ಜಾಗತಿಕ ಇಂಧನ ಭದ್ರತೆಯ ಮೇಲೆ ಪರಿಣಾಮ ಬೀರುವ ಅಡೆತಡೆಗಳ ಕುರಿತು ಉಭಯ ನಾಯಕರ ಚರ್ಚೆ
ಹಡಗು ಮಾರ್ಗಗಳನ್ನು ಮುಕ್ತ ಮತ್ತು ಸುರಕ್ಷಿತವಾಗಿಡುವ ಮಹತ್ವದ ಬಗ್ಗೆ ಇಬ್ಬರೂ ನಾಯಕರಿಂದ ಪುನರುಚ್ಚಾರ
ಉಭಯ ನಾಯಕರಿಂದ ದ್ವಿಪಕ್ಷೀಯ ಇಂಧನ ಸಹಕಾರ ಬಲಪಡಿಸುವ ಮತ್ತು ಪ್ರಾದೇಶಿಕ ಭದ್ರತೆ ಹೆಚ್ಚಿಸುವ ಗುರಿ ಹೊಂದಿರುವ ವಿವಿಧ ಉಪಕ್ರಮಗಳ ಪ್ರಗತಿ ಪರಾಮರ್ಶೆ
ಹಂಚಿತ ಸವಾಲುಗಳನ್ನು ಎದುರಿಸಲು ನಿಕಟವಾಗಿ ಕೆಲಸ ಮಾಡುವ ಭಾರತದ ದೃಢ ಬದ್ಧತೆ ಪ್ರಧಾನಮಂತ್ರಿಗಳಿಂದ ಪುನರುಚ್ಚಾರ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀಲಂಕಾದ ಅಧ್ಯಕ್ಷರಾದ ಮಾನ್ಯ ಅನುರ ಕುಮಾರ ದಿಸ್ಸಾನಾಯಕ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.

ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯ ಬೆಳವಣಿಗೆಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಜಾಗತಿಕ ಇಂಧನ ಭದ್ರತೆಯ ಮೇಲೆ ಪರಿಣಾಮ ಬೀರುವ ಅಡೆತಡೆಗಳ ಬಗ್ಗೆ ಅವರು ಚರ್ಚೆಯಲ್ಲಿ ಒತ್ತು ನೀಡಿದರು.

ಇಡೀ ಜಗತ್ತಿನ ಹಿತಾಸಕ್ತಿಗಾಗಿ ಹಡಗು ಮಾರ್ಗಗಳನ್ನು ಮುಕ್ತ ಮತ್ತು ಸುರಕ್ಷಿತವಾಗಿಡುವ ಮಹತ್ವವನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.

ಇಬ್ಬರೂ ನಾಯಕರು ಭಾರತ - ಶ್ರೀಲಂಕಾ ಇಂಧನ ಸಹಕಾರವನ್ನು ಬಲಪಡಿಸುವ ಮತ್ತು ಪ್ರಾದೇಶಿಕ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ವಿವಿಧ ಉಪಕ್ರಮಗಳ ಪ್ರಗತಿ ಪರಾಮರ್ಶೆ ನಡೆಸಿದರು. 

ಭಾರತದ “ನೆರೆಹೊರೆ ಮೊದಲು” ನೀತಿ ಮತ್ತು “ಮಹಾಸಾಗರ್” ಮುನ್ನೋಟಕ್ಕೆ ಅನುಗುಣವಾಗಿ ಹಂಚಿತ ಸವಾಲುಗಳನ್ನು ಎದುರಿಸಲು ಒಟ್ಟಾಗಿ ನಿಕಟವಾಗಿ ಕೆಲಸ ಮಾಡುವ ಭಾರತದ ದೃಢ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು.

ಪರಸ್ಪರ ಸಂಪರ್ಕದಲ್ಲಿರಲು ಎರಡೂ ದೇಶಗಳ ನಾಯಕರು ಸಮ್ಮತಿಸಿದರು.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI to remain free for consumers, says Payments Council of India

Media Coverage

UPI to remain free for consumers, says Payments Council of India
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 07 ಆಗಸ್ಟ್ 2026
August 07, 2026

Viksit Bharat Accelerating: 4x Data Centres, Record EV Sales, Ethanol Validation & Northeast Connectivity Under PM Modi’s Watch