ಶೇರ್
 
Comments
“ಆಧ್ಯಾತ್ಮಿಕ ಆಯಾಮದೊಂದಿಗೆ ನಂಬಿಕೆಯ ಕೇಂದ್ರಗಳು ಸಾಮಾಜಿಕ ಪ್ರಜ್ಞೆಯನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’’
“ರಾಮನವಮಿಯನ್ನು ಅಯೋಧ್ಯೆಯಲ್ಲಿ ಮತ್ತು ಇಡೀ ದೇಶಾದ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತಿದೆ’’
ನೈಸರ್ಗಿಕ ಕೃಷಿ ಮತ್ತು ಜಲ ಸಂರಕ್ಷಣೆಗೆ ಒತ್ತು ನೀಡುವ ಅಗತ್ಯದ ಪ್ರತಿಪಾದನೆ
“ಅಪೌಷ್ಟಿಕತೆಯ ನೋವು ಸಂಪೂರ್ಣವಾಗಿ ನಿವಾರಿಸಬೇಕಿದೆ’’
“ಗೊತ್ತಾಗದಂತೆ ತಗುಲುವ ಕೋವಿಡ್ ಸೋಂಕು ಮತ್ತು ಅದರ ವಿರುದ್ಧ ಸದಾ ಜಾಗೃತರಾಗಿರಬೇಕು’’

ರಾಮನವಮಿ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ನ ಜುನಗಢದ ಗಥಿಲಾದ ಉಮಿಯಾ ಮಾತಾ ದೇವಾಲಯದ 14ನೇ ಸಂಸ್ಥಾಪನಾ ದಿನದ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಗುಜರಾತ್ ನ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯ್ ಪಟೇಲ್, ಕೇಂದ್ರ ಸಚಿವರಾದ ಶ್ರೀ ಪುರುಷೋತ್ತಮ ರೂಪಾಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ರಾಮನವಮಿ ಮತ್ತು ದೇವಾಲಯದ ಸಂಸ್ಥಾಪನಾ ದಿನದ ಈ ಪವಿತ್ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಅಲ್ಲಿ ನೆರೆದಿದ್ದ ಎಲ್ಲ ಜನರಿಗೆ ಶುಭಾಶಯಗಳನ್ನು ತಿಳಿಸಿದರು. ಪ್ರಧಾನಮಂತ್ರಿ ಅವರು, ಚೈತ್ರ ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿ, ಮಾತೆ ಸಿದ್ಧದಾತ್ರಿ ಎಲ್ಲ ಭಕ್ತರ ಬೇಡಿಕೆಗಳನ್ನು ಈಡೇರಿಸಲಿ ಎಂದು ಹಾರೈಸಿದರು. ಅಲ್ಲದೆ ಅವರು ಗಿರ್ ನಾರ್ ನ ಪವಿತ್ರಭೂಮಿಗೆ ನಮನ ಸಲ್ಲಿಸಿದರು. ಅಲ್ಲದೆ ಪ್ರಧಾನಮಂತ್ರಿ ಅವರು ಇಲ್ಲಿ ಸೇರಿರುವ ಜನರ ಸಾಮೂಹಿಕ ಶಕ್ತಿ ಮತ್ತು ಕಾಳಜಿಯನ್ನು ದೇಶದ ಮತ್ತು ರಾಜ್ಯದ ಒಳಿತಿಗಾಗಿ ಎಂಬುದು ತಮ್ಮ ಅನುಭವವಾಗಿದೆ ಎಂದರು. ರಾಮನವಮಿಯನ್ನು ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು. 2008ರಲ್ಲಿ ದೇವಾಲಯದ ಲೋಕಾರ್ಪಣೆಗೆ ಅವಕಾಶ ದೊರೆತಿದ್ದಕ್ಕಾಗಿ ಮತ್ತು ಕಳೆದ ಕೆಲವು ವರ್ಷಗಳಿಂದ ಮಾತೆ ಉಮಿಯಾಗೆ ನಮನ ಸಲ್ಲಿಸಲು ಅವಕಾಶ ದೊರೆತಿದ್ದಕ್ಕಾಗಿ ಅವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. 

    ಗಥಿಲಾದ ಉಮಿಯಾ ಮಾತಾ ದೇಗುಲ ಆಧ್ಯಾತ್ಮ ಮತ್ತು ಭಕ್ತಿ ಪ್ರಾಮುಖ್ಯದ ಪ್ರಮುಖ ಕೇಂದ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಆ ಜಾಗ ಸಾಮಾಜಿಕ ಪ್ರಜ್ಞೆ ಮತ್ತು ಪ್ರವಾಸೋದ್ಯಮದ ತಾಣವೂ ಆಗಿದೆ ಎಂದರು. ಮಾತೆ ಉಮಿಯಾ ಆಶೀರ್ವಾದದಿಂದಾಗಿ  ಭಕ್ತರು‌ ಮತ್ತು ಸಮಾಜ ಹಲವು ದೊಡ್ಡ ಅಪಾಯಗಳನ್ನು ಎದುರಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. 

