ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಕೋಕಿಲಾ ಶಾರದಾ ಸಿನ್ಹಾ ಅವರ ಮೊದಲ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
" ಅವರು ಜಾನಪದ ಗೀತೆಗಳ ಮೂಲಕ ಬಿಹಾರದ ಕಲೆ ಮತ್ತು ಸಂಸ್ಕೃತಿಗೆ ಹೊಸ ಗುರುತನ್ನು ನೀಡಿದರು, ಅದಕ್ಕಾಗಿ ಅವರು ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ. ಛತ್ ಮಹಾನ್ ಹಬ್ಬಕ್ಕೆ ಸಂಬಂಧಿಸಿದ ಅವರ ಸುಮಧುರ ಹಾಡುಗಳು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ", ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಹೀಗೆ ಹೇಳಿದ್ದಾರೆ:
"ಬಿಹಾರ ಕೋಕಿಲಾ ಶಾರದಾ ಸಿನ್ಹಾ ಅವರ ಮೊದಲ ಪುಣ್ಯತಿಥಿಯಂದು ಅವರಿಗೆ ಗೌರವ ನಮನಗಳು. ಅವರು ಜಾನಪದ ಗೀತೆಗಳ ಮೂಲಕ ಬಿಹಾರದ ಕಲೆ ಮತ್ತು ಸಂಸ್ಕೃತಿಗೆ ಹೊಸ ಗುರುತನ್ನು ನೀಡಿದರು, ಅದಕ್ಕಾಗಿ ಅವರು ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ. ಛತ್ ನ ಮಹಾನ್ ಹಬ್ಬಕ್ಕೆ ಸಂಬಂಧಿಸಿದ ಅವರ ಸುಮಧುರ ಹಾಡುಗಳು ಯಾವಾಗಲೂ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿಯುತ್ತವೆ."
बिहार कोकिला शारदा सिन्हा जी की पहली पुण्यतिथि पर उन्हें भावभीनी श्रद्धांजलि। उन्होंने बिहार की कला-संस्कृति को लोकगीतों के माध्यम से एक नई पहचान दी, जिसके लिए उन्हें सदैव याद किया जाएगा। महापर्व छठ से जुड़े उनके सुमधुर गीत हमेशा जनमानस में रचे-बसे रहेंगे।
— Narendra Modi (@narendramodi) November 5, 2025


