ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡಿಯನ್ ಗಾಯಕ ಶ್ರೀ ರಾಣಾ ಮೋಹಿಪ್ ಅವರನ್ನು ಭೇಟಿಯಾದರು. ಅವರು ಕೆಲವು ವರ್ಷಗಳ ಹಿಂದೆ ನಡೆದ ಮಹಾತ್ಮ ಗಾಂಧಿಯವರ 150 ನೇ ಜಯಂತಿ ಆಚರಣೆಯ ವೇಳೆ 'ವೈಷ್ಣವ ಜನ ತೋ' ಹಾಡಿದ್ದರು.
ಭಾರತೀಯ ಸಂಗೀತ ಮತ್ತು ಸಂಸ್ಕೃತಿಯ ಬಗ್ಗೆ ಶ್ರೀ ಮೋಹಿಪ್ ಅವರ ಆಸಕ್ತಿಯನ್ನು ಪ್ರಧಾನಿ ಅವರು ಆತ್ಮೀಯವಾಗಿ ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
"ನಾವು ಕೆಲವು ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರ 150ನೇ ಜಯಂತಿಯನ್ನು ಆಚರಿಸಿದಾಗ 'ವೈಷ್ಣವ ಜನ ತೋ' ಹಾಡಿದ ಶ್ರೀ ರಾಣಾ ಮೋಹಿಪ್ ಅವರನ್ನು ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಭೋಜನಕೂಟದಲ್ಲಿ ಭೇಟಿಯಾಗಿದ್ದೆ. ಭಾರತೀಯ ಸಂಗೀತ ಮತ್ತು ಸಂಸ್ಕೃತಿಯ ಬಗ್ಗೆ ಅವರ ಉತ್ಸಾಹವು ಪ್ರಶಂಸನೀಯವಾಗಿದೆ.’’
At the dinner in Port of Spain, met Mr. Rana Mohip, who had sung ‘Vaishnava Jana To’ when we marked the 150th Jayanti of Mahatma Gandhi a few years ago. His passion towards Indian music and culture is appreciable. https://t.co/urbfBqKARJ pic.twitter.com/achEXirWP9
— Narendra Modi (@narendramodi) July 4, 2025


