ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಚಾರ್ಯ ವಿನೋಬಾ ಭಾವೆಯವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿ, ಭಾರತದ ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ಅವರ ಅತ್ಯುನ್ನತ ಕೊಡುಗೆಗಳನ್ನು ಸ್ಮರಿಸಿದರು.
ಆಚಾರ್ಯ ವಿನೋಬಾ ಭಾವೆ ಅವರ ಜನ್ಮದಿನದ ಸ್ಮರಣಾರ್ಥ ಎಕ್ಸ ನಲ್ಲಿ ಪ್ರಧಾನಮಂತ್ರಿ ಅವರು ಈ ಸಂದೇಶವನ್ನು ಹಂಚಿಕೊಂಡರು:
“ಆಚಾರ್ಯ ವಿನೋಬಾ ಭಾವೆಯವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರನ್ನು ಭಾರತದ ಅತ್ಯಂತ ಗೌರವಾನ್ವಿತ ಆಧ್ಯಾತ್ಮಿಕ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಸುಧಾರಕರಲ್ಲಿ ಒಬ್ಬರೆಂದು ಸ್ಮರಿಸಲಾಗುತ್ತದೆ. ಅವರು ತಮ್ಮ ಜೀವನವನ್ನು ಗಾಂಧಿವಾದಿ ಆದರ್ಶಗಳನ್ನು ಜನಪ್ರಿಯಗೊಳಿಸಿ, ಕೆಳಸ್ಥರದವರನ್ನು ಸಬಲೀಕರಣಗೊಳಿಸಲು ಮೀಸಲಾಗಿರಿಸಿದ್ದರು. ಅವರ ಆಲೋಚನೆಗಳು ವಿಕಸಿತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ನಮಗೆ ಹೆಚ್ಚಿನ ಪ್ರೇರಣೆಯಾಗಿದೆ.”
Paying homage to Acharya Vinoba Bhave on his birth anniversary. He is remembered as one of India’s most revered spiritual leaders, freedom fighters and social reformers. His life was devoted to popularising Gandhian ideals and empowering the marginalised. His thoughts inspire us…
— Narendra Modi (@narendramodi) September 11, 2025


