ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಿಯೊ ಡಿ ಜನೈರೊದಲ್ಲಿ ತಮಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಬ್ರೆಜಿಲ್ ನಲ್ಲಿರುವ ಭಾರತೀಯ ಸಮುದಾಯದವರನ್ನು ಶ್ಲಾಘಿಸಿದ್ದಾರೆ. ಭಾರತದ ಅಭಿವೃದ್ಧಿಯ ಬಗ್ಗೆ ಅನಿವಾಸಿ ಭಾರತೀಯರು ಅತ್ಯಂತ ಉತ್ಸುಕರಾಗಿರುವುದು ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ತಮ್ಮ ಸಂಪರ್ಕ ಮುಂದುವರಿಸಿರುವುದು ಅಮೋಘವಾಗಿದೆ ಎಂದು ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ. ಅಲ್ಲಿನ ಸ್ವಾಗತದ ಕೆಲವು ಚಿತ್ರಗಳನ್ನು ಕೂಡ ಶ್ರೀ ಮೋದಿ ಅವರು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
"ಬ್ರೆಜಿಲ್ ನಲ್ಲಿರುವ ಭಾರತೀಯ ಸಮುದಾಯದವರು ರಿಯೊ ಡಿ ಜನೈರೊದಲ್ಲಿ ಅತ್ಯಂತ ರೋಮಾಂಚಕ ಸ್ವಾಗತ ನೀಡಿದರು. ಅವರು ಭಾರತೀಯ ಸಂಸ್ಕೃತಿಯೊಂದಿಗೆ ಹೇಗೆ ಸಂಪರ್ಕ ಉಳಿಸಿಕೊಂಡಿದ್ದಾರೆ ಮತ್ತು ಭಾರತದ ಅಭಿವೃದ್ಧಿಯ ಬಗ್ಗೆ ಅತ್ಯಂತ ಉತ್ಸುಕರಾಗಿದ್ದಾರೆ ಎಂಬುದು ಅಮೋಘವಾಗಿದೆ! ಅಲ್ಲಿ ದೊರೆತ ಸ್ವಾಗತದ ಕೆಲವು ನೋಟಗಳು ಇಲ್ಲಿವೆ..."

Members of Brazil’s Indian community gave a very vibrant welcome in Rio de Janeiro. It’s amazing how they remain connected with Indian culture and are also very passionate about India’s development! Here are some glimpses from the welcome… pic.twitter.com/2p0QvNNePj
— Narendra Modi (@narendramodi) July 6, 2025


