ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶ್ವ ಪರಿಸರ ದಿನದ ಅಂಗವಾಗಿ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಸೂರತ್‌ನಲ್ಲಿ ಒಂದು ಗಿಡವನ್ನು ನೆಟ್ಟರು.
ಪ್ರಕೃತಿಯನ್ನು ಹಸಿರಾಗಿಸುವ ಮತ್ತು ಮುಂದಿನ ಪೀಳಿಗೆಗಳಿಗಾಗಿ ಅದನ್ನು ಸಂರಕ್ಷಿಸುವ ನಮ್ಮ ಸಾಮೂಹಿಕ ಸಂಕಲ್ಪವನ್ನು ಪುನರುಚ್ಚರಿಸಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕೆಂದು ಪ್ರಧಾನಮಂತ್ರಿಯವರು ಕರೆ ನೀಡಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ವಿಶ್ವ ಪರಿಸರ ದಿನದಂದು ‘ತಾಯಿಯ ಹೆಸರಿನಲ್ಲಿ ಒಂದು ವೃಕ್ಷ’ ಅಭಿಯಾನದಡಿ ಸೂರತ್‌ನಲ್ಲಿ ಗಿಡ ನೆಡುವ ಸೌಭಾಗ್ಯ ನನಗೆ ದೊರೆಯಿತು. ಬನ್ನಿ, ನಾವೆಲ್ಲರೂ ಸೇರಿ ಪ್ರಕೃತಿಯನ್ನು ಹಸಿರಾಗಿಸುವ ಹಾಗೂ ಮುಂದಿನ ಪೀಳಿಗೆಗಳಿಗಾಗಿ ಅದನ್ನು ಸಂರಕ್ಷಿಸುವ ನಮ್ಮ ಸಂಕಲ್ಪವನ್ನು ಪುನರುಚ್ಚರಿಸೋಣ.”
विश्व पर्यावरण दिवस पर सूरत में 'एक पेड़ मां के नाम' अभियान के तहत वृक्षारोपण का सौभाग्य मिला। आइए, हम सब मिलकर प्रकृति को हरा-भरा बनाने और आने वाली पीढ़ियों के लिए इसके संरक्षण का संकल्प दोहराएं। pic.twitter.com/KJjAvcmZaY
— Narendra Modi (@narendramodi) June 5, 2026