    ಮಾತೆ ಉಮಿಯಾ ಭಕ್ತರಾಗಿ ಭೂತಾಯಿಗೆ ಹೆಚ್ಚಿನ ಹಾನಿ ಮಾಡುವುದು ಜನರಿಂದ ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ನಾವು ನಮ್ಮ ಭೂತಾಯಿಗೆ ಅನಗತ್ಯ ಔಷಧಗಳನ್ನು ಉಣಬಡಿಸುವುದಿಲ್ಲ. ನಾವು ಅನಗತ್ಯ ರಾಸಾಯನಿಕಗಳನ್ನು  ಬಳಕೆ ಮಾಡುವುದಿಲ್ಲ ಎಂದು ಅವರು ಹೇಳಿದರು.  ಹೆಚ್ಚು ಬೆಳೆ, ಬೆಳೆಯುವ ಜಲಸಂರಕ್ಷಣೆಯಂತಹ ಯೋಜನೆಗಳ ಕುರಿತು ಅವರು ಮಾತನಾಡಿದರು. ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗೊಂಡಿದ್ದ ಜನಾಂದೋಲನವನ್ನು ಅವರು ಸ್ಮರಿಸಿದರು. ಜಲಸಂರಕ್ಷಣೆ ಚಳವಳಿಯಲ್ಲಿ ನಾವು  ಭಾಗಿಯಾಗಬೇಕು ಹಾಗೆಯೇ ಭೂತಾಯಿಯನ್ನು ರಾಸಾಯನಿಕಗಳಿಂದ ರಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು. ನೈಸರ್ಗಿಕ ಕೃಷಿ ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಅವರು ಪುನರುಚ್ಚರಿಸಿದರು. ತಾವು ಮತ್ತು ಕೇಶುಭಾಯ್ ವಾಲಾ ನೀರಿ ಸಂರಕ್ಷಣೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದ ಪ್ರಧಾನಿಯವರು ಪ್ರಸ್ತುತ ಮುಖ್ಯಮಂತ್ರಿ ಭೂ ತಾಯ ಸಂರಕ್ಷಣೆಗೆ  ಶ್ರಮಿಸುತ್ತಿದ್ದಾರೆ ಎಂದರು. 

    ಮಾತೆ ಉಮಿಯಾ ಹಾಗೂ ಇತರೆ ದೇವತೆಗಳ ಅನುಗ್ರಹದಿಂದ ಮತ್ತು ಸರ್ಕಾರದ ಪ್ರಯತ್ನಗಳಿಂದಾಗಿ ಲಿಂಗಾನುಪಾತದಲ್ಲಿ ಸುಧಾರಣೆಯಾಗಿದೆ ಮತ್ತು ಬೇಟಿ ಬಚಾವೊ ಆಂದೋಲನ ಉತ್ತಮ ಫಲಿತಾಂಶವನ್ನು ತೋರಿದೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಸಂಖ್ಯೆಯ ಗುಜರಾತ್ ಬಾಲಕಿಯರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆಂದು ಅವರು ಉಲ್ಲೇಖಿಸಿದರು. ಮಹಿಳೆ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ವಿರುದ್ಧ ಹೊರಾಡುವ  ಅಗತ್ಯವಿದೆ ಎಂದು  ಪ್ರತಿಪಾದಿಸಿದ ಪ್ರತಿಪಾದಿಸಿದ ಪ್ರಧಾನಿಯವರು, ಗರ್ಭಿಣಿ ಹಾಗು  ತಾಯಂದಿರಲ್ಲಿನ ಪೌಷ್ಟಿಕಾಂಶ ಕೊರತೆ ನಿವಾರಿಸಲು ವಿಶೇಷ ಒತ್ತು ನೀಡುವ ಅಗತ್ಯವಿದೆ ಎಂದರು. ಅಪೌಷ್ಟಿಕತೆಯಿಂದಾಗಿ ಬಳಲುವುದನ್ನು ತಡೆಯುವ ಅಗತ್ಯವನ್ನು  ಪುನರುಚ್ಚರಿಸಿದರು. ದೇವಾಲಯದ ಟ್ರಸ್ಟ್ ನಿಂದ ಗ್ರಾಮಗಳಲ್ಲಿ ಆರೋಗ್ಯವಂತ ಶಿಶು ಸ್ಪರ್ಧೆಯನ್ನು ನಡೆಸುವಂತೆ ಶ್ರೀ ನರೇಂದ್ರ ಮೋದಿ ಕರೆ ನೀಡಿದರು. ಅಲ್ಲದೆ ಅವರು, ದೇವಾಲಯದ ಜಾಗ ಮತ್ತು ಸಭಾಂಗಣಗಳನ್ನು ಬಡಮಕ್ಕಳ ಕೋಚಿಂಗ್ ತರಗತಿಗಳಿಗೆ ಮತ್ತು ಯೋಗ ಶಿಬಿರ ಹಾಗೂ ತರಗತಿಗಳಿಗೆ ಬಳಸಿಕೊಳ್ಳಬಹುದು ಎಂದು  ಸೂಚಿಸಿದರು. 

    ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಅಮೃತ ಕಾಲದ ಪ್ರಾಮುಖ್ಯವನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು.   ಸಮಾಜ, ಗ್ರಾಮ ಮತ್ತು ದೇಶದ ಸ್ವರೂಪ ಹೇಗಿರಬೇಕು ಎಂಬ ಜಾಗೃತಿ ಮೂಡಿಸುವ ಸಂಕಲ್ಪಗಳನ್ನು ಮಾಡಬೇಕಿದೆ. ಪ್ರತಿಯೊಂದು ಜಿಲ್ಲೆಯಲ್ಲೂ 75 ಅಮೃತ ಸರೋವರಗಳ ಆಶಯವನ್ನು ಸಾಕಾರಗೊಳಿಸಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಗುಜರಾತಿನ ಜನರು ನೂರಾರು ಚೆಕ್ ಡ್ಯಾಮ್ ಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ 75 ಅಮೃತ ಸರೋವರದ ನಿರ್ಮಾಣದ ಬಹುದೊಡ್ಡ ಕೆಲಸ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯ ಎಂದರು. 2023ರ ಆಗಸ್ಟ್ 15ರೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು  ಸೂಚಿಸಿದರು. ಅದಕ್ಕಾಗಿ ಸಾಮಾಜಿಕ ಚಳವಳಿಯನ್ನು ನಡೆಸಬೇಕೆಂದ ಅವರು, ಸಾಮಾಜಿಕ ಪ್ರಜ್ಞೆಯೇ ಚಲನಶೀಲ ಶಕ್ತಿಯಾಗಬೇಕು ಎಂದು ಹೇಳಿದರು. 

ರಾಮನವಮಿ ಸಂದರ್ಭದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ನಾವು ರಾಮಚಂದ್ರ ಜಿ ಅವರ ಬಗ್ಗೆ ಚಿಂತಿಸುವಾಗ ನಾವು ಶಬರಿ, ಕೆವಾತ್ ಮತ್ತು ನಿಶಾದ ರಾಜ್ ಅವರನ್ನು ಸಹ ನೆನಪು ಮಾಡಿಕೊಳ್ಳುತ್ತೇವೆ ಎಂದರು. ಹಲವಾರು ವರ್ಷಗಳಿಂದ ಅವರು ಜನತೆಯ ಹೃದಯದಲ್ಲಿ ಗೌರವದ ಸ್ಥಾನ ಸಂಪಾದಿಸಿದ್ದಾರೆ ಎಂದರು. ಇದು ನಮಗೆ ಯಾರೊಬ್ಬರನ್ನೂ ಹಿಂದೆ ಬಿಡುವಂತಿಲ್ಲ ಎಂಬುದನ್ನು ಕಲಿಸುತ್ತದೆ ಎಂದರು. 

