ಪ್ರಮುಖ ಸ್ತಂಭವಾಗಿ ಒಳಗೊಂಡಿದೆ.

ʻರಾಷ್ಟ್ರೀಯ ಅಧಿಕಾರ ವ್ಯಾಪ್ತಿಯನ್ನು ಮೀರಿ ಜೈವಿಕ ವೈವಿಧ್ಯತೆ ಕುರಿತ ಉನ್ನತ ಮಹತ್ವಾಕಾಂಕ್ಷೆಯ ಒಕ್ಕೂಟ' ರಚನೆಯ ಫ್ರೆಂಚ್ ಉಪಕ್ರಮವನ್ನು ಭಾರತ ಬೆಂಬಲಿಸುತ್ತದೆ.

ಈ ವರ್ಷ ಕಾನೂನು ಬದ್ಧವಾಗಿರುವ ಅಂತರರಾಷ್ಟ್ರೀಯ ಒಪ್ಪಂದಕ್ಕಾಗಿ ನಾವು ಆಶಿಸುತ್ತಿದ್ದೇವೆ.

ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗೆ ಭಾರತ ಬದ್ಧವಾಗಿದೆ.

ಕರಾವಳಿ ಪ್ರದೇಶಗಳಿಂದ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಭಾರತವು ಇತ್ತೀಚೆಗೆ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವನ್ನು ಕೈಗೊಂಡಿತು.

ಮೂರು ಲಕ್ಷ ಯುವಕರು ಸುಮಾರು 12 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರು.

ಸಮುದ್ರಗಳಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಈ ವರ್ಷ 100 ಹಡಗು ದಿನಗಳನ್ನು ಕೊಡುಗೆ ನೀಡುವಂತೆ ನಾನು ನಮ್ಮ ನೌಕಾಪಡೆಗೆ ನಿರ್ದೇಶನ ನೀಡಿದ್ದೇನೆ.

ಏಕ ಬಳಕೆಯ ಪ್ಲಾಸ್ಟಿಕ್ ಮೇಲೆ ಜಾಗತಿಕ ಉಪಕ್ರಮವನ್ನು ಪ್ರಾರಂಭಿಸಲು ಫ್ರಾನ್ಸ್ ಜೊತೆ ಕೈಜೋಡಿಸಲು ಭಾರತ ಹರ್ಷಿಸುತ್ತದೆ.

ಅಧ್ಯಕ್ಷ ಮ್ಯಾಕ್ರೋನ್ ಅವರಿಗೆ  ಧನ್ಯವಾದಗಳು.

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
India a shining star of global economy: S&P Chief Economist

Media Coverage

India a shining star of global economy: S&P Chief Economist
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಸೆಪ್ಟೆಂಬರ್ 2022
September 25, 2022
ಶೇರ್
 
Comments

Nation tunes in to PM Modi’s Mann Ki Baat.