ಸಾಂಕ್ರಾಮಿಕ ಸಮಯದ ಪ್ರಯತ್ನಗಳನ್ನು ಉಲ್ಲೇಖಿಸಿದ ಅವರು, ಸೋಂಕು ಅತ್ಯಂತ ಅಪಾಯಕಾರಿ ಮತ್ತು ಅದರ ವಿರುದ್ಧ ಸದಾ ಜಾಗೃತರಾಗಿರಬೇಕು ಎಂದರು. ಭಾರತ 185 ಕೋಟಿ ಡೋಸ್ ಲಸಿಕೆಗಳನ್ನು ನೀಡುವ ಮೂಲಕ ಅದ್ಭುತ ಸಾಧನೆಯನ್ನು ಮಾಡಿದೆ ಎಂದು ಅವರು ಹೇಳಿದರು. ಅದಕ್ಕೆ ಸ್ವಚ್ಛತಾ ಆಂದೋಲನ ಮತ್ತು ಏಕಬಳಕೆ ಪ್ಲಾಸ್ಟಿಕ್ ನಿಷೇಧದಂತಹ ಚಳವಳಿಗಳು ಕಾರಣವಾಗಿವೆ ಎಂದು ಸಾಮಾಜಿಕ ಜಾಗೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಧ್ಯಾತ್ಮಿಕ ಆಯಾಮದ ಜತೆಗೆ ಸಾಮಾಜಿಕ ಪ್ರಜ್ಞೆಯನ್ನು ಪಸರಿಸುವಲ್ಲಿ ವಿಶ್ವಾಸ ಕೇಂದ್ರಗಳು ಅತ್ಯಂತ ಪ್ರಮುಖ ಪಾತ್ರವಹಿಸಲಿವೆ ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ ಮೋದಿ ಅವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ 2008ರಲ್ಲಿ ದೇವಾಲಯವನ್ನು ಉದ್ಘಾಟಿಸಿದ್ದರು. ಪ್ರಧಾನಮಂತ್ರಿ ಅವರು 2008ರಲ್ಲಿ ನೀಡಿದ್ದ ಸಲಹೆಯಂತೆ ದೇವಾಲಯದ ಟ್ರಸ್ಟ್ ತನ್ನ ಚಟುವಟಿಕೆಗಳ ವ್ಯಾಪ್ತಿಯನ್ನು ಸಾಮಾಜಿಕ ಹಾಗೂ ಆರೋಗ್ಯ ಸಂಬಂಧಿ ವಲಯಗಳಿಗೆ ವಿಸ್ತರಿಸಿತು. ಜತೆಗೆ ಆರ್ಥಿಕವಾಗಿ ದುರ್ಬಲ ರೋಗಿಗಳಿಗೆ ಕಣ್ಞಿನಪೊರೆ ಉಚಿತ ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಆಯುರ್ವೇದ ಔಷಧ ವಿತರಣೆ ಮತ್ತಿತರ ಸೇವೆಗಳಲ್ಲಿ ತೊಡಗಿದೆ. 

ಉಮಿಯಾ ಮಾತೆ ಕಡವ ಪಟಿದಾರ್ ಗಳ  ಕುಲದೇವತೆ ಅಥವಾ ಕುಲಾದೇವಿ ಎಂದು ಪರಿಗಣಿಸಲಾಗಿದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Share beneficiary interaction videos of India's evolving story..
Explore More
Do things that you enjoy and that is when you will get the maximum outcome: PM Modi at Pariksha Pe Charcha

ಜನಪ್ರಿಯ ಭಾಷಣಗಳು

Do things that you enjoy and that is when you will get the maximum outcome: PM Modi at Pariksha Pe Charcha
Smriti Irani writes: On women’s rights, West takes a backward step, and India shows the way

Media Coverage

Smriti Irani writes: On women’s rights, West takes a backward step, and India shows the way
...

Nm on the go

Always be the first to hear from the PM. Get the App Now!
...
ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅರ್ಜೆಂಟೀನಾ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ.
June 27, 2022
ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅರ್ಜೆಂಟೀನಾ ಅಧ್ಯಕ್ಷ ಶ್ರೀ ಆಲ್ಬರ್ಟೊ ಫೆರ್ನಾಂಡಿಸ್ ಅವರನ್ನು 26 ಜೂನ್ 2022 ರಂದು ಮ್ಯೂನಿಚ್‌ನಲ್ಲಿ ಭೇಟಿ ಮಾಡಿದರು.

ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಭೆ ಇದಾಗಿದೆ. 2019 ರಲ್ಲಿ ಆರಂಭಿಸಲಾದ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯ ಅನುಷ್ಠಾನದ ಪ್ರಗತಿಯನ್ನು ನಾಯಕರು ಪರಿಶೀಲಿಸಿದರು. ವ್ಯಾಪಾರ ಮತ್ತು ಹೂಡಿಕೆ, ದಕ್ಷಿಣ-ದಕ್ಷಿಣ ಸಹಕಾರ ವಿಶೇಷವಾಗಿ ಔಷಧೀಯ ವಲಯದಲ್ಲಿ; ಹವಾಮಾನ ಕ್ರಮಗಳು, ನವೀಕರಿಸಬಹುದಾದ ಇಂಧನ, ಪರಮಾಣು ಔಷಧ, ವಿದ್ಯುಚ್ಚಾಲಿತ ಸಂಚಾರ ವ್ಯವಸ್ಥೆ, ರಕ್ಷಣಾ ಸಹಕಾರ, ಕೃಷಿ ಮತ್ತು ಆಹಾರ ಭದ್ರತೆ, ಸಾಂಪ್ರದಾಯಿಕ ಔಷಧ, ಸಾಂಸ್ಕೃತಿಕ ಸಹಕಾರ, ಹಾಗೆಯೇ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸಮನ್ವಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆದವು. ಈ ಕ್ಷೇತ್ರಗಳಲ್ಲಿ ತಮ್ಮ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.